ರಸೂಲನಿಗಾಗಿ ರಕ್ತಪಾತ; ಪ್ರಕರಣ 3

ಆಸ್ಮಾ ಬಿಂತ್ ಮರ್ವಾನ್ ಳ ಧಾರುಣ ಹತ್ಯೆಗೆ ಸುಪಾರಿ.

ಮದೀನಾದಲ್ಲಿದ್ದಾಗ ಮಹಮ್ಮದನ ಅರೇಬಿಕ್ ಆಯತುಗಳ ಅಪದ್ಧಗಳನ್ನು ಟೀಕಿಸಿ ಕವಿತೆಗಳನ್ನು ರಚಿಸಿದ್ದ ಹೆಣ್ಣುಮಗಳು ಆಸ್ಮಾ ಬಿಂತ್ ಮರ್ವಾನ್. ಐದು ಜನ ಮಕ್ಕಳ ತಾಯಿಯಾಗಿದ್ದ ಆಕೆಗೆ ಇನ್ನೂ ಎದೆಹಾಲು ಕುಡಿಯುತ್ತಿದ್ದ ಹಸುಗೂಸು ಸಹಾ ಇತ್ತು.

ಬದರ್ ನ ಯುದ್ಧದಲ್ಲಿ ಈ ಆಸ್ಮಾಳ ಕೆಲವು ಸಂಬಂಧಿಗಳೂ ಸಹಾ ಸತ್ತು ಮತ್ತು ಕೆಲವರು ಗಾಯಗೊಂಡಿದ್ದರು. ಮಹಮ್ಮದ್ , ಅವನ ಅನುಚರರು, ಇಸ್ಲಾಂ, ಅದರ ಬೋಧನೆಗಳು, ಮತ್ತು ಮೇಲಾಗಿ ಸ್ಥಳೀಯನೇ ಅಲ್ಲದ ಮಹಮ್ಮದ್ ಮಕ್ಕಾದಿಂದ ಮದೀನಾಕ್ಕೆ ಬಂದು ಇಲ್ಲಿ ತನ್ನ ಹಿಡಿತವನ್ನು ಬಿಗಿ ಮಾಡಿಕೊಳ್ಳುತ್ತಿದ್ದ ಬೆಳವಣಿಗೆ ಅವಳಿಗೆ ಸರಿಕಾಣಲಿಲ್ಲ. ಇದರ ಮೇಲೆ ಅಬು ಅಫಾಕ್ ಎಂಬ ನೂರು ವರ್ಷದಾಟಿದ ವೃದ್ಧಕವಿಯ ಕೊಲೆಯೂ ಆಗಿ ಹೋಯಿತು.

ಇದನ್ನು ಕೇಳಿ ಆಸ್ಮಾ ಆಕ್ರೋಶಗೊಂಡಳು, ತಮ್ಮ ಆತ್ಮೀಯ ಬಾಂಧವ್ಯವನ್ನು ಒಡೆದ ಮತ್ತು ಪೂಜನೀಯ ವೃದ್ಧರೊಬ್ಬರನ್ನು ಕೊಂದು ಹಾಕಿದ್ದಕ್ಕಾಗಿ ಮಹಮ್ಮದನನ್ನು ವಿಡಂಬಿಸುತ್ತಾ, ಆತನನ್ನು ಎದುರಿಸಿ ಸವಾಲು ಹಾಕದಿರುವ ತನ್ನ ಕೋಮಿನ ಗಂಡಸರ ನಿಷ್ಕ್ರಿಯತೆಯನ್ನು ಟೀಕಿಸಿದಳು. ಯಾರಾದರೂ ಈ ಮಹಮ್ಮದನನ್ನು ಎದುರಿಸಿ ಅವನನ್ನು ಕೊಲ್ಲಲಾಗದೇ ? ಎಂದು ಕೇಳುತ್ತಾ ಕವಿತೆಗಳನ್ನು ರಚಿಸಿದಳು.

ಇದರಿಂದ ಮಹಮ್ಮದ್ ಕುಪಿತನಾದನು. ಅವಳ ಮೇಲಿನ ಸೇಡಿನ ಜ್ವಾಲೆಯಿಂದ ಕುದಿಯುತ್ತಿದ ಮಹಮ್ಮದ್ “ಈ ಮರ್ವಾನ್ ಎಂಬುವನ ಮಗಳನ್ನು ನನಗಾಗಿ ಯಾರು ಕೊಲ್ಲುತ್ತೀರಿ‌ ?“ ಎಂದು ಕೇಳಿದಾಗ ಆಕೆಯ ಪಂಗಡದವನೇ ಆಗಿದ್ದ ಉಮೇರ್ ಎಂಬ ಕುರುಡನು ಸುಪಾರಿ ತೆಗೆದುಕೊಂಡು ತಾನು ಆ ಕೆಲಸ ಮಾಡುವುದಾಗಿ ಹೇಳಿದ.

ಒಂದು ರಾತ್ರಿ ಕತ್ತಲೆಯಲ್ಲಿ ಆಕೆಯು ಮಲಗಿರುವಾಗ ಅವಳ ಎದೆಗೆ ಬಾಯಿಯೂಡಿಸಿದ್ದ ಮಗುವನ್ನು ನವಿರಾಗಿ ಬಿಡಿಸಿ ಖಡ್ಗವೊಂದನ್ನು ಅವಳ ದೇಹದೊಳಗ್ಗೆ ತಿವಿದು ಎದೆಯಿಂದ ತೂರಿ ಬೆನ್ನಿನ ಹೊರಗೆ ಬಂದು ಅವಳ ದೇಹವನ್ನು ಹಾಸಿಗೆಗೆ ಬ೦ಧಿಸುವಷ್ಟು ಶಕ್ತಿಯುತವಾಗಿ ತನ್ನ ಖಡ್ಗವನ್ನು ತೂರಿಸಿದ್ದ! ಆಕೆಯನ್ನು ಕೊಂದು ಬಂದ ಅವನನ್ನು ಸಲ್ಲಲ್ಲಾಹು ಅಭಿನಂದಿಸಿದನಂತೆ! ಈತ ಕುರುಡ ಉಮೇರ ಅಲ್ಲ; ಕಾಣಬಲ್ಲವನು! ಎಂದು ಹೊಗಳಿದ ಮಹಮ್ಮದ್. ಅಂದು ಮಹಮ್ಮದನೊಂದಿಗೆ ಈ ಉಮೇರು ನಮಾಜು ಮಾಡಿದನು.

ಈ ಕೊಂದ ಪ್ರಕರಣಕ್ಕೆ ಸಂಬಂಧಿಸಿ ನಾನು ಆತಂಕ ಪಡಬೇಕಾದ ವಿಷಯ ಉಂಟೇ ? ಎಂದು ಕೇಳಿದಾಗ ಸುಪಾರಿ ಸಲ್ಲಲ್ಲಾಹುವು, ಎಂಥದ್ದೂ ಇಲ್ಲ ಬಿಡು. “ನೀನು ದೇವನ ಮತ್ತು ಪ್ರವಾದಿಯ ಸೇವೆಯನ್ನೇ ಮಾಡಿರುತ್ತೀಯ ಹಾಗೂ ಅವಳಿಗಾಗಿ ಎರಡು ಮೇಕೆಗಳೂ ಸಹಾ ತಲೆಗುದ್ದಿ ಜಗಡಲಾರವು; ನೀನು ಚಿಂತೆ ಬಿಡು” ಎಂದನು. ಅಂದು ಮಧ್ಯಾಹ್ನ ಈ ಕುರುಡನು ಮದೀನಾದ ಬೀದಿಯಲ್ಲಿ ಹೋಗುವಾಗ ಆಸ್ಮಾಳ ದೇಹವನ್ನು ಮಣ್ಣು ಮಾಡುತ್ತಿದ್ದ ಆಕೆಯ ಮಕ್ಕಳು ಇವನನ್ನು ಕಂಡು ತಮ್ಮ ತಾಯಿಯನ್ನು ಕೊಂದ ಕೊಲೆಗಡುಕ ಎಂದು ಆಕ್ಷೇಪಿಸಿದರು. ಪ್ರತಿಯಾಗಿ ಕುರುಡ ಕೊಲೆಪಾತಕಿಯು ತಾನು ಅವಕಾಶ ಸಿಕ್ಕರೆ ಅವರುಗಳನ್ನು ಹಾಗೆಯೇ ಕೊಲ್ಲುವುದಾಗಿ ಬೆದರಿಸಿದನು!

Reference

  • The life of Mohammad by William muiner p239-240
  • The Kitab al Tabaqat al kabir, Vol. 2, p 31
  • From pp. 675-676 of The Life of Muhammad , which is A. Guilaume’s translation of Sirat Rasul Allah.

Similar Posts

Leave a Reply

Your email address will not be published. Required fields are marked *