ಕುರಾನ್ ಹುಟ್ಟಿದ ಕಥೆ; ಭಾಗ 3

ಕುರಾನ್ – ನಡೆದು ಬಂದ ಹಾದಿ – ಚರಿತ್ರೆ

ಕಳೆದ ಭಾಗದಲ್ಲಿ ಕುರಾನು ಬದಲಾಗದೆಂದು ಹೇಳುವ ಮುಸ್ಲಿಮರ ನಂಬಿಕೆ ಆಧಾರಹೀನ ಮತ್ತು ತರ್ಕಹೀನವಾದದ್ದು ಎಂದು ಮತ್ತು ಕುರಾನಿನ ಮೂಲ, ಅದರ ಸಂಕಲನ, ಅದರಲ್ಲಿನ ಲೋಪದೋಷಗಳು, ಕುರಾನ್ ಸಿದ್ಧವಾಗುವಾಗ ಆದ ಯಡವಟ್ಟು ಗಳನ್ನು ನೋಡಿದ್ದೇವೆ. ಈಗ ಕುರಾನ್ ಬದಲಾಗಿದೆ ಎಂದು ಸಿದ್ಧವಾದ ಮೇಲೆ ಅದರ ಇತಿಹಾಸವನ್ನು ಕುರಿತು ಒಂದಷ್ಟು ಒಳನೋಟಗಳನ್ನು ಪಡೆದುಕೊಳ್ಳೋಣ.

ಹದೀಸುಗಳ ಆಧಾರದಲ್ಲಿ ಕುರಾನ್ ಬದಲಾಗುತ್ತಾ ಬಂದ ಬಗೆಯನ್ನು ಮತ್ತು ವಿವಿಧ ಭಾಗಗಳ ಜನರು ಬಳಸುತ್ತಿರುವ ಕುರಾನಿನಲ್ಲಿ ಕಂಡುಬಂದಿರುವ ವ್ಯತ್ಯಾಸಗಳನ್ನು , ಹಾಗೂ ಕುರಾನಿನ ಕಿರಾತ್ ಗಳಲ್ಲಿ ಉಚ್ಚಾರದಿಂದಾಗಿ ಕಂಡುಬರುವ ಅಕ್ಷರ ನಮೂದನೆಯ ವ್ಯತ್ಯಾಸಗಳನ್ನು ನಾವು ಅಭ್ಯಾಸ ಮಾಡಿ ತಿಳಿದುಕೊಂಡದ್ದೇನೆಂದರೆ, ಕುರಾನ್ ಬದಲಾಗದೇ ಉಳಿದು ಒಂದು ಪುಸ್ತಕವೇನಲ್ಲ, ಇಸ್ಲಾಮಿನ ಮೂಲಗಳಿಂದಲೇ ಅದು ಮತ್ತೆ ಮತ್ತೆ ಪರಿಷ್ಕರಣಿಗೆ ಒಳಗಾಗಿದೆ ಎಂಬ ಸತ್ಯ !ಮುಂದಿನ ಭಾಗದಲ್ಲಿ ಇಸ್ಲಾಮೇತರ (ಇಸ್ಲಾಂ ಮೂಲದಿಂದ ಹೊರಗಿನ) ಆಕರಗಳಿಂದ ಆಯ್ದುಕೊಂಡು ಕುರಾನಿನ ಅಧಿಕೃತ ಆವೃತ್ತಿ ಎಂಬುದು ಇಲ್ಲ ; ಕಾಲಾನುಕ್ರಮದಲ್ಲಿ ಅದು ಬದಲಾಗುತ್ತಾ ಬಂದಿರುವ ಮನುಷ್ಯನಿಂದಲೇ ರಚಿತವಾಗಿರುವ ಕೃತಿ ಎಂಬುದನ್ನು ಸಾಧಿಸಿ ತೋರಿಸೋಣ .

  • ಇಮ್ಮಡಿ (ಎರಡನೇ) ಉಮರ್ ಎಂಬ ಇಸ್ಲಾಮಿನ ಸುಲ್ತಾನ 717 ರಲ್ಲಿ ಮೂರನೇ ಲಿಯೋ ಎಂಬ ಕ್ರೈಸ್ತ ರಾಜನಿಗೆ ಪತ್ರವನ್ನು ಬರೆಯುತ್ತಾ ಹೇಗೆ ಇಸ್ಲಾಂ ಎಂಬುದು ದೈವಿಕ ಸಂದೇಶಗಳ ಮತವಾಗಿದೆ ಎಂದು ವಿವರಿಸಿ ಹಾಗೂ ಅದನ್ನು ಅಂಗೀಕರಿಸಬೇಕೆಂದು ಆಗ್ರಹಿಸಿ ಪತ್ರವನ್ನು ಬರೆದನು. ಇದಕ್ಕೆ ಉತ್ತರವಾಗಿ ಲಿಯೋ ಯಾವ ಸಂದೇಹಕ್ಕೂ ಆಸ್ಪದ ಇಲ್ಲದಂತೆ ನೇರವಾಗಿ ಆಗ ಪ್ರಚಲಿತದಲ್ಲಿದ್ದ ಕುರಾನಿನ ರಹಸ್ಯವನ್ನು ಉಲ್ಲೇಖಿಸುತ್ತಾನೆ.
    • ನಿಮ್ಮ ಫುರ್ಕಾನ್ (ಪಪೂವರ್ಕಾನ್) ಪುಸ್ತಕವು ದೈವಿಕೃಪೆಯಿಂದ ಬಂದದ್ದೇನಲ್ಲ. ಉಮರ್ , ಸಲಮಾನ್ ಎಂಬ ಪರ್ಷಿಯನ್ ಮತ್ತು ಅಬು ತುರೈಬ್ ಎಂಬ ಮೂವರು ಬರೆದ ಪುಸ್ತಕ ಅದು. ಅಲ್ ಹೆಜ್ಜಾಜ್ ಎಂಬುವವನ ಕಾಲದಲ್ಲಿ ಹಳೆಯ ಎಲ್ಲ ಪ್ರತಿಗಳು ನಷ್ಟವಾಗಿ ಹೆಜ್ಜಾಜನ ಫುರ್ಕಾನ್ (ಕುರಾನ್) ಈಗಿರುವುದು ನಮಗೆ ಗೊತ್ತಿದೆ. ಈ ಹೆಜ್ಜಾಜನ ಪುಸ್ತಕವೇ ಈಜಿಪ್ಟ್, ಸಿರಿಯಾ ,ಮದೀನಾ, ಮಕ್ಕಾ, ಮತ್ತು ಕುಫಾ ಎಂಬ ಪ್ರಾಂತ್ಯಗಳಿಗೆ ಕಳಿಸಲ್ಪಟ್ಟಿತು.[Ibn Abi Dawud, Kitab al-Masahif,]
  • ಅಷ್ಟೇ ಏಕೆ! ಕುರಾನ್ ಎಂಬ ಹೆಸರೇ ಇಲ್ಲದೆ ಪೌರ್ಕಾನ್ ಎಂದು ಕರೆಯಲ್ಪಡುತ್ತಿದ್ದ ಈ ಪುಸ್ತಕವನ್ನು 710 ರಲ್ಲಿ ಮೊದಲ ಬಾರಿಗೆ ಕುರಾನ್ ಎಂದು ಹೆಸರಿಟ್ಟು ಕರೆದವನು ಒಬ್ಬ ಕ್ರೈಸ್ತ ಪಾದ್ರಿ, ಬೆತ್ ಹೇಲ್
  • ಕುರಾನನ್ನು ಮಸೀದಿಗಳಲ್ಲಿ ಕಡ್ಡಾಯವಾಗಿ ಪರಿಸುವ ಪರಿಪಾಠವನ್ನು ತಂದವನು ಈ ಹೆಜ್ಜಾಜನೇ!
  • ಹಾಗಾಗಿ ಸಹೀ ಬುಖಾರಿಯಲ್ಲಿ ಬರೆದಂತೆ ಕೊನೆಯ ಕುರಾನಿನ ಜನಕ ಉತ್ಮಾನನ ಬದಲು ಹೆಜ್ಜಾಜನ ಹೆಸರು ಇತಿಹಾಸದ ಪ್ರಕಾರ ಹೆಚ್ಚು ಸೂಕ್ತವೂ ಸಂಭಾವ್ಯವೂ ಆಗಿದೆ..

ಕುರಾನಿನ ಭಾಷೆಯೇ ನಂತರದ ಸೃಷ್ಟಿ !!

ಕುರಾನಿನ ಬುನಾದಿಯೇ ಅಲ್ಲಾಡುತ್ತಿರುವಾಗ ಭಾಷೆಯ ಬುಡಕ್ಕೆ ಕೊಡಲಿಯೇಟು ಬೀಳುವ ಸಂಶೋಧನೆಗಳು ಆಗತೊಡಗಿವೆ. ಗ್ರೀಕ್ ಭಾಷೆಯನ್ನು ಬಳಕೆಯಿಂದ ಬದಿಗೆ ಸರಿಸಿ ಆಡು ಭಾಷೆಯ ರೂಪದಲ್ಲಿ ಅಸ್ತವ್ಯಸ್ತ ಅರೇಬಿಕ್ ಅನ್ನು ಅಕ್ಷರ ವಿನ್ಯಾಸ ಮತ್ತು ಉಚ್ಛಾರಕ್ಕೆ ಅನುಸಾರವಾಗಿ ಗುರುತುಗಳನ್ನು ಮಾಡಿ ಸ್ಪಷ್ಟ ಪಡಿಸುವ ವ್ಯವಸ್ಥೆಯನ್ನು ತಂದವನು ಅಲ್-ಖಲೀಲ್ ಬಿನ್ ಅಹಮದ್ ಅಲ್ ಫರಾಹಿದೀ. ಅಂದರೆ ಏಳನೇ ಶತಮಾನದ ಮೊದಲು ಅರೇಬಿಕ್ ಬರಹದ ಭಾಷೆ ಅಭಿವೃದ್ಧಿ ಆಗಿರಲಿಲ್ಲ ಎಂದಾಯಿತು.! ಅಂದರೆ ಅಲ್ಲಿನ ಬಳಿಯಿರುವ ಅನಂತ ಕಾಲದ ಕುರಾನಿನಲ್ಲಿ ಅರೇಬಿಕ್ ಭಾಷೆ ಬಂದದ್ದು ಹೇಗೆ ?

ಹಾಗಾಗಿ ಕರಾನ್ ಅಲ್ಲಿನಿಂದ ಕಳಿಸಲ್ಪಟ್ಟು , ಉತ್ಮಾನನಿಂದ ಉಳಿಸಲ್ಪಟ್ಟ ಪುಸ್ತಕವೆಂದು ಯಾರಾದರೂ ಹೇಳಿದರೆ ‘ಸುಮ್ಮನೇ ಹೇಳಬೇಡ, ಸಾಕ್ಷಿಯ ಸಮೇತ ಸಾಧಿಸಿ ತೋರಿಸು” ಎಂದರೆ ಸಾಕು. ಕುರಾನ್ 85:22 ಹೇಳಿದ್ದನ್ನು ಸುಮ್ಮನೇ ನಂಬಿಬಿಡಲು ಸಾಧ್ಯವಿಲ್ಲವಲ್ಲ.

ಹಾಗೆಯೇ, ಈ ಕುರಾನನ್ನು ಮಹಮ್ಮದನಿಗೆ ಕಳಿಸಿರುವುದಕ್ಕೂ ಸಹಾ ಯಾವ ಆಧಾರಗಳಿಲ್ಲ. ಕುರಾನ್ 18:1 ನಲ್ಲಿ ಹೇಳಿದಂತೆ “ನಮ್ಮ ಸೇವಕನಿಗೆ ಕಳಿಸಲ್ಪಟ್ಟ ಈ ಪುಸ್ತಕದಲ್ಲಿ ಏನೂ ಬದಲಾವಣೆ ಇಲ್ಲ.. ಇದ್ದು ಹಾಗಿಯೇ ಇದೆ ಎಂಬುದಕ್ಕೆ ಆಧಾರಗಳಿಲ್ಲ. ಉತ್ಮಾನನ ಕಾಲದಲ್ಲಿ ಜೈದನೇ ಮೊದಲಾದವರು ಸೇರಿ ಬರೆದರೆಂಬ ಕುರಾನಿಗೆ ಯಾವ ಆಧಾರಗಳಿಲ್ಲ.

ಏಳೆಂಟು ಕುರಾನಿನ ಪ್ರತಿಗಳು ಸಿಕ್ಕಿವೆ. ಎಲ್ಲವೂ 670ರ ನಂತರ ರಚಿಸಿರುವ ಪ್ರತಿಗಳು ಮತ್ತು ಪರಸ್ಪರರಲ್ಲಿ ಹೊಂದಾಣಿಕೆ ಇಲ್ಲದಂಥವುಗಳು. ಉತ್ಮಾನನದ್ದೆಂದು ಹೇಳಲಾದ ಇಂದಿನ ಕುರಾನುಗಳಿಗಿಂತ ಸಾಕಷ್ಟು ವ್ಯತ್ಯಾಸವನ್ನು ಹೊಂದಿವೆ. ಅವು ಯಾವುದೆಂದು ನೋಡೋಣ:

  • ತೋಪಕಾಪಿ: 672ರ ನಂತರದ್ದು. ಸಾಕಷ್ಟು ಪದರಚನೆಯ ಅಕ್ಷರದ ತಪ್ಪುಗಳನ್ನು ಹೊಂದಿದೆ.
  • ಸಮರ್ ಖಂಡ: 43 ಸುರಾಗಳನ್ನು ಮಾತ್ರ ಪಟ್ಟಿ ಮಾಡಿದರೂ ಸಹಾ 8 ನೇ ಶತಮಾನದ ಪುಸ್ತಕದಲ್ಲಿ ಒಂದೇ ಅಧ್ಯಾಯ ಪೂರ್ಣವಾಗಿ ಸಿಕ್ಕಿದೆ ಉಳಿದವು ಹಾಳಾಗಿವೆ ಮತ್ತು ಅಪೂರ್ಣವಾಗಿದೆ.
  • ಮಾಯಿಲ್ : 8ನೇ ಶತಮಾನದ್ದು ; 43 ಅಧ್ಯಾಯಗಳನ್ನು ಮಾತ್ರ ಹೊಂದಿದೆ.
  • ಹೌಸೇನಿ : 8 ಅಥವಾ 9ನೇ ಶತಮಾನದ್ದು. ಈಗಿನ ಕುರಾನಿನಿಂದ 93 ಬಾರಿ ವಿಭಿನ್ನವಾಗಿದೆ.
  • ಪೆಟ್ರೋಪೋಲಿಟಾನಸ್: ಒಂಭತ್ತನೇ ಶತಮಾನದ್ದು ತಪ್ಪುಗಳಿವೆ
  • ಸನಾ : ಇದರಲ್ಲಿ “Upper text ಮತ್ತು Lower text ಎಂಬ ಎರಡು ಭಾಗಗಳಿವೆ. ಅಧ್ಯಾಯಗಳ ಅನುಕ್ರಮಣಿಕೆಯಲ್ಲಿಯೇ ಭಿನ್ನತೆಯ ಜತೆಗೆ ಕುರಾನಿನ ಆಯತೆಗಳಲ್ಲಿ ಸಹಾ ಸಾಮ್ಯತೆ ಇಲ್ಲದಿರುವುದನ್ನು ಕಂಡು ಹಿಡಿಯಲಾಗಿದೆ. ಎಲ್ಲವನ್ನೂ ಐದು ವರ್ಷಗಳ ಕಾಲ ಅಧ್ಯಯನ ಮಾಡಿದ ವಿದ್ವಾಂಸರ ಅಭಿಮತದ.

ಸಾರಾಂಶ ಹೀಗಿದೆ:

  • ಯಾವ ಈ ಕುರಾನುಗಳು ಉತ್ಮಾನನ ಕಾಲದ ಕುರಾನ್ ಗಳಲ್ಲ. ನಾವು ಹಾಗೆ ಪ್ರಕಟಿಸಬೇಕೆಂದರೂ ಆಗದಷ್ಟು ವಿಭಿನ್ನವಾಗಿವೆ.
  • ಉತ್ಮಾನನ ಕಾಲದ ಕುರಾನ್ ಹೋಲಿಕೆಗಾಗಿ ನಮ್ಮ ಬಳಿ ಇಲ್ಲ.
  • ಅವು 8 ನೇ ಶತಮಾನದ ಕುರಾನುಗಳಂತೆ ತೋರುತ್ತವೆ.

ಎಂಬಲ್ಲಿಗೆ ಕುರಾನ್ ಏಕರೂಪವಾಗಿಯೂ ಇಲ್ಲ ; ಅರೇಬಿಕ್ ಭಾಷೆಗೆ ಬರಹದ ರೂಪ ಏಳನೇ ಶತಮಾನದ ಮೊದಲು ಇರಲೂ ಇಲ್ಲ. ಇದ್ದ ಕುರಾನುಗಳಲ್ಲಿ ಹೊಂದಾಣಿಕೆಯಿಲ್ಲ ಮತ್ತು ಉತ್ಮಾನನ ಕಾಲದ ಕುರಾನ್ ಪತ್ತೆಯೇ ಇಲ್ಲ’!

ಅಸಲಿಗೆ ಇಂದಿನ ಕುರಾನಿನ ಸಮೀಪಕ್ಕೆ ಬರಬಲ್ಲ ಮೊಟ್ಟಮೊದಲ 114 ಸುರಾಗಳಿರುವ ಕುರಾನ್ ಕ್ರಿ.ಶ.1000 ದಲ್ಲಿ ರಚನೆಯಾಗಿ ಸಂಪಾದಿತವಾದ ದಾಖಲೆಯಿದೆ. ನಂತರ ಬಂದ ವಿವಿಧ ಬಗೆಯ ಭಿನ್ನ ಕುರಾನು ಇತ್ಯಾದಿಗಳನ್ನು ಬದಿಗೆ ಸರಿಸಿ 1924ರಲ್ಲಿ ಹೊರತಂದೆ ಈಜಿಪ್ಟಿನ ಹಪ್ಸ್ ಕುರಾನ್ ಈಗ ಸಧ್ಯದಲ್ಲಿ ಚಲಾವಣೆಯಲ್ಲಿದೆ.

ಕುರಾನು ಬರೆದಿಡದಿದ್ದರೇನಂತೆ ? ಬಾಯಿಪಾಠದಲ್ಲಿ ಕೆಡದಂತೆ ಉಳಿದು ಬಂದಿದೆ ಎಂಬ ವಾದವೂ ಸಹಾ ನಿಲ್ಲುವುದಿಲ್ಲ ಎಂಬುದನ್ನು ಈ ಮೊದಲೇ ನೋಡಿರುತ್ತೇವೆ.ಮರುಭೂಮಿಯ ಮತ್ತದ ಮರಳ ಸೌಧ ಕುಸಿದ ಬಗೆಯಿದು.

ಕುರಾನ್ ಒಂದು ದೈವಿ ಪುಸ್ತಕವಲ್ಲ, ಮನುಷ್ಯರ ವೈಯಕ್ತಿಕ ಚಿಂತನೆಗಳೇ ಅದರಲ್ಲಿರುವುದು. ವಾಸ್ತವವಾಗಿ ಇಸ್ಲಾಮಿಗೆ ಮೂಲ ಬುನಾದಿಗಳೇ ಇಲ್ಲ.

Similar Posts

  • ಕುರಾನ್ 2.223 ರ ವ್ಯಾಖ್ಯಾನ

    ವಿಗ್ರಹಾರಾಧಕರಾಗಿದ್ದ ಅನ್ಸಾರ್‌ಗಳು(ಮದೀನಾದ ಪೈಗಂಬರ್ ಅನುಯಾಯಿಗಳು) ಮತ್ತು ಅಹ್ಲುಲ್‌ ಕಿತಾಬ್‌ಗಳಾದ ಯಹೂದರು ಜೊತೆಯಾಗಿ ಮದಿನಾದಲ್ಲಿ ವಾಸಿಸುತ್ತಿದ್ದರು. ಯಹೂದರು ತಮಗಿಂತ ಹೆಚ್ಚಿನ ಜ್ಞಾನವನ್ನು ಹೊಂದಿದ್ದಾರೆಂದು ಅನ್ಸಾರ್‌ಗಳು ನಂಬಿದ್ದರು. ಹಾಗಾಗಿ ಅವರ ಅನೇಕ ಆಚಾರ ವಿಚಾರಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದರು. ಯಹೂದಿಯರ ಪ್ರಕಾರ ಪತ್ನಿಯರನ್ನು ಅವಳ ಯೋನಿಗೆ ಅವಳ ಹಿಂಭಾಗದಿಂದ(dogy style ನಲ್ಲಿ) ಸಂಭೋಗಿಸಿದರೆ ಮೆಳ್ಳೆಗಣ್ಣಿನ ಮಗು ಹುಟ್ಟುತ್ತದೆ ಎಂಬ ನಂಬಿಕೆ ಹೊಂದಿದ್ದರು. ಹಾಗಾಗಿ ಒಂದು ಕೋನದಿಂದ ಮಾತ್ರ ಸಂಭೋಗಿಸುತಿದ್ದರು. ಅಂದರೆ ಆಕೆಯನ್ನು ಅಂಗಾತಮಲಗಿಸಿ ಆಕೆಯನ್ನು ಸಂಪೂರ್ಣ ಮರೆಮಾಚುವ ವಿಧದಲ್ಲಿ ಆಕೆಯ ಮೇಲೆ…

  • ಅಲ್ಲಾಹನಿಂದ ಮೋಸಹೋದ ಇಬ್ಲೀಸನ ಕಥೆ(ಕುರಾನ್ 15.39)

    ಕುರಾನ್.15:39 ರ ಈ ಆಯತ್ , ಸರ್ವಶಕ್ತನಾದ ಅಲ್ಲಾಹನ ಮುಖಾಮುಖಿಯಾಗಿ ನಿಂತ ಕ್ಷುಲ್ಲಕ ಜೀವಿಯಾದ ಇಬ್ಲೀಸ್, ಸೃಷ್ಟಿಕರ್ತನಾದ ದೇವರ ವಿರುದ್ಧವೇ ನೇರ ಆರೋಪ ಮಾಡುತ್ತಿರುವ ಆಯತಾಗಿದೆ! ಮತ್ತು ಕುರಾನಿನ 6236 ಆಯತ್ ಗಳಲ್ಲಿ ಎಲ್ಲಿಯೂ ಕೂಡ ದೇವರು ,ಇಬ್ಲೀಸ್ ಮಾಡಿದ ಈ ಗಂಭೀರ ಆರೋಪವನ್ನು ನಿರಾಕರಿಸಿಲ್ಲ ಎಂಬುದು ಗಮನಾರ್ಹವಾಗಿದೆ!! ಇಬ್ಲೀಸ್ ಅಲ್ಲಾಹನಿಗೆ ಹೇಳಿರುವುದು “قَالَ رَبِّ بِمَآ اَغْوَيْتَنِيْ—ನೀನು ನನ್ನನ್ನು *ದಾರಿಗೆಡಿಸಿರುವಂತೆಯೇ* (you have put me in error )ಎಂದಾಗಿದೆ. ಅಂದರೆ ಇಬ್ಲೀಸನನ್ನು ದಾರಿಗೆಡಿಸಿರುವುದು ಅಲ್ಲಾಹು…

  • ಕುರಾನ್ ಹುಟ್ಟಿದ ಕಥೆ; ಭಾಗ 2

    ಜನಪ್ರಿಯ ಇಸ್ಲಾಮೀ ಕಥಾನಕ ಮತ್ತು ಗರ್ವದಿಂದ ಹೇಳಿಕೊಳ್ಳುವ ಮಾತೆಂದರೆ: “ಕುರಾನ್ ಒಂದು ದೈವೀ ಪವಾಡ. ಕುರಾನಿನಂಥ ಪರಿಪೂರ್ಣವಾದ ಜೀವನ ಮಾರ್ಗದರ್ಶಕ ಪುಸ್ತಕ ಜಗತ್ತಿನಲ್ಲಿಯೇ ಇಲ್ಲ. ಕುರಾನ್ ನೇರವಾಗಿ ಅಲ್ಲಾಹುವಿನಿಂದ ಮಹಮ್ಮದ್ ಪ್ರವಾದಿಗಳಿಗೆ ಕಳಿಸಲ್ಪಟ್ಟ (ಅವತೀರ್ಣಗೊಂಡ) ಸಂದೇಶ ಮತ್ತು ಬೋಧನೆಗಳನ್ನು ಕ್ರೋಢೀಕರಿಸಿದ ಪುಸ್ತಕ. ಅದು ಅಂದಿನಿಂದ ಇಂದಿನವರೆಗೆ ಒಂದೇ ಒಂದು ಚುಕ್ಕೆಯೂ ಬದಲಾಗದೆ ಹಾಗೆಯೇ ಉಳಿದು ಬಂದಿರುವ ಮಹಿಮಾ ಪೂರ್ಣವಾದ ಪುಸ್ತಕ ; ಹಾಗಾಗಿಯೇ ಅದು ಬಹಳ ಪವಿತ್ರವಾದದ್ದು. ಎಂದಿಗೂ ಬದಲಾಗದಂಥ ಕುಂದಿಲ್ಲದ ಈ ಪುಸ್ತಕದ ರಕ್ಷಣೆಯ ಹೊಣೆಯನ್ನು…

  • ಕುರಾನಿನಲ್ಲಿರುವ ಅಂತರ್-ವಿರೋಧಗಳು; ಭಾಗ 2

    ಕುರಾನಿನಲ್ಲಿರುವ ದ್ವಂದ್ವಗಳು, ವೈರುಧ್ಯಗಳು, ವಿರೋಧಾಭಾಸಗಳು, ತಪ್ಪುಗಳು ಮತ್ತು ಅತಾರ್ಕಿಕಕ ವಿಷಯಗಳನ್ನೆಲ್ಲಾ ತೆಗೆದು ಹಾಕಿದರೆ ಕುರಾನಿನಲ್ಲಿ ಏನು ಉಳಿದಿರುತ್ತದೆ ? ಬಹುಶಃ ಇವುಗಳ ಹೊರತಾಗಿ ಕುರಾನೇ ಇರುವುದಿಲ್ಲ. ಏಕೆಂದರೆ ಇವೆಲ್ಲವುಗಳಿಂದ ತುಂಬಿರುವುದೇ ಕುರಾನ್. ಅಲ್ಲಾಹನ ಹೊರತಾಗಿ ಬೇರೆ ಯಾವ ನ್ಯಾಯಾಧೀಶನಾಗಲಿ, ತೀರ್ಪುಗಾರನಾಗಲಿ ಇಲ್ಲ ಮತ್ತು ಆತ ತನ್ನ ನಿರ್ಧಾರ ಅಥವಾ ಆಡಳಿತದಲ್ಲಿ ಯಾರನ್ನೂ ಪಾಲುದಾರಾನನ್ನಾಗಿ ಮಾಡಲು ಅವನು ಅನುಮತಿಸುವುದಿಲ್ಲ ಎಂದು ಕುರಾನ್ ಈ ಆಯತುಗಳಲ್ಲಿ ಹೇಳುತ್ತದೆ; ಅಲ್ ಅನ್‌ಆಮ್(6).114—‘‘ಅವನು (ಅಲ್ಲಾಹನು) ಸವಿಸ್ತಾರವಾದ ಗ್ರಂಥವನ್ನು ನಿಮ್ಮೆಡೆಗೆ ಇಳಿಸಿಕೊಟ್ಟಿರುವಾಗ, ನಾನೇನು ಅಲ್ಲಾಹನನ್ನು…

  • ಕುರಾನಿನಲ್ಲಿರುವ ಅಂತರ್-ವಿರೋಧಗಳು; ಭಾಗ 1

    ನರಕವಾಸಿಗಳ ಆಹಾರವೇನು ? ಕುರಾನ್ ಯಾವ ರೀತಿಯ ಪವಿತ್ರ ಪುಸ್ತಕ ಎಂದು ನನಗೆ ತಿಳಿಯುತ್ತಿಲ್ಲ. ಅದರ ಬೋಧನೆಗಳಲ್ಲೇ ಪರಸ್ಪರ ವಿರೋಧಾಭಾಸಗಳು, ಗೊಂದಲಗಳು, ಅಂತರ್ವಿರೋಧಗಳು, ತಪ್ಪುಗಳು, ತೊಡಕುಗಳಿವೆ. ಕುರಾನ್ ನರಕವಾಸಿಗಳ ಆಹಾರದ ಕುರಿತಾಗಿ ಒಂದು ಕಡೆ ಹೀಗೆ ಹೇಳುತ್ತದೆ: ಅಲ್ ಗಾಶಿಯಾ(88).6- ಲೈಸ ಲಹುಮ್ ತ’ಅಮುನ್ ಇಲ್ಲಾ ಮಿನ್ ದರೀ’——ಮುಳ್ಳಿನ ಗಿಡದ ಹೊರತು ಬೇರೆ ಯಾವ ಆಹಾರವೂ ಅವರಿಗೆ(ನರಕವಾಸಿಗಳಿಗೆ) ಸಿಗದು. ಈ ಆಯತಿನಲ್ಲಿ ಹೇಳಿರುವಂತೆ ನರಕವಾಸಿಗಳ ಆಹಾರ “ಕೇವಲ ಮುಳ್ಳಿನ ಗಿಡ ಮಾತ್ರ”. ಇದರ ಹೊರತು ಮತ್ಯಾವ ಆಹಾರವೂ…

  • | |

    ಸ್ವರ್ಗವೋ ? ಕಾಮಪಶುಗಳ ಕೊಟ್ಟಿಗೆಯೋ ?

    ಇಸ್ಲಾಮಿನ ಆರನೇ ಸ್ತಂಭವೊಂದಿದೆ. ಅದನ್ನು ಮೇಲಾಗಿ ಐದು ಉಳಿದ ಸ್ಥಂಭಗಳ ಜತೆಗೆ ಹೇಳಿಲ್ಲದೇ ಇದ್ದರೂ ಸಹಾ ಷರಿಯಾದ ಪುಸ್ತಕಗಳಲ್ಲಿ , ಜಿಹಾದ್ ಕುರಿತಾದ ಲೇಖನಗಳಲ್ಲಿ ಮತ್ತು ಖುದ್ದಾಗಿ ಕುರಾನ್ ನಲ್ಲಿ ಅಲ್ಲಾಹುವಿನ ಮೂಲಕ ಮತ್ತು ಹದೀಸುಗಳಲ್ಲಿ ಮಹಮ್ಮದನ ಬಾಯಿಂದಲೇ ಜಿಹಾದ್ ಮತ್ತು ನಿರಂತರ ಹೋರಾಟದ ಅವಶ್ಯಕತೆಯನ್ನು ಹಾಗೂ ಅದು ತಂದು ಕೊಡಬಹುದಾದ ಅಲ್ಲಾಹುವಿನ ಕೃಪೆಯ ಮಹಾಪೂರವನ್ನು ಒತ್ತಿ ಒತ್ತಿ ಹೇಳಲಾಗಿದೆ. ಎಲ್ಲಾ ಮತಾನುಯಾಯಿ ಮುಸ್ಲಿಮನಿಗೆ ಜಿಹಾದ್ ಕಡ್ಡಾಯ [ ಅಂಗವಿಕಲರ ಹೊರತು ] ಇಂತಹ “ಪವಿತ್ರ ”…

Leave a Reply

Your email address will not be published. Required fields are marked *