ಬಾಲಕಿಯೊಂದಿಗೆ ನಿಖಾ

ನಿನ್ನೆ ನನಗೊಂದು ಕನಸು ಬಿತ್ತು. ಕನಸ್ಸಿನಲ್ಲಿ ದೇವರು ಬಂದು “ನೀನು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು. ನಿನಲ್ಲದೆ ಬೇರೆ ಯಾರೇ ಆದರೂ ಈ ರಾಜ್ಯಕ್ಕೆ ಬರಗಾಲ ತರುತ್ತೇನೆ” ಅಂತಾ ಹೇಳಿದ್ದಾನೆ. ಹಾಗಾಗಿ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳಿದರೆ ಜನರು ಇವನಿಗೆ ಹುಚ್ಚು ಹಿಡಿದಿದೆ ಅಂತಾ ನಗಬಹುದು.

ನಿನ್ನೆ ಕನಸಿನಲ್ಲಿ ಒಬ್ಬನನ್ನು ಬರ್ಬರವಾಗಿ ಕೊಂದೆ ಹಾಗಾಗಿ ನನ್ನನ್ನು ಅರೆಸ್ಟ್ ಮಾಡಿ ಅಂತಾ ಪೊಲೀಸರ ಎದುರು ಹೇಳಿದರೆ ಅವರೂ ಕೂಡ ನನ್ನ ಮಾತನ್ನು ಕೇಳಿ ಹುಚ್ಚ ಅಂತಾ ನಗಬಹುದು.

ಏಕೆಂದರೆ ಕನಸುಗಳು ನಿಜವಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ 1400 ವರ್ಷಗಳಿಂದ ಈ ಹುಚ್ಚುತನವನ್ನೇ ನಂಬಿಕೊಂಡು ಬದುಕುತ್ತಿರುವ ದೊಡ್ಡ ವರ್ಗವೇ ಇದೆ ಎನ್ನುವುದು ಪ್ರಪಂಚ ಮತ್ತೊಂದು ಆಶ್ಚರ್ಯಕರ ಸಂಗತಿ.

ಮೊದಲ ಹೆಂಡತಿ ಖದೀಜಾ ಸತ್ತ
ಕೆಲವೇ ದಿನಗಳ ನ೦ತರ ಪ್ರವಾದಿ ತನ್ನ ಆಪ್ತ ಸ್ನೇಹಿತ ಅಬೂಬಕ್ಕರ್‌ನ ಬಳಿ ಆತನ ಆರು ವರ್ಷದ ಮಗಳನ್ನು ತನಗೆ ಮದುವೆ ಮಾಡಿಕೊಡುವಂತೆ ಕೇಳಿದ. ದೇವತೆಯೊಬ್ಬಳು ಆಕೆಯೇ ನಿನ್ನ ಹೆಂಡತಿಯೆಂದು ನನಗೆ ಕನಸಿನಲ್ಲಿ ನಿನ್ನ ಮಗಳನ್ನು ತೋರಿಸಲಾಗಿದೆ ಹಾಗಾಗಿ ಇದು ಅಲ್ಲಾಹನ ಅಪ್ಪಣೆ ಎಂದು ಅವರ ಮನ ಒಲಿಸುತ್ತಾನೆ

“ದೇವತೆಯೊಬ್ಬಳು ರೇಷ್ಮೆಯ ಬಟ್ಟೆಯಲ್ಲಿ ಸುತ್ತಿ ನಿನ್ನ ಮಗಳನ್ನು ಎತ್ತಿಕೊ೦ಡಿದ್ದಳು. ಅವಳು ನನಗೆ ‘ಇವಳು ನಿನ್ನ ಹೆ೦ಡತಿ’ ಎಂದು ಹೇಳಿದಳು. ಅವಳು ಆ ರೇಷ್ಮೆ ಬಟ್ಟೆಯನ್ನು ಸರಿಸಿದಾಗ ಇಗೋ, ಇವಳೇ ಆಯಿಷಾ(6) ಆಗಿದ್ದಳು”.(ಸಹಿ-ಅಲ್-ಬುಖಾರಿ.5125)

ಪಾಪ ಅಬೂಬಕರ್ ಮೊಹಮ್ಮದ್ ದೇವರ ಪ್ರವಾದಿ ಎಂದು ಆಚಲವಾಗಿ ನಂಬಿಬಿಟ್ಟಿದ್ದ ಹಾಗಾಗಿ ತನ್ನ 6 ವರ್ಷದ ಕಂದಮ್ಮನನ್ನು ಪ್ರವಾದಿಗೆ ಮದುವೆ ಮಾಡಿಕೊಡಲು ಒಪ್ಪಿದನಾದರೂ, ಅವಳಿಗೆ ಸ್ವಲ್ಪ ವಯಸ್ಸಾಗುವವರೆಗೆ ಕೆಲವು ವರ್ಷ ಕಾಯುವಂತೆ ಬೇಡಿಕೊಂಡ, ಅದರಂತೆ ಪ್ರವಾದಿ 3 ವರ್ಷಗಳ ಕಾಲ ಕಾದರು. ಇದರ ಮಧ್ಯೆ ಸೌದಾ ಎನ್ನುವ ಇನ್ನೊಬ್ಬ ಯುವತಿಯನ್ನೂ ಮದುವೆಯಾದ.

ಒಂದು ವೇಳೆ ದೇವರೇ ಹೇಳಿದ್ದರೂ ತನ್ನ ಆಪ್ತ ಸ್ನೇಹಿತನ ಮಗಳನ್ನೇ ಹೆಂಡತಿಯನ್ನಾಗಿ ಮಾಡಿಕೊಳ್ಳುವಂತಹ ದುಷ್ಟ ಯೋಚನೆಯನ್ನು ಯಾವ ಸ್ನೇಹಿತ ತಾನೇ ಮಾಡುತ್ತಾನೆ ? ನಾವು ನಮ್ಮ ಸ್ನೇಹಿತರ ಮಕ್ಕಳನ್ನು ನಮ್ಮ ಮಕ್ಕಳಂತೆಯೇ ನೋಡುತ್ತೇವಲ್ಲವೇ ?

ಜನರು ನನ್ನ ಕನಸ್ಸನ್ನು ನಂಬುವುದಿಲ್ಲ ಆದರೆ ಮೋಹಮ್ಮದ್ದನ ಕನಸ್ಸನ್ನ ನಂಬುತ್ತಿದ್ದಾರೆ. ನನ್ನ ಕನಸು ಪ್ರವಾದಿಯ ಕನಸು ಎರಡು ಕನಸೇ ತಾನೇ ? ಕನಸ್ಸನ್ನು ದೃಡೀಸಕಿಸುವವರು ಯಾರು ? ಕನಸು ಎಂದ ಮೇಲೆ ಎರೆಡು ಸುಳ್ಳುಗಳೇ ಅಲ್ಲವೇ ?

 

Leave a Reply

Your email address will not be published. Required fields are marked *