ನನ್ನ ಪ್ರಕಾರ ತಪ್ಪು ಮಾಡುವುದು ಅರ್ಧ ತಪ್ಪು, ಆದರೆ ಅದಕ್ಕೆ ನೇವ ಹೇಳುವುದು ಪೂರ್ತಿ ತಪ್ಪು. ಕುರಾನ್ ಬಹುತೇಕ ತಪ್ಪುಗಳಿಂದಲೇ ತುಂಬಿದೆ ಅದನ್ನು ಒಪ್ಪಿಕೊಳ್ಳುವುದರಿಂದ ನೀವು ಏನನ್ನೂ ಕಳೆದುಕೊಳ್ಳಬೇಕಾಗಿಲ್ಲ. ಆದರೆ ಯಾವಾಗ ಆ ತಪ್ಪನ್ನು ಮುಚ್ಚಲು ನೆಪ ಹೇಳಲು ಪ್ರಾರಂಭಿಸುತ್ತಿರೋ ಆಗ ಸಮಸ್ಯೆ ಬರುತ್ತದೆ.
ಯಾರೋ ಕುಕ್ಕಿಲ ಅಂತೆ, ಕುರಾನನ್ನು ಸಮರ್ಥಿಸಿಕೊಳ್ಳುತ್ತಾ ಕುರಾನ್ ಭೂಮಿ ಚಪ್ಪಟೆಯಾಗಿದೆ ಎಂದು ಹೇಳಿಲ್ಲ. ಸೂರ್ಯ ಕಪ್ಪು ನೀರಿನ ಕೊಳದಲ್ಲಿ ಮುಳುಗುತ್ತದೆ ಅಂತಾ ಹೇಳಿಲ್ಲ ಎಂದೆಲ್ಲ ಸಮಜಾಯಿಸಿಕೊಟ್ಟಿದ್ದಾನೆ.
ಕುರಾನ್ ಅವುಗಳನ್ನು ಅಲಂಕಾರಿಕ ಭಾಷೆಯಲ್ಲಿ ಹೇಳಿದ್ದು ಎಂದು ಈತ ಹೇಳುತ್ತಿದ್ದಾನೆ. ಆದರೆ ಈತ ಸರಿಯಾಗಿ ಕುರ್ ಆನ್ ಕೂಡ ಓದಿಲ್ಲ ಏಕೆಂದರೆ ಇಂತಹ ಅಲಂಕಾರಿಕ ಪದಗಳನ್ನು ಉಪಯೋಗಿಸುವುದಕ್ಕೆ ಕುರಾನ್ ಒಂದು ಕಾವ್ಯವಲ್ಲ. ಪೈಗಂಬರ್ ಕವಿಯೂ ಅಲ್ಲ. ಕುರಾನ್ ಕವಿಯ ವಾಣಿಯಲ್ಲ ಎಂದು ಸ್ಪಷ್ಟವಾಗಿ ಕುರಾನ್ 36.69 ರಲ್ಲಿ ಹೇಳಿದೆ. ಹಾಗಾಗಿ ಕುರಾನ್ ಯಾವ ಅರ್ಥದಲ್ಲಿ ಹೇಳಿದೆ ನೋಡೋಣ.
ಈ ಭೂಮಿ ಯಾವ ಆಕಾರದಲ್ಲಿದೆ ? ಭೂಮಿ ಗೋಳಾಕಾರದಲ್ಲಿದೆ. ಗುಂಡಾಗಿದೆ. ಇದು ಇಂದು ನಮಗೆಲ್ಲರಿಗೂ ಗೊತ್ತೇ ಇದೆ. ವಾಸ್ತವವಾಗಿ ಭೂಮಿ ಗೋಳಾಕಾರವಾಗಿದ್ದರೂ ಸಂಪೂರ್ಣ ಗೋಲಾಕಾರವಲ್ಲ ಸ್ವಲ್ಪ ಉಬ್ಬು ತಗ್ಗುಗಳಿಂದ ಕೂಡಿದೆ.ಹಾಗಾಗಿ ವಿಜ್ಞಾನಿಗಳು ಭೂಮಿ ಪೆರು ಹಣ್ಣಿನ ಆಕಾರದಲ್ಲಿದೆ ಎಂದು ಹೇಳಿದ್ದಾರೆ. ಆದರೆ ಚಪ್ಪಟೆಯಾಗಂತೂ ಇಲ್ಲ. ವೈಜ್ಞಾನಿಕ ಪ್ರಯೋಗಗಳ ಮುಖಾಂತರ, ಸ್ಯಾಟಲೈಟ್ ಗಳ ಮುಖಾಂತರ ನಮಗೆ ಭೂಮಿಯ ಆಕಾರ ಸ್ಪಷ್ಟವಾಗಿದೆ.
ಆದರೆ ಕುರಾನ್ ಭೂಮಿ ಚಪ್ಪಟೆಯಾಗಿದೆ ಎಂದು ಹೇಳಿದೆ. ಸೂರಃ ಖಾಫ್ ನ 7ನೇ ಆಯತಿನಲ್ಲಿ ಭೂಮಿಯನ್ನು ಸಮತಟ್ಟಾಗಿ ಹರಡಿದ್ದೇನೆ ಎಂದು ಹೇಳುವ ಮೂಲಕ ಚಪ್ಪಟೆ ಭೂಮಿಯನ್ನು ಉಲ್ಲೇಖವಾಗಿದೆ. ಇದೊಂದೇ ಕಡೆ ಅಲ್ಲ ಕುರಾನಿನ ಹಲವು ಕಡೆಗಳಲ್ಲಿ ಇದೆ ರೀತಿ ಭೂಮಿಯನ್ನು ಹರಡಿದ್ದೇನೆ ಅಥವಾ ಹಾಸಿದ್ದೇನೆ ಎಂದು ಚಪ್ಪಟೆ ಭೂಮಿಯ ಉಲ್ಲೇಖಿಸಲಾಗಿದೆ. ಇದನ್ನು ಹಳೆಯ ಇಸ್ಲಾಮಿಕ್ ವಿದ್ವಾಂಸರೂ ಒಪ್ಪಿಕೊಂಡಿದ್ದರು, ಈಗಲೂ ಇದನ್ನೇ ಪ್ರತಿಪಾದವವರೂ ಇದ್ದಾರೆ. ಆದರೆ ಯಾವಾಗ ಸಮಾಜ ವಿಜ್ಞಾನದ ವಾಸ್ತವಗಳ ಕಡೆ ಮುಖಮಾಡಿತೋ ಆಗ ಇಸ್ಲಾಮ್ ಪ್ರತಿಪಾದಕರಿಗೆ ತಮ್ಮ ಧರ್ಮವೂ ವೈಜ್ಞಾನಿಕವಾದುದು ಎಂದು ನಿರೂಪಿಸುವ ಅಗತ್ಯ ಎದುರಾಯಿತು. ಹಾಗಾಗಿ ಜಾಕಿರ್ ನಾಯ್ಕ್ ಕುರಾನ್ ವೈಜ್ಞಾನಿಕವಾಗಿದೆ ಅಂತಾ ಪ್ರತಿಪಾದಿಸಲು ತಿಣುಕಾಡಿದ. ಆತ ಕುರಾನಿನಲ್ಲಿ ಬರುವ ಅನೇಕ ಆಯತುಗಳನ್ನು ಬಿಟ್ಟು ಕೇವಲ ಕುರಾನ್ ಸೂರಃ 79.30ನೇ ಆಯತಿನಲ್ಲಿ ಬರುವ “ದಹಾಹ” ಎಂಬ ಒಂದು ಪದವನ್ನು ತೆಗೆದುಕೊಂಡು ಅದರ ಅರ್ಥವನ್ನು ತಿರುಚಿ ಕುರಾನ್ ಕೂಡ ಭೂಮಿ ದುಂಡಗಿದೆ ಎಂದು ಹೇಳಿದೆ ಎಂದು ಸುಳ್ಳು ಭಾಷಣ ಮಾಡಿದ.
ಈತನ ವಾದದ ಪ್ರಕಾರ ಕುರಾನ್ ಅಧ್ಯಾಯ 79 ಆಯತ್ 30ರಲ್ಲಿ ದಹಾಹ ಎಂಬ ಪದವನ್ನು ಬಳಸಲಾಗಿದೆ. ದಹಾಹ ಎನ್ನುವುದು ದುಹ್ಯಾ ಎಂಬ ಪದದಿಂದ ಬಂದಿದೆ ಇದರ ಅರ್ಥ ಮೊಟ್ಟೆ. ಹಾಗಾಗಿ ದಹಾಹ ಎಂದ್ರೆ ಉಷ್ಟ್ರಪಕ್ಷಿಯ ಮೊಟ್ಟೆ ಇದು ಭೂಮಿಯ ಆಕಾರಕ್ಕೆ ಹೊಂದುತ್ತದೆ ಎಂದು ಜಾಕಿರ್ ನಾಯ್ಕ್ ವಾದಿಸಿದ.
ಇದು ಸಂಪೂರ್ಣವಾಗಿ ಸುಳ್ಳು. ದಹಾಹ, ದುಹಿಯಾ, ಉದುಹ್ಯಾ ಎಂದರೆ ಮೊಟ್ಟೆ ಅಥವಾ ಊಷ್ಟ್ರಪಕ್ಷಿ ಮೊಟ್ಟೆ ಎಂದು ಯಾವ ಪ್ರಾಚೀನ ಅರೇಬಿಕ್ ನಿಘಂಟಿನಲ್ಲೂ ಇಲ್ಲ. ಖುರಾನ್ , ಹದೀಸ್ , ತಫ್ಸಿರ್ಗಳು ಮತ್ತು ಆರಂಭಿಕ ಇಸ್ಲಾಮಿಕ್ ವಿದ್ವಾಂಸರ ಬರಹಗಳಲ್ಲಿ ಮಾಡಿದ ಸ್ಪಷ್ಟ ವಿವರಣೆಗಳು ಯಾವುದರಲ್ಲಿ ಕೂಡ ಈ ವಾದಕ್ಕೆ ಆಧಾರಗಳಿಲ್ಲ.
ಕುರಾನಿನಲ್ಲಿ ಬರೋಬ್ಬರಿ 18 ಕಡೆಗಳಲ್ಲಿ ಭೂಮಿ ಚಪಟ್ಟೆಯಾಗಿದೆ ಎಂದು ಹೇಳಲಾಗಿದೆ. ಅದೂ ಕೂಡ ಸ್ಪಷ್ಟವಾಗಿ ಚಾಪೆಯಂತೆ ಅಥವಾ ಹಾಸಿಗೆಯಂತೆ ಎಂಬ ಸ್ಪಷ್ಟ ವಿವರಣೆಯೊಂದಿಗೆ
ಕುರಾನ್ 2.22 ರಲ್ಲಿ ಭೂಮಿಯನ್ನು ಫಿರಾಶನ್ (فِرَٰشًا ) ಎಂದು ಹೇಳಲಾಗಿದೆ ಫಿರಾಶನ್ ಎಂದರೆ ನೆಲದ ಮೇಲೆ ಹಾಸುವ ಕಾರ್ಪಟ್ ನಂತಹ ವಸ್ತು. ಅಂದರೆ ಭೂಮಿ ಚಪ್ಪಟೆಯಾಗಿದೆ.
ಕುರಾನ್ 13ನೆ ಅಧ್ಯಾಯ ಮೂರನೇ ಸೂಕ್ತದಲ್ಲಿ ವಹುವ ಅಲ್ಲದೀ ಮದ್ದ ಅಲರ್ದ ಎಂದು ಎಂದು ಹೇಳುತ್ತದೆ. ಅಧ್ಯಾಯ 15.19ರಲ್ಲಿ ಮದದ್ ಎಂದು ಹೇಳಲಾಗಿದೆ ಇವುಗಳ ಅರ್ಥ ಹಾಸಿಗೆ/ಕಾರ್ಪೆಟ್ ಹಾಸುವುದು ಎಂದರ್ಥ
ಕುರಾನ್ 20:53, ರಲ್ಲಿ ಮಹದನ್ ಎಂದಿದೆ. ಇದರರ್ಥ ಹಾಸಿಗೆ ಹೀಗೆ ಕುರಾನಿನ ವಿವಿಧ ಕಡೆಗಳಲ್ಲಿ ಸ್ಪಷ್ಟವಾಗಿ ಚಪ್ಪಟೆ ಭೂಮಿಯ ಉಲ್ಲೇಖವಾಗಿದೆ.
ಒಂದು ಕಡೆಯೂ ಕೂಡ ಗುಂಡಗಿನ ಭೂಮಿಯ ವಿವರಣೆಗಳಿಲ್ಲ.
ಇಬ್ನ್ ಮಾಜಾದಲ್ಲಿನ ಹದೀಸ್ ನಲ್ಲಿ ಫುರುಶಾತ್ ಅನ್ನು “ಹಾಸಿಗೆಗಳು” ಎಂದು ಸ್ಪಷ್ಟವಾಗಿ ಬಳಸಿರುವುದನ್ನು ಕಾಣಬಹುದಾಗಿದೇ. (ಸುನನ್ ಇಬ್ನ್ ಮಾಜಾ 5:37:419) ಇದರಲ್ಲಿ ಯಾವ ಅಲಂಕಾರಿಕವೂ ಇಲ್ಲ, ಮಣ್ಣನಗಣ್ಣಿನೂ ಇಲ್ಲ.
ಕುರಾನಿನ ಮತ್ತೊಂದು ಕಡೆ ಅಲ್ಲಾಹನು ನಿಮಗಾಗಿ ಭೂಮಿಯನ್ನು ರತ್ನಗಂಬಳಿಯಾಗಿ ಹಾಸಿದ್ದಾನೆ ಎಂದಿದೆ. ಕುರಾನ್ 71:15-19
ಈಗ ದಹಾಹಾ ವಿಚಾರಕ್ಕೆ ಬರೋಣ. ದಹಾಹಾ, ದುಹಿಯಾ ಇತ್ಯಾದಿ ಪದಗಳು ದಾಲ್-ಹ-ವಾವ್ ಎಂಬ ಮೂಲ ಧಾತುವಿನಿಂದ ಬಂದಿದೆ. ಇದರ ಅರ್ಥ ಸಮತಟ್ಟಾಗಿ ಹರಡುವುದು ಎಂದರ್ಥ. ಅದಾಗ್ಯೂ ದುಹಿಯಾ ಎಂಬ ಪದಕ್ಕೆ ಉಷ್ಟ್ರಪಕ್ಷಿಗೂ ಸಂಬಂಧಿಸಿದ ಒಂದು ಅರ್ಥವಿದೆ. ದುಹಿಯಾ ಎಂದರೆ ಊಷ್ಟ್ರಪಕ್ಷಿ ಮೊಟ್ಟೆಗಳನ್ನಿಡುವ ಜಾಗಕ್ಕೆ ಉದುಹ್ಯಾ ಅಥವಾ ದುಹ್ಯಾ ಎಂಬ ಪದ ಬಳಕೆಯಲ್ಲಿದೆ . ಎಲ್ಲಿ ? ಗ್ರಾಮೀಣ ಈಜಿಪ್ಟ್ ಸೇರಿದಂತೆ ಉತ್ತರ ಆಫ್ರಿಕಾದಲ್ಲಿ. ದುಹಿಯಾ, ಉದುಹ್ಯಾ ಮೊಟ್ಟೆ ಎಂದು ಬಳಸಿದ್ದಕ್ಕೆ ಅರೇಬಿಕ್ ನಿಘಂಟಿನಲ್ಲಿ ಬೆಂಬಲವಿಲ್ಲ. ಅಲ್ಲದೆ ಇಸ್ಲಾಮ್ ಪೂರ್ವದ ಕವಿಗಳು ದಹಾಹ ಎಂಬುದನ್ನು ಚಪ್ಪಟೆ ಭೂಮಿಗೆ ಬಳಸುತ್ತಿದ್ದುದ್ದಕೆ ಆಧಾರವಿದೆ.
ಅಸ್ಟ್ರಿಚ್ ಪಕ್ಷಿಯ ಮೊಟ್ಟೆಗೆ ಇಬ್ನ್ ಮಜಾದಲ್ಲಿ ಹದೀಸ್‌ನಲ್ಲಿ ಬೈದ್ ಅಲ್-ನಯಾಮ್بَيْضِ النَّعَام) ) ಎಂದು ಹೇಳಿದೆ. ಕುರಾನ್ ನಿಜಕ್ಕೂ ಭೂಮಿ ಅಸ್ಟ್ರಿಚ್ ಪಕ್ಷಿಯ ಮೊಟ್ಟೆಯ ಆಕಾರದಲ್ಲಿದೆ ಎಂದು ಹೇಳುವುದಯಾಗಿದ್ದರೆ ಅಲ್ಲಿ ಬೈದ್ ಅಲ್ ನಯಾಮ್ ಎಂಬ ಸ್ಪಷ್ಟ ಅರ್ಥವಿರುವ ಪದವನ್ನು ಬಳಸಬೇಕಾಗಿತ್ತು.
ಕೆಲವು ಇಸ್ಲಾಮಿಸ್ಟುಗಳು ಇಲ್ಲ ಇಲ್ಲ ಹರಡುವುದು ಎಂದರೆ ಕೇಕಿನ ಮೇಲೆ ಕ್ರೀಮನ್ನು ಹರಡಿದಂತೆ ಭೂಮಿಯನ್ನು ಹರಡಲಾಗಿದೆ ಎಂಬ ಬಾಲಿಶವಾದಗಳನ್ನು ಮಾಡುತ್ತಾರೆ.
ಹಾಗೆ ಹರಡುವುದಾದರೆ ಯಾವುದರ ಮೇಲೆ ಹರಡಲಾಗಿದೆ ? ಭೂಮಿಯನ್ನು ಹರಡುವುದಕ್ಕೆ ಬರುವುದಿಲ್ಲವಲ್ಲ.
ಭೂಮಿಯಲ್ಲಿರುವ ಕಾಬಾಕ್ಕೆ ನೇರವಾಗಿ 7ನೆ ಆಕಾಶದಲ್ಲಿ ಬೈತುಲ್ ಮಾಮೂರ್ ಎನ್ನುವ ಇನ್ನೊಂದು ಕಾಬಾ ಇದೆ. ಅದಕ್ಕೆ 70 ಸಾವಿರ ದೇವತೆಗಳು ತವಾಫ್ ಮಾಡುತ್ತಾರೆ ಎಂದು ಹದಿಸ್ಗಳಲ್ಲಿ ಹೇಳಿದೆ. ಇದು ಕೂಡಭೂಮಿ ಚಪ್ಪಟೆಯಾಗಿದೆ ಎನ್ನುವುದಕ್ಕೆ ಆಧಾರವಾಗಿದೆ.
ಈಗ ಇವರ ಎಲ್ಲಾ ವಾದಗಳು ಸುಳ್ಳು ಅಂತಾ ಪ್ರೂವ್ ಆಗಿವೆ. ಪಾಪ ಇಸ್ಲಾಮಿಸ್ಟ್ ಗಳ ಕಥೆ ಏನು ಸರಿ ಆಯ್ತು ಇವುಗಳ ಸಮಾಧಾನಕ್ಕೆ ಕುರಾನ್ ಭೂಮಿ ದುಂಡಗಿದೆ ಎಂದು ಹೇಳಿದೆ ಎಂದು ಒಪ್ಪಿಕೊಂಡರೂ ಅದರ ಕ್ರೆಡಿಟ್ ಕುರಾನಿಗೆ ಸಲ್ಲುವುದಿಲ್ಲ ಏಕೆಂದರೆ ಇಸ್ಲಾಮ್ ಹುಟ್ಟುವುದಕ್ಕೂ ಸಾವಿರಾರು ವರ್ಷಗಳ ಮೊದಲೇ ಭೂಮಿ ದುಂಡಗಿದೆ ಎಂದು ಪೈಥಾಗೊರಸ್ ಹೇಳಿದ್ದ ಇದನ್ನೇ ಮುಂದುವರೆಸಿ ಅರಿಸ್ಟಾಟಲ್ ಚಂದ್ರ ಗ್ರಹಣಗಳ ಆಧಾರದ ಮೇಲೆ ಭೂಮಿ ಗೋಲಾಕಾರವಿದೆ ಎಂದು ನಿರೂಪಿಸಿದ ಅದೂ ಕೂಡ ಇಸ್ಲಾಮ್ ಹುಟ್ಟುವುದಕ್ಕೂ ಪೂರ್ವದಲ್ಲೇ.
ವಿಜ್ಞಾನ ಪ್ರಯೋಗ ಮತ್ತು ತರ್ಕಗಳನ್ನು ಆಧರಿಸಿರುತ್ತದೆ. ಪ್ರಯೋಗವಿಲ್ಲದೆ ವಿಜ್ಞಾನ ಏನನ್ನೂ ಹೇಳುವುದಿಲ್ಲ. ಆದರೆ
ಧರ್ಮ ನಂಬಿಕೆ-ಕಲ್ಪನೆಗಳನ್ನು ಆಧರಿಸಿರುತ್ತದೆ.
Ex-muslims of Karnataka