ಶರಿಯಾ; ದೈವೀಕ ಕಾನೂನು

ಅಪರಾಧಿಗಳ ಕೈಕಾಲು, ತಲೆಗಳನ್ನು ಕತ್ತರಿಸುವಂತ ಶರಿಯಾ ಕಾನೂನು ಸೌದಿ ಅರೇಬಿಯಾದಲ್ಲಿ ಜಾರಿಯಲ್ಲಿದೆ. ಅಪಾರಾಧಿಗಳನ್ನು ಇಂತಕ ಶಿಕ್ಷೆಗೆ ಒಳಪಡಿಸುವ ಹೃದಯ ವಿದ್ರಾವಕ ಘಟನೆಗಳನ್ನು ಸೌದಿ ರಾಜವಂಶದ ಮಹಿಳೆ ತನ್ನ “desert royal” ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾಳೆ.
ಅಪರಾಧಿಗಳ ಕೈಕಾ’ಲು ತಲೆಗಳನ್ನು ಕಡಿಯುವುದಕ್ಕೆ ಒಬ್ಬ ನುರಿತ ತಲೆ ಕಡಿಯುವವನನ್ನು(swordsman) ಆಯ್ಕೆ ಮಾಡಿರುತ್ತಾರೆ. ಆತನ ಹೆಸರೇ “ಸಯೀದ್ ಅಲ್ ಸಯಾಫ್(saeed al sayaf)” ಈತನಿಗೆ ಸೌದಿ ಸರಕಾರವೇ ಸೂಕ್ತ ಶಿಕ್ಷಣ, ತರಬೇತಿ, ಹರಿತವಾದ ಖಡ್ಗ ನೀಡಿ ಸಹಾಯ ಮಾಡುತ್ತದೆ.
ಈತನೋ ಎಷ್ಟು ನಿರ್ಧಯಿಯಾಗಿದ್ದನೆಂದರೆ ಅಪರಾಧಿಗಳ ತಲೆ ಕೈಕಾಲುಗಳನ್ನು ಅತ್ಯಂತ ಚಾಕಚಕ್ಯತೆಯಿಂದ, ದಕ್ಷತೆಯಿಂದ ಕಿಚಿತ್ತು ಅಂಜದೆ ನೆರೆವೆರಿಸುತಿದ್ದ. ಈತನೇ ಸೌದಿಯ ಒಂದು ಮಾಧ್ಯಮದಲ್ಲಿ ತನ್ನ ಅನುಭವಗಳನ್ನು ಹಂಚಿಕೊಂಡಿದ್ದಾನೆ. ಈತ ತನ್ನ ಕಾರ್ಯವಧಿಯಲ್ಲಿ 600 ತಲೆಗಳನ್ನು 60 ಕೈಗಳನ್ನು ಕಡಿದು ಹಾಕಿದ್ದ. ಅವನ ಕಾರ್ಯವೈಖರಿಯನ್ನು ಮೆಚ್ಚಿ ಸೌದಿ ರಾಜಕುಮಾರ ಅವನಿಗೆ ಒಂದು ಬಲಿಷ್ಠ ಹಾಗೂ ಹರಿತವಾದ ಕತ್ತಿಯನ್ನು ನೀಡಿದ್ದ.

ನಿವೃತ್ತಿಯ ನಂತರ ಆತ ತನ್ನ ಮಗನಿಗೆ ತನ್ನ ತಲೆ ಕಡಿಯುವ ವೃತ್ತಿಯನ್ನು ನೀಡುವ ಸಲುವಾಗಿ ಸೂಕ್ತ ಅಭ್ಯಾಸ ಮಾಡಿಸುತಿದ್ದ. ಒಮ್ಮೆ ಸಯಾಫ್ ಇಬ್ಬರು ಅಪರಾಧಿಗಳ ತಲೆ ಕಡಿಯಬೇಕಾಗಿತ್ತು. ಈ ಕಾರ್ಯಕ್ಕಾಗಿ ತನ್ನ ಕತ್ತಿಯನ್ನು ಪರೀಕ್ಷೆ ಮಾಡುತ್ತಾ ಕುಳಿತಿರುವಾಗ. ಇಬ್ಬರು ಅಪರಾಧಿಗಳು ಭಯದಿಂದ ತಮ್ಮ ಅಂತ್ಯವನ್ನೇ ಕಾದು ಕುಳಿತಿರುವಾಗ ಒಮ್ಮೆಲೇ ಒಬ್ಬ ಅಪರಾಧಿಯನ್ನು ಹಿಡಿದು ಒಂದೇ ಏಟಿಗೆ ಅವನ ತಲೆಯನ್ನು ಎರಡು ತುಂಡು ಮಾಡಿಬಿಟ್ಟ. ತುಂಡಾದ ತಲೆ ಬಳಿಯಲ್ಲೇ ಕುಳಿತಿದ್ದ ಇನ್ನೊಬ್ಬ ಅಪರಾಧಿಯ ಮೇಲೆ ಬಿದ್ದಾಗ ಆತ ಗಾಬರಿಯಿಂದ ಮೂರ್ಛೆ ಹೋದ. ಎಚ್ಚರಗೊಂಡ ನಂತರ ಅವನು ಕಣ್ಣೀರುಗರೆದು ನನ್ನನ್ನು ಕ್ಷಮಿಸು ಎಂದು ಗೂಗರೆದ, ಅರಚಾಡಿದ ಆದರೆ ಸಯಾಫ್ ನಗುನಗುತ್ತಲೇ ಅವನ ತಲೆ ಕಡಿದು ಉರುಳಿಸಿದ. (Desert royal p187-189)
ಹೇಗಿದೆ ರಕ್ತದಾಹಿ ದೈವಿಕ ಕಾನೂನು ?
ನಮ್ಮಲ್ಲಿ ಕೆಲವರು ಇದ್ದಾರೇ ಜೀವಪರವಾದಿಗಳು, ಮಾನವತಾವಾದಿಗಳು, ಬುದ್ಧಿಜೀವಿಗಳು ಇವರ ವಾದ ಏನೆಂದರೆ ನ್ಯಾಯಾಲಯಗಳು ಗಲ್ಲು ಶಿಕ್ಷೆಗೆ ಕೊಡುವುದು ತಪ್ಪು. ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಜೀವಾವಧಿಯ ಶಿಕ್ಷೆಯ ಹೊರತಾಗಿ ಜೀವ ತೆಗೆಯುವ ಗಲ್ಲು ಶಿಕ್ಷೆಗೆ ಯಾರಿಗೂ ಕೊಡಬಾರದು. ಆದರೆ ಶರಿಯಾ ಕಾನೂನಿನ ಇಂತಹ ಅಮಾನುಷ ಶಿಕ್ಷೆಗಳ ಕುರಿತು ನಿಮ್ಮ ಅಭಿಪ್ರಾಯ ಏನು ? ಎಂದು ಕೇಳಿದರೆ ಅವರ ಬಾಯಿ ಬಿದ್ದು ಹೋಗುತ್ತದೆ.