ಗುಹಾಂತರದ ಕಥಾಂತರ; ಗುಡಿಸಿ ಗುಂಡಾಂತರ ಮಾಡಿದ ಕುರಾನ್.

ಗುಹೆಯ ಗೆಳೆಯರ ನಿದ್ರೆ, ಗಂಡಾಗುಂಡಿ ಕುರಾನ್ ಮುದ್ರೆ:

ಕಬ್ಜಾ ಮಾಡುವುದರಲ್ಲಿ ಕುರಾನ್ ಎತ್ತಿದ ಕೈ ಎಂದು ಈಗಾಗಲೇ ಹಲವು ಉದಾಹರಣೆಗಳನ್ನು ನೋಡಿಬಿಟ್ಟಿದ್ದೇವೆ. ಆದರೂ ಮೊಮಿನರು ತಮ್ಮ ಈ ಸೌದಿಯ ದೋ ನಂಬ್ರಿ ಮತವು ಕಬ್ಜಾ ಮಾಡಿದ ಕೌದಿ ಎಂಬುದನ್ನು ನಂಬುವುದಕ್ಕೆ ಸಿದ್ಧರೇ ಇಲ್ಲ. ಹಾಗಾಗಿ ಈಗ 2 ಅಥವಾ ಮೂರನೇ ಶತಮಾನದ ಕ್ರೈಸ್ತರ ಕಥೆಯೊಂದನ್ನು ಅಲ್ಲಾಹ ಮತ್ತು ಆತನ ಬಂದಾ ಮಹಮ್ಮದ್ ಹೇಗೆ ಕಬ್ಜಾ ಮಾಡಿ ಕುರಾನಿಗೆ ಸೇರಿಸಿದ್ದಾರೆ ಎಂಬುದನ್ನು ನೋಡೋಣ.

ಕುರಾನಿನಲ್ಲಿ ಈ ಕಥೆ 18ನೇ ಸುರಾಹ್ ಆದ ಅಲ್ ಕಹ್ಫ್ ( ಆ ಗುಹೆ ) ಎಂಬ ಅಧ್ಯಾಯದಲ್ಲಿ ಬರುತ್ತದೆ. ಮೂಲತಃ ಕ್ರಿಶ್ಚಿಯನ್ ಸಂಪ್ರದಾಯದ ಕಥೆಯಾದ ಇದನ್ನು ಕಬ್ಜಾ ಮಾಡಿದ ಮಹಮ್ಮದ್ ಅಲ್ಪ ಸ್ವಲ್ಪ ಬದಲಾಯಿಸಿ ಕುರಾನಿನಲ್ಲಿ ಸೇರಿಸಿದ್ದಾನೆ.

ಈ ಕಥೆಯು ಯಹೂದಿಗಳ ಸಂಪ್ರದಾಯದ ಭಾಗವಾಗಿಲ್ಲ ಎಂಬುದು ನಿಮಗೆ ತಿಳಿದಿರಲಿ ಮತ್ತು ನೆನಪಿರಲಿ. ಎಲ್ಲ ಕಡೆ ಹರಕುಮುರುಕು ಕಥೆ ಹೇಳುವ ಕುರಾನ್, ಇಲ್ಲಿ ಸ್ವಲ್ಪ ಮಟ್ಟಕ್ಕೆ ಕಥೆಯನ್ನು ಸುಸಂಬದ್ಧವಾಗಿ ಹೇಳಿದೆ ಎನಿಸುತ್ತದೆ. ಆದರೆ ಕಥೆಯನ್ನು ಗುಜರಿ ವಾಹನದ ರಿಪೇರಿಗೆ ಮಾತ್ರ ಒಳಪಡಿಸಿದೆ. ಮಹಮ್ಮದನಿಗೆ ಈ ಕಥೆಯನ್ನು ಹೇಳುವ “ದರ್ದು” ಅವಶ್ಯಕತೆ ಏಕೆ ಬಂತು ಎಂದು ತಿಳಿದರೆ ಈ ಕಬ್ಜಾದ ಕರಾಳ ರಹಸ್ಯ ಹೊರಗೆ ಬರುತ್ತದೆ.

ಮೆಕ್ಕಾದಲ್ಲಿ ಇತರರ (ಕುರೇಶಿಗಳ) ದೈವಗಳನ್ನು ಹೀನಾಮಾನವಾಗಿ ನಿಂದಿಸುತ್ತಾ ತನ್ನನ್ನೇ ಪ್ರವಾದಿಯಂದು ಒಪ್ಪಲು ಮಹಮ್ಮದ್ ಆಗ್ರಹಿಸಿದಾಗ ಅವರು ಸೊಪ್ಪು ಹಾಕಲಿಲ್ಲ ಎಂದು ನಮಗೆ ತಿಳಿದಿದೆ. ನಂತರ ಪ್ರವಾದಿಗಳಂತೆ ಪವಾಡವನ್ನಾದರೂ ಮಾಡಿತೋರಿಸು ಎಂದರೆ ಅದಕ್ಕೂ ಈತನಿಂದ ಸಾಧ್ಯವಾಗಲಿಲ್ಲ ಎಂಬುದೂ ನಮಗೆ ಗೊತ್ತಿದೆ,.. ಮೆಕ್ಕಾದಲ್ಲಿ ಬೇಳೆ ಬೇಯಲಿಲ್ಲವೆಂದು ಮದೀನಾಗೆ ಹೋದ ಮಹಮ್ಮದ್ ಅಲ್ಲಿ ಬಹುಸಂಖ್ಯಾತ ಯಹೂದಿಗಳನ್ನು ಒಲಿಸಿಕೊಳ್ಳಲು ಅವರಂತೆಯೇ ಒಂದಷ್ಟು ಸಂಪ್ರದಾಯ ಕಥೆ ಇತ್ಯಾದಿ ಮಾಡಿದನೆಂದು ನಾವು ಈಗಾಗಲೇ ತಿಳಿದಿದ್ದೇವೆ.

ಈತನ ಭೋಧನೆಯಲ್ಲಿ ಯಾವ ಹುರುಳಿಲ್ಲ ಎಂದು ಅರ್ಥವಾಗಲು ಅವರಿಗೆ ಹೆಚ್ಚು ಸಮಯ ಹಿಡಿಯುಲಿಲ್ಲ. ಇದರ ಮಧ್ಯೆ ತನ್ನ ಹಿಂಬಾಲಕರಿಗೆ ತನ್ನ ಕುರಿತಾಗಿ ವಿಶ್ವಾಸ ಹೋಗಬಾರದು ಎಂಬುದೊಂದು ಉದ್ದೇಶ. ಮೆಕ್ಕಾದವರನ್ನು ಶೋಷಣೆ ಮಾಡುವ ಕೋಮು ಎಂದು ಬಿಂಬಿಸುತ್ತಲೇ ತಾನು ಅವರನ್ನು ಪರೀಕ್ಷೆಯಲ್ಲಿ ಮಣಿಸಿ ಗೆದ್ದೆ ಎಂದು ತೋರಿಸುಕೊಳ್ಳುವ ಅನಿವಾರ್ಯತೆ ಹಾಗೂ ಯಹೂದಿಗಳು ಈತನ್ನನ್ನು ಪರೀಕ್ಷಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಎಂದು ತನ್ನ ಹಿಂಬಾಲಕರಿಗೂ, ಅಳಿದುಳಿದ ಮುಗ್ಧ ಯಹೂದಿಗಳಿಗೂ ತೋರಿಸಿಕೊಳ್ಳುವ ಹಪಹಪಿಗೆಂದು ಒಂದು ಸಂದರ್ಭವನ್ನು ಸೃಷ್ಟಿಸಿ ತಾನು ಮೊದಲೆಲ್ಲೋ ಕೇಳಿದ್ದ ಕಥೆಗಳನ್ನು ಎಳೆದು ತಂದು ತಾನು ಅಲ್ಲಾಹುವಿನ ಅಧಿಕೃತ ಪ್ರವಾದಿ ಎಂದು ವಿಶ್ವಾಸವನ್ನು ವ್ಯವಸ್ಥೆಗೊಳಿಸುವ ತಂತ್ರ ಇಲ್ಲಿದೆ.

ಕಥೆಯ ಮೂಲ “The Cave companions of Ephesus” ಎಂಬ ಕ್ರೈಸ್ತರ ಕಥೆ. ರೋಮನ್ ದೊರೆ ಡಿಯೋಷಿಯಸ್ ಎಂಬುವವನ ಕಾಲದಲ್ಲಿ (3 ನೇ ಶತಮಾನ) ಕ್ರೈಸ್ತರ ಮೇಲೆ ದಬ್ಬಾಳಿಕೆ ಶೋಷಣೆ ಆಗುತ್ತಿತ್ತಂತೆ. ರಾಜನು ಕ್ರೈಸ್ತ ಸಂಪ್ರದಾಯಕ್ಕೆ ನಿರ್ಬಂಧ ವಿಧಿಸಿ ಶಿಕ್ಷೆ ಕೊಡುವುದಾಗಿ ಆಜ್ಞೆ ಹೊರಡಿಸಿದನಂತೆ. ಆಗ ಆ ಪಟ್ಟಣದ ಏಳು ಜನ ಯುವಕರು ತಮ್ಮಲ್ಲಿದ್ದ ಎಲ್ಲವನ್ನೂ ದಾನಮಾಡಿ ಕ್ರೈಸ್ತರಂತೆ ಬದುಕಲಾಗದಿದ್ದರೆ ನಾವು ಇಲ್ಲಿರುವುದೇ ಇಲ್ಲ ಎಂದು ಗುಹೆಗೆ ಹೋಗಿ ದೀರ್ಘನಿದ್ರೆಗೆ ಜಾರಿದರಂತೆ.

ಅವರು ಎದ್ದಾಗ ಶತಮಾನಗಳೇ ಕಳೆದಿದ್ದರೂ ಕೂಡಾ ಕೇವಲ ಒಂದು ರಾತ್ರಿ ಮಲಗಿದ್ದಂತೆ ಅನಿಸಿತಂತೆ. ಕ್ರೈಸ್ತ ಮತವು ರೋಮನ್ನರ ರಾಷ್ಟ್ರಮತವಾಗಿ ಬದಲಾದ ವಿಷಯ ಅವರಿಗೆ ಗೊತ್ತಿರಲಿಲ್ಲವಂತೆ. ಹೊರಗೆ ಇಣುಕಿ ಊರಿಗೆ ಕೊಟ್ಟಿ ತರಲು ಒಟ್ಟವನ್ನು ಕಳಿಸಿದರೆ “ ಎಲ್ಲೆಲ್ಲಿ ನೋಡಲೀ ಶಿಲುಬೆಗಳೇ ತುಂಬಿವೆ., ಚರ್ಚಿನಲಿ, ಮನೆಗಳಲಿ, ಜನ ಜನಗಳ ಕೈಯ್ಯ ಕೊರಳಿನಲಿ… ಎಲ್ಲೆಲ್ಲಿ ನೋಡಲೀ….” ಎಂಬಿ ಪರಿಸ್ಥಿತಿ ಬದಲಾಗಿ ಅವನ ಕೈಲಿದ್ದ ನಾಣ್ಯಕ್ಕೆ ಕವಡೆಯ ಕಿಮ್ಮತ್ತೂ ಇರಲಿಲ್ಲವಂತೆ. ತಿರುಗಿ ಬಂದು ಅವನು ಉಳಿದವರಿಗೆ ಪರಿಸ್ಥಿತಿಯನ್ನು ವಿವರಿಸಿದಾಗ ಅವರೆಲ್ಲರೂ ಆನಂದ ತುಂದಿಲರಾದರಂತೆ ಮತ್ತು ಪರಮಪಿತನ ಸುತನನ್ನು ಹಾಗೂ ಪವಿತ್ರಾತ್ಮವನ್ನು ಸ್ತುತಿಸಿದರಂತೆ.

ನಂತರ ರಾಜನಾದ ಎರಡನೇ ಥಿಯೋಡಿಷಿಯಸ್ ಬಂದು ಇವರ ಗುಹೆಯನ್ನು ತೆಗೆದು ನೋಡಿದಾಗ ತಮ್ಮ ಪವಾಡ ಸದೃಶ ನಿದ್ರೆಯ ಕಥೆಯನ್ನು ಅವನಿಗೆ ನಿವೇದಿಸಿ ನೆಮ್ಮದಿಯಾಗಿ ಪ್ರಾಣ ಬಿಟ್ಟರಂತೆ. ಸರಿಸುಮಾರು 240 ವರ್ಷಗಳ ಕಾಲ ಅವರು ನಿದ್ರಿಸಿಯೇ ಬದುಕಿದ್ದರು ಎಂದು ಕ್ರೈಸ್ತ ಕಥೆಗಳು ಹೇಳುತ್ತವೆ. ನಂತರ ಅವರ ಪವಿತ್ರ ಮೂಳೆಗಳನ್ನು ಕಲ್ಲಿನ ಪೆಟ್ಟಿಗೆಯಲ್ಲಿಡಿಸಿ ಚರ್ಚಿಗೆ ಸಾಗಿಸಿದನಂತೆ. ಅದೀಗ ಫ್ರಾನ್ಸ್ ದೇಶದ ಯಾವುದೋ ಚರ್ಚಿನಲ್ಲಿದೆ ಎಂದು ಪ್ರತೀತಿ.

ಇಂತಿಪ್ಪ ಕಥೆಯನ್ನು ರೋಮನ್ ಬದಲು ಕುರೇಶಿಗಳು, ಕ್ರೈಸ್ತರ ಬದಲು ಮುಸ್ಲಿಮರು ಎಂದು ಅಳವಡಿಸಿದ ಮಹಮ್ಮದ್ ತಾನು ಕೇಳಿದ ಕಥೆಯನ್ನು ಒಂದಷ್ಟು ಸವಕಲು ಮಾಹಿತಿಯೊಂದಿಗೆ ರಿಪೇರಿ ಮಾಡಿದ್ದಾನೆ. ಮಾಡುವುದಕ್ಕೆ ಪೂರ್ವಭಾವಿಯಾಗಿ ಪ್ರಸಂಗವೊಂದನ್ನು ಸೃಷ್ಟಿಸಿದ್ದಾನೆ.

  • ಕುರೇಶಿಗಳು ಮಹಮ್ಮದನ ಪ್ರವಾದಿತನವನ್ನು ಪರೀಕ್ಷಿಸಲು ಒಬ್ಬ ರಾಯಭಾರಿಯನ್ನುಕಳಿಸಿದರಂತೆ.
  • ಆ ರಾಯಭಾರಿಯು ಮದೀನಾದ ರಬ್ಬಿ (ಯಹೂದಿ ಪಂಥ ಪ್ರಮುಖ ಬೋಧಕರು) ಗಳನ್ನುಭೇಟಿಯಾಗಿ ಮಹಮ್ಮದನ ಪ್ರವಾದಿತನ ಪರೀಕ್ಷಿಸಲು ಮಾರ್ಗವನ್ನು ಹೇಳಿ ಎಂದನಂತೆ.
  • ಅವರು ನಾವು ಹೇಳುವ ಮೂರು ಪ್ರಶ್ನೆಗಳಿಗೆ ಅವನಿಂದ ಉತ್ತರವನ್ನು ಆಗ್ರಹಿಸು.ಸರಿಯುತ್ತರ ಹೇಳಿದರೆ ಆತನು ಪಕ್ಕಾ ಪ್ರವಾದಿ ಎಂದು ಸ್ವೀಕರಿಸು. ಇಲ್ಲವಾದರೆ ಠಕ್ಕನಾದಲಫಂಗ ಎಂದು ನಿರ್ಧರಿಸು ಎಂಬುವಾಗಿ ಸಂದೇಶ ಕೊಟ್ಟರಂತೆ.

● ಆ ಪ್ರಕಾರವಾಗಿ

  • ಗುಹೆಯಲ್ಲಿ ಮಲಗಿದ ಗೆಳೆಯರ ಗುಂಪಿನ ಕಥೆ ಹೇಳು (ಕುರಾನ್ 18:9 – 26 )
  • ಪೂರ್ವದಿಂದ ಪಶ್ಚಿಮದವರೆಗೆ ಸಂಚರಿಸಿದ ಪರಾಕ್ರಮಿಯ ಕಥೆ ಹೇಳು ( 18:83-98 )
  • ಸ್ಪಿರಿಟ್ – ರೂಹ್ – ಆತ್ಮ (?) ಎಂದರೇನು ? ಅದರ ಸ್ವರೂಪವೇನು ? ( 17: 85)ಎಂದು ಕೇಳಬೇಕು. ಮಹಮ್ಮದ್ ಸರಿಯುತ್ತರ ಹೇಳಬೇಕು ಎಂಬುದು ನಿಯಮ.. [ಇದುಬಹುಶಃ ಮಹಮ್ಮದ್ ಸೃಷ್ಟಿಸಿದ ಕಪೋಲ ಕಲ್ಪಿತ ಎಂಬುದು ನಿಮಗೇ ವೇದ್ಯವಾಗುತ್ತದೆ.]

ಸರಿ, ಕುರೇಶಿಗಳ ಪ್ರತಿನಿಧಿಯಾಗಿ ಆ ಪರೀಕ್ಷಕ ದೂತನು ರಬ್ಬಿಗಳಿಂದ ಕುಮ್ಮಕ್ಕು ಪಡೆದು ಮಹಮ್ಮದನ ಬಳಿ ಬಂದು ಪಾಟೀ ಸವಾಲ್ ಹಾಕಿದನಂತೆ. ವಹರೆ ಮೇರೆ ಮಹಮ್ಮದ್ವಹರೆ ಮೇರಾ ಉಸ್ತಾದ್ರಬ್ಬಿಯ ಪ್ರಶ್ನೆಗೆ ಉತ್ತರ ಹೇಳಿದ್ರೆನಾನು ಮಾಡ್ತೇನ್ ನಮಾಜ್ಬಾಜಿ ಕಟ್ಟಿ ನೋಡು ಬಾರಾ ಮೀಸೇ ಮಾವ ಎಂದು ರಬ್ಬಿಗಳ ಮೊದಲ ಪ್ರಶ್ನೆ ಕೇಳಿದನಂತೆ.

ಗುಹೆಯ ಗೆಳೆಯರ ಕಥೆಯೇನು ? ಮಹಮ್ಮದ್ ಹೇಳಿದ: ಅಲ್ಲಾವಿಗೆ ಎಲ್ಲಾ ಗೊತ್ತು , ಅಲ್ಲಾನನ್ನು ಆರಾಧಿಸುವವರನ್ನು ದ್ವೇಷಿಸುವ ಇತರ ದೇವಾರಾಧಕರಿಂದ ದೂರವಿರಿ. ಅವರನ್ನು ಅಲ್ಲಾ ಶಿಕ್ಷಿಸುವನು … ಇತ್ಯಾದಿಗಳ ಬಳಿಕ ಅವಿಶ್ವಾಸಿಗಳಿಂದ ದೂರವಿರಲು, ಅಲ್ಲಾಹು ಒಬ್ಬನೇ ದೇವರೆಂದ ಯುವಕರು ಗುಹೆಗೆ ಹೋದರು [?ಎಲ್ಲಿತ್ತು , ವಿವರಗಳಿಲ್ಲ]. ಎಷ್ಟು ಜನ ಹೋದರು ಎಂಬುದಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಮೂವರು ಮತ್ತೊಂದು ನಾಯಿ, ನಾಲ್ಕು ಜನ ಐದನೇಯದು ನಾಯಿ, ಐದು ಜನ ಆರನೆಯದೇ ನಾಯಿ, ಆರು ಜನ ಮತ್ತು ಏಳನೆಯದಾಗಿ ನಾಯಿ, ಎಂದೆಲ್ಲಾ ಉಂಟು. ನಿಜವಾದ ಸಂಖ್ಯೆ ಅಲ್ಲಾಹುವಿಗೆ ಮಾತ್ರ ಗೊತ್ತಿದೆ.

ಓ ವಿಶ್ವಾಸಿಗಳೇ.. ಅವರು ಒಳಗೆ ಮಲಗಿರುವಾಗ (ಕುರೇಶಿಗಳು ? ) ಬಂಡೆಯನ್ನೆಳೆದು ಬಾಗಿಲು ಮುಚ್ಚಿದರು. ಅದನ್ನು ಹೊರಗಿನಿಂದ ನಾಯಿ ತನ್ನ ಕಾಲು ಚಾಚಿ ಮಲಗಿಕೊಂಡು ಕಾಯುತ್ತಿತ್ತು. ನಾಯಿಯು ಹೊರಗೇ ಇದ್ದುದರಿಂದ ದೇವದೂತರಿಗೆ ಗುಹೆಯ ಒಳಗೆ ಪ್ರವೇಶಿಸಲು ಯಾವ ಅಡೆತಡೆಗಳಿರಲಿಲ್ಲ. ನಾಯಿಯು ನಿಷೇಧಿತ ಪ್ರಾಣಿಯಾದಾಗ್ಯೂ ಅದಕ್ಕೂ ಸಹಾ ಫರಿಷ್ತೇ ಗಳ ಆಶೀರ್ವಾದವು ಸಿಕ್ಕಿತು. ಹೂವಿನೊಂದಿಗೆ ನಾರು ಸಹಾ ಸ್ವರ್ಗಕ್ಕೇರಿದಂತೆ ನಾಯಿಯೂ ಆ ಯುವಕರ ಜತೆ ಸೇರಿ ಹೆಸರುವಾಸಿಯಾಯಿತಂತೆ (ಇಬ್ನೆ ಕತೀರ್ ).

ಸೂರ್ಯನು ಆ ಗುಹೆಯ ಬಲದಿಂದ ಎಡಕ್ಕೇರಿ ಮುಳುಗುತಿದ್ದನು, ಅದು ಅಲ್ಲಾಹುವಿನ ಮಹಿಮೆಯೇ ಆಗಿತ್ತು.. ಅವರು ದೀರ್ಘವಾದ ನಿದ್ರೆಯನ್ನು ಮಾಡಿದರು. ಅದು ಮುನ್ನೂರು ವರ್ಷಗಳಿರಬಹುದು ಅಥವಾ 309 ವರ್ಷಗಳಿರಬಹುದು. ಅವರು ಮಲಗಿರುವಾಗ ಭೂಮಿಯು ಅವರನ್ನು ನುಂಗದಿರಲಿ ಎಂದು ನಾವು ಅವರನ್ನು (ದೋಸೆಗಳಂತೆ) ಆಗಾಗ ಮಗುಚಿ ಹಾಕುತ್ತಿದ್ದೆವು. ಅವರು ನಂತರ ಎದ್ದರು. ತಮ್ಮ ಬಳಿ ಇದ್ದ ಬೆಳ್ಳಿಕಾಸನ್ನು ತೆಗೆದುಕೊಂಡು ಹೊರಗಿನ ಪ್ರಪಂಚಕ್ಕೆ ರೊಟ್ಟಿಯನ್ನು ತರಲು ಅವರಲ್ಲಿ ಒಬ್ಬನು ಹೋದಾಗ ಬೇರೆ ಯಾರಿಗೂ ಇವರ ರಹಸ್ಯ ತಿಳಿಯದಂತೆ ಎಚ್ಚರ ವಹಿಸಿದನು [ ಆನಂತರ ಏನಾಯ್ತು ಎಂದು ಕುರಾನ್ ಹೇಳುವುದಿಲ್ಲ ]

ಇಂತಿಪ್ಪ ಈ ಕಥೆಯಲ್ಲಿ ಹಲವಾರು ಅಪಸಭ್ಯಗಳು ಮತ್ತು ಅಸಂಬದ್ಧತೆಗಳು ಸೇರಿಕೊಂಡಿವೆ ಮೊದಲನೆಯದಾಗಿ ಕುರಾನ್ ಅಲ್ಲಾನ ಪುಸ್ತಕ ಅಲ್ಲಾಹು ಸ್ವತಂತ್ರವಾಗಿ ನುಡಿದಂಥ ಉಕ್ತಿಗಳು ಇದರಲ್ಲಿ ಹಲವಾರು ಸಂದಿಗ್ಧ ಮಾತುಗಳು ಸೇರಿಕೊಂಡಿವೆ ಉದಾಹರಣೆಗೆ ಆ ಗುಹೆಯಲ್ಲಿ ಮಲಗಿದ್ದವರು ಎಷ್ಟು ಎಂದು ಅಲ್ಲಾಹೂ ಹೇಳಿಯೇ ಇಲ್ಲ. ಮೂರು ನಾಲ್ಕು ಐದು ಎಷ್ಟು ಇರಬಹುದು ಎಂಬುದು ಅಲ್ಲಾಹುವಿಗೆ ಮಾತ್ರ ಗೊತ್ತು ಎಂದು ಅಲ್ಲಾಹು ಹೇಳಿಬಿಟ್ಟಿದ್ದಾನೆ!

ಎರಡನೆಯದಾಗಿ, ಎಲ್ಲವನ್ನು ಕಾಯುವ ಅಲ್ಲಾಹುವಿಗೆ ಮಲಗಿದವರನ್ನ ಭೂಮಿ ನುಂಗದಿರಲಿ ಎಂದು ವ್ಯವಸ್ಥೆ ಮಾಡುವ ಶಕ್ತಿ ಇರಲಿಲ್ಲವೇ ಅವರುಗಳನ್ನ ದೋಸೆಯಂತೆ ಮಗುಚಿ ಹಾಕಬೇಕಾಗಿತ್ತೇ ? ಯೋಚಿಸಬೇಕಾದ ವಿಷಯ.

ಮೂರನೆಯದಾಗಿ ಮೂಲ ಕ್ರಿಶ್ಚಿಯನ್ ಕಥೆಯಲ್ಲಿ ನಾಯಿಯ ಉಲ್ಲೇಖವಿಲ್ಲ. ನಾಯಿ ಎಂಬುದು ಇಸ್ಲಾಮಿನಲ್ಲಿ ನಿಷಿದ್ಧವಾದ ಪ್ರಾಣಿ. ಆದರೆ ಇಲ್ಲಿ ಅದಕ್ಕೆ ತನ್ನ ಭಕ್ತರನ್ನ ಕಾಯುವ ಕೆಲಸವನ್ನು ಅಲ್ಲಾಹು ನೀಡಿದ್ದಾನೆ. ಜೊತೆಗೆ ನಾಯಿಯನ್ನು ಕಂಡರೆ ಹೊಡೆದು ಬಡಿದು ಕೊಲ್ಲುವುದಕ್ಕೂ ಇಸ್ಲಾಮಿನಲ್ಲಿ ಆಜ್ಞೆ ಇದೆ. ಈ ವಿರೋಧಾಭಾಸಕ್ಕೆ ಏನೆಂದು ಹೇಳುವುದು ? ಒಟ್ಟಿನಲ್ಲಿ ಹೇಳುವುದಾದರೆ ಕ್ರೈಸ್ತರ ಕಥೆ ಹೈಜಾಕ್ ಆಗಿ ಮಜಾಕ್ ಬನ್ ಗಯಾ.

Ex-muslims of karnataka

Similar Posts

Leave a Reply

Your email address will not be published. Required fields are marked *