ಕುರಾನಿನಲ್ಲಿರುವ ಅಂತರ್-ವಿರೋಧಗಳು; ಭಾಗ 2

ಕುರಾನಿನಲ್ಲಿರುವ ದ್ವಂದ್ವಗಳು, ವೈರುಧ್ಯಗಳು, ವಿರೋಧಾಭಾಸಗಳು, ತಪ್ಪುಗಳು ಮತ್ತು ಅತಾರ್ಕಿಕಕ ವಿಷಯಗಳನ್ನೆಲ್ಲಾ ತೆಗೆದು ಹಾಕಿದರೆ ಕುರಾನಿನಲ್ಲಿ ಏನು ಉಳಿದಿರುತ್ತದೆ ? ಬಹುಶಃ ಇವುಗಳ ಹೊರತಾಗಿ ಕುರಾನೇ ಇರುವುದಿಲ್ಲ. ಏಕೆಂದರೆ ಇವೆಲ್ಲವುಗಳಿಂದ ತುಂಬಿರುವುದೇ ಕುರಾನ್.

ಅಲ್ಲಾಹನ ಹೊರತಾಗಿ ಬೇರೆ ಯಾವ ನ್ಯಾಯಾಧೀಶನಾಗಲಿ, ತೀರ್ಪುಗಾರನಾಗಲಿ ಇಲ್ಲ ಮತ್ತು ಆತ ತನ್ನ ನಿರ್ಧಾರ ಅಥವಾ ಆಡಳಿತದಲ್ಲಿ ಯಾರನ್ನೂ ಪಾಲುದಾರಾನನ್ನಾಗಿ ಮಾಡಲು ಅವನು ಅನುಮತಿಸುವುದಿಲ್ಲ ಎಂದು ಕುರಾನ್ ಈ ಆಯತುಗಳಲ್ಲಿ ಹೇಳುತ್ತದೆ;

ಅಲ್ ಅನ್‌ಆಮ್(6).114—
‘‘ಅವನು (ಅಲ್ಲಾಹನು) ಸವಿಸ್ತಾರವಾದ ಗ್ರಂಥವನ್ನು ನಿಮ್ಮೆಡೆಗೆ ಇಳಿಸಿಕೊಟ್ಟಿರುವಾಗ, ನಾನೇನು ಅಲ್ಲಾಹನನ್ನು ಬಿಟ್ಟು ತೀರ್ಪುಗಾರನಾಗಿ ಬೇರೊಬ್ಬನನ್ನು ಹುಡುಕಬೇಕೇ ?’’ ಎಂದು ಕೇಳಿರಿ….”

ಅಲ್ ಕಹಫ್ (18).26—ಅವನು ತನ್ನ ಆಧಿಪತ್ಯದಲ್ಲಿ ಯಾರನ್ನೂ ಪಾಲುಗೊಳಿಸುವುದಿಲ್ಲ.

ಆದರೆ ಕುರಾನ್‌ನಲ್ಲಿ ಬೇರೆಡೆ ಮುಹಮ್ಮದ್ ಅಲ್ಲಾಹನ ನಿರ್ಧಾರಗಳು ಮತ್ತು ತೀರ್ಪುಗಳಲ್ಲಿ ಪಾಲುಧಾರನಾಗಿರುವುದು ಕಂಡು ಬರುತ್ತದೆ;

ಅನ್ನಿಸಾ(4).64-65—-(ದೂತರೇ,) ನಿಮ್ಮೊಡೆಯನಾಣೆ! ಅವರು ತಮ್ಮ ನಡುವೆ ವಿವಾದವಿರುವ ವಿಷಯಗಳಲ್ಲಿ “ನಿಮ್ಮನ್ನು ತೀರ್ಪುಗಾರರಾಗಿ ಒಪ್ಪುವ ತನಕ ಮತ್ತು ನಿಮ್ಮ ತೀರ್ಪಿನ ಕುರಿತು ತಮ್ಮ ಮನದಲ್ಲಿ ಯಾವುದೇ ಹಿಂಜರಿಕೆಯನ್ನು ಕಾಣದೆ ಅದನ್ನು ಮನಸಾರೆ ಒಪ್ಪಿಕೊಳ್ಳುವ ತನಕ” – ಅವರು ವಿಶ್ವಾಸಿಗಳಾಗುವುದಿಲ್ಲ.

ಅನ್ನಿಸಾ(4).59—-ವಿಶ್ವಾಸಿಗಳೇ, ಅಲ್ಲಾಹನ ಆದೇಶ ಪಾಲಿಸಿರಿ ಮತ್ತು ಅಲ್ಲಾಹನ ದೂತರ ಹಾಗೂ ನಿಮ್ಮ ಪೈಕಿ ಅಧಿಕಾರ ಸ್ಥಾನದಲ್ಲಿರುವವರ ಆದೇಶ ಪಾಲಿಸಿರಿ. ನೀವು ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಉಳ್ಳವರಾಗಿದ್ದರೆ, ಯಾವುದಾದರೂ ವಿಷಯದಲ್ಲಿ ನಿಮ್ಮ ನಡುವೆ ವಿವಾದ ಉಂಟಾದಾಗ, ಅದನ್ನು ಅಲ್ಲಾಹ್ ಮತ್ತವನ ದೂತರೆಡೆಗೆ ಮರಳಿಸಿರಿ. ಇದುವೇ ಅತ್ಯುತ್ತಮ ಧೋರಣೆಯಾಗಿದೆ ಹಾಗೂ ಇದರ ಪರಿಣಾಮವು ಉತ್ತಮವಾಗಿರುತ್ತದೆ.

ಮೇಲಿನ ಉಲ್ಲೇಖವು ಮುಹಮ್ಮದ್ ಸಹ ಅಲ್ಲಾಹ ಅಧಿಕಾರದಲ್ಲಿ ಪಾಲುಧಾರನಾಗಿ ಮಾಡಿದೆ. ಅಲ್ಲಾಹನ ಹೆಸರಿನೊಂದಿಗೆ ಮಹಮದನ ಹೆಸರು ತಳಕು ಹಾಕಿಕೊಂಡಿರುವುದನ್ನು ಗಮನಿಸಿ.

ಅಲ್‌ ಅಹ್‌ಝಾಬ್(33).36—-
ಅಲ್ಲಾಹನು ಮತ್ತು ಅವನ ದೂತರು ಒಂದು ವಿಷಯದಲ್ಲಿ ತೀರ್ಪು ನೀಡಿ ಬಿಟ್ಟ ಬಳಿಕ ವಿಶ್ವಾಸಿ ಪುರುಷರಿಗಾಗಲಿ ವಿಶ್ವಾಸಿ ಸ್ತ್ರೀಯರಿಗಾಗಲಿ ಆ ತಮ್ಮ ವಿಷಯದಲ್ಲಿ ಬೇರೆ ಯಾವುದೇ ಆಯ್ಕೆ ಉಳಿಯುವುದಿಲ್ಲ. ಅಲ್ಲಾಹ್ ಮತ್ತು ಅವನ ದೂತರ ಆದೇಶವನ್ನು ಮೀರಿ ನಡೆದವನು ಸ್ಪಷ್ಟವಾಗಿ ದಾರಿಗೆಟ್ಟವನಾಗಿದ್ದಾನೆ.

ಈ ಆಯತಿನಲ್ಲಂತೂ ಬಹಳ ಸ್ಪಷ್ಟವಾಗಿ ಅಲ್ಲಾಹನಿಗೆ ಸಮಾನವಾದ ಅಧಿಕಾರವನ್ನು ಮಹಮದನಿಗೆ ನೀಡಲಾಗಿದೆ. ಅಲ್ಲಾಹ ಮತ್ತು ಮಹಮದ್ ಸಮಾನ ಅಧಿಕಾರ ಮತ್ತು ಸಾಮರ್ಥ್ಯವನ್ನು ಸಾರುವ ಈ ಆಯತು ಮೊದಲನೇ ಆಯತುಗಳ ವಿರುದ್ಧವಾಗಿವೆ.

Similar Posts

  • ಅಲ್ಲಾಹನಿಂದ ಮೋಸಹೋದ ಇಬ್ಲೀಸನ ಕಥೆ(ಕುರಾನ್ 15.39)

    ಕುರಾನ್.15:39 ರ ಈ ಆಯತ್ , ಸರ್ವಶಕ್ತನಾದ ಅಲ್ಲಾಹನ ಮುಖಾಮುಖಿಯಾಗಿ ನಿಂತ ಕ್ಷುಲ್ಲಕ ಜೀವಿಯಾದ ಇಬ್ಲೀಸ್, ಸೃಷ್ಟಿಕರ್ತನಾದ ದೇವರ ವಿರುದ್ಧವೇ ನೇರ ಆರೋಪ ಮಾಡುತ್ತಿರುವ ಆಯತಾಗಿದೆ! ಮತ್ತು ಕುರಾನಿನ 6236 ಆಯತ್ ಗಳಲ್ಲಿ ಎಲ್ಲಿಯೂ ಕೂಡ ದೇವರು ,ಇಬ್ಲೀಸ್ ಮಾಡಿದ ಈ ಗಂಭೀರ ಆರೋಪವನ್ನು ನಿರಾಕರಿಸಿಲ್ಲ ಎಂಬುದು ಗಮನಾರ್ಹವಾಗಿದೆ!! ಇಬ್ಲೀಸ್ ಅಲ್ಲಾಹನಿಗೆ ಹೇಳಿರುವುದು “قَالَ رَبِّ بِمَآ اَغْوَيْتَنِيْ—ನೀನು ನನ್ನನ್ನು *ದಾರಿಗೆಡಿಸಿರುವಂತೆಯೇ* (you have put me in error )ಎಂದಾಗಿದೆ. ಅಂದರೆ ಇಬ್ಲೀಸನನ್ನು ದಾರಿಗೆಡಿಸಿರುವುದು ಅಲ್ಲಾಹು…

  • ಗುಹಾಂತರದ ಕಥಾಂತರ; ಗುಡಿಸಿ ಗುಂಡಾಂತರ ಮಾಡಿದ ಕುರಾನ್.

    ಗುಹೆಯ ಗೆಳೆಯರ ನಿದ್ರೆ, ಗಂಡಾಗುಂಡಿ ಕುರಾನ್ ಮುದ್ರೆ: ಕಬ್ಜಾ ಮಾಡುವುದರಲ್ಲಿ ಕುರಾನ್ ಎತ್ತಿದ ಕೈ ಎಂದು ಈಗಾಗಲೇ ಹಲವು ಉದಾಹರಣೆಗಳನ್ನು ನೋಡಿಬಿಟ್ಟಿದ್ದೇವೆ. ಆದರೂ ಮೊಮಿನರು ತಮ್ಮ ಈ ಸೌದಿಯ ದೋ ನಂಬ್ರಿ ಮತವು ಕಬ್ಜಾ ಮಾಡಿದ ಕೌದಿ ಎಂಬುದನ್ನು ನಂಬುವುದಕ್ಕೆ ಸಿದ್ಧರೇ ಇಲ್ಲ. ಹಾಗಾಗಿ ಈಗ 2 ಅಥವಾ ಮೂರನೇ ಶತಮಾನದ ಕ್ರೈಸ್ತರ ಕಥೆಯೊಂದನ್ನು ಅಲ್ಲಾಹ ಮತ್ತು ಆತನ ಬಂದಾ ಮಹಮ್ಮದ್ ಹೇಗೆ ಕಬ್ಜಾ ಮಾಡಿ ಕುರಾನಿಗೆ ಸೇರಿಸಿದ್ದಾರೆ ಎಂಬುದನ್ನು ನೋಡೋಣ. ಕುರಾನಿನಲ್ಲಿ ಈ ಕಥೆ 18ನೇ…

  • ಕುರಾನಿನ ತರ್ಕಶೂನ್ಯ ಆಯತುಗಳು.

    ಕುರಾನ್ ಆಯತುಗಳು ಒಂದಕ್ಕೊಂದು ಹೊಂದಾಣಿಕೆಯಾಗುವುದಿಲ್ಲ. ಒಂದು ಕಡೆ; “ಕುರಾನ್ 16.98—ನೀವು ಕುರ್‌ಆನ್‌ಅನ್ನು ಓದುವಾಗ, ಶಪಿತ ಶೈತಾನನ ವಿರುದ್ಧ ಅಲ್ಲಾಹನ ರಕ್ಷಣೆಯನ್ನು ಬೇಡಿರಿ.” ಎಂದು ಹೇಳಿದರೆ ಅದರ ನಂತರದ ಆಯತ್ತಿನಲ್ಲೇ ಹೀಗೆ ಹೇಳುತ್ತದೆ; ಕುರಾನ್ 16.99—ವಿಶ್ವಾಸಿಗಳ ಮೇಲೆ ಹಾಗೂ ತಮ್ಮ ಒಡೆಯನಲ್ಲಿ ಭರವಸೆ ಇಟ್ಟಿರುವವರ ಮೇಲೆ ಆತನಿಗೆ (ಶೈತಾನನಿಗೆ) ಖಂಡಿತ ಯಾವ ನಿಯಂತ್ರಣವೂ ಇಲ್ಲ. ಮೊಮಿನಗಳ ಮೇಲೆ ಶೈತಾನನ ಯಾವ ಆಟವೂ ನಡೆಯುವುದಿಲ್ಲ ಎಂದಾದ ಮೇಲೆ ಅವರು ಕುರಾನ್ ಓದುವ ಮೊದಲು ಅವನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡುವ ಅವಶ್ಯಕತೆಯಾದರೂ…

  • ಕುರಾನ್ ಹುಟ್ಟಿದ ಕಥೆ; ಭಾಗ 2

    ಜನಪ್ರಿಯ ಇಸ್ಲಾಮೀ ಕಥಾನಕ ಮತ್ತು ಗರ್ವದಿಂದ ಹೇಳಿಕೊಳ್ಳುವ ಮಾತೆಂದರೆ: “ಕುರಾನ್ ಒಂದು ದೈವೀ ಪವಾಡ. ಕುರಾನಿನಂಥ ಪರಿಪೂರ್ಣವಾದ ಜೀವನ ಮಾರ್ಗದರ್ಶಕ ಪುಸ್ತಕ ಜಗತ್ತಿನಲ್ಲಿಯೇ ಇಲ್ಲ. ಕುರಾನ್ ನೇರವಾಗಿ ಅಲ್ಲಾಹುವಿನಿಂದ ಮಹಮ್ಮದ್ ಪ್ರವಾದಿಗಳಿಗೆ ಕಳಿಸಲ್ಪಟ್ಟ (ಅವತೀರ್ಣಗೊಂಡ) ಸಂದೇಶ ಮತ್ತು ಬೋಧನೆಗಳನ್ನು ಕ್ರೋಢೀಕರಿಸಿದ ಪುಸ್ತಕ. ಅದು ಅಂದಿನಿಂದ ಇಂದಿನವರೆಗೆ ಒಂದೇ ಒಂದು ಚುಕ್ಕೆಯೂ ಬದಲಾಗದೆ ಹಾಗೆಯೇ ಉಳಿದು ಬಂದಿರುವ ಮಹಿಮಾ ಪೂರ್ಣವಾದ ಪುಸ್ತಕ ; ಹಾಗಾಗಿಯೇ ಅದು ಬಹಳ ಪವಿತ್ರವಾದದ್ದು. ಎಂದಿಗೂ ಬದಲಾಗದಂಥ ಕುಂದಿಲ್ಲದ ಈ ಪುಸ್ತಕದ ರಕ್ಷಣೆಯ ಹೊಣೆಯನ್ನು…

  • ಕುರಾನಿನಲ್ಲಿರುವ ಅಂತರ್-ವಿರೋಧಗಳು; ಭಾಗ 1

    ನರಕವಾಸಿಗಳ ಆಹಾರವೇನು ? ಕುರಾನ್ ಯಾವ ರೀತಿಯ ಪವಿತ್ರ ಪುಸ್ತಕ ಎಂದು ನನಗೆ ತಿಳಿಯುತ್ತಿಲ್ಲ. ಅದರ ಬೋಧನೆಗಳಲ್ಲೇ ಪರಸ್ಪರ ವಿರೋಧಾಭಾಸಗಳು, ಗೊಂದಲಗಳು, ಅಂತರ್ವಿರೋಧಗಳು, ತಪ್ಪುಗಳು, ತೊಡಕುಗಳಿವೆ. ಕುರಾನ್ ನರಕವಾಸಿಗಳ ಆಹಾರದ ಕುರಿತಾಗಿ ಒಂದು ಕಡೆ ಹೀಗೆ ಹೇಳುತ್ತದೆ: ಅಲ್ ಗಾಶಿಯಾ(88).6- ಲೈಸ ಲಹುಮ್ ತ’ಅಮುನ್ ಇಲ್ಲಾ ಮಿನ್ ದರೀ’——ಮುಳ್ಳಿನ ಗಿಡದ ಹೊರತು ಬೇರೆ ಯಾವ ಆಹಾರವೂ ಅವರಿಗೆ(ನರಕವಾಸಿಗಳಿಗೆ) ಸಿಗದು. ಈ ಆಯತಿನಲ್ಲಿ ಹೇಳಿರುವಂತೆ ನರಕವಾಸಿಗಳ ಆಹಾರ “ಕೇವಲ ಮುಳ್ಳಿನ ಗಿಡ ಮಾತ್ರ”. ಇದರ ಹೊರತು ಮತ್ಯಾವ ಆಹಾರವೂ…

  • |

    DEBUNKING OF “ಕುರಾನ್ ಭ್ರೂಣಶಾಸ್ತ್ರ “

    ಅಧ್ಯಾಯ 3: ಆಲಿ ಇಮ್ರಾನ್ (ಇಮ್ರಾನರ ಸಂತತಿ)ಸೂಕ್ತ : 7 “ಅವನೇ, ಈ ಗ್ರಂಥವನ್ನು ನಿಮಗೆ ಇಳಿಸಿಕೊಟ್ಟವನು. ಇದರಲ್ಲಿ ಖಚಿತ ವಚನಗಳಿವೆ – ಅವುಗಳೇ ಈ ಗ್ರಂಥದ ಸಾರ. ಇನ್ನು, ಇದರಲ್ಲಿ ಬಹು ಅರ್ಥದ ವಚನಗಳೂ ಇವೆ. ತಮ್ಮ ಮನಸ್ಸುಗಳಲ್ಲಿ ವಕ್ರತೆ ಉಳ್ಳವರು, ಈ ಪೈಕಿ ಬಹು ಅರ್ಥದ ವಚನಗಳ ಹಿಂದೆ ನಡೆಯುತ್ತಾರೆ. ಅವರು ಈ ಮೂಲಕ ಗೊಂದಲದ ಬೆನ್ನು ಹಿಡಿಯುತ್ತಾರೆ ಮತ್ತು ವಿಕೃತ ವ್ಯಾಖ್ಯಾನಗಳನ್ನು ಅರಸುತ್ತಿರುತ್ತಾರೆ. ನಿಜವಾಗಿ, ಅವುಗಳ ಸರಿಯಾದ ವ್ಯಾಖ್ಯಾನವನ್ನು ಬಲ್ಲವನು ಅಲ್ಲಾಹನ ಹೊರತು…

Leave a Reply

Your email address will not be published. Required fields are marked *