ಕುರಾನಿನಿಂದ ಮರೆಯಾದ ಆಯತ್ತುಗಳು!

ಕುರಾನ್ ಇಸ್ಲಾಮಿನ ಅತ್ಯಂತ ಪ್ರಾಮಾಣಿಕ ಆಧಾರ.  ಅದು ಯಾರ ಹಸ್ತಕ್ಷೇಪಕ್ಕೂ ಒಳಗಾಗಿಲ್ಲ. ಅದು ಎಂದೂ ಬದಲಾಗಿಲ್ಲ. ಅದರಲ್ಲಿ ಒಂದು ಅಕ್ಷರವೂ ಬದಲಾಗದೆ ಉಳಿದುಬಂದಿದೆ ಎನ್ನುವ ತಪ್ಪು ಕಲ್ಪನೆ ಮುಸ್ಲಿಮರಲ್ಲಿದೇ. ಇದು ಸುಳ್ಳು.

ವಿವಾಹಿತ ವ್ಯಬಿಚಾರಿಗಳನ್ನು  ಕಲ್ಲೆಸೆದು ಕೊಲ್ಲಬೇಕೆಂಬ ಆಯತ್ ಇಂದಿನ ಕುರಾನಿನಲ್ಲಿ ಇಲ್ಲ. (ಇಂದಿನ ಕುರಾನಿನಲ್ಲಿ ವ್ಯಭಿಚಾರಿಗಳಿಗೆ ಬೇರೆಯೇ ಶಿಕ್ಷೆ ಇದೆ. ಕ್ಷಮೆ ನೀಡಲೂ ಅವಕಾಶವಿದೆ!)
ಹಾಗೆಯೇ, ಅನ್ಯ ಪುರುಷರನ್ನು ಮಹರಂ ಮಾಡಲು ಅವರಿಗೆ ಹತ್ತು ಬಾರಿ ಸ್ತನಪಾನ ಮಾಡಿಸಬೇಕೆಂಬ ಆಯತ್ ಕೂಡ ಇಂದಿನ ಕುರಾನಿನಲ್ಲಿ ಇಲ್ಲ. (ಸ್ತನಪಾನದ ಬಗ್ಗೆ ನನ್ನ ಹಿಂದಿನ ಪೋಸ್ಟ್ ನೋಡಿ)
ಆದರೆ ಅಂದಿನ ಕುರಾನಿನಲ್ಲಿ ವ್ಯಭಿಚಾರಿಗಳನ್ನು ಕಲ್ಲೆಸೆದು ಕೊಲ್ಲಬೇಕೆಂಬ ಆಯತ್ ಇದ್ದಿರಲೇಬೇಕು.(ಇತ್ತೆಂದು ಹೇಳಿರುವುದು ನಾವಲ್ಲ; ಪ್ರವಾದಿ  ಪತ್ನಿಯೂ ಉಮಾತುಲ್ ಮೂಮಿನೀನ್  ಆಯಿಷಾ ರವರಾಗಿದ್ದಾರೆ. ಅದನ್ನು ಉಲ್ಲೇಖಿಸಿರುವುದು ಇಮಾಮ್ ಮುಸ್ಲಿಂ, ಇಮಾಮ ಬುಕಾರಿ, ಇಮಾಮ ಇಬ್ನ್ ಮಾಜಾ ರಂತಹ ಶ್ರೇಷ್ಠ ವಿದ್ವಾಂಸರಾಗಿದ್ದಾರೆ )

ಯಾಕೆಂದರೆ ಪ್ರವಾದಿಯವರು ವ್ಯಭಿಚಾರಿಗಳನ್ನು ಖುದ್ದು ಕಲ್ಲೆಸೆದು ಕೊಲ್ಲಿಸಿದ್ದರು. (ಬುಕಾರಿ 5270 ,2314, 2315 , ಸಹಿ ಮುಸ್ಲಿಂ 1695 b)* *ಮತ್ತು ಕಲ್ಲು  ಎಸೆದು ಕೊಲ್ಲುವಂತೆ (ಕಿತಾಬುಲ್ಲಾ-ಅಲ್ಲಾಹನ ಗ್ರಂಥದ ಆಧಾರದಲ್ಲಿ) ತೀರ್ಪು ಸಹ ನೀಡಿದ್ದರು.( ಸಹಿ ಬುಖಾರಿ 2695,2696 )

ಅಂದು ಅಂತಹ ಆಯತ್ ಇರದೇ, ಪ್ರವಾದಿಯವರು ಹದ್ದು ಮೀರಿ ಇಂತಹ ಕ್ರೂರ ಶಿಕ್ಷೆ ನೀಡಿದರೆಂದು ಯಾರೂ ವಾದಿಸಲು ಸಾಧ್ಯವಿಲ್ಲ.
ತಾನು ವ್ಯಬಿಚಾರ ಮಾಡಿದ್ದೇನೆ ಎಂದು ಖುದ್ದು ನಾಲ್ಕು ಬಾರಿ ಆಣೆ ಹಾಕಿ ಹೇಳಿದ ವ್ಯಕ್ತಿಯನ್ನು ಸಹ ಕಲ್ಲೆಸೆದು ಕೊಲ್ಲುವಂತೆ ಆದೇಶಿಸಿದ್ದರು ರಹ್ಮತುಲ್ ಆಲಮೀನ್ ಆದ ಪ್ರವಾದಿಯವರು! ( ಸಹಿ ಬುಕಾರಿ 6814)

ಇಬ್ನ್ ಮಾಜ -1944 ಹದೀಸ್, ಸಹಿ ಮುಸ್ಲಿಂ 1691a, ಸಹಿ ಮುಸ್ಲಿಂ 1452a ಮೊದಲಾದ  ಅಧಿಕೃತ ಹದೀಸಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ- ಅಂದು ಕಲ್ಲೆಸೆದು ಕೊಲ್ಲಿಸುವ ಮತ್ತು 10 ಬಾರಿ ಸ್ಥನಪಾನದ ಆಯತ್ತು ಇತ್ತೆಂದು .
ಪ್ರವಾದಿಯವರು ಮರಣ ಹೊಂದಿದ ಸಂದರ್ಭದಲ್ಲಿ ಎಲ್ಲರೂ ಅದರಲ್ಲಿ ಕಾರ್ಯನಿರತವಾಗಿರುವಾಗ ಯಾವುದೋ ಬೀದಿ ಕುರಿಯೊಂದು ಬಂದು

ಆಯಿಷಾ ರವರ ತಲೆದಿಂಬಿನ ಕೆಳಗೆ ಇಡಲಾಗಿದ್ದ ಆ ಆಯತನ್ನು ತಿಂದು ಹಾಕಿತೆಂದೂ ಆಯಿಷರವರು ವರದಿ ಮಾಡಿದ್ದಾರೆ ( ಸುನನ್ ಇಬ್ನ್ ಮಾಜ 1944)

ಇವೆಲ್ಲವೂ ಮುತಫಕ್ಕುನ್ ಅಲೆಹಿ (ಅಂದರೆ ಇಸ್ಲಾಮಿನ ‘ಸಿಯಾವು-ಸಿತ್ತ’ ಎಂಬ ಆರು ಅಧಿಕೃತ ಹದೀಸ್ ಪಂಡಿತರಲ್ಲಿ ಬಹುತೇಕ ಪಂಡಿತರೂ ಒಪ್ಪಿರುವಂತಹ   ಹದೀಸ್ ಗಳು) ಹದೀಸ್ ಗಳಾಗಿವೆ. ಇವುಗಳನ್ನು ತಿರಸ್ಕರಿಸಲು ಇತರೆ ಇರುವ ಮಾನದಂಡಗಳೂ ಇಲ್ಲ.

ಕುರಾನ್ ನಲ್ಲಿ ಈ ಆಯತ್ ಗಳು ಇಲ್ಲವೆಂಬುದೂ ಕೂಡ ಈಗ ಮಾನದಂಡವಾಗುವುದಿಲ್ಲ. ಯಾಕೆಂದರೆ
ಕೇವಲ ಕುರಾನ್ ಇಟ್ಟುಕೊಂಡೇ ಧರ್ಮವನ್ನು ಆಚರಿಸುವುದು ಅಸಾಧ್ಯವೆ ಸರಿ, ನಾವು ಇಂದು ನಿರ್ವಹಿಸುತ್ತಿರುವ ಐದು ಬಾರಿಯ ನಮಾಜ್ ಮಾಡಬೇಕೆಂಬುದು ಕೂಡ ಕುರಾನಿನ ಯಾವುದೇ ಸಿಂಗಲ್ ಆಯತಿನಲ್ಲಿ ಇಲ್ಲ. ಗರಿಷ್ಠ ಮೂರು ಬಾರಿ ನಮಾಜ್ ಮಾಡಬೇಕೆಂಬ ಆಯತ್ ಸಿಗಬಹುದಷ್ಟೇ. ಅಥವಾ ನಮಾಜ್ ಮಾಡಬೇಕಾದ ರೀತಿ ನೀತಿಗಳನ್ನು ಕೂಡ ಕುರಾನ್ ಎಲ್ಲಿಯೂ ಹೇಳಿಲ್ಲ.
ಇಸ್ಲಾಮಿನ ಪ್ರದೇಶ ದ್ವಾರವಾದ ಶಹಾಧ ಕಲಿಮ ಕೂಡ ಕುರಾನಿನಲ್ಲಿಲ್ಲ. ಮುಂಜಿ ಮಾಡಬೇಕೆಂದು ಇಲ್ಲ .ಗಡ್ಡ ಬಿಡಬೇಕೆಂದೂ ಮೀಸೆ ಮುಂಡನ ಮಾಡಬೇಕೆಂದೂ ಕುರಾನಿನಲ್ಲಿ ಇಲ್ಲ !ಅಜರುಲ್ ಅಸ್ವಧ್ ಕಪ್ಪು ಕಲ್ಲಿನ ಬಗ್ಗೆ ಕುರಾನಿನಲ್ಲಿ ಇಲ್ಲ .ಝಂ ಝಂ ತೀರ್ಥ ಜಲದ ಬಗ್ಗೆ ಪ್ರಸ್ತಾಪವಿಲ್ಲ. ಕಬರ್ ಶಿಕ್ಷೆ (ಗೋರಿಯೊಳಗಿನ ಪ್ರಶ್ನೋತ್ತರಗಳು) ಕುರಾನಿನಲ್ಲಿ ಇಲ್ಲ. ನಮಾಜ್ ಪೂರ್ವದ ಅಜಾನ್ ಸಹ ಕುರಾನಿನಲ್ಲಿಲ್ಲ!
ಅಲ್ಲೆಲ್ಲಾ ನಾವು ಸಂಪೂರ್ಣವಾಗಿ ಹದೀಸ್ ಗಳನ್ನು ಅವಲಂಬಿಸಿದ್ದೇವೆ.

Exmuslims of Karnataka

Similar Posts

  • ಕುರಾನ್ 2.223 ರ ವ್ಯಾಖ್ಯಾನ

    ವಿಗ್ರಹಾರಾಧಕರಾಗಿದ್ದ ಅನ್ಸಾರ್‌ಗಳು(ಮದೀನಾದ ಪೈಗಂಬರ್ ಅನುಯಾಯಿಗಳು) ಮತ್ತು ಅಹ್ಲುಲ್‌ ಕಿತಾಬ್‌ಗಳಾದ ಯಹೂದರು ಜೊತೆಯಾಗಿ ಮದಿನಾದಲ್ಲಿ ವಾಸಿಸುತ್ತಿದ್ದರು. ಯಹೂದರು ತಮಗಿಂತ ಹೆಚ್ಚಿನ ಜ್ಞಾನವನ್ನು ಹೊಂದಿದ್ದಾರೆಂದು ಅನ್ಸಾರ್‌ಗಳು ನಂಬಿದ್ದರು. ಹಾಗಾಗಿ ಅವರ ಅನೇಕ ಆಚಾರ ವಿಚಾರಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದರು. ಯಹೂದಿಯರ ಪ್ರಕಾರ ಪತ್ನಿಯರನ್ನು ಅವಳ ಯೋನಿಗೆ ಅವಳ ಹಿಂಭಾಗದಿಂದ(dogy style ನಲ್ಲಿ) ಸಂಭೋಗಿಸಿದರೆ ಮೆಳ್ಳೆಗಣ್ಣಿನ ಮಗು ಹುಟ್ಟುತ್ತದೆ ಎಂಬ ನಂಬಿಕೆ ಹೊಂದಿದ್ದರು. ಹಾಗಾಗಿ ಒಂದು ಕೋನದಿಂದ ಮಾತ್ರ ಸಂಭೋಗಿಸುತಿದ್ದರು. ಅಂದರೆ ಆಕೆಯನ್ನು ಅಂಗಾತಮಲಗಿಸಿ ಆಕೆಯನ್ನು ಸಂಪೂರ್ಣ ಮರೆಮಾಚುವ ವಿಧದಲ್ಲಿ ಆಕೆಯ ಮೇಲೆ…

  • ಕುರಾನಿನ ತರ್ಕಶೂನ್ಯ ಆಯತುಗಳು.

    ಕುರಾನ್ ಆಯತುಗಳು ಒಂದಕ್ಕೊಂದು ಹೊಂದಾಣಿಕೆಯಾಗುವುದಿಲ್ಲ. ಒಂದು ಕಡೆ; “ಕುರಾನ್ 16.98—ನೀವು ಕುರ್‌ಆನ್‌ಅನ್ನು ಓದುವಾಗ, ಶಪಿತ ಶೈತಾನನ ವಿರುದ್ಧ ಅಲ್ಲಾಹನ ರಕ್ಷಣೆಯನ್ನು ಬೇಡಿರಿ.” ಎಂದು ಹೇಳಿದರೆ ಅದರ ನಂತರದ ಆಯತ್ತಿನಲ್ಲೇ ಹೀಗೆ ಹೇಳುತ್ತದೆ; ಕುರಾನ್ 16.99—ವಿಶ್ವಾಸಿಗಳ ಮೇಲೆ ಹಾಗೂ ತಮ್ಮ ಒಡೆಯನಲ್ಲಿ ಭರವಸೆ ಇಟ್ಟಿರುವವರ ಮೇಲೆ ಆತನಿಗೆ (ಶೈತಾನನಿಗೆ) ಖಂಡಿತ ಯಾವ ನಿಯಂತ್ರಣವೂ ಇಲ್ಲ. ಮೊಮಿನಗಳ ಮೇಲೆ ಶೈತಾನನ ಯಾವ ಆಟವೂ ನಡೆಯುವುದಿಲ್ಲ ಎಂದಾದ ಮೇಲೆ ಅವರು ಕುರಾನ್ ಓದುವ ಮೊದಲು ಅವನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡುವ ಅವಶ್ಯಕತೆಯಾದರೂ…

  • ಕುರಾನ್ ಹುಟ್ಟಿದ ಕಥೆ 1

    ಕುರಾನ್ – ಅರೇಬಿಕ್ ಪದಗಳ ಶಬ್ದ ನಿಷ್ಪತ್ತಿ [ ಶಬ್ದಾರ್ಥ ಮೂಲ ] ಮತ್ತು ಕುರಾನಿನ ಸಂಯೋಜನೆ. ಕುರಾನ್ ಎಂಬ ಪದ ಬಂದದ್ದೆಲ್ಲಿಂದ ? ಅದರ ಅರ್ಥವೇನು ? ಕುರಾನಿನ ಮೂಲ ಪುಸ್ತಕ ಲೋಹದ ಹಾಳೆಗಳ ಸಹಿತ ಅಲ್ಲಾಹು ಹೊಲಿದು ಮೇಲೆ ಇಟ್ಟುಕೊಂಡಿದ್ದಾನಂತೆ ! ಅದನ್ನು ಲಾಹುಲ್ ಮಹ್ಫುಝ್-Lawh al-Mahfuz(اللوح المحفوظ) ಎಂದು ಕರೆಯಲಾಗಿದೆ.(ಕು 85:22) ಆ ಪುಸ್ತಕದಲ್ಲಿ ಕುರಾನಿನ ಆಯತುಗಳನ್ನು ಬರೆದಿಟ್ಟು ಆ ಲೇಖನಿಯು ವಿಶ್ರಾಂತಿಗೆ ಹೋಗಿದೆಯಂತೆ! ಕುರಾನಿನ ಅರ್ಥ “ಪಠಿಸು” : ಅಂದರೆ ಇಂಗ್ಲೀಷಿನಲ್ಲಿ…

  • ಕುರಾನಿನಲ್ಲಿರುವ ಅಂತರ್-ವಿರೋಧಗಳು; ಭಾಗ 2

    ಕುರಾನಿನಲ್ಲಿರುವ ದ್ವಂದ್ವಗಳು, ವೈರುಧ್ಯಗಳು, ವಿರೋಧಾಭಾಸಗಳು, ತಪ್ಪುಗಳು ಮತ್ತು ಅತಾರ್ಕಿಕಕ ವಿಷಯಗಳನ್ನೆಲ್ಲಾ ತೆಗೆದು ಹಾಕಿದರೆ ಕುರಾನಿನಲ್ಲಿ ಏನು ಉಳಿದಿರುತ್ತದೆ ? ಬಹುಶಃ ಇವುಗಳ ಹೊರತಾಗಿ ಕುರಾನೇ ಇರುವುದಿಲ್ಲ. ಏಕೆಂದರೆ ಇವೆಲ್ಲವುಗಳಿಂದ ತುಂಬಿರುವುದೇ ಕುರಾನ್. ಅಲ್ಲಾಹನ ಹೊರತಾಗಿ ಬೇರೆ ಯಾವ ನ್ಯಾಯಾಧೀಶನಾಗಲಿ, ತೀರ್ಪುಗಾರನಾಗಲಿ ಇಲ್ಲ ಮತ್ತು ಆತ ತನ್ನ ನಿರ್ಧಾರ ಅಥವಾ ಆಡಳಿತದಲ್ಲಿ ಯಾರನ್ನೂ ಪಾಲುದಾರಾನನ್ನಾಗಿ ಮಾಡಲು ಅವನು ಅನುಮತಿಸುವುದಿಲ್ಲ ಎಂದು ಕುರಾನ್ ಈ ಆಯತುಗಳಲ್ಲಿ ಹೇಳುತ್ತದೆ; ಅಲ್ ಅನ್‌ಆಮ್(6).114—‘‘ಅವನು (ಅಲ್ಲಾಹನು) ಸವಿಸ್ತಾರವಾದ ಗ್ರಂಥವನ್ನು ನಿಮ್ಮೆಡೆಗೆ ಇಳಿಸಿಕೊಟ್ಟಿರುವಾಗ, ನಾನೇನು ಅಲ್ಲಾಹನನ್ನು…

  • ಅಲ್ಲಾಹನಿಂದ ಮೋಸಹೋದ ಇಬ್ಲೀಸನ ಕಥೆ(ಕುರಾನ್ 15.39)

    ಕುರಾನ್.15:39 ರ ಈ ಆಯತ್ , ಸರ್ವಶಕ್ತನಾದ ಅಲ್ಲಾಹನ ಮುಖಾಮುಖಿಯಾಗಿ ನಿಂತ ಕ್ಷುಲ್ಲಕ ಜೀವಿಯಾದ ಇಬ್ಲೀಸ್, ಸೃಷ್ಟಿಕರ್ತನಾದ ದೇವರ ವಿರುದ್ಧವೇ ನೇರ ಆರೋಪ ಮಾಡುತ್ತಿರುವ ಆಯತಾಗಿದೆ! ಮತ್ತು ಕುರಾನಿನ 6236 ಆಯತ್ ಗಳಲ್ಲಿ ಎಲ್ಲಿಯೂ ಕೂಡ ದೇವರು ,ಇಬ್ಲೀಸ್ ಮಾಡಿದ ಈ ಗಂಭೀರ ಆರೋಪವನ್ನು ನಿರಾಕರಿಸಿಲ್ಲ ಎಂಬುದು ಗಮನಾರ್ಹವಾಗಿದೆ!! ಇಬ್ಲೀಸ್ ಅಲ್ಲಾಹನಿಗೆ ಹೇಳಿರುವುದು “قَالَ رَبِّ بِمَآ اَغْوَيْتَنِيْ—ನೀನು ನನ್ನನ್ನು *ದಾರಿಗೆಡಿಸಿರುವಂತೆಯೇ* (you have put me in error )ಎಂದಾಗಿದೆ. ಅಂದರೆ ಇಬ್ಲೀಸನನ್ನು ದಾರಿಗೆಡಿಸಿರುವುದು ಅಲ್ಲಾಹು…

  • | |

    ಸ್ವರ್ಗವೋ ? ಕಾಮಪಶುಗಳ ಕೊಟ್ಟಿಗೆಯೋ ?

    ಇಸ್ಲಾಮಿನ ಆರನೇ ಸ್ತಂಭವೊಂದಿದೆ. ಅದನ್ನು ಮೇಲಾಗಿ ಐದು ಉಳಿದ ಸ್ಥಂಭಗಳ ಜತೆಗೆ ಹೇಳಿಲ್ಲದೇ ಇದ್ದರೂ ಸಹಾ ಷರಿಯಾದ ಪುಸ್ತಕಗಳಲ್ಲಿ , ಜಿಹಾದ್ ಕುರಿತಾದ ಲೇಖನಗಳಲ್ಲಿ ಮತ್ತು ಖುದ್ದಾಗಿ ಕುರಾನ್ ನಲ್ಲಿ ಅಲ್ಲಾಹುವಿನ ಮೂಲಕ ಮತ್ತು ಹದೀಸುಗಳಲ್ಲಿ ಮಹಮ್ಮದನ ಬಾಯಿಂದಲೇ ಜಿಹಾದ್ ಮತ್ತು ನಿರಂತರ ಹೋರಾಟದ ಅವಶ್ಯಕತೆಯನ್ನು ಹಾಗೂ ಅದು ತಂದು ಕೊಡಬಹುದಾದ ಅಲ್ಲಾಹುವಿನ ಕೃಪೆಯ ಮಹಾಪೂರವನ್ನು ಒತ್ತಿ ಒತ್ತಿ ಹೇಳಲಾಗಿದೆ. ಎಲ್ಲಾ ಮತಾನುಯಾಯಿ ಮುಸ್ಲಿಮನಿಗೆ ಜಿಹಾದ್ ಕಡ್ಡಾಯ [ ಅಂಗವಿಕಲರ ಹೊರತು ] ಇಂತಹ “ಪವಿತ್ರ ”…

Leave a Reply

Your email address will not be published. Required fields are marked *