ಮುತಾ ನಿಖಾ

ಇಸ್ಲಾಮಿನಲ್ಲಿ ವಿವಾಹ ಎಂದರೆ ಒಂದು ಒಪ್ಪಂದ. ತಮ್ಮ ಲೈಂಕಿಕ ಅಪೇಕ್ಷೆಯನ್ನು ಪೂರೈಸಿಕೊಳ್ಳುಲು ಸ್ತ್ರೀ-ಪುರುಷನು ಮಾಡಿಕೊಳ್ಳುವ ಒಂದು ಲೈಂಗಿಕ ಒಪ್ಪಂದವಾಗಿದೆ.(2:236-237; 4:24-25). ಇದನ್ನು ನಿಖಾ ಎಂಬ ಹೆಸರಿನಿಂದ ಕರೆಯಾಗಿದೆ. ಇದನ್ನು ಮದುವೆಗೆ ಹೋಲಿಸುವುದು ಕಷ್ಟ ಏಕೆಂದರೆ ನನಗೆ ಮದುವೆಯ ಅಕ್ಷರಶಃ ಅರ್ಥ ಗೊತ್ತಿಲ್ಲ.

ನಿಖಾ (نِكَاح)ದ ಅರ್ಥವೇ ಲೈಂಕಿಕ ಸಂಭೋಗ(sex) ಮಾಡುವುದು. ನಿಖಾಗೆ ಸೆಕ್ಸ್ ನ ಹೊರತು ಬೇರೆ ವಿಶೇಷ ಅರ್ಥವೇನೂ ಇಲ್ಲ. ಮೌಲ್ವಿಗಳು ಮುಜುಗರಗೊಂಡು ಉಪಾಯದಿಂದ ಇದಕ್ಕೆ ಮದುವೆ ಎಂದು ಅರ್ಥ ಕಲ್ಪಿಸುತ್ತಾರೆ. ಕುರಾನಿನಲ್ಲಿ ಈ ಪದ 32 ಬಾರಿ ಬಂದಿದೆ ಹದಿಸಿನಲ್ಲಂತೂ ಲೆಕ್ಕವಿಲ್ಲದಷ್ಟು ಬಾರಿ ಬರುತ್ತದೆ.

ಸಹಿ ನಿಖಾ, ಫಾಸಿದ್ ನಿಖಾ, ಬಾತಿಲ್, ಮುತಾ ನಿಖಾ ಹೀಗೆ ಹಲವು ಪ್ರಕಾರದ ಮದುವೆಗಳಿವೆ

ಇದರಲ್ಲಿ ಮುತಾ ನಿಖಾದ ಬಗ್ಗೆ ಹೇಳಲೇಬೇಕು. ಮುತಾنكاح المتعة ಎಂದರೆ “ಆನಂದ, ವಿನೋದ, ಸಂತೋಷ” ಎಂದರ್ಥ. ತನ್ನ ಲೈಂಗಿಕ ಸುಖಕ್ಕಾಗಿ, ಮೋಜು-ಮಸ್ತಿಗಾಗಿ ಸ್ತ್ರೀ-ಪುರುಷರು ಒಂದು ನಿರ್ಧಿಷ್ಟ ಅವಧಿಯವರೆಗೆ ಒಂದಾಗಿರುವಂತೆ ಮಾಡಿಕೊಳ್ಳುವ ಒಪ್ಪಂದವೇ ಮುತಾ ನಿಖಾ. ಈ ಅವಧಿಯು ಒಂದು ಗಂಟೆಯಾದರೂ ಆಗಿರಬಹುದು, ಒಂದು ದಿನವಾದರೂ ಆಗಿರಬಹುದು ಅಥವಾ ಒಂದು ವಾರವೂ ಆಗಿರಬಹುದು. ಈ ಅಧಿಯು ಮುಗಿದ ನಂತರ ತಲಾಕ್ ನೀಡುವ ಅವಶ್ಯಕತೆ ಇರುವುದಿಲ್ಲ. ಅವರ ಸಂಬಂಧ ತನಗೆ ತಾನೇ ಅಂತ್ಯಗೊಳ್ಳುತ್ತದೆ.

ಪುರುಷನು ಈ ಒಪ್ಪಂದಲ್ಲಿ ಕನ್ಯಾಶುಲ್ಕವನ್ನು ಕೊಡಬೇಕು . ಇದನ್ನು “ಮಹರ್” ಎಂದು ಹೇಳಲಾಗುತ್ತದೆ. ಇದರ ಪ್ರತಿಫಲವಾಗಿ ಮಹಿಳೆ ಆತನಿಗೆ ಸುಖ ಕೊಡುತ್ತಾಳೆ. ವೇಶ್ಯಾವಾಟಿಕೆಗೂ ಇದಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಇದೊಂದು ಇಸ್ಲಾಮಿಕ್ ಕಾನೂನುಬದ್ದ ವೇಶ್ಯಾವಾಟಿಕೆ. ಇಸ್ಲಾಮಿಕ್ ದೇಶಗಳಲ್ಲಿ ಬಡವರು ತಮ್ಮ ಹೆಣ್ಣು ಮಕ್ಕಳನ್ನು ಸಾಕಾಲಾಗದೆ ಮಾರುತ್ತಾರೆ. ಹೀಗೆ ಕೊಂಡುಕೊಂಡ ಹೆಣ್ಣು ಮಕ್ಕಳನ್ನು ಮುತಾ ನಿಖಾಗೆ ಸಪ್ಲೈ ಮಾಡುತ್ತಾರೆ. ಶ್ರೀಮಂತರು ಈ ತರಹದ ವಿವಾಹ ಮಾಡಿಕೊಂಡು ಸುಖಪಡುತ್ತಾರೆ. ಹೆಣ್ಣಿಗೆ 9 ವರ್ಷದ ಮೇಲ್ಪಟ್ಟಿದ್ದರೆ ಸಾಕು, ಇದಕ್ಕೆ ಮುಸ್ಲಿ ಹೆಣ್ಣು ಮಕ್ಕಳೆ ಆಗಬೇಕಂತೆನಿಲ್ಲ, ಕ್ರೈಸ್ತ, ಯಹೂದಿ, ಹಿಂದೂ ಯಾವ ಮಹಿಳೆಯಾದರು ಸರಿ.

ಮುತಾ ನಿಖಾವನ್ನು ಪೈಗಂಬರ್ ಕೂಡ ಒಪ್ಪಿಕೊಂಡಿದ್ದ, ಸ್ವತಃ ಕುರಾನಿನಲ್ಲೇ ಇದಕ್ಕೆ ಅನುಮತಿ ಇದೆ. (ಕುರಾನ್.4.24)

ಪೈಂಗಂಬರ್ ಕಾಲದಲ್ಲಿ ಪದೇ ಪದೇ ಯುದ್ಧಗಳು ಸಂಭವಿಸುತ್ತಿದ್ದವು. ಸೈನಿಕರು ಬಹುಕಾಲದವರೆಗೂ ಮನೆ-ಹೆಂಡತಿಯನ್ನು ಬಿಟ್ಟು ಬಹುದೂರ ಹೋಗಿ ದಾಳಿ ಮಾಡುತಿದ್ದರು. ಹೆಣ್ಣಿನ ಸಂಪರ್ಕದಿಂದ ವಂಚಿತರಾದ ಸೈನಿಕರ ಅನುಕೂಲಕ್ಕಾಗಿ ಪೈಗಂಬರ್ ಮುತಾ ನಿಖಾಗೆ ಅನುಮತಿ ಕೊಟ್ಟಿದ್ದರು.

ಲೈಂಗಿಕ ತೃಷೆಯನ್ನು ತೀರಿಸಿಕೊಳ್ಳಲು ಬಡವರ ಮನೆಯ ಹೆಣ್ಣು ಮಕ್ಕಳನ್ನು ಬಲಿಕೊಡಲಾಗುತ್ತಿರುವುದು ಅನ್ಯಾಯವಾಗಿದೆ.

Leave a Reply

Your email address will not be published. Required fields are marked *