ರಸೂಲನಿಗಾಗಿ ರಕ್ತಪಾತ; ಪ್ರಕರಣ 1

ಪ್ರವಾದಿ ಮಹಮ್ಮದ್ ಸಲ್ಲಲ್ಲಾಹುವು ಇಸ್ಲಾಂ ಎಂಬ ಈ ಮತವನ್ನು ಪಂಥವನ್ನು ಜಗತ್ತಿಗೆ ತರುವ ಮೊದಲಿನ ಈ ಇಡೀ ಮನುಷ್ಯಕುಲದ ಇಸ್ಲಾಂ ಪೂರ್ವ ಯುಗವನ್ನು “ಮೂರ್ಖರ ಕಾಲಾವಧಿ” ಎಂದು ಮಹಮ್ಮದೀಯರು ಕರೆಯುತ್ತಾರೆ – ಜಮಾನಾ ಜಾಹೀಲಿಯತ್ ಎ೦ದು ಅದರ ಹೆಸರು! ಆದರೆ ವಾಸ್ತವ ಸಾಕಷ್ಟು ಭವ್ಯವಾಗಿಯೇ ಇತ್ತು ಅವರಲ್ಲೂ ಅರೇಬಿಯಾದ ಹೊರಗೆ. ಮಹಮ್ಮದ್ ಬಂದ ನಂತರ ಏನಾಯ್ತು ನೋಡೋಣ.

ಪ್ರವಾದಿ ಮಹಮ್ಮದನು ರಂಗಕ್ಕೆ ಬರುವ ಮೊದಲು ಏಳನೇ ಶತಮಾನದ ಅರೇಬಿಯಾದಲ್ಲಿ ಕಾವ್ಯ ಕವಿತೆಗಳ ರಚನೆ ಮತ್ತು ಅವುಗಳನ್ನು ಭಾವ ರಾಗ ರಸಗಳ ಜತೆಯಲ್ಲಿ ಪ್ರಸ್ತುತಿ ಪಡಿಸುವ ಕಲೆಯನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಆ ಕಾಲದ ಪ್ರಮುಖ ಘಟನಾವಳಿಯೋ, ವಂಶಾನುಚರಿತದ ಕಥೆಗಳೋ, ಮತ್ತಿತರ ಜಾನಪದ ಕಥೆಗಳೋ ಇತ್ಯಾದಿಯನ್ನು ಪ್ರಾಸಬದ್ಧ ಕವಿತೆಗಳ ರೂಪದಲ್ಲಿ ಚಿಕ್ಕ ದೊಡ್ಡ ವಿಸ್ತಾರಗಳಲ್ಲಿ ರಚಿಸಿ ಪ್ರಮುಖವಾದ ಹಬ್ಬ, ಜಾತ್ರೆ , ಗುಂಪುಗಳಲ್ಲಿ , ಸಮಾರಂಭಗಳಲ್ಲಿ ಹಾಡತ್ತಾ ನಲಿಯುವುದು ಬದುಕಿನ ಭಾಗವೇ ಆಗಿತ್ತು. ಕವಿತೆ ಎಂದ ಮೇಲೆ ಹಾಸ್ಯ, ವ್ಯಂಗ್ಯ, ವೀರ, ಭೀಭತ್ಸ, ಶಾಂತ ಇತ್ಯಾದಿ ರಸಗಳು ಇದ್ದೇ ಇರುತ್ತವೆ. ಬೇಸರ ತರಿಸಬಲ್ಲ ವಿಚಾರಗಳನ್ನು ಸಹಾ ರಸವತ್ತಾಗಿ ಮಾಡುವ ಶಕ್ತಿ ಕವಿತೆಗಳನ್ನು ಪ್ರಬುದ್ಧವಾಗಿ ರಚಿಸಬಲ್ಲ ಕವಿಗೆ ಇರುತ್ತದೆ ಎಂಬುದು ಪ್ರಪಂಚದ ಅನುಭವ.

ಆದರೆ ಟೀಕೆಯನ್ನಾಗಲಿ, ಹಾಸ್ಯವನ್ನಾಗಲೀ ವಿಚಾರಬದ್ಧ ಪ್ರಶ್ನೆಯನ್ನಾಗಲೀ ಎದುರಿಸುವ, ಭರಿಸುವ ಮನಸ್ಥಿತಿ ಇಸ್ಲಾಮಿಗೆ ಕಿಂಚಿತ್ತೂ ಇಲ್ಲ. ಅಲ್ಲಾಹ ಅಥವ ಮಹಮ್ಮದನ ಕುರಿತಾದ ಯಾವುದೇ ವ್ಯಂಗೋಕ್ತಿ ಬಂದರೂ ಸಣ್ಣ ಕಣ್ಣಿನ ಉದ್ದಗಡ್ಡದ ಸಂಕುಚಿತ ಮನೋಭಾವದ ಮುಲ್ಲಾಗಳು ತಲೆ ಕಡಿದು ಪ್ರಾಣ ತೆಗೆಯುವ ಫತ್ವಾ ಹೊರಡಿಸಿ ಬಿಡುತ್ತಾರೆ. ವಿದ್ವಾಂಸರು ಎಂದು ತಮ್ಮನ್ನು ತಾವು ಕರೆದುಕೊಳ್ಳುವ ಪೈಶಾಚಿಕ ಮನಸ್ಸಿನ ಈ ಇಮಾಮಗಳು, ಮುಲ್ಲಾಗಳು ಮೋಸಗಾರ ರಬ್ಬಿಗಳಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ಇವರ ವಿದ್ವತ್ತು- ಪಾಂಡಿತ್ಯ ಎನ್ನುವುದು ವಿಧ್ವಂಸದ ಕಸದ ತಿಪ್ಪೇರಾಶಿಯೇ ಹೊರತು ಮತ್ತೇನಲ್ಲ. ಅವರ ಈ ತಲೆ ಕಡಿಯುವ ಮೇಲ್ಪಂಕ್ತಿಯನ್ನು ಸ್ವತಃ ಪ್ರವಾದಿಯೇ ಹಾಕಿಕೊಟ್ಟದ್ದು ಎಂಬುದಿಲ್ಲಿ ಮನನೀಯ.

ಹಿನ್ನೆಲೆ:

ತನಗೆ ಪ್ರವಾದಿ ಪಟ್ಟ ಸಿಕ್ಕಿದೆಯೆಂದೂ , ತಾನು (ಭ್ರಮಾಜಾಲಕ್ಕೆ ಸಿಲುಕಿ) ಬೋಧಿಸುವ ಹೊಸ ಮತವನ್ನು ಎಲ್ಲರೂ ಮರು ಪ್ರಶ್ನೆಯಿಲ್ಲದೆ ಅಂಗೀಕರಿಸಬೇಕೆಂದು ಮಹಮ್ಮದನ ಆಗ್ರಹವಾಗಿತ್ತು. ಹಾಗಾಗಿ ಮೆಕ್ಕಾದ ಸಭಾಂಗಣದಲ್ಲಿ ಕುಳಿತು ತನ್ನ ಕುರಾನಿನ ಆಯತೆಗಳನ್ನು ಕೂಗಿ ಕೂಗಿ ಹೇಳುತ್ತಾ, ಮೂಗಿನಿಂದ ಧ್ವನಿಸುವ ಅರಬ್ಬೀ ಅರಚಾಟ ಹೊರಡಿಸಿಕೊಂಡು ಉಚ್ಚಾರ ಮಾಡಿಕೊಂಡು ತನ್ನ ಮಾತುಗಳನ್ನು ಕೇಳಬೇಕೆಂತಲೂ, ಕೇಳದೇ ಹೋದಲ್ಲಿ ಅಲ್ಲಾಹುವು ನರಕಕ್ಕಿಳಿಸಿ ನಾಲ್ಗೆ ಸೀಳಿಸಿ ಶಿಕ್ಷಿಸುತ್ತಾನೆಂದೇ ಹೆದರಿಸುತ್ತಿದ್ದನು. ಅದೇ ಸಮಯದಲ್ಲಿ ಅಲ್ ನದೀರ್ ಬಿನ್ ಹರಿತ್ ಎಂಬುವ ಆಶುಕವಿಯು ತನ್ನದೇ ಆದ ಉತ್ಕೃಷ್ಟ ಕವಿತೆಗಳನ್ನು ರಚಿಸಿ ಹಾಡಿ ತೋರಿಸುತ್ತಿದ್ದನು. ಜಾನಪದ ಬೈಬಲ್, ಜೀಸಸ್, ಮೋಸೆಸ್ ನೋವಾಹ್ ಇತ್ಯಾದಿಗಳ ಕಥಾನಕಗಳನ್ನು ಮಾತ್ರವಲ್ಲದೆ ಆ ವೇಳೆಗೆ ಮಸುಕಾಗಿದ್ದ ಅರಬ್ಬಿನ ಪೂರ್ವೇತಿಹಾಸದ ಕಥೆಗಳನ್ನು ಸಹಾ ರಸವತ್ತಾಗಿ ಬಣ್ಣಿಸುತ್ತಿದ್ದನು. ಪ್ರಾಮಾಣಿಕವಾಗಿ ತಾನು ಹಳೆಯ ವಿಚಾರಗಳನ್ನೇ ಮತ್ತೆ ಹೊಸ ರೂಪದಲ್ಲಿ ಹೇಳುತ್ತಿದ್ದೇನೆ ಎಂದು ನದೀರ್ ಒಪ್ಪಿಕೊಳ್ಳುತ್ತಿದ್ದುದರ ಜತೆಗೆ, ಮಹಮ್ಮದನು ಹೊಸದೇನೂ ಹೇಳುತ್ತಿಲ್ಲ, ಅದೇ ಹಳೆಯ ಮಾಲು; ಆದರೂ ನನ್ನಷ್ಟು ಚೆನ್ನಾಗಿ ಹೇಳಲಾರ ಎಂದು ಮೂದಲಿಸುತ್ತಿದ್ದನು. ಜನಗಳು ಮುರ್ಖರೇನೂ ಆಗಿರಲಿಲ್ಲವಷ್ಟೇ! ಪ್ರವಾದಿಯ ಕಳಪೆ ಉಪದೇಶಕ್ಕೆ ಗೊಂದಲಮಯ ಹರುಕು ಮುರುಕು ಕಥೆಗಳಿಗೆ, ತಲೆ ಬುಡ ಇಲ್ಲದ ಬೋಧನೆಗಳಿಗೆ ಜನ ಒಲಿಯಲೂ ಇಲ್ಲ, ಇವನ ಮತವನ್ನು ಸೇರಲೂ ಇಲ್ಲ.

622ರಲ್ಲಿ ತನ್ನ ಜೀವಕ್ಕೆ ಸಂಚಕಾರ ಬಂದಿದೆ ಎಂದು ಭ್ರಮಿಸಿ ಮೆಕ್ಕಾದಿಂದ ಮದೀನಾಕ್ಕೆ ಓಡಿಹೋಗುವ ಪರಿಸ್ಥಿತಿ ಬಂದಾಗ್ಯೂ ಮಹಮ್ಮದ್ ಅಲ್ ನದೀರ್ ಬಿನ್ ಹರಿತ್ ನ ಟೀಕೆಯನ್ನು ಮರೆಯಲೂ ಇಲ್ಲ, ಕ್ಷಮಿಸಲೂ ಇಲ್ಲ. (ಇಂತಹ ಸೇಡಿನ ಮೂಟೆ ಪ್ರವಾದಿಯನ್ನು ರಹಮತ್ ಎಲ್ ಆಲಮೀನ್ ಎಂದು ಮುಸ್ಲಿಮರು ಕೊಂಡಾಡುತ್ತಾರೆ !)

ಸೇಡಿನ ಶಮನ; ನದೀರನ ನಿರ್ನಾಮ:

ಕ್ರಿ.ಶ. 622 ರಲ್ಲಿ ಮದೀನಾಕ್ಕೆ ಓಡಿಹೋದ ಮಹಮ್ಮದ್ ಮೆಕ್ಕಾದ ಕುರೇಶಿಗಳ ವ್ಯಾಪಾರದ ಸರಕು ಸರಂಜಾಮುಗಳ ಗಾಡಿಗಳ ಮೇಲೆ ದಾಳಿ ಮಾಡಿ ದೋಚಿ ಬಾಚಿ ಜೀವನ ಸಾಗಿಸಲಾಗುತ್ತಿತ್ತು ! ಎಂದು ಮೂಯಿನಿರ್ ಬರೆಯುತ್ತಾನೆ. ಇದರಿಂದ ರೋಸಿ ಹೋದ ಮಕ್ಕಾದ ನಿವಾಸಿಗಳು ತಮ್ಮ ಸೈನ್ಯದೊಂದಿಗೆ ಯುದ್ಧಕ್ಕೆ ಬಂದರು. ಬದರ್ ಎಂಬ ಕಣಿವೆಯಲ್ಲಿ ನಡೆದ ಈ ಯುದ್ಧವನ್ನು 624 ರ ಬದರ್ ನ ಬಡಿದಾಟ (battle of Badr) ಎಂದು ಕರೆಯಲಾಗಿದೆ.

ಮಹಮ್ಮದನ ಪಾಲಿಗೆ ಈ ಯುದ್ಧದಲ್ಲಿ ಸಿಕ್ಕ ಗೆಲುವು ಇಸ್ಲಾಂ ನ ಉಳಿವಿಗೆ ಮುನ್ನುಡಿ ಬರೆದು ನಿರ್ಣಾಯಕವಾದ ಐತಿಹಾಸಿಕ ಸ್ಥಾನ ಪಡೆಯಿತು. 115 ಒಂಟೆಗಳು, 15 ಕುದುರೆಗಳು, ಅಪಾರವಾದ ಶಸ್ತ್ರಾಸ್ತ್ರಗಳು, ಮತ್ತಿತರ ಸಂಪತ್ತಿನ ಲೂಟಿ ಕೈಸೇರಿತು. ಅನೇಕ ಜನ ಮಕ್ಕಾದ ಕುರೇಶಿಗಳನ್ನು ಸೆರೆಹಿಡಿಯಲಾಯಿತು. ಈ ಸೆರೆ ಸಿಕ್ಕಿ ಅಸಹಾಯಕ ಸ್ಥಿತಿಯಲ್ಲಿದ್ದ ಕೆಲವರ ಮೇಲೆ ಮುಸ್ಲಿಮರು ಉರಿದು ಬಿದ್ದು ಕೊ0ದರು. ಮಹಮ್ಮದ್ ಸಂಭ್ರಮಿಸಿದನು. ಮಹಮ್ಮದನ ಉದ್ಗಾರಗಳನ್ನು ಮತ್ತೊಂದು ಲೇಖನದಲ್ಲಿ ನೋಡೋಣ. ಉಳಿದ ಸೇರೆಯಾಳುಗಳನ್ನು ಕೈಕಟ್ಟಿ ಬಂಧಿಸಿ ಎಳೆದುಕೊಂಡು ಮದೀನಾದ ಕಡೆಗೆ ಮಹಮ್ಮದನ ಪಡೆ ಹೊರಟಿತು. ಕತ್ತಲಾಗಿ, ದಾರಿಯಲ್ಲಿ ಅಲ್ ಓಥೆಲ್ ಎಂಬ ಜಾಗದಲ್ಲಿ ಠಿಕಾಣಿ ಹೂಡಿ ರಾತ್ರಿಯನ್ನು ಮಹಮ್ಮದನ ಸಹಿತ ಕಳೆದದ್ದಾಯಿತು.

ಮರುದಿನ ಬೆಳಗ್ಗೆ ಯುದ್ಧ ಖೈದಿಗಳು ಎಲ್ಲರನ್ನೂ ಮಹಮ್ಮದನ ಮುಂದೆ ಪ್ರದರ್ಶನಕ್ಕೆ ತರಲಾಯಿತು. ಎಲ್ಲರ ಮೇಲೆ ದೃಷ್ಟಿಹಾಯಿಸಿದ ಮಹಮ್ಮದನ ತೀಕ್ಷ್ಣ ದೃಷ್ಟಿಯು ಮಿಕ್ದಾದ್ ಎಂಬ ಮುಸ್ಲಿಮನು ಸೆರೆಹಿಡಿದಂಥ, ಅಲ್ಲಿ ಇದ್ದ ಅನ್ ನದೀರ್ ಬಿನ್ ಹರಿತ್ ಮತ್ತು ಓಕ್ಬಾ (ಉಕ್ಬಾ ) ಎಂಬುವವರ ಮೇಲೆ ಬಿದ್ದಿತು. ಮಹಮ್ಮದನ ಕಣ್ಣಿನಲ್ಲಿ ಕಂಡ ತನ್ನ ಸಾವಿನ ಕರಾಳ ಸಂದೇಶ ಗುರುತಿಸಿದ ಆನ್ ನದೀರ್ ಭಯದಿಂದ ಕಂಪಿಸಿದ. There was death in his glance! ತನ್ನ ಪಕ್ಕದಲ್ಲಿದ್ದವನನ್ನು ಕುರಿತು ಅನ್ ನದೀರನು “ ಮಹಮ್ಮದನ ಕಣ್ಣಿನಲ್ಲಿ ನನ್ನ ಸಾವಿನ ಛಾಯೆಯಿದೆ, ನನಗೆ ಭಯವಾಗುತ್ತದೆ” ಎಂದನು. ಅದಕ್ಕೆ ಆ ಮತ್ತೊಬ್ಬ ಖೈದಿಯು “ಅದು ಕೇವಲ ನಿನ್ನ ಭ್ರಮೆಯಷ್ಟೇ, ಹಾಗೇನೂ ಇಲ್ಲ” ಎಂದು ಸಮಾಧಾನ ಮಾಡುತ್ತಲೇ ಮುಸಾಬ್ ಎಂಬ ಮುಸಲ್ಮಾನನನ್ನು ಕುರಿತು, ತಮಗೆ ಕ್ಷಮೆ ದೊರೆಯುವಂತೆ ಮಾಡಲು ಕೇಳಿಕೊಂಡನು. ಅದಕ್ಕೆ ಪ್ರತಿಯಾಗಿ ಮುಸಾಬ್ ಎಂಬ ಮಹಮ್ಮದ್ ಕಡೆಯ ಮುಸ್ಲಿಮನು “ನೀನು ನಮ್ಮ ಮತವನ್ನು ನಿರಾಕರಿಸಿದ್ದಷ್ಟೇ ಅಲ್ಲ ಅದರ ಅನುಯಾಯಿಗಳನ್ನು ಈ ಮೊದಲು ಹಂಗಿಸಿದ್ದೀಯ ಕಾರಣ ನಿನಗೆ ಶಿಕ್ಷೆಯೇ ಗತಿ” ಎಂದನು. ನಿಮ್ಮುಸಿರು ಬಿಟ್ಟ ಅನ್ ನದೀರನು “ಒಂದೊಮ್ಮೆ ಕುರೇಶಿಗಳಾದ ನಾವು ನಿನ್ನನ್ನು ಸೆರೆ ಹಿಡಿದಿದ್ದರೆ ಹೀಗೆ ಶಿಕ್ಷೆ ಕೊಟ್ಟು ಕೊಲ್ಲುತ್ತಿರಲಿಲ್ಲ” ಎಂದು ನೆನಪಿಸಿದನು. ಅದಕ್ಕೆ ಉತ್ತರವಾಗಿ ಮುಸಾಬನು “ಅದೇನೇ ಇದ್ದರೂ ಈಗ ನಾನು ನಿನ್ನಂತೆ ಅಲ್ಲ, ನಾವೀಗ ಬೇರೆ ; ಇಸ್ಲಾಂ ನಮ್ಮ ಪೂರ್ವದ ಸಂಬಂಧಗಳನ್ನು ಕತ್ತರಿಸಿ ಹಾಕಿದೆ” ಎಂದು ಹೇಳಿದನು.

ಈ ಮಾತುಗಳನ್ನು ಕೇಳುತ್ತಿದ್ದ ಮಿಕ್ದಾದನಿಗೆ ಆತಂಕ ಒತ್ತರಿಸಿ ಬಂದಿತು. ಅಸಲಿಗೆ ಅನ್ ನದೀರ್ ಒಬ್ಬ ಪ್ರತಿಷ್ಠಿತ ವ್ಯಕ್ತಿಯಾಗಿದ್ದು ಅವನ ಬಿಡುಗಡೆ ಮಾಡಿದ್ದರೆ ಕುರೇಶಿಗಳಿಂದ ದಂಡದ ಕಾಣಿಕೆಯಾಗಿ ಸಾಕಷ್ಟು ಸಂಪತ್ತು ದೊರೆಯುವ ನಿರೀಕ್ಷೆಯಿತ್ತು . ಅವನೂ ಅದಕ್ಕಾಗಿ ಕಾಯುತ್ತಿದ್ದ. ಆದರೆ ಇಲ್ಲಿ ನೋಡಿದರೆ ಕೊಲ್ಲುವ ಮಾತುಕತೆ ನಡೆಯುತ್ತಿದೆ! ಮಿಕ್ದಾದನು ಆತಂಕದಿಂದ “ಇದು ನಾನು ಸೆರೆ ಹಿಡಿದ ಸೈನಿಕ ಎಂದು ಕೂಗುವಷ್ಟರಲ್ಲಿ ಮಹಮದನಿಂದ ಅನ್ ನದೀರನ “ಸರ್ ತನ್ ಸೆ ಜುದಾ– ಈತನ ತಲೆ ಕಡಿಯಿರಿ ಎಂಬ ಆಜ್ಞೆ ಬಂದೆ ಬಿಟ್ಟಿತು. ಅದನ್ನೆ ಕಾಯುತ್ತಿದ್ದ ಅಲಿ ಎಂಬ ಮಹಮ್ಮದನ ಅಳಿಯ ಒಂದೇ ಏಟಿಗೆ ಅವನ ರುಂಡವನ್ನು ಚೆಂಡಾಡಿದನು. ನೋಡುತ್ತಿದ್ದ ಮಹಮ್ಮದ್ “ಮಿಕ್ದಾದ ನಿಗೆ ಓ ದೇವನೇ ಇದಕ್ಕಿಂತಲೂ ಶ್ರೇಷ್ಠವಾದ ಬೇಟೆಯನ್ನು ಮುಂದಾದರೂ ಕೊಡು” ಎಂದು ಪ್ರಾರ್ಥಿಸಿದನು!ಮಿಕದಾದ ಮಿಕವಾದನು!

ಎರಡು ದಿನ ಕಳೆದ ನಂತರ, ಮದೀನಾ ಕಡೆಗಿನ ಅರ್ಧದಾರಿ ಕ್ರಮಿಸಿತ್ತು ಮಹಮ್ಮದನ ಸೈನ್ಯ. ಆ ಸಮಯಕ್ಕೆ ಓಕ್ಬಾ (ಉಕ್ಬಾ) ಎಂಬ ಮತ್ತೊಬ್ಬ ಮಹಮ್ಮದನ ಅಂತರಂಗದ ವೈರಿಯನ್ನು ಕೊಲ್ಲಲು ಆದೇಶ ಬಂದಿತು. ಅಷ್ಟು ಜನ ಸೆರೆಯಲ್ಲಿ ಇರುವಾಗ ತನಗೇಕೆ ಈ ಕಠಿಣ ಕ್ರಮ -ಶಿಕ್ಷೆ ಎಂದು ಪ್ರಲಾಪಿಸುತ್ತಾ ಕಾರಣ ಕೇಳಿ ಆಗ್ರಹಿಸಲು, ಅಲ್ಲಿಯೇ ಇದ್ದ ಮಹಮ್ಮದನು “ಏಕೆಂದರೆ ನೀನು ಅಲ್ಲಾಹುವಿನ ಮತ್ತು ಆತನ ಪ್ರವಾದಿಯ ವೈರಿ” ಎಂದುತ್ತರಿಸಿದನು. “ಓಹ್ ನನ್ನ ಪುಟ್ಟ ಮಗಳು, ನನ್ನ ಮಕ್ಕಳಿಗೆ ಯಾರು ಗತಿ ಮಹಮ್ಮದ್ ! ಅವರನ್ನು ಕಾಯುವವರಾರು?” ಎಂದು ಭಯವಿಹ್ವಲತೆಯಿಂದ ಕೂಗಿದ ಉಕ್ಪಾನಿಗೆ ಮಹಮ್ಮದ್ – “ಜಹನ್ನುಂ (ನರಕದ) ಬೆಂಕಿಯೇ ಅವರಿಗೆ.. ಗತಿ”– ಎ೦ದು ತಣ್ಣನೆಯ ಕ್ರೌರ್ಯದಿಂದ ಉತ್ತರಿಸಿದ. ತತ್ ಕ್ಷಣವೇ ಆ ಉಕ್ಬಾನನ್ನು ನೆಲಕ್ಕೆ ಕೆಡವಲಾಯಿತು. “ಎಲವೋ ದುಷ್ಟನೇ, ಎಲವೋ ಶೋಷಕ ನೀಚನೇ…ದೇವನ, ಪ್ರವಾದಿಯ, ಮತ್ತು ಪುಸ್ತಕವ ಕುರಿತು ಅಪನಂಬಿಕೆ ಇರುವ ಅವಿಶ್ವಾಸಿಯೇ ನಿನ್ನ ಈ ವಧೆಯಿಂದ ನನ್ನ ಕಣ್ಣುಗಳು ಪಾವನವಾದವು. ಅದಕ್ಕಾಗಿ ನಾನು ಅಲ್ಲಾಹುವಿಗೆ ಪ್ರಣಾಮಗಳನ್ನು ಅರ್ಪಿಸುತ್ತೇನೆ” ಎಂದು ಹೇಳುತ್ತಿದ್ದಂತೆ, ‘ಅಲ್ಲಾಹು ಅಕ್ಬರ್’ ಎಂಬ ಅರಬ್ಬೀ ಅರಚಾಟದ ನಡುವೆ ಅವನ ತಲೆಯನ್ನು ಕತ್ತರಿಸಲಾಯಿತು. ಈ ರೀತಿಯಾಗಿ ಬೌದ್ಧಿಕವಾಗಿ ಆತನಿಗಿಂತ ಉತ್ತಮ ಕವಿತೆ, ಆಯತುಗಳನ್ನು ರಚಿಸಲಾಗದ ಮಹಮ್ಮದ್ ಕವಿಗಳ ಜೀವವನ್ನು ಕೊಂದು ತನ್ನ ಸೇಡನ್ನು ತೀರಿಸಿಕೊಂಡ. ನಂತರ ಸುಮಾರು 50 ಜನ ಸೆರೆಯಾಳುಗಳನ್ನು ಇದೆ ರೀತಿಯಲ್ಲಿ ಒಬ್ಬೊಬ್ಬರನ್ನಾಗಿ ತಲೆ ಕಡಿಯುವ ಯೋಜನೆಯಲ್ಲಿದ್ದ. ಆದರೆ ತನ್ನ ಸ್ನೇಹಿತ ಮತ್ತು ಮಾವನಾಗಿದ್ದ ಅಬು ಬಕರನ ಮಾತಿಗೆ ಬೆಲೆ ಕೊಟ್ಟು ತನ್ನ ನಿರ್ಧಾರವನ್ನು ಬದಲಿಸಿಕೊಂಡ, ಒತ್ತೆಯಾಳುಗಳ ಸಂಬಂಧಿಗಳಿಂದ ಹಣ ಪಡೆದು ಸೆರೆಯಾಳುಗಳನ್ನು ಬಿಡುಗಡೆ ಮಾಡುವ ನಿರ್ಧಾರಕ್ಕೆ ಒಪ್ಪಿದ .

Reference:

  • Tafsir Ibn Kathir, on Quran 8:31
  • The life of Mohammad by William muiner p229-231
  • Al-Mubarakpuri, Safi-Ur-Rahman (2015). The Sealed Nectar (Ar-Raheeq Al-mMakhtum): Biography of the Noble prophet (Revised ed.). Darussalam Publications. p. 274

Similar Posts

Leave a Reply

Your email address will not be published. Required fields are marked *