ಮುಸ್ಲಿಮರು ಕುರಾನಿನ ನಂತರ ಅತಿ ಹೆಚ್ಚು ಪವಿತ್ರತೆ ನೀಡಿ ಗೌರವಿಸುವ ಗ್ರಂಥಗಳೆಂದರೆ ಹದೀಸ್ ಗ್ರಂಥಗಳು. ತನ್ಮೂಲಕ ಕುರಾನ್ ಒಂದು ಸಮಗ್ರ ಮತ್ತು ಸಂಪೂರ್ಣ ಗ್ರಂಥವಲ್ಲ ಎಂಬುದನ್ನು ಮುಸ್ಲಿಮರು ಇಲ್ಲಿ ಒಪ್ಪದೆಯೇ ಒಪ್ಪಿಕೊಳ್ಳುತ್ತಾರೆ! ಆದರೆ ನಿಮಗೆ ಗೊತ್ತೇ, ಹದೀಸ್ ಗಳನ್ನು ಬರೆದಿಡಬಾರದೆಂದು ಪ್ರವಾದಿ ಮೊಹಮ್ಮದರ ಆದೇಶವಿರುವ ಹದೀಸ್ ಇದೆ!!!
ಕುರಾನ್ ಅನ್ನು ಹೊರತುಪಡಿಸಿ ಇನ್ನೇನನ್ನೂ ಬರೆದಿಡಬಾರದು ಮತ್ತು ಹಾಗೆ ಯಾರಾದರೂ ಬರೆದಿಟ್ಟಿದ್ದರೆ ಅದನ್ನು ಈ ಕೂಡಲೇ ಅಳಿಸಿ ಹಾಕಬೇಕೆಂದು ಪ್ರವಾದಿ ಹೇಳಿದ್ದಾರೆ.(ಸಹಿ-ಮುಸ್ಲಿಂ.3004) ಆದರೆ ಇದನ್ನು ಮೀರಿ ಬರೆದಿಡಲಾಗಿರುವ ಹದೀಸ್ ಗ್ರಂಥಗಳು ಇಂದು ಕುರಾನ್ ನಂತರದ ಎರಡನೇ ಸ್ಥಾನ ಪಡೆದಿರುವ ಹದೀಸ್ ಗ್ರಂಥಗಳು!
ಹಾಗಾಗಿಯೇ ಸಹಾಬಿಗಳಾಗಲಿ ಪ್ರವಾದಿ ಅವರ ಅನುಯಾಯಿಗಳಾಗಲಿ ಯಾರೂ ಹಧೀಸ್ ಗಳನ್ನು ಬರೆದಿಡಲಿಲ್ಲ . ಪ್ರವಾದಿ ಮರಣದ ಸುಮಾರು 250 ವರ್ಷಗಳ ಬಳಿಕ ವಿದೇಶಗಳಿಂದ ಹೋದ ಕೆಲವು ಅನರಬಿ ವಿದ್ವಾಂಸರು ಈ ಹದೀಸಗಳನ್ನು ಬರೆದಿಡುವ ಮತ್ತು ಕ್ರೂಢೀಕರಿಸುವ ಕೆಲಸ ಮಾಡಿ ಇಂದಿನ ಗೊಂದಲಗಳಿಗೆ ಕಾರಣರಾದರು. ಅಲ್ಲದೆ ಇಂದು ಪ್ರಸ್ತುತದಲ್ಲಿರುವ ಬಹುತೇಕ ಆಚರಣೆಗಳು ಅನರಬಿಗಳು ಬರೆದ ಹದೀಸಿನ ಮೇಲೆ ನಿಂತಿವೆ.
Ex-muslims of karnataka