ಕುರಾನಿನ ತರ್ಕಶೂನ್ಯ ಆಯತುಗಳು.

ಕುರಾನ್ ಆಯತುಗಳು ಒಂದಕ್ಕೊಂದು ಹೊಂದಾಣಿಕೆಯಾಗುವುದಿಲ್ಲ. ಒಂದು ಕಡೆ;

“ಕುರಾನ್ 16.98—ನೀವು ಕುರ್‌ಆನ್‌ಅನ್ನು ಓದುವಾಗ, ಶಪಿತ ಶೈತಾನನ ವಿರುದ್ಧ ಅಲ್ಲಾಹನ ರಕ್ಷಣೆಯನ್ನು ಬೇಡಿರಿ.” ಎಂದು ಹೇಳಿದರೆ ಅದರ ನಂತರದ ಆಯತ್ತಿನಲ್ಲೇ ಹೀಗೆ ಹೇಳುತ್ತದೆ;

ಕುರಾನ್ 16.99—ವಿಶ್ವಾಸಿಗಳ ಮೇಲೆ ಹಾಗೂ ತಮ್ಮ ಒಡೆಯನಲ್ಲಿ ಭರವಸೆ ಇಟ್ಟಿರುವವರ ಮೇಲೆ ಆತನಿಗೆ (ಶೈತಾನನಿಗೆ) ಖಂಡಿತ ಯಾವ ನಿಯಂತ್ರಣವೂ ಇಲ್ಲ.

ಮೊಮಿನಗಳ ಮೇಲೆ ಶೈತಾನನ ಯಾವ ಆಟವೂ ನಡೆಯುವುದಿಲ್ಲ ಎಂದಾದ ಮೇಲೆ ಅವರು ಕುರಾನ್ ಓದುವ ಮೊದಲು ಅವನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡುವ ಅವಶ್ಯಕತೆಯಾದರೂ ಎಲ್ಲಿರುತ್ತದೆ ? ಇದಂತೂ totally illogical ಆಗಿದೆ. ಸರ್ವಜ್ಞನಾದ ದೇವರು ಹೀಗೆ ಗೊಂದಲಮಯ ವಿಚಾರಗಳನ್ನು ಬರೆಯುತ್ತಾನೆಯೇ ? ಕುರಾನ್ ದೈವವಾಣಿಯೇ ಅಲ್ಲ.

ಇಬ್ನೆ ಕಸಿರ್ ಇದರ ಕುರಿತು ಬರೆಯುತ್ತಾ, “ಅಲ್ಲಾಹ ತನ್ನ ನಬಿಯ ಮೂಲಕ ಮೂಮಿನ್ ಅನುಯಾಯಿಗಳಿಗೆ ಆದೇಶಿಸುತ್ತಾನೆ. ಕುರಾನ್ ಓದುವುದಕ್ಕೆ ಪ್ರಾರಂಭಿಸುವ ಮೊದಲು ಅಊದು ಬಿಲ್ಲಾಹಿ……..ಪಠಿಸಬೇಕೆಂದು. ಅಲ್ಲಾಹ ನಿಜಕ್ಕೂ ಜ್ಞಾನವಂತನ್ನಾಗಿದ್ದರೆ ಕುರಾನಿನಲ್ಲಿ ಪರಸ್ಪರ ಎರಡು ವಿರೋಧಿ ಆಯತುಗಳು ಹೇಗೆ ಬರಲು ಸಾಧ್ಯ ?

ಕುರಾನಿನ ಮತ್ತೊಂದು ಕಡೆ ಹೀಗೆ ಹೇಳುತ್ತದೆ;

ಕುರಾನ್ 7.200—–(ದೂತರೇ,) ಶೈತಾನನ ಕಡೆಯಿಂದ ನಿಮಗೆ ಯಾವುದೇ ತರದ ಪ್ರಚೋದನೆಯುಂಟಾದರೆ, ಅಲ್ಲಾಹನ ರಕ್ಷಣೆ ಬಯಸಿರಿ. ಖಂಡಿತವಾಗಿಯೂ ಅವನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ. ಇದು ಮೂರ್ಖತನವಲ್ಲದೆ ಮತ್ತಿನ್ನೇನು ? ಒಂದು ಕಡೆ ಮುಸ್ಲಿಮರ ಮೇಲೆ ಶೈತಾನನ ಯಾವುದೇ ನಿಯಂತ್ರಣ ಇಲ್ಲ ಎನ್ನುವುದು, ಮತ್ತೊಂದು ಕಡೆ ದೂತರೆ ಶೈತಾನನಿಂದ ರಕ್ಷಣೆಗಾಗಿ ನನ್ನನ್ನು ಮೊರೆಹೋಗಿ ಎನ್ನುವುದು.

Similar Posts

  • ಕುರಾನಿನಲ್ಲಿರುವ ಅಂತರ್-ವಿರೋಧಗಳು; ಭಾಗ 1

    ನರಕವಾಸಿಗಳ ಆಹಾರವೇನು ? ಕುರಾನ್ ಯಾವ ರೀತಿಯ ಪವಿತ್ರ ಪುಸ್ತಕ ಎಂದು ನನಗೆ ತಿಳಿಯುತ್ತಿಲ್ಲ. ಅದರ ಬೋಧನೆಗಳಲ್ಲೇ ಪರಸ್ಪರ ವಿರೋಧಾಭಾಸಗಳು, ಗೊಂದಲಗಳು, ಅಂತರ್ವಿರೋಧಗಳು, ತಪ್ಪುಗಳು, ತೊಡಕುಗಳಿವೆ. ಕುರಾನ್ ನರಕವಾಸಿಗಳ ಆಹಾರದ ಕುರಿತಾಗಿ ಒಂದು ಕಡೆ ಹೀಗೆ ಹೇಳುತ್ತದೆ: ಅಲ್ ಗಾಶಿಯಾ(88).6- ಲೈಸ ಲಹುಮ್ ತ’ಅಮುನ್ ಇಲ್ಲಾ ಮಿನ್ ದರೀ’——ಮುಳ್ಳಿನ ಗಿಡದ ಹೊರತು ಬೇರೆ ಯಾವ ಆಹಾರವೂ ಅವರಿಗೆ(ನರಕವಾಸಿಗಳಿಗೆ) ಸಿಗದು. ಈ ಆಯತಿನಲ್ಲಿ ಹೇಳಿರುವಂತೆ ನರಕವಾಸಿಗಳ ಆಹಾರ “ಕೇವಲ ಮುಳ್ಳಿನ ಗಿಡ ಮಾತ್ರ”. ಇದರ ಹೊರತು ಮತ್ಯಾವ ಆಹಾರವೂ…

  • ಏಕ್ ಔರ್ ದಕ್ಕಾ, ಕುರಾನ್ ಫೇಲ್ ಪಕ್ಕಾ! [ಕುರಾನಿನ ಸುಳ್ಳು ಪ್ರತಿಪಾದನೆಗಳು]

    ಕುರಾನ್ ಆಗಲಿ ಅದರಿಂದ ಇಸ್ಲಾಮ್ ಆಗಲಿ ತನ್ನದು ಎನ್ನಬಹುದಾದ original- ಸೃಜನಾತ್ಮಕವಾದ ಶುದ್ಧ ಆಚಾರ ವಿಚಾರಗಳನ್ನು ಸೃಷ್ಟಿಸಿಯೇ ಇಲ್ಲ. ಎಲ್ಲವೂ ಅಲ್ಲಿಂದ ಇಲ್ಲಿಂದ ಆಯ್ದ ಬಟ್ಟೆಯ ಚೂರುಗಳನ್ನು ಸೇರಿಸಿ ಹೊಲಿದ ಕೌದಿಯ ರೂಪದಲ್ಲಿದೆ ಈ ಕುರಾನ್ ಮತ್ತು ಇಸ್ಲಾಮ್. ಹಾಗಾಗಿಯೇ ಇಸ್ಲಾಮನ್ನು bandaid religion ಎಂದೂ ಕರೆಯುವುದುಂಟು. ಒಡ್ಡಿದ ಪರೀಕ್ಷೆಯಲ್ಲಿ ಹಿನಾಯವಾಗಿ ಸೋಲುವ ದಡ್ಡವಿದ್ಯಾರ್ಥಿಯಂತಿದೆ ಇಸ್ಲಾಮ್. ತಾನು ಸೋತರೆ ಔಟ್ ಆದರೆ ಬಾಲ್ ಒಡೆದು, ವಿಕೆಟ್ ಮುರಿದು ಹಾಕುವಂಥ ದೌಷ್ಟ್ರ್ಯ ಇಲ್ಲಿರುತ್ತದೆ. ಈ ಹಿಂದೆ, ಇಸ್ಲಾಮಿನ ಮೂಲ…

  • | |

    ಸ್ವರ್ಗವೋ ? ಕಾಮಪಶುಗಳ ಕೊಟ್ಟಿಗೆಯೋ ?

    ಇಸ್ಲಾಮಿನ ಆರನೇ ಸ್ತಂಭವೊಂದಿದೆ. ಅದನ್ನು ಮೇಲಾಗಿ ಐದು ಉಳಿದ ಸ್ಥಂಭಗಳ ಜತೆಗೆ ಹೇಳಿಲ್ಲದೇ ಇದ್ದರೂ ಸಹಾ ಷರಿಯಾದ ಪುಸ್ತಕಗಳಲ್ಲಿ , ಜಿಹಾದ್ ಕುರಿತಾದ ಲೇಖನಗಳಲ್ಲಿ ಮತ್ತು ಖುದ್ದಾಗಿ ಕುರಾನ್ ನಲ್ಲಿ ಅಲ್ಲಾಹುವಿನ ಮೂಲಕ ಮತ್ತು ಹದೀಸುಗಳಲ್ಲಿ ಮಹಮ್ಮದನ ಬಾಯಿಂದಲೇ ಜಿಹಾದ್ ಮತ್ತು ನಿರಂತರ ಹೋರಾಟದ ಅವಶ್ಯಕತೆಯನ್ನು ಹಾಗೂ ಅದು ತಂದು ಕೊಡಬಹುದಾದ ಅಲ್ಲಾಹುವಿನ ಕೃಪೆಯ ಮಹಾಪೂರವನ್ನು ಒತ್ತಿ ಒತ್ತಿ ಹೇಳಲಾಗಿದೆ. ಎಲ್ಲಾ ಮತಾನುಯಾಯಿ ಮುಸ್ಲಿಮನಿಗೆ ಜಿಹಾದ್ ಕಡ್ಡಾಯ [ ಅಂಗವಿಕಲರ ಹೊರತು ] ಇಂತಹ “ಪವಿತ್ರ ”…

  • ಗುಹಾಂತರದ ಕಥಾಂತರ; ಗುಡಿಸಿ ಗುಂಡಾಂತರ ಮಾಡಿದ ಕುರಾನ್.

    ಗುಹೆಯ ಗೆಳೆಯರ ನಿದ್ರೆ, ಗಂಡಾಗುಂಡಿ ಕುರಾನ್ ಮುದ್ರೆ: ಕಬ್ಜಾ ಮಾಡುವುದರಲ್ಲಿ ಕುರಾನ್ ಎತ್ತಿದ ಕೈ ಎಂದು ಈಗಾಗಲೇ ಹಲವು ಉದಾಹರಣೆಗಳನ್ನು ನೋಡಿಬಿಟ್ಟಿದ್ದೇವೆ. ಆದರೂ ಮೊಮಿನರು ತಮ್ಮ ಈ ಸೌದಿಯ ದೋ ನಂಬ್ರಿ ಮತವು ಕಬ್ಜಾ ಮಾಡಿದ ಕೌದಿ ಎಂಬುದನ್ನು ನಂಬುವುದಕ್ಕೆ ಸಿದ್ಧರೇ ಇಲ್ಲ. ಹಾಗಾಗಿ ಈಗ 2 ಅಥವಾ ಮೂರನೇ ಶತಮಾನದ ಕ್ರೈಸ್ತರ ಕಥೆಯೊಂದನ್ನು ಅಲ್ಲಾಹ ಮತ್ತು ಆತನ ಬಂದಾ ಮಹಮ್ಮದ್ ಹೇಗೆ ಕಬ್ಜಾ ಮಾಡಿ ಕುರಾನಿಗೆ ಸೇರಿಸಿದ್ದಾರೆ ಎಂಬುದನ್ನು ನೋಡೋಣ. ಕುರಾನಿನಲ್ಲಿ ಈ ಕಥೆ 18ನೇ…

  • ಕುರಾನ್ ಹುಟ್ಟಿದ ಕಥೆ; ಭಾಗ 2

    ಜನಪ್ರಿಯ ಇಸ್ಲಾಮೀ ಕಥಾನಕ ಮತ್ತು ಗರ್ವದಿಂದ ಹೇಳಿಕೊಳ್ಳುವ ಮಾತೆಂದರೆ: “ಕುರಾನ್ ಒಂದು ದೈವೀ ಪವಾಡ. ಕುರಾನಿನಂಥ ಪರಿಪೂರ್ಣವಾದ ಜೀವನ ಮಾರ್ಗದರ್ಶಕ ಪುಸ್ತಕ ಜಗತ್ತಿನಲ್ಲಿಯೇ ಇಲ್ಲ. ಕುರಾನ್ ನೇರವಾಗಿ ಅಲ್ಲಾಹುವಿನಿಂದ ಮಹಮ್ಮದ್ ಪ್ರವಾದಿಗಳಿಗೆ ಕಳಿಸಲ್ಪಟ್ಟ (ಅವತೀರ್ಣಗೊಂಡ) ಸಂದೇಶ ಮತ್ತು ಬೋಧನೆಗಳನ್ನು ಕ್ರೋಢೀಕರಿಸಿದ ಪುಸ್ತಕ. ಅದು ಅಂದಿನಿಂದ ಇಂದಿನವರೆಗೆ ಒಂದೇ ಒಂದು ಚುಕ್ಕೆಯೂ ಬದಲಾಗದೆ ಹಾಗೆಯೇ ಉಳಿದು ಬಂದಿರುವ ಮಹಿಮಾ ಪೂರ್ಣವಾದ ಪುಸ್ತಕ ; ಹಾಗಾಗಿಯೇ ಅದು ಬಹಳ ಪವಿತ್ರವಾದದ್ದು. ಎಂದಿಗೂ ಬದಲಾಗದಂಥ ಕುಂದಿಲ್ಲದ ಈ ಪುಸ್ತಕದ ರಕ್ಷಣೆಯ ಹೊಣೆಯನ್ನು…

  • ಕುರಾನ್ ಹುಟ್ಟಿದ ಕಥೆ; ಭಾಗ 3

    ಕುರಾನ್ – ನಡೆದು ಬಂದ ಹಾದಿ – ಚರಿತ್ರೆ ಕಳೆದ ಭಾಗದಲ್ಲಿ ಕುರಾನು ಬದಲಾಗದೆಂದು ಹೇಳುವ ಮುಸ್ಲಿಮರ ನಂಬಿಕೆ ಆಧಾರಹೀನ ಮತ್ತು ತರ್ಕಹೀನವಾದದ್ದು ಎಂದು ಮತ್ತು ಕುರಾನಿನ ಮೂಲ, ಅದರ ಸಂಕಲನ, ಅದರಲ್ಲಿನ ಲೋಪದೋಷಗಳು, ಕುರಾನ್ ಸಿದ್ಧವಾಗುವಾಗ ಆದ ಯಡವಟ್ಟು ಗಳನ್ನು ನೋಡಿದ್ದೇವೆ. ಈಗ ಕುರಾನ್ ಬದಲಾಗಿದೆ ಎಂದು ಸಿದ್ಧವಾದ ಮೇಲೆ ಅದರ ಇತಿಹಾಸವನ್ನು ಕುರಿತು ಒಂದಷ್ಟು ಒಳನೋಟಗಳನ್ನು ಪಡೆದುಕೊಳ್ಳೋಣ. ಹದೀಸುಗಳ ಆಧಾರದಲ್ಲಿ ಕುರಾನ್ ಬದಲಾಗುತ್ತಾ ಬಂದ ಬಗೆಯನ್ನು ಮತ್ತು ವಿವಿಧ ಭಾಗಗಳ ಜನರು ಬಳಸುತ್ತಿರುವ ಕುರಾನಿನಲ್ಲಿ…

Leave a Reply

Your email address will not be published. Required fields are marked *