ಕುರಾನ್ ಹುಟ್ಟಿದ ಕಥೆ 1

ಕುರಾನ್ – ಅರೇಬಿಕ್ ಪದಗಳ ಶಬ್ದ ನಿಷ್ಪತ್ತಿ [ ಶಬ್ದಾರ್ಥ ಮೂಲ ] ಮತ್ತು ಕುರಾನಿನ ಸಂಯೋಜನೆ. ಕುರಾನ್ ಎಂಬ ಪದ ಬಂದದ್ದೆಲ್ಲಿಂದ ? ಅದರ ಅರ್ಥವೇನು ?

ಕುರಾನಿನ ಮೂಲ ಪುಸ್ತಕ ಲೋಹದ ಹಾಳೆಗಳ ಸಹಿತ ಅಲ್ಲಾಹು ಹೊಲಿದು ಮೇಲೆ ಇಟ್ಟುಕೊಂಡಿದ್ದಾನಂತೆ ! ಅದನ್ನು ಲಾಹುಲ್ ಮಹ್ಫುಝ್-Lawh al-Mahfuz(اللوح المحفوظ) ಎಂದು ಕರೆಯಲಾಗಿದೆ.(ಕು 85:22) ಆ ಪುಸ್ತಕದಲ್ಲಿ ಕುರಾನಿನ ಆಯತುಗಳನ್ನು ಬರೆದಿಟ್ಟು ಆ ಲೇಖನಿಯು ವಿಶ್ರಾಂತಿಗೆ ಹೋಗಿದೆಯಂತೆ!

ಕುರಾನಿನ ಅರ್ಥ “ಪಠಿಸು” : ಅಂದರೆ ಇಂಗ್ಲೀಷಿನಲ್ಲಿ Recite ಎಂದೇ ಆಗುತ್ತದೆ. ಅಲ್ಲಾವು ಜಿಬ್ರೈಲು ಮಹಮ್ಮದರ ಸುತ್ತಲಿನ ಊಹಾಪೋಹಗಳನ್ನು ಬದಿಗೆ ಸರಿಸಿ ಈ ಪ್ರಾಪಂಚಿಕ ಸಾಕ್ಷಿ ಸಮೇತ ಭಾಷಾ ಶಾಸ್ತ್ರದ ತತ್ವವನ್ನು ಉಪಯೋಗಿಸಿ ಕುರಾನ್ ಪದದ ಮೂಲಕ್ಕೆ ಕೈ ಹಾಕೋಣ.

ಈ ಕುರಾನ್ ಎಂಬ ಪದ ಇಸ್ಲಾಮಿನ ಕುರಾನಿಗೆ ಮೊದಲು ಇರಲೇ ಇಲ್ಲ; ಅಂದರೆ ಕುರಾನ್ ಎಂಬ ಪದ ಬೇರೆ ಯಾವುದೋ ಪ್ರಚಲಿತ ಪದದಿಂದಲೇ ಬಂದಿರಬೇಕು. ಅದನ್ನು ಇಲ್ಲಿ ಸ್ವಲ್ಪ ವಿವೇಚನೆ ಮಾಡೋಣ.

ಅರೇಬಿಯಾ ಪ್ರದೇಶವು ಮಧ್ಯಪ್ರಾಚ್ಯದ ಇತರ ದೇಶ ಪ್ರಾಂತ್ಯಗಳಿಗಿಂತ ಭಿನ್ನವೂ, ಪ್ರತ್ಯೇಕವೂ ಆದಂಥ ಭೂಭಾಗವಾಗಿದೆ. ಭೂ ಸಂಪರ್ಕ ಇದ್ದರೂ ಸಹಾ ಮೇಲಿನಿಂದ ಕೆಳಗಿನವರೆಗೆ ದಟ್ಟ ಮರುಭೂಮಿ ಇರುವ ಕಾರಣ ಇಂದಿನ ಸಿರಿಯಾ, ಇರಾಕ್, ಇರಾನ್ ‘ಆರ್ಮೇನಿಯಾ’ ಇಸ್ರೇಲ್, ಪಾಲಿಸ್ತೇನ್, ಲೆಬನಾನ್, ಟರ್ಕಿ ಇತ್ಯಾದಿ ದೇಶಗಳಿಂದ ಬಹಳ ಭಿನ್ನವಾದ ಸಂಸ್ಕೃತಿ ಮತ್ತು ಬದುಕು ರೂಪಿಸಿಕೊಂಡಿದ್ದ ಪ್ರದೇಶ ಅರೇಬಿಯಾ, ಇಸ್ಲಾಮಿನ ಸ್ಥಾಪಕ ಮಹಮ್ಮದನಿಂದ ಹಿಡಿದು ನಾಲ್ಕನೇ ಖಲೀಫ ಅಲಿಯ ವರೆಗೆ ನಮಗ್ಯಾವ ಸಾಕ್ಷಿ ಆಧಾರಗಳೂ ಮೆಕ್ಕಾ, ಮದೀನಾ, ಹೇರಾತ್ ಇತ್ಯಾದಿ ಪ್ರದೇಶಗಳಲ್ಲಿ ಸಿಗುವುದಿಲ್ಲ.

ಮಹಮ್ಮದ್ ಸತ್ತು ಕನಿಷ್ಠ ನೂರಿನ್ನೂರು ವರ್ಷಗಳ ನಂತರ ಬರೆಯಲ್ಪಟ ಇಸ್ಲಾಮೀ ಇತಿಹಾಸಗಳ ಪ್ರಕಾರ ಐದನೇ ಖಲೀಫ ಮುಆವಿಯಾ ಎಂಬುವವನ ಕಾಲದಿಂದ ನಮಗೆ ಲಿಖಿತ ಆಧಾರಗಳು ಸಿಗುತ್ತವೆ.. ಅವನಾದರೋ ಮಕ್ಕೆ ಮದಿನಾಗಳಲ್ಲಿ ತನ್ನ ರಾಜಧಾನಿ ಮಾಡಿಕೊಳ್ಳದೇ ಸಿರಿಯಾದ ಡಮಾಸ್ಕಸ್ ಅನ್ನು ರಾಜಧಾನಿ ಮಾಡಿಕೊಂಡ! ಏಕೆ ? ವಿವರಣೆಯಿಲ್ಲ.

ಸಿರಿಯಾ ದೇಶದ ಸಿರಿಯಾಕ್ ಮತ್ತು ಆರ್ಮೆನಿಯದ ಅರಾಮಿಕ್ ಭಾಷೆಗಳು (ಸೆಮೆಟಿಕ್ ಭಾಷೆಗಳು ಎಂದು ಕರೆಯುತ್ತಾರೆ) ಆ ಕಾಲಕ್ಕೆ ಸಾಕಷ್ಟು ಬೆಳೆದು ಒಂದಕ್ಕೊಂದು ಸಂಬಂಧವನ್ನು ಹೊಂದಿದ್ದವು. ಪ್ರಾಯಶಃ ಮುವಾಮಿಯ ಅಥವಾ ಅವನ ನಂತರದವರು ಕುರಾನಿನ ಆಯತುಗಳನ್ನು ಒಂದೋ ಸೃಷ್ಟಿಸಿ ಅಥವಾ ಕಲೆಹಾಕಿ ಸಂಯೋಜಿಸಿ ರಚಿಸಿ ಅದಕ್ಕೊಂದು ಹೆಸರು ಕೊಟ್ಟಿರಬಹುದು. ಹೇಗೆಂದು ನೋಡೋಣ.

“ಕುರಾನ್” ಎಂಬ ಪದವು ಸಿರಿಯಾಕ್ – ಅರಾಮಿಕ್ ಮೂಲದ “ಕೇರೈಯಾನಾ” ( ಕುಯೇರೆಯೇನಾ/Qeryana) ಎಂಬ ಪದದಿಂದ ನಿವೃತ್ತಿಗೊಂಡಿರುತ್ತದೆ. ಕೇರೈಯಾನಾ ಎಂದರೆ ಪಠಿಸು! ಎಂದೇ ಅಲ್ಲಿಯೂ ಅರ್ಥವಿದೆ ! ಏನನ್ನು ಪಠಿಸುವುದು ? ಎಂದರೆ ಈಗಾಗಲೇ ಅಭಿವೃದ್ಧಿ ಪಡಿಸಿ ಪ್ರಚಲಿತದಲ್ಲಿದ್ದ ಲಿಟರ್ಜಿ [Liturgy]ಯನ್ನು ಪಠಿಸು ಎಂದರ್ಥ! ಇಂದಿನ literature ಪದವನ್ನು ಹೋಲುವ ಈ Liturgy ಯ ಅರ್ಥ – ಬೈಬಲ್ ಅಥವಾ ತೋರಾಹ್ ಗ್ರಂಥಗಳಲ್ಲಿ ಇದ್ದ ಕಥೆಗಳು, ಬೋಧನೆಗಳು ಸಂದೇಶಗಳು, ಪ್ರವಚನಗಳು ಇತ್ಯಾದಿ ದಾಖಲಿತ ಸಾಹಿತ್ಯವನ್ನು ಪಠಿಸು ಎ೦ದು ಅವು ಸೂಚಿಸುವ ಪದವಾಗಿದೆ.

ಕ್ರೈಸ್ತರ ಸಾಹಿತ್ಯವು ಯಹೂದಿ ಮೂಲದ ಪುಸ್ತಕಗಳಿಂದ ಬೇಕಾದಷ್ಟು ಎರವಲು ಪಡೆದಿದೆ. ಕುರಾನ್ ಕೇವಲ ತನ್ನೊಳಗಿರುವ ಅರ್ಧಮರ್ಧ ಅಸ್ತವ್ಯಸ್ತ ಕಥೆಗಳನ್ನು ಮಾತ್ರವಲ್ಲ, ತನ್ನ ಹೆಸರನ್ನೇ ಹೊರಗಿನ ಭಾಷೆಯಿಂದ ಕಬ್ಜಾ ಮಾಡಿಕೊಂಡಿದೆ!

ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನ ಅನುಪಾತಗಳಲ್ಲಿ ಬದಲಾಗುತ್ತಿದ್ದ ಆಡುಭಾಷೆ, ಪ್ರಾಂತೀಯ ಭಾಷೆಗಳಲ್ಲಿ ಈ ಸಾಹಿತ್ಯ ರಾಶಿ -liturgy ಗಳನ್ನು, – “ ಕೇರೈಯಾನಾ “ – ಪಠನೆ ಮಾಡಲಾಗುತ್ತಿದ್ದು, ಪಶ್ಚಿಮದ ಪ್ರದೇಶಗಳಲ್ಲಿ ಪಠನೆ ಮಾಡುತ್ತಿದ್ದ ಸ್ವರೂಪ – ಪದ್ಧತಿಗೆ “ಕೈರೆಯಾನ ಆರ್ರಾಬಿಯ್ಯಾನ್ “ ಎ೦ದು ಗುರುತಿಸಲಾಗಿದೆ. ಆರ್ರಾಬಿಯಾನ್ ಎಂದರೆ ಸೂರ್ಯಾಸ್ತದ ಸಮೀಪದ ಪ್ರದೇಶ ಅಥವಾ ಪಶ್ಚಿಮದ ಪ್ರದೇಶ, ಎಂದೇ ಆಗಿದೆ!

ಒಟ್ಟಾರೆ ನೋಡಿದಾಗ ಈ ಕುರಾನ್ ಎಂಬುದು ಪಶ್ಚಿಮದ ಪ್ರದೇಶದಲ್ಲಿ “ಪಠಿಸಲ್ಪಡುವ ಸಿರಿಯಾಕ್ – ಅರಾಮಿಕ್ ಭಾಷೆಯ ಕ್ರೈಸ್ತ ಸಾಹಿತ್ಯದ ವಿಧಾನ“ ಎಂದಷ್ಟೇ ಅರ್ಥ! ಹೆಚ್ಚಿನದೇನಿಲ್ಲ.

ಭೂಪಟವನು ನೋಡಿದರೆ ಅರೇಬಿಯಾವು ಸಿರಿಯಾ – ಆರ್ಮೇನಿಯಾದ ಪಶ್ಚಿಮ – ದಕ್ಷಿಣದ ಭಾಗಕ್ಕಿದೆ. ಕಿರಾತ್(Qirat) ಎಂಬ ಪಠನಾ ವಿಧಾನವೂ ಸಹಾ ಮೇಲಿನ ಕೈರೆಯಾನ ಪದದಿಂದಲೇ ಬಂದಿರುವುದು. ಕುರಾನಿನಲ್ಲಿ ಇರುವ 114 ಅಧ್ಯಾಯ (ಸುರಾಹ್) ಗಳಲ್ಲಿ 80ರಷ್ಟು ಭಾಗ ಅಂದರೆ 90 ಸುರಾಹ ಗಳಲ್ಲಿ ಈ ಬೈಬಲ್ ತೋರಾಹ್ ಮೂಲದ ಸಾಹಿತ್ಯವೇ ಇದೆ. ಇರುವ ಕಥೆಗಳು ಬರುವ ಪಾತ್ರಗಳೆಲ್ಲ ಅಲ್ಲಿಂದಲೇ ಬಂದಿರುವುದು. ಇವುಗಳನ್ನು ಮಹಮ್ಮದ್ ಮೆಕ್ಕಾದಲ್ಲಿ ತನ್ನ ಹೊಸ ಪಂಥವಾದ ಇಸ್ಲಾಂ ಅನ್ನು ಸ್ಥಾಪಿಸುವಾಗ ಹೇಳಿದ್ದೇ ಹೇಳಿದ್ದು.! ಜನಗಳು ಹೊಸದೇನನ್ನೂ ಕಾಣದೆ ಆತನನ್ನು ನಂಬಲಿಲ್ಲ. ಉಳಿದ 24 ಸುರಾಹ್ ಗಳು ಮದೀನಾದಲ್ಲಿ ಹೇಳಿದ್ದು, ಅವುಗಳ ತುಂಬಾ ಆಕ್ರಮಣ’ ದ್ವೇಷ, ಜಿಹಾದ್, ಅಸಹಿಷ್ಣುತೆ, ಕಾಫಿರರ ಶೋ’ಷಣೆ ಹಿ0ಸೆಗಳಿಗೆ ಮುಕ್ತವಾದ ಕರೆಗಳಿವೆ.

ಹಾಗಾಗಿಯೇ ಮೊದಲ 90 ಸುರಹ್ ಗಳಲ್ಲಿ ಬರುವ ಕಥೆಗಳಲ್ಲಿ ಮಹಮ್ಮದನ ಹೆಸರಿನ ಸುಳಿವಿಲ್ಲ : ಜೆಬ್ರೈಲು ಸಹಾ ಇಲ್ಲ. ಕ್ರೈಸ್ತ ಸಂದೇಶಗಳು ಮತ್ತು ಕಥೆಗಳ ಆಧಾರ ಪಡೆದು ತನ್ನ ಹೆಸರಿನಲಿ ಅಧಿಕೃತಗೊಳಿಸಿಕೊಂಡ ಮಹಮ್ಮದ್ ಕುರಾನಿನ ಉಳಿದ ಭಾಗದಲ್ಲಿ ತನ್ನ ಅಧಿಪತ್ಯ ಅಧಿಕಾರ ವಿಸ್ತರಣೆ ಮತ್ತು ನಿಯಂತ್ರಣಕ್ಕೆ ಬೇಕಾದಂಥ ಬೋಧನೆಗಳನ್ನು ಕುರಾನಿನಲ್ಲಿ ಹೇಳಿ ಹೋಗಿರುತ್ತಾನೆ. ಮಹಮ್ಮದನ ಈ ಚರ್ಯೆಯ ಕಾರಣದಿಂದ ಆತನಿಗೆ ಕೆಲವು ಜನ ಯಹೂದಿ ಕ್ರೈಸ್ತರನ್ನು ಮತಾಂತರ ಮಾಡಲು ಸಾಧ್ಯವಾಯಿತಾದರೂ, ಪರಂಪರೆಯ ಜ್ಞಾನವಿದ್ಧ ಯಹೂದಿ ಮತ್ತು ಕ್ರೈಸ್ತ ಮತೀಯ ಪ್ರಮುಖರ ಮತ್ತು ಬೋಧಕರ ವಿರೋಧ ಮತ್ತು ನಿರಾಕರಣೆಯನ್ನು ಸಹಾ ಎದುರಿಸಬೇಕಾಯಿತು (surah 2,3,5 ) ವಾದಗಳಲ್ಲಿ ಗೆಲ್ಲಲಾಗದ ತನ್ನ ಪ್ರವಾದಿತನದ ಮಹಿಮೆಯನ್ನು ಸಾಕ್ಷಿಸಹಿತ ಸಾಧನೆ ತೋರಿಸಲಾಗದ ಮಹಮ್ಮದ್ ಕ್ರಮೇಣ ಹಿ೦ಸೆ ಕೊಲೆ ದಾಳಿ ದೋಚು ಧ್ವ೦ಸಗಳಂತಹ ಅಮಾನವೀಯ ಕೃತ್ಯಗಳಿಗಿಳಿದು ಲೂಟಿಯ ಮಾಲಿನ ಆಮಿಷವೊಡ್ಡಿ ಇಸ್ಲಾಂ ಅನ್ನು ಬೆಳೆಸಿ -ಹರಡಿಸಿದ್ದು ಇತಿಹಾಸ !

ಹರುಕು ಮುರುಕಾಗಿ ಕುರಾನಿನಲ್ಲಿ ಉಲ್ಲೇಖಿಸಿದ ವಿಚಾರಗಳು ತುಂಬಿರುವ ಮೊದಲಿನ ಅಧ್ಯಾಯಗಳು ಬೈಬಲ್ಲಿನ ಮೂಲದ್ದೇ ಆದ ಕಾರಣ ಕುರಾನಿನ ಪುರಾತನ ಪ್ರಥಮ ವ್ಯಾಖ್ಯಾನಕಾರರು ಬೈಬಲ್ಲನ್ನೇ ವಿವರಗಳಿಗಾಗಿ ಆಶ್ರಯಿಸಿರುವುದು ಕಂಡುಬರುತ್ತದೆ. ಅಂತೆಯೇ ಕೊನೆಯ ಹಿ೦ಸಾ ಬೋಧಕಗಳಾದ 24 ಸುರಾಹ್ ಗಳಿಗೆ ಮಹಮ್ಮದನ ಜೀವನ ಚರಿತ್ರೆ “ಸಿರಾತ್” ಅನ್ನು ಆಧರಿಸಿರುವುದೂ ಕಂಡುಬರುತ್ತದೆ. ಇದರಿಂದ ಇಸ್ಲಾಮಿನ ವಾಸ್ತವ – ಹಕೀಕತ್ – ನಿಜಸ್ವರೂಪ ತಿಳಿದು ಬಯಲಾಗುವ ಭಯದಿಂದ ಆಧುನಿಕ ವ್ಯಾಖ್ಯಾನಕಾರರು ಕುರಾನಿನ ಕಲಸು ಮೇಲೋಗರ ಮಾಡಿ ಕಚ್ಚಾ ಓದುಗರಲ್ಲಿ ಗೊಂದಲ ಎಬ್ಬಿಸುವಲಿ ಸಫಲರಾಗಿದ್ದಾರೆ.

ಇದು ಕುರಾನಿನ ಅಸ್ತಿತ್ವ ಕುರಿತಾದ ಕಥೆ ವ್ಯಥೆ! ಹೆಸರಿನಿಂದ ಮೊದಲಾಗಿ ಪ್ರವಾದಿಗಳು,ಕಥೆಗಳು, ಜಾಗಗಳು, ಕಟ್ಟಡಗಳು, ಹಣ,ಆಭರಣ, ಚಿನ್ನ ಆಸ್ತಿ ‘ನೆಲ ,ಪ್ರಾರ್ಥನಾ ವಿಧಾನ, ಪರಿಕ್ರಮ, ಆಚರಣೆ, ಸಂಪ್ರದಾಯ ಇತ್ಯಾದಿಯಾಗಿ ಎಲ್ಲವನ್ನೂ ಪರರಿಂದ ದೋಚಿಕೊಂಡೇ ಭ೦ಡತನದಿಂದ ಬದುಕಿ ಬೆಳೆದಿರುವುದು ಇಸ್ಲಾಮಿನ ವಿಶೇಷ.

Similar Posts

Leave a Reply

Your email address will not be published. Required fields are marked *