ಮುಂದೊಗಲು ಮತ್ತು ಇಸ್ಲಾಮಿನ ಮೌಢ್ಯ!

ನಾವೆಲ್ಲ ಜನಿಸಿದ್ದೆ ನಮ್ಮ ಹೆತ್ತವರ ಸಕ್ಸೆಸ್ಫುಲ್ ಲೈಂಗಿಕ ಜೀವನ ಫಲವಾಗಿ ಆದರೂ ನಮ್ಮಲ್ಲಿ ಲೈಂಗಿಕ ವಿಚಾರವಾಗಿ ಮಾತನಾಡುವುದು ಸಮಾಜ ಬಾಹೀರ ಕೃತ್ಯ ಎನ್ನುವಂತೆ ಕಾಣುತ್ತೇವೆ. ಹೆಚ್ಚಿನ ಮತಗಳು ಲೈಂಗಿಕತೆ ಒಂದು ಪಾಪ ಎನ್ನುವಂತೆ ಕಾಣುತ್ತದೆ. ಸೈತಾನನ ಮಾತು ಕೇಳಿ ಸ್ವರ್ಗದಿಂದ ಭೂಮಿಗೆ ಕುಸಿದ ಪಾಪದ ಫಲವೇ ಲೈಂಗಿಕತೆ, ಅದರ ಫಲವಾಗಿ ಹೆಣ್ಣು ನೋವಿನ ಪ್ರಸವವನ್ನು ಅನುಭವಿಸುತ್ತಾಳೆ ಅನ್ನುವ ಬೇರೆ ಬೇರೆ ವರ್ಷನ್ ಕಥೆಗಳು ಇವೆ. ಲೈಂಗಿಕತೆಯ ಬಗ್ಗೆ ಓಪನ್ ಆಗಿ ಮಾತನಾಡುವುದು ಬಿಡಿ, ಲೈಂಗಿಕ ಸಮಸ್ಯೆಗಳನ್ನು ಹೇಳಿಕೊಳ್ಳುವುದು ಕೂಡ ತಲೆತಗ್ಗಿಸುವ ವಿಚಾರ ಅನ್ನುವ ಭಾವನೆ ಸಮಾಜದಲ್ಲಿ ಇದೆ.

ವೈದ್ಯರ ಮುಂದೆ ಅದನ್ನು ಹೇಳಿ ಪರಿಹಾರ ಕಂಡುಕೊಳ್ಳುವಲ್ಲಿ ಕೂಡ ನಮ್ಮ ಜನಕ್ಕೆ ಅದೇನೋ ಮುಜುಗರ. ಲೈಂಗಿಕ ಸಮಸ್ಯೆ ಇದ್ದವರು ಅದೇ ಕೊರಗಿನಲ್ಲಿ ಕೊನೆಯ ತನಕ ಇದ್ದು ಸಾಯುವುದೇ ಹೆಚ್ಚು. ಇದೇ ಕಾರಣಕ್ಕೆ ಲೈಂಗಿಕ ಸಮಸ್ಯೆ, ರೋಗ, ಸುಖಗಳ ಬಗ್ಗೆ ನಡೆದ ಅಧ್ಯಯನದ ಸಂಖ್ಯೆಯೂ ವಿರಳ. ಇದೇ ಕಾರಣದಿಂದ ಮಂಗಳನ ಅಂಗಳಕ್ಕೆ ಕಾಲಿಟ್ಟ ಜಗತ್ತಿಗೆ ಸ್ವಂತ ದೇಹದ ಸುಖದ ಒಂದು ಮಾಪನವನ್ನು ಕಂಡು ಹುಡುಕಲು ಇವತ್ತಿಗೂ ಸಾಧ್ಯವಾಗಲಿಲ್ಲ. ಇಂತಹ ಅನವಶ್ಯಕ ಮಡಿ ಅದೆಷ್ಟೋ ಜನರ ಲೈಂಗಿಕ ಜೀವನವನ್ನು ಕೆಡಿಸಿದ್ದಲ್ಲದೆ, ತನ್ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿದೆ. ಲೈಂಗಿಕ ಜೀವನ ವ್ಯಕ್ತಿಯ ಮೆಂಟಲ್ ವೆಲ್ನೆಸ್’ನಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ ಅನ್ನುವುದನ್ನು ಜನ ಒಪ್ಪಲು ಇನ್ನೂ ಅದೆಷ್ಟು ದಶಕಗಳು ಬೇಕೋ ಗೊತ್ತಿಲ್ಲ.

ಇಲ್ಲದ ಮುಂದೊಗಲಿನ ಕಥೆ. ಮುಂದೊಗಲು ಅನ್ನುವ ಪದ ಕೇಳಿರುವವರು ಬಹಳ ಕಡಿಮೆ. ಇಂಗ್ಲಿಷ್ ಭಾಷೆಯಲ್ಲಿ ಅದನ್ನು “foreskin” ಅನ್ನುತ್ತಾರೆ. ಪುರುಷ ಲಿಂಗಾಗ್ರದ ತುದಿಯಲ್ಲಿ ಮೆತ್ತನೆ ಚರ್ಮವೇ ಮುಂದೊಗಲು. ಈ ಚರ್ಮ ಶಿಶ್ನದ ತುದಿಯನ್ನು ಸಂರಕ್ಷಿಸುವ ಕೆಲಸ ಮಾತ್ರವಲ್ಲದೆ ಲೈಂಗಿಕ ಸುಖದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಶಿಶ್ನದ ತುದಿಯು ದೇಹದ ಅತೀ ಹೆಚ್ಚು “ನರ್ವ್ ಎಂಡಿಂಗ್” ಇರುವ ಅಂಗಗಳಲ್ಲಿ ಒಂದು. ಇದೇ ಕಾರಣಕ್ಕೆ ಲೈಂಗಿಕ ಸುಖವನ್ನು ಬೇರೆ ಸುಖಗಳೊಡನೆ ತುಲನೆ ಮಾಡುವುದು ಅಸಾಧ್ಯ. ಇಂತಹ ಸುಖದ ಹುಚ್ಚು ಆಸೆಯಿಂದ ಗಂಡಸಿಗೆ ಸ್ವರ್ಗದ ಅಕ್ಷತ ಕನ್ಯೆಯರ ಬಣ್ಣದ ಕಥೆಗಳು ರಂಜಿತವಾಗಿ ಕಾಣುತ್ತದೆ. ಮತಗಳು ಇಂತಹ ಕಥೆಗಳನ್ನು ಉಣಬಡಿಸುತ್ತದೆಯೇ ವಿನಃ ವೈಜ್ಞಾನಿಕ ಅಧ್ಯಯನ ಕಾರ್ಯವಂತೂ ಆಗಲೇ ಇಲ್ಲ.

ಮುಂದೊಗಲನ್ನು ತುಂಡರಿಸಿ ತೆಗೆಯುವ ಪ್ರಕ್ರಿಯೆಗೆ Circumcision ಎನ್ನುತ್ತಾರೆ. ಈ ಚರ್ಮವು ರಕ್ಷಣೆ, ಸುಖಗಳ ವಿಚಾರದಲ್ಲಿ ಎಷ್ಟು ಪಾತ್ರ ವಹಿಸುತ್ತದೋ ಅಂತೆಯೇ ಕೆಲವರಲ್ಲಿ ಸಮಸ್ಯೆಯನ್ನೂ ಉಂಟುಮಾಡುತ್ತದೆ. ಲೈಂಗಿಕ ಕ್ರಿಯೆಯ ಪೂರ್ವಭಾವಿಯಾಗಿ ಉತ್ಪಾದನೆಯಾಗುವ ಲೋಳೆ ದ್ರವವನ್ನು ಒಳಗೇ ಸಂರಕ್ಷಿಸಿ ಮುಂದಿನ ಹಂತದಲ್ಲಿ ಲುಬ್ರೀಕಂಟ್ ಆಗಿ ಸಹಾಯ ಮಾಡುವಲ್ಲಿ ಮುಂದೊಗಲು ಪ್ರಮುಖ ಕಾರ್ಯವಹಿಸುತ್ತದೆ. ಈ ದ್ರವ್ಯದ ಹೊರತಾದ ಲೈಂಗಿಕ ಕ್ರಿಯೆ ಇಬ್ಬರೂ ವ್ಯಕ್ತಿಗಳಿಗೆ ಪ್ರಯಸದಾಯಕವಾಗುತ್ತದೆ. ಅಂತಹಾ ಸಂದರ್ಭದಲ್ಲಿ ಕೃತಕ ಲ್ಯೂಬ್ ಮೊರೆಹೋಗಬೇಕಾಗುತ್ತದೆ. ಆದರೇ ಇದೇ ಸಮಯದಲ್ಲಿ ಹಿಂದಕ್ಕೆ ಸರಿಯದ ದಪ್ಪದ/ ಗಟ್ಟಿಯಾದ ಮುಂದೊಗಲು ಕೂಡಾ ಇದೇ ಸಮಸ್ಯೆಯನ್ನು ತರುತ್ತದೆ. ಅಂತಹಾ ಸಂದರ್ಭದಲ್ಲಿ ಸರಿಯಾದ ಮೆಡಿಕಲ್ ಸೂಪರ್ವಿಜನ್ ಮೇರೆಗೆ ಚರ್ಮವನ್ನು ಎಷ್ಟು ಅಗತ್ಯವೋ ಅಷ್ಟು ಮಾತ್ರ ಆಪರೇಟ್ ಮಾಡಿ ತೆಗೆಯಲಾಗುತ್ತದೆ.

ಮುಂದೋಗಲಿನ ಬಗ್ಗೇ ಬಂದಿರುವ ಹೆಚ್ಚಿನ ಅಧ್ಯಯನಗಳೂ ಮತೀಯ ವ್ಯಕ್ತಿ ಅಥವ ಸಂಘಟನೆಗಳ ಕೃಪಾಪೋಷಿತವಾದದ್ದು. ಅದೇ ಕಾರಣಕ್ಕೆ ಲಿಂಗಾಗ್ರ ಛೇದನಕ್ಕೆ ವೈಜ್ಞಾನಿಕ ಕಾರಣಗಳಿವೆ ಅನ್ನುವ ಸಾವಿರಾರು ಲೇಖನಗಳು ಸಿಗುತ್ತವೆ. ಇವೆಲ್ಲವೂ “ಬಿ ಗ್ರೇಡ್” ಮೆಡಿಕಲ್ ಜರ್ನಲ್ ಪ್ರಕಟನೆಯೇ ಹೊರತು ನಂಬಲು ಅರ್ಹವಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸಮಸ್ಯೆ ಇದ್ದರೆ ಮಾತ್ರವೇ ಮುಂದೊಗಲು ತೆಗೆಯುವುದು ಸೂಕ್ತ. ಇಲ್ಲವಾದರೆ ಅದು ಅನಗತ್ಯ. “ಬೀ ಗ್ರೇಡ್” ಅಧ್ಯಯನಗಳ ಪ್ರಕಾರ ಈ ಚರ್ಮ ಛೇದನವು STD, HIV ರೋಗಗಳನ್ನು ಕಡಿಮೆ ಮಾಡುವುದಲ್ಲದೆ ಶಿಶ್ನದ ಕ್ಯಾನ್ಸರ್ ಕೂಡ ತಡೆಯುತ್ತದೆ. ಇಂತಹ ಆಧಾರ ರಹಿತ, ಮತೀಯ ಪೋಷಿತ ಅಧ್ಯಯನಗಳೂ ತಂದಿಟ್ಟ ಸಮಸ್ಯೆಗಳೇ ಜಾಸ್ತಿ. ಇದನ್ನು ನಂಬಿದ ಜನ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿ ರೋಗಗಳಿಗೆ ಆಹ್ವಾನ ಕೊಟ್ಟಂತಾಗುತ್ತದೆ.

ಇನ್ನು ಮುಂದಕ್ಕೆ ಹೋದರೆ ಶಿಶ್ನದ ಕ್ಯಾನ್ಸರ್ ಅನ್ನೋದೇ ಅತ್ಯಂತ ವಿರಳ ಕ್ಯಾನ್ಸರ್. ಮತೀಯ ಚಿಂತಕರ ಪ್ರಕಾರ ಚರ್ಮಚೇದನ ಶುಚಿತ್ವದ ಭಾಗ, ಆದರೇ ಇದೇ ಶುಚಿತ್ವವನ್ನು ಹೇಳುವ ಜನ ಮೂತ್ರಕ್ಕೆ ಹೋಗುವಾಗ ಕಿಸೆಯಲ್ಲಿ ದಾರಿಬದಿಯ ಕಲ್ಲು ಹೆಕ್ಕಿಕೊಂಡು ಹೋಗುವ ಪದ್ಧತಿ ಹಾಸ್ಯಾಸ್ಪದ. ಮತೀಯ ಪದ್ಧತಿಗಳಿಗೆ ವೈಜ್ಞಾನಿಕ ಕಾರಣ ಹುಡುಕುವ ಬದಲು ಮಕ್ಕಳಿಗೆ ಶುಚಿತ್ವದ ಅರಿವು ಮೂಡಿಸಿ ಅದನ್ನು ಅವರ ಜೀವನದ ಭಾಗವಾಗಿಸುವುದು ಸೂಕ್ತ.

ವಿಚಿತ್ರವೆಂದರೆ ಮತೀಯ ಕಾರಣಗಳಿಂದ ಬಾಲ್ಯದಲ್ಲೇ ಲಿಂಗಾಗ್ರ ಕಳೆದುಕೊಂಡ ಜನ ಲೈಂಗಿಕ ಸುಖದ ಬಗ್ಗೆ ಮಾತನಾಡುವುದು. ಈ ಚರ್ಮ ಇಲ್ಲದ ಅಥವಾ ಆರೋಗ್ಯವಂತ ಮುಂದೊಗಲು ಇರುವ ಜನರಿಗೆ “ಬಿಫೋರ್ ಮತ್ತು ಆಫ್ಟರ್” ಅನ್ನುವ comparison ಸಾಧ್ಯವಿಲ್ಲ. ಹಲವು ಆರೋಗ್ಯವಂತ ವ್ಯಕ್ತಿಗಳ ಮೇಲೆ “Pre and Post Circumcision pleasure” ಅನ್ನುವ ತುಲನಾತ್ಮಕ ಅಧ್ಯಯನ ನಡೆಯುವ ತನಕ ಒಂದು conclusion ಸಾಧ್ಯವಿಲ್ಲ. ಆದರೂ ಈ ಚರ್ಮ ಛೇದನ ಶಿಶ್ನದ nerve endings ಮೇಲೆ ಅಡ್ಡ ಪರಿಣಾಮ ಉಂಟುಮಾಡಿ ಸೆನ್ಸಿಟಿವಿಟಿಯನ್ನು ನಾಶಮಾಡಿ ಸುಖವನ್ನು ಕುಂಠಿತಗೊಳಿಸುತ್ತದೆ ಅನ್ನುವುದು ವೈದ್ಯಶಸ್ತ್ರದ ಅಂಬೋಣ.

ಮತೀಯ ಆಚರಣೆಗಳ ಫಲವಾಗಿ ಚರ್ಮ ಕಳದುಹೋಗುವವರ ಕಥೆ ಒಂದೆಡೆಯಾದರೆ, ಚರ್ಮರಹಿತರಾಗಿ ಹುಟ್ಟುವ ಮಕ್ಕಳೂ ಇದ್ದರೆ. ಇದನ್ನು ಆಧುನಿಕ ವೈದ್ಯ ಶಾಸ್ತ್ರದಲ್ಲಿ ಅಪೋಸ್ಥಿಯಾ (Aposthia) ಎಂದು ಕರೆಯುತ್ತಾರೆ. ಇದರಿಂದ ಅಂತಹಾ ಸಮಸ್ಯೆಗಳೇನು ಇಲ್ಲ. ಹಲವು ವರ್ಷಗಳ ಹಿಂದೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ WHO ನಡೆಸಿದ ಒಂದು ಅಧ್ಯಯನದ ಹೊರತಾಗಿ ಇದರ ಬಗ್ಗೆ ಸಮರ್ಪಕವಾದ ಅಧ್ಯಯನ ನಡೆದೇ ಇಲ್ಲ ಎನ್ನಬಹುದು. ಇದರ ಕುರಿತಾಗಿ ಜುದಾಯಿಸಂ ಮತ್ತು ಇಸ್ಲಾಮ್ ಉಲ್ಲೇಖಿಸುತ್ತದೆ. (ಎಸ್, ನೋಡಿ ನಮ್ಮ ಮತದಲ್ಲಿ ಇವೆಲ್ಲ ಮೊದಲೇ ಇತ್ತು!!) ಹಲವು ಪ್ರವಾದಿಗಳು “ಉತ್ತಮ ಮಾದರಿ” ಆದುದರಿಂದ ಅವರಿಗೆ ದೇವನು ಹುಟ್ಟುವಾಗಲೇ ಲಿಂಗಾಗ್ರ ಚರ್ಮವನ್ನು ಕೊಟ್ಟಿರಲಿಲ್ಲ ಎನ್ನುವ ವಿಚಾರ ದೊರೆಯುತ್ತವೆ.

ನಾಲ್ಕು ಕೈಗಳೊಂದಿಗೆ ಹುಟ್ಟುವ ಮಕ್ಕಳನ್ನು ದೇವರ ಅವತಾರ ಅನ್ನುವ ಜನಕ್ಕೆ ಲಿಂಗ್ಯಾಗ್ರಾ ಚರ್ಮ ಇಲ್ಲದೆ ಹುಟ್ಟುವುದು ಒಂದು ಸಮಸ್ಯೆಯ ಬದಲು ದೈವತ್ವದ ಲಕ್ಷಣವಾಗಿ ಕಂಡಿರಬಹುದು. ಆದರೆ ಈ ಚರ್ಮ ರಾಹಿತ್ಯವು ಒಂದು ಜೆನೆಟಿಕ್ ಡಿಸಾರ್ಡರ್ ಅನ್ನುವುದು ಅಂದಿನ ಜನಕ್ಕೆ ಗೊತ್ತಿರಲಿಲ್ಲ. ಇದು ವಿರಳತಿ ವಿರಳ ಜೆನೆಟಿಕ್ ರೋಗವಾದರು ಸಂಬಂಧಗಳಲ್ಲಿ ಅತಿಯಾಗಿ ಮದುವೆಗಳು ನಡೆಯುವ ಜನಾಂಗಗಳಲ್ಲಿ ಕಂಡುಬರುತ್ತದೆ. ಅಂದಹಾಗೆ ನಮ್ಮ ಪ್ರವಾದಿಗಳು, ದೇವರು “Consanguine marriage” ಆಗಲು ಪ್ರೋತ್ಸಾಹ ನೀಡಿದವರು ಅಂತ ಆಯ್ತು. ಅಪೋಸ್ಥಿಯಾ ಅನ್ನೋದು ಸಮಸ್ಯೆಯಿಲ್ಲದ ರೋಗ ಅನ್ನುವುದು ವೈದ್ಯರ ಅಭಿಪ್ರಾಯ. ಇದರ ಕುರಿತಾದ ಸಮಗ್ರ ಅಧ್ಯಯನ ಇನ್ನೂ ನಡೆಯಬೇಕಿದೆ. ಇದರ ಹೊರತಾಗಿಯೂ ರಕ್ತಬಂಧದಲ್ಲಿ ನಡೆಯುವ ಮದುವೆಗಳು ಅತೀ ಹೆಚ್ಚು ಜೆನೆಟಿಕ್ ರೋಗಗಳಿಗೆ ಕಾರಣವಾಗಿದೆ. ಅಂದಹಾಗೆ ಪಾಕಿಸ್ತಾನ ಇದರಲ್ಲಿ ಮುಂಚೂಣಿಯಲ್ಲಿ ಇದ್ದರೆ ಮಧ್ಯಪ್ರಾಚ್ಯ ದೇಶಗಳು ಇತ್ತೀಚೆಗೆ ಸಮಸ್ಯೆಯನ್ನು ಮನಗಂಡು pre wedding ಕೌನ್ಸೆಲಿಂಗ್ ನಡೆಸಿ ಅಂತಹಾ ಮದುವೆಗಳನ್ನು ನಿಯಂತ್ರಿಸುತ್ತಿದೆ.

ಜಾತಿ, ಗೋತ್ರ ಎಂದು ಕಥೆ ಹೇಳುವ ನಮ್ಮ ದೇಶ ಕೂಡ ಈ ಸಮಸ್ಯೆಯಲ್ಲಿ ಹಿಂದುಳಿದಿಲ್ಲ. ಇದೆಲ್ಲ ಜೆನೆಟಿಕ್ ಸೈನ್ಸ್ ಬಗ್ಗೆ ಗಂಧಗಾಳಿ ಇಲ್ಲದ ಅಂದಿನ ಜನರ ತಪ್ಪಲ್ಲ. ಆಧುನಿಕ ಕಾಲದಲ್ಲಿ ಜೀವಿಸುತ್ತಾ ಇದ್ದರೂ “ಮಾದರಿ”ಗಳನ್ನು ಅನುಸರಿಸುವ ಭರದಲ್ಲಿ ಮಕ್ಕಳ ಮೇಲೆ ಲಿಂಗಾಗ್ರ ಛೇದನೆಯ ದೌರ್ಜನ್ಯಗಳು ಅವ್ಯಾಹತವಾಗಿ ನಡೆಯುತ್ತಿದೆ. ಸಮಾಜ ಒಂದೆಡೆ ಇದನ್ನು ಸೋಶಿಯಲ್ ನಾರ್ಮ್ ಆಗಿ ನೋಡಿದರೆ. ಸರಕಾರ, ನ್ಯಾಯಾಲಯಗಳೂ ಇದರ ಉಸಾಬರಿ ನಮಗ್ಯಾಕೆ ಎನ್ನುವ ಧೋರಣೆ ಅನುಸರಿಸುತ್ತಿದೆ. ನಿಜ ಹೇಳಬೇಕೆಂದರೆ ಈ ಆಚರಣೆ ಜಗತ್ತಿನ ಅತ್ಯಂತ ದೊಡ್ಡ ಮಾನವ ಹಕ್ಕುಗಳ ಉಲ್ಲಂಘನೆಯೇ ಹೌದು. ಅಂದಿನ ಮೌಢ್ಯಗಳನ್ನು ಇಂದು ಮಾದರಿಯಾಗಿ ಪಾಲಿಸುವ ಜನಕ್ಕೆ ಹೇಳಲು ಉಳಿದಿರುವುದು “ಓದಿರಿ”.

Similar Posts

  • ಅಮಾನವೀಯ ಪದ್ಧತಿ!

    ಮಕ್ಕಳ ಶಿಶ್ನದ ತುದಿ ಕತ್ತರಿಸುವ ಅಮಾನವೀಯ ಪದ್ಧತಿಯನ್ನು ನಿಷೇಧಿಸಬೇಕು. ಮಕ್ಕಳ ಮೇಲಿನ ದೈಹಿಕ, ಮಾನಸಿಕ ಹಿಂಸೆ ನಿಲ್ಲಬೇಕು. ಮಾನವ ಹಕ್ಕುಗಳ ಆಯೋಗ ನಿಜಕ್ಕೂ ಸತ್ತು ಹೋಗಿದೆ.ಈ ಸೆಮೆಟಿಕ್ ಮೌಢ್ಯದ ಕುರಿತು ಧ್ವನಿ ಎತ್ತಲು ಅದು ಹೆದರುತ್ತಿದೆ. ಮಕ್ಕಳ ರಕ್ಷಣೆಗೆಂದೇ ಸ್ಥಾಪಿತವಾಗಿರುವ ಹಲವಾರು ಸಂಘ, ಸಂಸ್ಥೆಗಳೂ ನಿರ್ವೀರ್ಯವಾಗಿವೆ. ಒಂದು ಕಾಲದಲ್ಲಿ ಆಜ್ಟೆಕ್ ಜನರು ಜೀವಂತವಾಗಿರುವ ವ್ಯಕ್ತಿಯ ಹೃದಯವನ್ನೇ ಹೊರತೆಗೆದು ದೇವರಿಗೆ ಅರ್ಪಿಸುತ್ತಿದ್ದರು. ಇಂತಹ ಕ್ರೂರ ಆಚರಣೆಗಳು ವಿವಿಧ ಮತಗಳಲ್ಲಿ ವಿವಿಧ ರೂಪಗಳಲ್ಲಿ ಈಗಲೂ ಜಾರಿಯಲ್ಲಿವೆ. ಇಸ್ಲಾಮಿನಲ್ಲಿ ಅದು ಸುನ್ನತ್ತಿನ…

  • ನಯವಂಚನೆಯ ನವ ರೂಪಗಳು; 1. ತಖಿಯಾ

    ನಯವಂಚನೆಯ ನವ ರೂಪಗಳು: ಮನುಷ್ಯ ಮನುಷ್ಯ ಎಂಬುದನ್ನಷ್ಟೇ ನೋಡಬೇಕು. ಮಾನವೀಯತೆಯ ಮುಂದೆ ಯಾವುದೂ ಇಲ್ಲ. ಆದರೆ ಇಸ್ಲಾಮ್ ಮಾನವೀಯ ಸಮಾಜದಲ್ಲಿ ಹೇಗೆ ಅಡ್ಡಗೋಡೆಯಾಗುತ್ತದೆ ಎನ್ನುವ ಕರಾಳ ಸತ್ಯವನ್ನು ತಿಳಿದುಕೊಳ್ಳಬೇಕಾ ? ಹಾಗಾದರೆ ಬನ್ನಿ; 1] ತಕ್ಕಯ್ಯಾ (ತಖಿಯಾ) :ತಕ್ಕಯ್ಯಾ ಅಥವಾ ತಖಿಯಾ ಎಂದರೆ ಒಬ್ಬ ಮುಸ್ಲಿಮನು ತನ್ನ ಮೂಲ ಸ್ವಭಾವವನ್ನು ಉದ್ದೇಶ ಪೂರ್ವಕವಾಗಿ ಮರೆಮಾಚಿ ಇತರರೊಂದಿಗೆ ಅವರಿರುವಂತೆ ಇರುವ ಮತ್ತು ಆಮೂಲಕ ನಂಬಿಸುವ ತಂತ್ರ! ಇದು ಬಹಳ ವ್ಯಾಪಕವಾಗಿ ಬಳಕೆಯಲ್ಲಿರುವ ಪದ ಮಾತ್ರವಲ್ಲ; ಮುಸಲ್ಮಾನರು ವ್ಯಾಪಕವಾಗಿ ಬಳಸುವ…

  • |

    ನಯವಂಚನೆಯ ನವ ರೂಪಗಳು; 2.ತವ್ರಿಯಾ

    2] ತವ್ರಿಯಾ (ತೌರಿಯಾ) ಇದಕ್ಕೆ ಸಮೀಪವಾದ ಇಂಗ್ಲೀಷಿನ ನುಡಿಗಟ್ಟು Dog whistle ಎನ್ನಬಹುದು. ಮುಸ್ಲಿಮನು ಕೊಡುವ ಹೇಳಿಕೆ ಅಥವಾ ವಾಕ್ಯಕ್ಕೆ ಮೇಲಿನ ಅರ್ಥವೇ ಬೇರೆ ; ಅವರ ಒಳಾರ್ಥವೇ ಬೇರೆ ಇರುತ್ತದೆ. ತನ್ನ ಜನರಿಗೆ ತನ್ನ ಮಾತಿನ ಒಳಾರ್ಥ ತಿಳಿದಿರಬೇಕು ; ಕಾಫಿರ ಜನಕ್ಕೆ ಅವರ ಸುಳಿವೂ ಸಹಾ ಸಿಕ್ಕಿರದಂತೆ ಮಾತಿನ ವರಸೆಯನ್ನು ಹೆಣೆಯಲಾಗುತ್ತದೆ. ಮಾತು ಟೆಕ್ನಿಕಲ್ಲಿ ಸರಿಯಾಗಿರುತ್ತದೆ; ಆದರೆ ನೈತಿಕವಾಗಿ ದಾರಿತಪ್ಪಿಸಿರುತ್ತದೆ. ರಚನಾತ್ಮಕವಾಗಿ ಅಸ್ಪಷ್ಟತೆಯ ಸುಳ್ಳನ್ನು ಸತ್ಯದ ಟೆಕ್ನಿಕಲ್ ಆವರಣದೊ ಳಗಿಟ್ಟು ವಂಚಿಸುವ ಸಂಚು ಎನ್ನಬಹುದು….

  • |

    ಶರಿಯಾ; ದೈವೀಕ ಕಾನೂನು

    ಅಪರಾಧಿಗಳ ಕೈಕಾಲು, ತಲೆಗಳನ್ನು ಕತ್ತರಿಸುವಂತ ಶರಿಯಾ ಕಾನೂನು ಸೌದಿ ಅರೇಬಿಯಾದಲ್ಲಿ ಜಾರಿಯಲ್ಲಿದೆ. ಅಪಾರಾಧಿಗಳನ್ನು ಇಂತಕ ಶಿಕ್ಷೆಗೆ ಒಳಪಡಿಸುವ ಹೃದಯ ವಿದ್ರಾವಕ ಘಟನೆಗಳನ್ನು ಸೌದಿ ರಾಜವಂಶದ ಮಹಿಳೆ ತನ್ನ “desert royal” ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾಳೆ. ಅಪರಾಧಿಗಳ ಕೈಕಾ’ಲು ತಲೆಗಳನ್ನು ಕಡಿಯುವುದಕ್ಕೆ ಒಬ್ಬ ನುರಿತ ತಲೆ ಕಡಿಯುವವನನ್ನು(swordsman) ಆಯ್ಕೆ ಮಾಡಿರುತ್ತಾರೆ. ಆತನ ಹೆಸರೇ “ಸಯೀದ್ ಅಲ್ ಸಯಾಫ್(saeed al sayaf)” ಈತನಿಗೆ ಸೌದಿ ಸರಕಾರವೇ ಸೂಕ್ತ ಶಿಕ್ಷಣ, ತರಬೇತಿ, ಹರಿತವಾದ ಖಡ್ಗ ನೀಡಿ ಸಹಾಯ ಮಾಡುತ್ತದೆ. ಈತನೋ ಎಷ್ಟು ನಿರ್ಧಯಿಯಾಗಿದ್ದನೆಂದರೆ…

Leave a Reply

Your email address will not be published. Required fields are marked *