ಕುರಾನಿನಲ್ಲಿರುವ ಅಂತರ್-ವಿರೋಧಗಳು; ಭಾಗ 1
ನರಕವಾಸಿಗಳ ಆಹಾರವೇನು ?

ಕುರಾನ್ ಯಾವ ರೀತಿಯ ಪವಿತ್ರ ಪುಸ್ತಕ ಎಂದು ನನಗೆ ತಿಳಿಯುತ್ತಿಲ್ಲ. ಅದರ ಬೋಧನೆಗಳಲ್ಲೇ ಪರಸ್ಪರ ವಿರೋಧಾಭಾಸಗಳು, ಗೊಂದಲಗಳು, ಅಂತರ್ವಿರೋಧಗಳು, ತಪ್ಪುಗಳು, ತೊಡಕುಗಳಿವೆ.
ಕುರಾನ್ ನರಕವಾಸಿಗಳ ಆಹಾರದ ಕುರಿತಾಗಿ ಒಂದು ಕಡೆ ಹೀಗೆ ಹೇಳುತ್ತದೆ: ಅಲ್ ಗಾಶಿಯಾ(88).6- ಲೈಸ ಲಹುಮ್ ತ’ಅಮುನ್ ಇಲ್ಲಾ ಮಿನ್ ದರೀ’——ಮುಳ್ಳಿನ ಗಿಡದ ಹೊರತು ಬೇರೆ ಯಾವ ಆಹಾರವೂ ಅವರಿಗೆ(ನರಕವಾಸಿಗಳಿಗೆ) ಸಿಗದು.
ಈ ಆಯತಿನಲ್ಲಿ ಹೇಳಿರುವಂತೆ ನರಕವಾಸಿಗಳ ಆಹಾರ “ಕೇವಲ ಮುಳ್ಳಿನ ಗಿಡ ಮಾತ್ರ”. ಇದರ ಹೊರತು ಮತ್ಯಾವ ಆಹಾರವೂ ಅವರಿಗೆ ಇರುವುದಿಲ್ಲ. ಎಂದು ಸ್ಪಷ್ಟವಾಗಿ ಹೇಳಿದೆ.
ಆದರೆ ಮತ್ತೊಂದು ಕಡೆ ಇದಕ್ಕೆ ವಿರುದ್ಧವಾಗಿ ಹೀಗೆ ಹೇಳುತ್ತದೆ;
ಅಲ್ ಹಾಕ್ಕಃ(69).36- ವಲಾ ತ’ಅಮುನ್ ಇಲ್ಲಾ ಮಿನ್ ಗಿಸ್ಲೀನ್—– ಕೀವಿನ ಹೊರತು ಬೇರೆ ಯಾವ ಆಹಾರವೂ ಅವನಿಗೆ(ನರಕವಾಸಿಗೆ) ದಕ್ಕದು. ಮುಳ್ಳಿನ ಗಿಡದ ಹೊರತು ಮತ್ಯಾವ ಆಹಾರವೂ ನರಕವಾಸಿಗಳಿಗೆ ಇಲ್ಲ ಎಂಬ ಕುರಾನಿನ ಒಂದು ಆಯತು ಹೇಳಿರುವಾಗ ಈ ಆಯತಿನಲ್ಲಿ “ಕೀವಿನ ಹೊರತು ಬೇರೆ ಯಾವ ಆಹಾರವೂ ಅವನಿಗೆ ದಕ್ಕದು” ಎಂದು ಹೇಳುತ್ತಿದೆ. ಇಂತಹ ವಿರೋಧಭಾಸ(contradiction)ಗಳು, ತಪ್ಪುಗಳು ಕುರಾನಿನಲ್ಲಿ ಸಾಕಷ್ಟು ಸಿಗುತ್ತವೆ. ಆದ್ದರಿಂದಲೇ ಇದು ಮನುಷ್ಯಕೃತ ಪುಸ್ತಕ.
ಇದಲ್ಲದೆ ಕುರಾನಿನ ಮತ್ತೊಂದು ಕಡೆ ಇದಕ್ಕೆ ವಿರೋಧವಾಗಿ ಹೀಗೆ ಹೇಳುತ್ತದೆ;
ಅದ್ದುಖಾನ್(44).43-44 ಇನ್ನ ಶ್ಯಜರತಝ್ ಝಕ್ಕೂಮ್ ತ’ಆಮುಲ್ ಅಸೀಮ್—-ಖಂಡಿತವಾಗಿಯೂ, ಝಕ್ಕೂಮ್ ಮರ,ಅದುವೇ ಪಾಪಿಗಳ ಆಹಾರವಾಗಿರುವುದು. ಅಲ್ ವಾಕಿಅಃ (56)51-53—-ಆ ಬಳಿಕ ಓ ದಾರಿಗೆಟ್ಟ ಧಿಕ್ಕಾರಿಗಳೇ, ನೀವು,‘ಝಕ್ಕೂಮ್’ ಮರದ ಭಾಗವನ್ನು ತಿನ್ನಬೇಕಾಗುವುದು. ಅದರಿಂದಲೇ ಹೊಟ್ಟೆ ತುಂಬಿಸಿಕೊಳ್ಳಬೇಕಾಗುವುದು.
ಅಸ್ಸಾಫ್ಫಾತ್(37).62-66 ಫಇನ್ನಹುಮ್ ಲಾಕಿಲೂನಾ ಮಿನ್ಹಾ ಫಮಾಲಿನಾ ಮಿನ್ಹಾ ಅಲ್ಬುತೂನ್ —– ಈ ಆತಿಥ್ಯ ಉತ್ತಮವೋ ಅಥವಾ ‘ಝಕ್ಕೂಮ್’ ಮರವೋ ? ಅದು ನರಕದ ತಳದಿಂದ ಬೆಳೆಯುವ ಮರ. ಅದರ ಗೆಲ್ಲುಗಳು ಶೈತಾನರ ತಲೆಗಳಂತಿರುವವು. ಅವರು (ನರಕವಾಸಿಗಳು) ಖಂಡಿತ ಅದನ್ನೇ ತಿನ್ನುವರು ಮತ್ತು ಅದರಿಂದಲೇ ತಮ್ಮ ಹೊಟ್ಟೆ ತುಂಬುವರು(ಕೆಲವರು ಇದನ್ನು ತಿಹಾಮ ಪ್ರದೇಶದಲ್ಲಿ ಬೆಳೆಯುವ ದುರ್ಗಂಧಯುಕ್ತ ಮತ್ತು ಉಗ್ರವಿಷವುಳ್ಳ ಒಂದು ಸಸ್ಯಕ್ಕೆ ಝಕ್ಕೂಮ್ ಎಂದು ವ್ಯಾಖ್ಯಾನಿಸಿದ್ದಾರೆ) ಈ ಆಯತುಗಳು ಮೇಲಿನ ಎರಡು ಆಯತುಗಳನ್ನು ವಿರೋಧಿಸಿ ನರಕವಾಸಿಗಳ ಆಹಾರ ಮುಳ್ಳಿನ ಗಿಡವೂ ಅಲ್ಲ, ಕಿವೂ ಅಲ್ಲ, ನರಕವಾಸಿಗಳ ಆಹಾರ ಝಕ್ಕೂಮ್ ಮರ, ಅದರಿಂದಲೇ ನರಕವಾಸಿಗಳ ಹೊಟ್ಟೆ ತುಂಬುತ್ತದೆ ಎಂದು ಹೇಳುತ್ತಿದೆ.
ಒಂದು ಆಯತು ನರಕವಾಸಿಗಳ ಆಹಾರ ದರೀ(ಮುಳ್ಳಿನ ಗಿಡ) ಎಂದು ಹೇಳಿದರೆ ಮತ್ತೊಂದು ಆಯತು ಇಲ್ಲ ಇಲ್ಲ ನರಕವಾಸಿಗಳ ಆಹಾರ ಅದಲ್ಲ ಅವರ ಆಹಾರ ಕೀವು ಎಂದು ಹೇಳುತ್ತಿದೆ. ಮತ್ತೇರಡು ಆಯತುಗಳು ಅವೆರಡರೂ ಸುಳ್ಳು ಅವರ ಆಹಾರ ಝುಕ್ಕೂಮ್ ಮರ ಎಂದು ಹೇಳುತ್ತಿದೆ. ದರೀ ಗಿಸ್ಲೀನ್ಝಕ್ಕೂಮ್ಯಾವುದು ನರಕವಾಸಿಗಳ ನಿಜವಾದ ಆಹಾರ? ಮೂರೂ ಎಂದು ಹೇಳುವಂತಿಲ್ಲ ಏಕೆಂದರೆ ಪ್ರತಿ ಆಯತ್ತಿನಲ್ಲೂ ಅದೊಂದೇ ವಸ್ತುವನ್ನು ಮಾತ್ರ ನರಕವಾಸಿಗಳ ಆಹಾರ ಎಂದಿದೆ.