ರಸೂಲನಿಗಾಗಿ ರಕ್ತಪಾತ; ಪ್ರಕರಣ 2

ಅಬುಲ್ ಬುಖ್ತಾರಿ ಎಂಬುವ ಕರುಣಾಮಯಿಯ ಕೊಲೆ: ಕೊಟ್ಟು ಕಿತ್ತುಕೊಳ್ಳುವ ಕಲೆ.

ಅಬುಲ್ ಬುಖ್ತಾರಿ ಎಂಬ ಮೆಕ್ಕಾದ ಕುರೇಶಿ ಸಹಾ ಸೆರೆಯಾಳುಗಳಲ್ಲಿ ಒಬ್ಬ. ಮೆಕ್ಕಾದಲ್ಲಿದ್ದಾಗ ಮಹಮ್ಮದನು ತನ್ನ ಅ’ವಹೇಳನಕಾರಿ ಮಾತುಗಳಿಂದ ಉಳಿದ ಕುರೇಶಿಗಳನ್ನು ಕೆರಳಿಸಿದ್ದನಷ್ಟೇ. ಅವರು ಮಹಮ್ಮದನ ಮೇಲೆ ಕ್ರೋಧಿತರಾಗಿದ್ದಾಗ ತನ್ನ ಚಿಕ್ಕಪ್ಪನಾದ ಅಬು ತಾಲಿಬನ ಮನೆಯಲ್ಲಿ ಮಹಮ್ಮದ್ ರಕ್ಷಣೆ ಪಡೆದಿದ್ದ. ಆ ಸಮಯದಲ್ಲಿ ಈ ಅಬುಲ್ ಬುಖ್ತಾರಿಮಹಮ್ಮದನನ್ನು ಕರುಣೆಯಿಂದ ಕಂಡು ಉಪಚರಿಸಿದ್ದನು.

ಅದನ್ನು ನೆನಪಿಸಿಕೊಂಡವನಂತೆ ಮಹಮ್ಮದ್ ಅವನನ್ನು ಬಿಡುಗಡೆ ಮಾಡಬೇಕೆಂದು ಹೇಳಿದನು. ಆದರೆ ಆತನ ಜತೆಗಿದ್ದ ಅವನ ಸಹಚರನ ಕುರಿತಾಗಿ ಏನನ್ನೂ ಹೇಳಲಿಲ್ಲ. ಎಂಥಾ ಕುತಂತ್ರವಿದೆ ಎಂದು ನೋಡಿ. ಅವರಿಬ್ಬರೂ ಮಕ್ಕಾದ ಕಡೆಗೆ ಹೊರಟಾಗ ಮುಸ್ಲಿಮನೊಬ್ಬ ಬಂದು “ಪ್ರವಾದಿಯು ನಿನಗೆ ಮಾತ್ರ ಜೀವದಾನ ಕೊಟ್ಟದ್ದು ; ನಿನ್ನ ಹಿಂಬಾಲಕನಿಗಲ್ಲ ಅವನನ್ನು ಬಿಟ್ಟುಕೊಡು ನಾನು ಕೊಲ್ಲುತ್ತೇನೆ ಇಲ್ಲವಾದರೆ ನೀನೂ ಸಾಯಬೇಕಾಗುತ್ತದೆ” ಎಂದ..ಅಬುಲ್ ಬುಖ್ತಾರಿಯು “ನನ್ನ ಪ್ರಾಣಕ್ಕಾಗಿ ನಂಬಿದವರನ್ನು ಬಿಟ್ಟುಕೊಟ್ಟು ಪಾಪಿಯಾಗಿ ಮೆಕ್ಕಾದ ಹೆಂಗಸರ ಬಾಯಿಯಲ್ಲಿ ಅವಹೇಳನಕ್ಕೆ ಗುರಿಯಾಗುವುದಿಲ್ಲ” ಎಂದ. ಅವನ ಉದಾತ್ತತೆಯನ್ನು ಸಹಾ ನೋಡಿ!

ಆ ಮುಸ್ಲಿಮನು ಆ ಇಬ್ಬರ ಮೇಲೆಯೂ ಮುಗಿಬಿದ್ದು ಕೊ೦ದು ಹಾಕಿದ! ಉಳಿದ ಸೆರೆಯಾಳುಗಳನ್ನು ಮದೀನಾಗೆ ಕೊಂಡೊಯ್ದು ನಂತರ ಕುರೇಶಿಗಳೊಂದಿಗೆ ವ್ಯವಹಾರ ಮಾಡಿ ಹೇರಳ ಹಣ ಸಂಪತ್ತಿಗೆಂದು ಜೀವದಾನ ಕೊಟ್ಟು ಕಳಿಸಿದನು.ಕೆಲವು ಮೂಲಭೂತವಾದಿಗಳು ಈ ರೀತಿಯ ಸುನ್ನತ್ ಪಾಲಿಸುತ್ತಾ ತಲೆ ಕಡಿಯಲು ಹಿಂದು ಮುಂದು ನೋಡದಂಥ ಕ್ರೌ’ರ್ಯವನ್ನು ಮೈಗೂಡಿಸಿಕೊಂಡಿದ್ದಾರೆ.

Reference:

  • As-Seerat-un-Nabawiyyah li Ibn Hishaam, pp. 260

Similar Posts

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 3

    ಆಸ್ಮಾ ಬಿಂತ್ ಮರ್ವಾನ್ ಳ ಧಾರುಣ ಹತ್ಯೆಗೆ ಸುಪಾರಿ. ಮದೀನಾದಲ್ಲಿದ್ದಾಗ ಮಹಮ್ಮದನ ಅರೇಬಿಕ್ ಆಯತುಗಳ ಅಪದ್ಧಗಳನ್ನು ಟೀಕಿಸಿ ಕವಿತೆಗಳನ್ನು ರಚಿಸಿದ್ದ ಹೆಣ್ಣುಮಗಳು ಆಸ್ಮಾ ಬಿಂತ್ ಮರ್ವಾನ್. ಐದು ಜನ ಮಕ್ಕಳ ತಾಯಿಯಾಗಿದ್ದ ಆಕೆಗೆ ಇನ್ನೂ ಎದೆಹಾಲು ಕುಡಿಯುತ್ತಿದ್ದ ಹಸುಗೂಸು ಸಹಾ ಇತ್ತು. ಬದರ್ ನ ಯುದ್ಧದಲ್ಲಿ ಈ ಆಸ್ಮಾಳ ಕೆಲವು ಸಂಬಂಧಿಗಳೂ ಸಹಾ ಸತ್ತು ಮತ್ತು ಕೆಲವರು ಗಾಯಗೊಂಡಿದ್ದರು. ಮಹಮ್ಮದ್ , ಅವನ ಅನುಚರರು, ಇಸ್ಲಾಂ, ಅದರ ಬೋಧನೆಗಳು, ಮತ್ತು ಮೇಲಾಗಿ ಸ್ಥಳೀಯನೇ ಅಲ್ಲದ ಮಹಮ್ಮದ್ ಮಕ್ಕಾದಿಂದ…

  • ಬಾಲಕಿಯೊಂದಿಗೆ ನಿಖಾ

    ನಿನ್ನೆ ನನಗೊಂದು ಕನಸು ಬಿತ್ತು. ಕನಸ್ಸಿನಲ್ಲಿ ದೇವರು ಬಂದು “ನೀನು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು. ನಿನಲ್ಲದೆ ಬೇರೆ ಯಾರೇ ಆದರೂ ಈ ರಾಜ್ಯಕ್ಕೆ ಬರಗಾಲ ತರುತ್ತೇನೆ” ಅಂತಾ ಹೇಳಿದ್ದಾನೆ. ಹಾಗಾಗಿ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳಿದರೆ ಜನರು ಇವನಿಗೆ ಹುಚ್ಚು ಹಿಡಿದಿದೆ ಅಂತಾ ನಗಬಹುದು. ನಿನ್ನೆ ಕನಸಿನಲ್ಲಿ ಒಬ್ಬನನ್ನು ಬರ್ಬರವಾಗಿ ಕೊಂದೆ ಹಾಗಾಗಿ ನನ್ನನ್ನು ಅರೆಸ್ಟ್ ಮಾಡಿ ಅಂತಾ ಪೊಲೀಸರ ಎದುರು ಹೇಳಿದರೆ ಅವರು ನನ್ನನ್ನು ಹಿಡಿದು ಹುಚ್ಚಾಸ್ಪತ್ರೆಗೆ ಸೇರಿಸಬಹುದು  ಏಕೆಂದರೆ ಕನಸುಗಳು ನಿಜವಲ್ಲ ಎನ್ನುವುದು…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 1

    ಪ್ರವಾದಿ ಮಹಮ್ಮದ್ ಸಲ್ಲಲ್ಲಾಹುವು ಇಸ್ಲಾಂ ಎಂಬ ಈ ಮತವನ್ನು ಪಂಥವನ್ನು ಜಗತ್ತಿಗೆ ತರುವ ಮೊದಲಿನ ಈ ಇಡೀ ಮನುಷ್ಯಕುಲದ ಇಸ್ಲಾಂ ಪೂರ್ವ ಯುಗವನ್ನು “ಮೂರ್ಖರ ಕಾಲಾವಧಿ” ಎಂದು ಮಹಮ್ಮದೀಯರು ಕರೆಯುತ್ತಾರೆ – ಜಮಾನಾ ಜಾಹೀಲಿಯತ್ ಎ೦ದು ಅದರ ಹೆಸರು! ಆದರೆ ವಾಸ್ತವ ಸಾಕಷ್ಟು ಭವ್ಯವಾಗಿಯೇ ಇತ್ತು ಅವರಲ್ಲೂ ಅರೇಬಿಯಾದ ಹೊರಗೆ. ಮಹಮ್ಮದ್ ಬಂದ ನಂತರ ಏನಾಯ್ತು ನೋಡೋಣ. ಪ್ರವಾದಿ ಮಹಮ್ಮದನು ರಂಗಕ್ಕೆ ಬರುವ ಮೊದಲು ಏಳನೇ ಶತಮಾನದ ಅರೇಬಿಯಾದಲ್ಲಿ ಕಾವ್ಯ ಕವಿತೆಗಳ ರಚನೆ ಮತ್ತು ಅವುಗಳನ್ನು ಭಾವ…

  • | |

    ಶಾಂತಿಧೂತ !?

    ಮೊಹಮ್ಮದ್ ಎಂಬ ವ್ಯಕ್ತಿಯನ್ನು ವಿವಿಧ ವೇದಿಕೆಗಳಲ್ಲಿ ವಿಶ್ವಮಾನವನಂತೆ ಹೊಗಳಲಾಗುತ್ತದೆ. ಪಾಪ ಹೊಗಳಲಿ ಯಾರು ಬೇಡ ಅಂದಿದ್ದು. ಆದರೆ ನಿಜಕ್ಕೂ ಆ ವ್ಯಕ್ತಿಯಲ್ಲಿ ಅದಕ್ಕೆ ತಕ್ಕ ಗುಣಗಳಿದ್ದವೇ ? ಎನ್ನುವುದು ಪ್ರಶ್ನೆ. ತನ್ನ 40ನೇ ವಯಸ್ಸಿನಲ್ಲಿ ತಾನು ಪ್ರವಾದಿ ಅಂತಾ ಘೋಷಿಸಿಕೊಂಡ. ಆದರೆ ಅದಾದ 13 ವರ್ಷಗಳ ನಂತರವೂ ಮೆಕ್ಕಾದಲ್ಲಿ ಆತನ ಮತದಲ್ಲಿ ಇದ್ದವರು ಕೇವಲ 150 ಹಿಂಬಾಲಕರು ಮಾತ್ರ. ಯಾವಾಗ ಮೆಕ್ಕಾ ತೊರೆದು ಮದಿನಾಕ್ಕೆ ಪಲಾಯನ(ಹಿಜೀರಾ) ಮಾಡಿದನೋ ಅಲ್ಲಿಂದ ರಕ್ತ ಚರಿತ್ರೆ ಪ್ರಾರಂಭವಾಯಿತು. ಮದಿನಾದಲ್ಲಿ ಮಕ್ಕಾದಲ್ಲಿದ್ದಂತಹ ವಿರೋಧಗಳಾವೂ…

  • |

    ಇಸ್ಲಾಮಿನಲ್ಲಿ ವರ್ಣಬೇಧ ಮತ್ಸರ

    ವರ್ಣಭೇದ ಮತ್ಸರದ Ishaq:243 “I heard the Apostle say: ‘Whoever wants to see Satan should look at Nabtal!’ He was a black man with long flowing hair, inflamed eyes, and dark ruddy cheeks…. Allah sent down concerning him: ‘To those who annoy the Prophet there is a painful doom.” [9:61] “Gabriel came to Muhammad and said,…

  • ರಸೂಲನಿಗಾಗಿ ರಕ್ತಪಾತ; ಪ್ರಕರಣ 4

    ಅಬು ಅಫಕನ ಹತ್ಯೆಗೆ ಸುಪಾರಿ ಅಬು ಅಫಾಕ್ ನೂರು ದಾಟಿದ ನರೆಗೂದಲ ಯಹೂದಿ ವೃದ್ಧಕವಿ. ಇವನು ಮದೀನಾದ ಮೇಲಿನ ಕೇರಿಯಲ್ಲಿ ವಾಸವಾಗಿದ್ದ. ಮಹಮ್ಮದನು ಮದೀನಾಗೆ ಬಂದ ನಂತರದ ಬದಲಾವಣೆಗಳನ್ನು ಆತ ಗಮನಿಸುತ್ತಿದ್ದ. ಮದೀನಾದ ಜನರನ್ನು ಹಲಾಲ್ ,ಹರಾಂ ಎಂಬ ಕಟ್ಟಳೆ ಕಾನೂನುಗಳ ಮೂಲಕ ಎರಡು ದೊಡ್ಡ ಗುಂಪುಗಳಾಗಿ ಒಡೆದು ಒಡಕು ಹುಟ್ಟಿಸಿದ. ಹಂದಿಯ ಮಾಂಸ ಸೇವನೆ ಮತ್ತು ಮದ್ಯಪಾನವನ್ನು ನಿಷೇಧಿಸಿದ್ದಲ್ಲದೆ ದರೋಡೆ, ಕೊಲೆ, ಒಪ್ಪಿತ ಆಚಾರಗಳಾಗಿ ಸ್ವೀಕರಿಸಲು ಬೋಧಿಸಿದ. ಇದರಿಂದ ಅಸಮಾಧಾನಗೊಂಡ ಅಬು ಅಫಾಕ್ ಮಹಮ್ಮದನನ್ನು ಟೀಕಿಸಿ…

Leave a Reply

Your email address will not be published. Required fields are marked *