ಕುರಾನ್ ಹುಟ್ಟಿದ ಕಥೆ; ಭಾಗ 2

ಜನಪ್ರಿಯ ಇಸ್ಲಾಮೀ ಕಥಾನಕ ಮತ್ತು ಗರ್ವದಿಂದ ಹೇಳಿಕೊಳ್ಳುವ ಮಾತೆಂದರೆ: “ಕುರಾನ್ ಒಂದು ದೈವೀ ಪವಾಡ. ಕುರಾನಿನಂಥ ಪರಿಪೂರ್ಣವಾದ ಜೀವನ ಮಾರ್ಗದರ್ಶಕ ಪುಸ್ತಕ ಜಗತ್ತಿನಲ್ಲಿಯೇ ಇಲ್ಲ. ಕುರಾನ್ ನೇರವಾಗಿ ಅಲ್ಲಾಹುವಿನಿಂದ ಮಹಮ್ಮದ್ ಪ್ರವಾದಿಗಳಿಗೆ ಕಳಿಸಲ್ಪಟ್ಟ (ಅವತೀರ್ಣಗೊಂಡ) ಸಂದೇಶ ಮತ್ತು ಬೋಧನೆಗಳನ್ನು ಕ್ರೋಢೀಕರಿಸಿದ ಪುಸ್ತಕ. ಅದು ಅಂದಿನಿಂದ ಇಂದಿನವರೆಗೆ ಒಂದೇ ಒಂದು ಚುಕ್ಕೆಯೂ ಬದಲಾಗದೆ ಹಾಗೆಯೇ ಉಳಿದು ಬಂದಿರುವ ಮಹಿಮಾ ಪೂರ್ಣವಾದ ಪುಸ್ತಕ ; ಹಾಗಾಗಿಯೇ ಅದು ಬಹಳ ಪವಿತ್ರವಾದದ್ದು. ಎಂದಿಗೂ ಬದಲಾಗದಂಥ ಕುಂದಿಲ್ಲದ ಈ ಪುಸ್ತಕದ ರಕ್ಷಣೆಯ ಹೊಣೆಯನ್ನು ನೇರವಾಗಿ ಅಲ್ಲಾಹುವೇ ಹೊತ್ತಿರುತ್ತಾನೆ. ಅವನ ರಕ್ಷಣೆಯಲ್ಲಿ ಕುರಾನ್ ಯಾವುದೇ ರೀತಿಯಲ್ಲೂ ಬದಲಾಗುವುದು ಸಾಧ್ಯವೇ ಇಲ್ಲ!”

ಈ ಮೊದಲೆ ಹೇಳಿದಂತೆ Too Good To Be True ಎಂಬ ಇಂಗ್ಲೀಷಿನ ನಾಣ್ಣುಡಿಯನ್ನು ಇಲ್ಲಿ ಸ್ಮರಿಸಿ ನಮ್ಮ ವಿಶ್ಲೇಷಣೆಯನ್ನು ಮುಂದುವರಿಸೋಣ.

ಯಾವುದೇ ಒಂದು ಲಿಖಿತ ದಾಖಲೆ ನಮಗೆ ಸಿಕ್ಕಿದೆ ಎಂದುಕೊಳ್ಳೋಣ. ಅದು ಎಷ್ಟೋ ವರ್ಷಗಳ ಹಳೆಯ ದಾಖಲೆ ಅಥವಾ ಲೇಖನ ಆಗಿರಬಹುದು. ಅದರ ಮೂಲಸ್ವರೂಪವನ್ನು ಕುರಿತಾಗಿ ನಮಗೆ ಹಲವು ಪ್ರಶ್ನೆಗಳು ಏಳುತ್ತವೆ.

  • ಇದು ಎಷ್ಟು ಹಳೆಯದು? ವರ್ಷಗಳಷ್ಟು ?
  • ತನ್ನ ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡಿದೆಯೇ?
  • ಉಳಿಸಿಕೊಂಡಿದ್ದರೆ ಅದಕ್ಕೆ ಆಧಾರವೇನು? ನಂಬಲರ್ಹ ಸಾಕ್ಷಿಗಳೇನು ?
  • ಬದಲಾಗಿದ್ದಿರಬಹುದಾದ ಸಾಧ್ಯತೆಗಳಿವೆಯೇ ?
  • ಬದಲಾಗಿದ್ದರೆ ಎಷ್ಟು ಮಟ್ಟಿಗೆ ಆಗಿರಬಹುದು
    • ಅಕ್ಷರಗಳೋ ? ಪದಗಳೋ ? ವಾಕ್ಯಗಳೋ ? ವಾಕ್ಯವೃಂದವೋ ? ಇಡೀ ಪುಟಗಟ್ಟಳೆ ಬದಲಾವಣೆಯೇ? ಅಧ್ಯಾಯವೇ ? ಅಥವಾ ಇದೇ ದಾಖಲೆಯನ್ನೇ ಮೂಲಕ್ಕೆ ಬದಲಾಗಿ ಮರುಸೃಷ್ಟಿಸಿ ಅಧಿಕೃತತೆಯನ್ನು ನೀಡಲು ಮೂಲದ ಹೆಸರು ಮತ್ತು ಮಹಿಮೆಯನ್ನು ಆರೋಪಿಸಲಾಗಿದೆಯೇ ?
    • ಈ ರೀತಿಯ ಬದಲಾವಣೆಗಳಿಗೆ ಸಾಕ್ಷಿ ಆಧಾರಗಳು ಇವೆಯೇ ?
    • ಈ ಬಗೆಯ ಸಾಕ್ಷಿ ಆಧಾರಗಳು ನಂಬಲರ್ಹವಾದ ಸಾಧಿಸಿ ತೋರಿಸಬಹುದಾದ ಸಾಕ್ಷಿಗಳೇ?
    • ಈ ದಾವೆಗಳಲ್ಲಿ ಅಂತರ್ವಿರೋಧ ಇದ್ದಿರಬಹುದೇ?

ಎಂಬೆಲ್ಲಾ ಸತ್ಯಶೋಧಕವಾದ ಚಿಕಿತ್ಸಕ ಪ್ರಶ್ನೆಗಳನ್ನು ಕೇಳುತ್ತಾ ಅನ್ವೇಷಣೆ ಮತ್ತು ಸಂಶೋಧನೆಯನ್ನು ಕೈಗೊಂಡರೆ ಉತ್ತರ ದೊರೆತಂತೆಲ್ಲಾ ವಾಸ್ತವ ಚಿತ್ರಣ ಏನೆಂಬುದು ಸ್ಪಷ್ಟವಾಗುತ್ತಾ ಹೋಗುತ್ತದೆ.

ಕುರಾನ್ ನ “”ಕುಂದೇ ಇಲ್ಲದ ಕಿತಾಬ್ “ ಎಂಬ ಮೊಮಿನರ ದಾವೆಗೆ ಈ ಪ್ರಶ್ನೆಗಳನ್ನು ಹಾಕಿದಾಗ ಸಿಗುವ ಉತ್ತರ ಅವರಿಗೆ ಆಶಾದಾಯಕವಾಗಿ ಇಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಕುರಾನ್ ಎಂಬುದು ಅಲ್ಲಾಹುವಿನಿಂದ ಪ್ರವಾದಿಗೆ ಅವತೀರ್ಣಗೊಂಡರೂ ಅಪೂರ್ಣವಾದ ಪುಸ್ತಕ ಎಂಬುದಷ್ಟೇ ಅಲ್ಲ; ತನ್ನದೇ ವಾಗ್ದಾನ ಮತ್ತು ಉದ್ಘೋಷಣೆಯನ್ನು ಮುರಿದು ಅಲ್ಲಾಹು ಅನುತ್ತೀರ್ಣವಾಗಿರುವ ಚಿತ್ರಣವನ್ನು ಸಹಾ ನೀಡುತ್ತದೆ.

DISPROVING ISLAM- ನ ಕುರಾನಿನ ಅಧಿಕೃತತೆ ಕುರಿತಾದ ಮೊದಲನೇ ಅಧ್ಯಾಯದ ಭಾಗ, ಡೇವಿಡ್ ವುಡ್ ಅವರ ಲೇಖನ ಮತ್ತು wiki islam ಎಂಬ ಜಾಲತಾಣದಲ್ಲಿ ದಾಖಲಿಸಿರುವ ಮಾಹಿತಿಯ ಆಧಾರದ ಮೇಲೆ ಕುರಾನಿನಲ್ಲಿ ಕಂಡು ಬರುವ ಕುಂದುಗಳ ಪೋಸ್ಟ್ ಮಾರ್ಟಂ ಮಾಡಲಾಗಿದೆ. ಓದುಗರ ಅನುಕೂಲಕ್ಕಾಗಿ ಲೇಖನವನ್ನು ಸರಳೀಕರಿಸಿ ಸಂರಚನೆಯಲ್ಲಿ ವಿಭಿನ್ನ ಶೈಲಿಯನ್ನು ಇರಿಸಿಕೊಂಡು ಬರೆಯಲಾಗಿದೆ.

ಮೊದಲಿಗೆ,

ಕುರಾನಿನ ಪವಿತ್ರತೆ ಮತ್ತು ಅಧಿಕೃತತೆಯನ್ನು ಕುರಿತಂತೆ ಅಲ್ಲಾಹು ಮಾಡಿದ ಪ್ರಮಾಣಗಳೇನು ಎಂದು ನೋಡೋಣ.ಕುರಾನ್ – 43: (2,3,4) ಮತ್ತು 85:22, 15.9 ಪ್ರಕಾರ ಅಲ್ಲಾಹುವಿನ ಬಳಿ ಮೂಲಕುರಾನ್ ನ ಬಂಗಾರದ ಹಲಗೆಗಳಲ್ಲಿ ಕೆತ್ತಿದ ಕುರಾನ್ ಇದೆ.ಅದನ್ನು ಲಾಹುಲ್ ಮಹ್ಫುಝ್-Lawh al-Mahfuz(اللوح المحفوظ) ಎಂದು ಕರೆಯಲಾಗಿದೆ. ಅದನ್ನು ದೇವದೂತರಲ್ಲದೆ ಯಾರೂ ಸ್ಪರ್ಷಿಸಲು ಸಾಧ್ಯವಿಲ್ಲ. ಅದರಲ್ಲಿ ಯಾವ ರೀತಿಯ ಬದಲಾವಣೆಯೂ ಬರಲು ಸಾಧ್ಯವಿಲ್ಲ. ಇಂತಹ ಕುರಾನಿನ ಸಂದೇಶಗಳನ್ನು ಅಲ್ಲಾಹು ಅರೇಬಿಕ್ ಭಾಷೆಯಲ್ಲಿಯೇ ಕಳಿಸಿರುತ್ತಾನೆ. ತನ್ನ ಸಂದೇಶಗಳಲ್ಲಿ ಯಾವ ಕುಂದೂ ನುಸುಳದಂತೆ ಅಲ್ಲಾಹು ಸ್ವತಃ ಜವಾಬ್ದಾರಿ ವಹಿಸಿಕೊಂಡು ಕಾಯ್ದುಕೊಂಡಿದ್ದಾನೆ.

ಹಾಗಾಗಿ ಈ ಕುರಾನ್ ಮೇಲೆ ಹೇಗಿದೆಯೋ ಹಾಗೆಯೇ ಈ ಭೂಮಿಯ ಮೇಲೆಯೂ ಇದ್ದೇ ಇರುತ್ತದೆ – ಎಂಬುದು ಮುಸ್ಲಿಮರ ನಂಬಿಕೆ…ಕಾರಣ ಅಲ್ಲಾಹು ಸ್ವತಃ ಕುರಾನಿನಲ್ಲಿ ಹೇಳಿದ್ದಾನೆ!!

ಆದರೆ ಮೊಮಿನರ ಮೂಲದಿಂದಲೇ ಕುರಾನಿನ ಇತಿಹಾಸದ ಸ್ಥಿತಿಗತಿಗಳೇನು ಎಂಬುದನ್ನು ನೋಡೋಣ;

ಕ್ರಿ.ಶ. 610ರಲ್ಲಿ ಮಹಮ್ಮದನ 40 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಅಲ್ಲಾಹುವಿನಿಂದ ಜೆಬ್ರೈಲ್ ಎಂಬ ದೇವದೂತನ ಮೂಲಕ ಕುರಾನಿನ ಸಂದೇಶಗಳು ಬರಲಾರಂಭಿಸಿದ್ದವು. ಹೀಗೆ ಬಂದ ಸಂದೇಶಗಳನ್ನು ಮೊದ ಮೊದಲಿಗೆ ಬರೆದಿಟ್ಟವರಾರು ಎಂಬುದರ ಬಗ್ಗೆ ದಾಖಲೆಗಳಿಲ್ಲ. ಬಹಳಷ್ಟು ದಿನಗಳವರೆಗೆ ಮಹಮ್ಮದನಿಗೆ ತನ್ನ ಹೆಂಡತಿ ಖದೀಜಾ ಮತ್ತು ಚಿಕ್ಕಪ್ಪನ ಮಗ ಅಲಿಯನ್ನು ಹೊರತು ಪಡಿಸಿ ಬೇರೆ ಅನುಯಾಯಿಗಳು ಇರಲಿಲ್ಲ. 12 ವರ್ಷಗಳವರೆಗೆ ಮಕ್ಕಾದಲ್ಲಿ ಇದ್ದಾಗ ಮಹಮ್ಮದನ ಒಟ್ಟು ಅನುಯಾಯಿಗಳ ಸಂಖ್ಯೆ ನೂರನ್ನು ದಾಟಿರಲಿಲ್ಲ. ಕಾಲಕ್ರಮೇಣ ಮಹಮ್ಮದನಿಗೆ ಬರುತ್ತಿದ್ದ ಈ ಆಯತುಗಳನ್ನು;

  • ಬಾಯಿ ಪಾಠದ ಮೂಲಕ
  • ತೆಳ್ಳನೆಯ ಕಲ್ಲು, ಚರ್ಮದ ತುಂಡು, ಮೂಳೆ, ಕಾಗದ, ಬಟ್ಟೆ, ಪಾಪೈರಸ್ ಎಂಬ ಎಲೆ, ಮರದ ತುಂಡು, ಹಲಗೆ ಹೀಗೆ ಏನು ಸಿಕ್ಕಿದರೆ ಅದರ ಮೇಲೆ ಬರೆದಿಡುತ್ತಿದ್ದರಂತೆ
  • ಕೆಲವು ಆಯ್ದ ವ್ಯಕ್ತಿಗಳಿಗೆ (ಸಾಹಬ ) ಕುರಾನಿನ ಆಯತುಗಳನ್ನು ಕುಂದಿಲ್ಲದಂತೆ ಬಾಯಿಪಾಠ ಮಾಡಿಸುತ್ತಿದ್ದರಂತೆ. ಇವರನ್ನು ಕುರ್ರಾ/ಕಾರಿ ಎಂದು ಕರೆಯುತ್ತಾರೆ.
  • ಮತ್ತೆ ಕೆಲವರು ಸ್ವತಃ ಸ್ಫೂರ್ತಿಯಿಂದ ಕುರಾನನ್ನು ತಪ್ಪಿಲ್ಲದಂತೆ ಪಠಿಸುವುದನ್ನು ಕಲಿತು ಮಹಮ್ಮದನಿಂದ ಪ್ರಶಂಸೆ ಪಡೆದಿದ್ದರಂತೆ.
  • ಆಯೇಷಾ ಎಂಬ ಮಹಮ್ಮದನ ಬಾಲಿಕಾವಧು ಸಹಾ ಬಹಳಷ್ಟು ಕುರಾನಿನ ಆಯತೆಗಳನ್ನು ಕಲಿತಿದ್ದಳಂತೆ.

ಇಂತಿಪ್ಪ ಕುರಾನಿನ ಆಯತೆಗಳು ಮಹಮ್ಮದನ ಕೊನೆಯ ವರೆಗೂ ಬರುತ್ತಲೇ ಇದ್ದವು ಕ್ರಿ.ಶ. 632 ರಲ್ಲಿ ಮಹಮ್ಮದನ ಮರಣದ ನಂತರ ನಿಂತು ಹೋದವು. ಬಹಳಷ್ಟು ಬಾರಿ ಮಹಮ್ಮದನಿಗೇ ಈ ಕುರಾನಿನ ಆಯತೆಗಳು ಮರೆತು ಹೋಗುತ್ತಿದ್ದವು. ಆಗೆಲ್ಲಾ ಕುರ್ರಾಗಳು ಆತನಿಗೆ ನೆನಪು ಮಾಡಿಕೊಡುತ್ತಿದ್ದರು. ಅಂತಹ ಸಂದರ್ಭದಲ್ಲಿ ಮಹಮ್ಮದನು “ನಾನು ಸುಮ್ಮನೇ ಮರೆಯಲಿಲ್ಲ; ಅಲ್ಲಾಹುವೇ ಮರೆಯುವಂತೆ ಮಾಡಿದನು” ಎಂದು ಹೇಳಿಬಿಡುತ್ತಿದ್ದನು.*1

ಮಹಮ್ಮದ್ ಸಾಯುವಾಗ ಇದೇ ಕುರಾನ್ ತುಂಡು – ಖಂಡಗಳಲ್ಲಿ ಹರಡಿ ಹಂಚಿ ಹೋಗಿದ್ದಿತೇ ವಿನಃ ಒಂದು ಪುಸ್ತಕವಾಗಿ ಸಂಪಾದಿತವಾಗಿ ಮುಸ್ಲಿಮರಿಗೆ ಸಿಕ್ಕಿರಲಿಲ್ಲ.

ಇದರಿಂದ ಹರಡುತ್ತಿದ್ದ ಇಸ್ಲಾಮಿನ ರಾಜ್ಯದಲ್ಲಿ ಎರಡು ತೊಂದರೆಗಳು ಪ್ರಮುಖವಾಗಿ ಉದ್ಭವಿಸಿದವು;

  1. ಎಲ್ಲಿಯೂ ಎಲ್ಲರೂ ಉಪಯೋಗಿಸಬಲ್ಲ ಏಕರೂಪದ ಕುರಾನ್ ಒಂದೇ ಕಡೆ (ಏಕತ್ರ ) ಲಭ್ಯವಿರಲಿಲ್ಲ.
  2. ಒಂದೊಂದು ಪ್ರದೇಶದಲ್ಲಿ ಒಂದೊಂದು ವಿಧಾನ ಮತ್ತು ಕ್ರಮದಲ್ಲಿ ಕುರಾನ್ ಪಠಿಸುತ್ತಿದ್ದರು.

ವೈವಿಧ್ಯತೆ ತರುವ ಭಿನ್ನಾಭಿಪ್ರಾಯ ಮತ್ತು ತಮ್ಮ ವಿಧಾನವೇ ಸರಿ ಎಂಬ ಮೇಲಾಟದ ಜಗಳಗಳಿಗೂ ಇದು ದಾರಿ ಮಾಡಿಕೊಟ್ಟಿತ್ತು. ತನ್ನ ಬಳಿಯಿರುವ ಎಂದಿಗೂ ಬದಲಾಗದ ಕುರಾನನ್ನು ಭೂಮಿಯಲ್ಲಿ ಏಕರೂಪದಿಂದ ಉಳಿಸಲು ಅಲ್ಲಾಹು ಮತ್ತು ಮಹಮ್ಮದ್ ಸರಿಯಾದ ಯೋಜನೆ ರೂಪಿಸಿರಲಿಲ್ಲ ಎಂಬದು ಇಲ್ಲಿ ಸ್ಪಷ್ಟ!

ಇದರ ಪರಿಣಾಮ ಇನ್ನೂ ಕೆಟ್ಟದಾಗುವುದರಲ್ಲಿತ್ತು. ಒಮ್ಮೆ ಉಮರ್ ಎಂಬ ಎರಡನೇ ಖಲೀಫನಿಗೆ ಕುರಾನಿನ ಆಯತೆಯೊಂದು ನೆನಪಿಗೆ ಬರಲಿಲ್ಲ. ಕೇಳಲೆಂದು ಹೋದವನಿಗೆ ಹೇಳುವವರು ತಕ್ಷಣಕ್ಕೆ ಯಾರೂ ಸಿಗಲಿಲ್ಲ. ವಿಚಾರಿಸಿದಾಗ ಎಲ್ಲ ಬಲ್ಲ ಕುರ್ರಾಗಳು ಯಮಾಮಾ ಎಂಬಲ್ಲಿ ನಡೆದಿರುವ ಯುದ್ಧಕ್ಕೆ ಹೋಗಿದ್ದಾರೆಂದೂ, ಮತ್ತು ಸರಿಸುಮಾರು 450 ಜನ ಕುರ್ರಾಗಳು ಸತ್ತಿದ್ದಾರೆಂದೂ ಸುದ್ದಿ ಬಂದಿತು. ತೀವ್ರವಾಗಿ ಕುಸಿಯುತ್ತಿರುವ ಕುರಾನ್ ಬಲ್ಲವರ ಸಂಖ್ಯೆಯಿಂದ ಉಮರನಿಗೆ ಕಳವಳವಾಗಿ ಅಂದಿನ ಖಲೀಫನಾದ ಅಬೂಬಕ್ಕರ್ ಬಳಿಗೆ ಹೋದನು. ತನ್ನ ಕಳವಳವನ್ನು ವ್ಯಕ್ತಪಡಿಸಿ ಕುರಾನನ್ನು ಎಲ್ಲ ಸೇರಿಸಿ ಒಂದೇ ಕಡೆ ಕ್ರೋಡೀಕರಿಸಿ ಸಂರಕ್ಷಿಸಬೇಕೆಂದು ಆಗ್ರಹಿಸಿದನು. ಇದನ್ನು ಅನುಮೋದಿಸಿದ ಅಬೂಬಕ್ಕರ್ ಜೈದ್ ಬಿನ್ ತಾಬಿತ್ ಎಂಬುವವನ್ನು ಕರೆದು ಆಗಿಂದಾಗಲೇ ಕುರಾನ್ ನ ಸಂಪಾದನೆಯ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು ಎಂದು ಆಜ್ಞಾಪಿಸಿದನು.

ಇಲ್ಲಿ ನಮಗೆ ದೇವವಾಣಿಯಾದ ಕುರಾನ್ ಮತ್ತು ಅಲ್ಲಾಹುವಿನ ಭರವಸೆ ಮತ್ತು ಕೊನೆಯ ಪ್ರವಾದಿ ಮಹಮ್ಮದರನ್ನು ಕುರಿತಂತೆ ಹಲವು ಪ್ರಶ್ನೆಗಳು ಏಳುತ್ತವೆ;

  • ದೇವವಾಣಿಯಾಗಿದ್ದರೂ ಕುರಾನ್ ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಶಕ್ತಿಯಿಲ್ಲವಾಯಿತೇ ?
  • ಅಲ್ಲಾಹು ತಾನೇ ಕುರಾನಿನಲ್ಲಿ ಅದನ್ನು ಕಾಯುವುದಾಗಿ ಹೇಳಿಕೊಂಡಿದ್ದರೂ ಸಹಾ ಅದು ಉಮರನ ಆಗ್ರಹ ಮತ್ತು ಅಬೂಬಕ್ಕರನ ಆಜ್ಞೆಯ ಅಧೀನವಾಗಿ ಜೈದ್ ಎಂಬುವವನ ಪ್ರಯತ್ನದಿಂದಾಗಿ ಮತ್ತೆ ಸಂಗ್ರಹಕ್ಕೆ ಸಿಕ್ಕಬೇಕಾಯಿತು. ಹೀಗೇಕೆ?
  • ಮಹಮ್ಮದ್ ತಾನೇ ಕೊನೆಯ ಪ್ರವಾದಿ ಎಂದು ಹೇಳಿಕೊಂಡಿದ್ದಾಗ್ಯೂ ಸಹಾ ತನಗೆ ಬಂದ ‘“ETERNAL” ಕಾಲಾತೀತ ಸಂದೇಶಗಳನ್ನು ಯಾವ ಸಂದೇಹಕ್ಕೂ ಆಸ್ಪದ ನೀಡದಂತೆ ಒಂದು ಕಡೆ ಬರೆಸಿ ಕ್ರೋಢೀಕರಿಸಿ ಸಂಪಾದಿಸಿ ಬಿಟ್ಟು ಹೋಗುವ ಯಾವ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಏಕೆ?

ಅಬೂಬಕ್ಕರ್ ಎಂಬ ಮೊದಲನೇ ಖಲೀಪನ ಆಜ್ಞೆಗೆ ತಲೆ ಬಾಗಿದ ಜೈದ್ ಕುರಾನನ್ನು ಸಂಗ್ರಹಿಸುವ ಕೆಲಸಕ್ಕೆ ಇಳಿದನೇನೋ ಸರಿ ; ಆದರೆ ಆತನಿಗೆ ಆತಂಕ ಕಾಡುತ್ತಿತ್ತು.

  • ಜೈದ ಬಿನ್ ತಾಬೀತ ನಿಗೆ ಇದ್ದ ಮೊದಲನೆಯ ಭಯವೆಂದರೆ ಪ್ರವಾದಿಯ ಅನುಪಸ್ಥಿತಿಯಲ್ಲಿ ತಾನು ಈ ಮಹಾನ್ ಕಾರ್ಯವನ್ನು ಕೈಗೊಳ್ಳಲು ಯೋಗ್ಯನೇ? ಎಂಬುದು.
  • ಎರಡನೆಯದಾಗಿ ಪ್ರವಾದಿ ಬದುಕಿದ್ದಾಗ ಆತನೇ ಈ ಕೆಲಸ ಮಾಡಲಿಲ್ಲ ಮತ್ತು ಮಾಡಿಸಲಿಲ್ಲ ಹಾಗು ಈಗ ಕುರಾನನ್ನು ಸಂಪಾದಿಸಿ ಪುಸ್ತಕದ ರೂಪದಲ್ಲಿ ತರುವುದು ಎಷ್ಟು ಸರಿಯಾದ ಕೆಲಸ? ಎಂಬುದು.
  • ಅಬೂಬಕ್ಕರ್ ತಾಬಿತನಿಗೆ ನೀನು ಕುರಾನ್ ಸಂಗ್ರಹಿಸಬೇಕು ಎಂದಾಗ “ಕುರಾನನ್ನು ಸಂಕಲಿಸುವುದಕ್ಕಿಂತ, ಒಂದು ದೊಡ್ಡ ಬೆಟ್ಟವನ್ನು ಎತ್ತಿ ಬೇರೆ ಬೇರೆಡೆ ಸ್ಥಳಾಂತರಿಸು ಎಂದಿದ್ದರೂ ಅದು ನನಗೆ ಕಷ್ಟವೆನಿಸುತ್ತಿರಲಿಲ್ಲ”. ಎಂದು ಹೇಳಿಕೊಂಡಿದ್ದಾನೆ. ಏಕೆಂದರೆ ಯಾವ ಸುರಕ್ಷತೆಯೂ ಇಲ್ಲದೆ ದಿಕ್ಕಾಪಾಲಾಗಿ ಹರಿದು ಹಂಚಿ ಹೋಗಿದ್ದ ಕುರಾನಿನ ಸೂರಹ ಗಳನ್ನು ಸಂಕಲಿಸಿ ಅದನ್ನು ಪಶೀಲಿಸಿ ಕುಂದಿಲ್ಲದ ಒಂದು ಪ್ರಾಮಾಣಿಕೃತ ಗ್ರಂಥವನ್ನಾಗಿ ಮಾಡುವುದು ಅಸಾಧ್ಯವೇ ಆಗಿತ್ತು. ಹಾಗೆ ಸಂಕಲಿಸಿಸಿದ ಕುರಾನನ್ನು ಪರಿಶೀಲಿಸಲು ಮೊಹಮ್ಮದನೆ ಇರಲಿಲ್ಲ.

ಆದರೂ ಖಲೀಫನ ಆಜ್ಞೆಯ ಮೇರೆಗೆ ಕುರಾನಿನ ಆಯತೆಗಳನ್ನು ಸಂಗ್ರಹಿಸಲು ತೊಡಗಿದನು.

ಕುರಾನ್ ನ ಎಲ್ಲಾ ಆಯತುಗಳು ಒಂದೇ ಕಡೆಯಲ್ಲಿ ಕ್ರಮವಾಗಿ ಇರಲಿಲ್ಲ ಎಂಬುದನ್ನು ನಾವಿಗಾಗಲೇ ನೋಡಿದ್ದೇವೆ. ಕಲ್ಲು, ಮರದ ತುಂಡು, ಮೂಳೆ, ಚರ್ಮದ ತುಂಡು ,ಜೀರ್ಣವಾದ ಕಾಗದ ಇತ್ಯಾದಿಗಳ ಮೇಲೆ ಬರೆದು ಹರಿದು ಹಂಚಿ ಹೋಗಿದ್ದ ಕುರಾನಿನ ಆಯತೆಗಳನ್ನು ಕಲೆ ಹಾಕಿದನಂತೆ. ಆ ನಂತರದಲ್ಲಿ ಅಲ್ಲಿ ಇಲ್ಲಿ ತಿರುಗಿ ಯಾರು ಯಾರಿಗೆ ಕುರಾನಿನ ಆಯತುಗಳು ತಿಳಿದಿದ್ದವೋ ಅವರುಗಳನ್ನು ಸಂಪರ್ಕಿಸಿ ಒಂದಷ್ಟು ಆಯತುಗಳನ್ನು ಕೂಡಿ ಹಾಕಿದನಂತೆ. ಆಮೇಲೆ ಅವುಗಳನ್ನು ಬರೆದು ಕುರಾನನ್ನು ತಯಾರಿಸಿ ಅಂದಿನ ಖಲೀಫ ಅಬೂಬಕ್ಕರನಿಗೆ ನೀಡಿದನಂತೆ. ಈ ಕುರಾನ್ ಈಗ ಅವನ ಬಳಿ ಇದ್ದುದು ನಂತರ ಉಮರನ ಕೈಗೆ ಬಂದಿತಂತೆ . ಉಮರ ಎರಡನೇ ಖಲೀಫ. ಅವನು ಕೊಲೆಯಾಗಿ ಸತ್ತ ನಂತರ ಅವನ ಮಗಳಾಗಿದ್ದ ಹಫ್ಸಾ ಎಂಬುವವಳ ಬಳಿಯೇ ಇದ್ದಿತಂತೆ, …2

ಕುರಾನಿನ ಮುಂದಿನ ಕಥೆಯನ್ನು ತಿಳಿಯುವ ಮೊದಲು ಕೆಲವು ವಿಚಾರಗಳನ್ನು ಪರಿಗಣಿಸೋಣ.

  • ಪ್ರವಾದಿ ಮಹಮ್ಮದನಿಗೇ ಕುರಾನಿನ ಆಯತುಗಳು ಮರೆತು ಹೋಗುತ್ತಿದ್ದವಂತೆ, ..3
  • ಹಾಗಿರುವಾಗ ಕೆಲವಾದರೂ ಪೂರ್ಣವಾಗಿ ಇಲ್ಲವೇ ಭಾಗಶಃ ಬದಲಾಗಿರುವ ಅಥವಾ ಅಪೂರ್ಣವಾಗಿರುವ ಸಾಧ್ಯತೆಗಳಿವೆ.
  • ಅನಸ್ ಬಿನ್ ಮಾಲಿಕ್(ರ) ಹೇಳುತ್ತಾನೆ: ಪ್ರವಾದಿಯವರಿಗೆ(ಸ) ಅವರ ಮರಣಕ್ಕಿಂತ ಸ್ವಲ್ಪ ಮುಂಚೆ ನಿರಂತರ ದಿವ್ಯವಾಣಿ ಅವತೀರ್ಣಗೊಳ್ಳುತ್ತಲೇ ಇತ್ತು. ಹಿಂದಿಗಿಂತಲೂ ಹೆಚ್ಚು ದಿವ್ಯ ಸಂದೇಶ ಅವತೀರ್ಣಗೊಳ್ಳು ತಿರುವಾಗಲೇ ಅವರ ಮರಣ ಸಂಭವಿಸಿತು.[Bukhari 4982]
  • ಹೀಗಾಗಿ, ಕುರಾನ್ ಸಂಪೂರ್ಣವಾಗಿ ಅವತೀರ್ಣವೇ ಆಗಿಲ್ಲ. ಕುರಾನಿ ನಲ್ಲಿ ಎಲ್ಲಿಯೂ “ಇಲ್ಲಿಗೆ ಕುರಾನ್ ಸಂಪೂರ್ಣವಾಯಿತು “ಎಂಬ ಅಂತಿಮ ಸೂಕ್ತವಿಲ್ಲ. ಹಾಗಾಗಿ ಕುರಾನ್ ಅಪೂರ್ಣವಾಗಿದೆ, ಕುರಾನ್ ಪೂರ್ಣವಾಗುವ ಮೊದಲೇ ಮಹಮ್ಮದ್ ಸತ್ತು ಹೋಗಿದ್ದಾನೆ.
  • ರಜಂ– ಅಂದರೆ ವಿವಾಹಿತರಾದ ಗಂಡು ಹೆಣ್ಣುಗಳು ನಿಖಾದ ಹೊರಗೆ ಆಕ್ರಮ ಸಂಬಂಧ ಬೆಳೆಸಿದ್ದು ಸಿಕ್ಕಿ ಹಾಕಿಕೊಂಡರೆ ಅವರನ್ನು ಕಲ್ಲು ಹೊಡೆದು ಕೊಲ್ಲಲು ಇರುವ ಕುರಾನಿನ ಆಯತು ಈಗ ಇಲ್ಲ! ಸ್ವತಃ ಖಲೀಫ ಉಮರ್ ತನ್ನ ಕುತ್ಬಾದಲ್ಲಿ ಈ ವಿಚಾರವನ್ನು ಹೇಳಿದ್ದಾನೆ. ಮಹಮ್ಮದನು ಈ ಶಿಕ್ಷೆಯನ್ನು ಜಾರಿಗೊಳಿಸಿ ಆಜ್ಞೆ ಮಾಡಿದ್ದು ಸಹಾ ಹದೀಸಿನಲ್ಲಿದೆ. ಆದರೆ ಈಗ ಅದು ಮಾಯ! ಅಂದರೆ ಕುರಾನ್ ಅಪೂರ್ಣ ಎಂದಂತಾಯಿತು.4
  • ಹೀಗೆ ಕುರಾನಿನಲ್ಲಿ ಇಲ್ಲದ ; ಬಿಟ್ಟುಹೋದ ರಜಮ್ ಆಜ್ಞೆಯ ಆಯತೆ ಇಲ್ಲದೇ ಇದ್ದರೂ ಸಹಾ ಆ ಶಿಕ್ಷೆ ಷರಿಯಾದ ಭಾಗವಾಗಿ ಹಲವಾರು ದೇಶಗಳಲ್ಲಿ ಬಳಕೆಯಲ್ಲಿದೆ! ಕಟ್ಟರ್ ಇಸ್ಲಾಮೀ ಆಡಳಿತಗಳು ಹೀಗೆ ಕುರಾನಿನ ಉಲ್ಲಂಘನೆ ಮಾಡಿವೆ.
  • ಸ್ವತಃ ಆಯೇಷಾ ಹೇಳಿರುವ ಹದೀಸಿನ ಪ್ರಕಾರ ಅಪರಿಚಿತ ಅಥವಾ ಸಂಬಂಧಿ ಅಲ್ಲದ ಗಂಡಸಿನೊಂದಿಗೆ ಕೆಲಸವೋ ಮತ್ತೊಂದೋ ಮಾಡಬೇಕಾಗಿ ಬಂದಾಗ ಅವರನ್ನು ಆ ಹೆಣ್ಣಿನ ಮಕ್ಕಳಾಗಿ ಸಂಬಂಧವನ್ನು ವ್ಯವಸ್ಥಾಪಿಸಲು ಅಲ್ಲಾಹು ಆಜ್ಞೆ ಮಾಡಿದ್ದಾನೆ. ಅದರ ಪ್ರಕಾರ ಆ ಹೆಣ್ಣು ಪರಪುರುಷನಿಗೆ ಹತ್ತು ಸಾರಿ ತನ್ನ ಮೊಲೆ ಹಾಲು ಕುಡಿಸುವಂಥ ಪ್ರಯತ್ನ ಮಾಡಬೇಕು. ಸ್ತನಕ್ಕೆ ಬಾಯಿ ಹಾಕಿ ಚೀಪಿಸಿದರೆ ಆಗ ಆ ಸಂಬಂಧವು ಹಲಾಲ್ ಆಗುತ್ತದಂತೆ! ಆದರೆ ಈಗ ಆ ಆಯತೆಯು ಕುರಾನಿನಲ್ಲಿ ಇರುವುದಿಲ್ಲ; ಕಾರಣ , ಪ್ರವಾದಿಯು ಸತ್ತಾಗ ಆಯೇಷಾ ಅಲ್ಲಿ ವ್ಯಸ್ತವಾಗಿರುವಾಗ ಮೇಕೆಯೊಂದು ಒಂದು ಅವಳ ದಿಂಬಿನ ಅಡಿ ಇದ್ದ ಈ ಆಯತೆಯ ಕಾಗದವನ್ನು ತಿಂದು ಹಾಕಿತಂತೆ! ಅಲ್ಲಾಹುವಿನ ಆಯತೆ ಮೇಕೆಗೆ ಆಹುತಿ ಆದ ಕಾರಣ ಕುರಾನ್ ಈಗ ಸಂಪೂರ್ಣ ಅಲ್ಲ ಎಂಬುದು ಸ್ವಯಂವೇದ್ಯ.5
  • ಎರಡನೇ ಸುರಾಹ್, ಅಲ್ ಬಕ್ರಾ ದ 238 ನೇ ಆಯತೆಯನ್ನು ಆಯೇಷಾ ಬದಲಾಯಿಸಿದ್ದಾಳಂತೆ. ಅಂದರೆ ಕುರಾನ್ ಸಂಪೂರ್ಣವಾಗಿ ಬದಲಾಗದೇ ಪರಿಪೂರ್ಣತೆಯಿಂದ ಉಳಿದು ಬಂದ ದೇವನ ವಾಣಿಯ ಕುಂದಿಲ್ಲದ ಪುಸ್ತಕ ಎಂಬ ಮುಸಲ್ಮಾನರ ಪ್ರತಿಪಾದನೆಗೆ ಯಾವುದೇ ಆಧಾರವಿಲ್ಲ ಮತ್ತು ಆ ವಾದಕ್ಕೆ ಹುರುಳಿಲ್ಲ ಎಂಬುದು ತಿಳಿದು ಬರುತ್ತದೆ.6
  • ಜೈದ ಬಿನ್ ತಾಬೀತ್ ನು ಈ ಕುರಾನನ್ನು ಬರೆಯುವಾಗ ಅವನ ಸಮಕಾಲೀನರು ಬಹಳ ಜನ ಕುರಾನ್ ಬಲ್ಲವರಿದ್ದರೂ, ಪ್ರವಾದಿಯಿಂದಲೇ ಅವರು ಶ್ಲಾಘಿಸಿಕೊಂಡಿದ್ದರೂ ಸಹಾ ಅಂಥವರನ್ನು ಜೈದನು ಸಂದರ್ಶಿಸಿಲ್ಲ ಎಂಬುದು ಹದೀಸುಗಳಿಂದ ತಿಳಿದು ಬರುತ್ತದೆ. ಸ್ವತಃ ಪ್ರವಾದಿಯೇ ಶಿಫಾರಸ್ಸು ಮಾಡಿದವರು ನಾಲ್ಕು ಜನ : ಅಬ್ದುಲ್ಲ ಬಿನ್ ಮಸೂದ್, ಸಲೀಂ, ಮುವಾದ್ ಬಿನ್ ಜಬಾಲ್’ ಮತ್ತು ಉಬೇಯ್ ಬಿನ್ ಕಾಬ್. ಈ ನಾಲ್ಕು ಜನರಿಂದ ಕೂರಾನ್ ಅನ್ನು ಕಲಿಯಿರಿ ಎಂದೇ ಪ್ರವಾದಿ ಹೇಳಿದ್ದರೂ; ಖಲೀಫಾ ಉಮರನು ಕುರಾನಿನ ಪಠಣವನ್ನು ಉಬೇಯ್ ಎಂಬುವನಿಂದಲೇ ಕಲಿಯುವುದು ಸೂಕ್ತ ಎಂದಿದ್ದರೂ ಸಹಾ ಜೈದನಿಂದ ಕುರಾನ್ ಸಂಪಾದಿಸಲ್ಪಟ್ಟಿತು. ನಾವು ಮುಂದೆ ನೋಡುವಂತೆ, ಈ ನಾಲ್ಕು ಜನರೂ ಈ ಜೈದನು ಸಂಪಾದಿಸಿದ ಕುರಾನನ್ನು ತಿರಸ್ಕರಿಸಲು ಕರೆ ಕೊಡುತ್ತಾರೆ ! 7
  • ಅತೀ ಹೆಚ್ಚು ಕುರಾನ್ ಬಲ್ಲವನ್ನಾಗಿದ್ದ ಮತ್ತು ಅದನ್ನು ಬರೆದಿಡುತಿದ್ದ ಉಬೈ ಎಂಬುವವನ ಬಳಿ ಇದ್ದ ಕೆಲವು ಆಯತುಗಳನ್ನು ನಿರಾಕರಿಸಿದ್ದೇವೆ ಎಂದು ಉಮರ್ ಹೇಳಿದ್ದಾನೆ. “ನಾವು (ಕುರ್‌ಆನಿನ) ಯಾವುದೇ ಸೂಕ್ತವನ್ನು ಅನೂರ್ಜಿತಗೊಳಿಸಿದರೆ ಅಥವಾ ಮರೆಸಿದಾಗ, ಅದಕ್ಕಿಂತ ಉತ್ತಮವಾದ ಅಥವಾ ಅದಕ್ಕೆ ಸಮನಾದ ಇನ್ನೊಂದು ಸೂಕ್ತವನ್ನು ತರುತ್ತೇವೆ” (2.106) ಎಂಬ ಈ ಕುರಾನ್ ಸೂಕ್ತದ ಕಾರಣ ಕೊಟ್ಟು. ಅಂದರೆ ಅಲ್ಲಾಹ ಮತ್ತು ಆತನ ದಾಸ ಏನೇ ತಿಪ್ಪರಾಲಾಗ ಹಾಕಿದರೂ ಕುರಾನಿನಲ್ಲಿ ಯಾವುದು ಇರಬೇಕು, ಯಾವುದು ಇರಬಾರದು ಎಂದು ತೀರ್ಮಾನಿಸುವುದು ಸಾಮಾನ್ಯ ಮನುಷ್ಯನೇ ಎನ್ನುವುದಕ್ಕಿಂತ ದೊಡ್ಡ ವಿಡಂಭನೆ ಇನ್ನೋಂದಿಲ್ಲ.[Bukhari 4481]
  • ಮೊದಲು ಒಂದು ಸೂಕ್ತ ಅವತೀರ್ಣವಾಗಿ ಅನಂತರ ರದ್ದಾದ ಉದಾಹರಣೆಗಳು ಹದೀಸಿನಲ್ಲಿ ಉಲ್ಲೇಖವಾಗಿದೆ.[Sahih al-Bukhari 2801, 4090]
  • ಆಯತುಗಳನ್ನು ಎಷ್ಟೇ ಕಂಠ ಪಾಠ ಮಾಡಿದ್ದರೂ ಬುಖಾರಿಯಲ್ಲಿ ಹೇಳಿರುವಂತೆ “ಕುರಾನಿನ ಆಯತುಗಳು ಮಾಲಿಕನಿಂದ ಓಡಿ ಹೋಗುವ ಒಂಟೆಗಿಂತಲೂ ವೇಗವಾಗಿ ಕುರಾನ್ ಮನುಷ್ಯ ಹೃದಯದಿಂದ ಮಾಯವಾಗುತ್ತದಂತೆ.” ಕುರಾನ್ ಮೌಖಿಕ ಪರಂಪರೆ ಉಳ್ಳದ್ದು ಅಂದಮೇಲೆ ಎಷ್ಟು ಪ್ರಮಾಣದಲ್ಲಿ ಆಯತುಗಳನ್ನು ನಷ್ಟವಾಗಿವೆ ಊಹಿಸಿ.[bukahri 5031,5032]
  • ಒಮ್ಮೆ ಪ್ರವಾದಿಗೆ ಹೆಣ್ಣುಕೊಟ್ಟ ಮಾವನೂ, ಪ್ರವಾದಿಯ ಹಿಂಬಾಲಕನೂ, ಪ್ರವಾದಿಗೆ ಬಲಗೈ ಬಂಟನೂ, ಮಾತೆತ್ತಿದರೆ ಕೋಪದಿಂದ ಕತ್ತರಿಸಿ ಎಸೆಯುತ್ತಿದ್ದ ಸಾಹಬನೂ ಮತ್ತು ಅಬೂಬಕ್ಕರನ ನಂತರ ಎರಡನೇ ಖಲೀಫನಾದ ಉಮರನು ಮಸೀದಿಯಲ್ಲಿ ನಮಾಜು ಮಾಡಲು ಹೋದನು. ಅಲ್ಲಿ ಹಿಷಾಮ್ ಬಿನ್ ಹಕೀಂ ಎಂಬವವನು ” ಸುರಾಹ್ ಅಲ್ ಫುರ್ಕಾನ್ ” ಎಂಬ ಕುರಾನಿನ ಪಾಠವನ್ನು ಹಲವಾರು ವಿಭಿನ್ನ ಮಾದರಿಗಳಲ್ಲಿ ಪಠಿಸಿದನು. ಉಮರನಿಗೆ ಆ ವಿಧಾನಗಳು ಗೊತ್ತಿರಲಿಲ್ಲ ಮತ್ತು ಪ್ರವಾದಿಯು ಅವನಿಗೆ ಹಾಗೆ ಕಲಿಸಿರಲಿಲ್ಲ,. ಕೋಪದಿಂದ ಉಮರ್, ಅವನು ತಪ್ಪು ತಪ್ಪಾಗಿ ಹೇಳುತ್ತಿದ್ದಾನೆಂದು ತಿಳಿದು ಅವನ ಮೇಲೆ ಎರಗುವವನಿದ್ದರೂ ಸಂಯಮದಿಂದ ಅವನ ನಮಾಜು ಮುಗಿಯುವ ವರೆಗೆ ಕಾದಿದ್ದನು. ನಂತರ ಅವನ ಕೊರಳಿಗೆ ಕೈ ಹಾಕಿ ಅವನನ್ನು ಎಳೆದುಕೊಂಡು ಪ್ರವಾದಿಯ ಬಳಿಗೆ ಹೋದನು. ಅಲ್ಲಿ ಪ್ರವಾದಿಯು ಉಮರನ ದೂರನ್ನು ಕೇಳಿ ಹಿಷಾಮ್ ಬಿನ್ ಹಕೀಮನಿಗೆ ಮತ್ತೊಮ್ಮೆ ಪಠಿಸಲು ಕೇಳಿದನು. ಪಠನೆಯನ್ನು ಆಲಿಸಿದ ನಂತರ ಈ ಸುರಾದ ಆಯತೆಗಳು ಈ ರೀತಿ ಕಳಿಸಿರುವುದು ಸರಿಯಾಗಿದೆ ಎ೦ದನು. ನಂತರ ಉಮರನಿಂದಲೂ ಪಠನೆಯನ್ನು ಮಾಡಿಸಿದ ಬಳಿಕ ಇದೂ ಸಹಾ ಸಮಂಜಸವಾದ ಪಠಣಿಯೇ ಆಗಿದೆ. ಇಬ್ಬರ ವಿಧಾನವೂ ಸರಿಯಿದೆ ಎ೦ದು ಅಪ್ಪಣೆ ಕೊಡಿಸಿದನು.8
    • ಅಂದರೆ ಕುರಾನು ಅರೇಬಿಯಾದ ವಿವಿಧ ಆಡು ಭಾಷೆಗಳ ಏಳು ವಿಭಿನ್ನ ರೀತಿಯಲ್ಲಿ (ಅಹರುಫ್ ) ಅವತೀರ್ಣವಾಗಿತ್ತಂತೆ! ಅಂದರೆ ಕುರಾನ್ ಎಂಬುದು ಏಕರೂಪದ ಪುಸ್ತಕ ಅಲ್ಲ ಎಂದಾಯಿತು!9
    • ಜತೆಗೆ ಪ್ರವಾದಿಯ ಜೀವಮಾನದಲ್ಲಿ ಕುರಾನಿನ ಸಂಗ್ರಹ ಮಾಡುತ್ತಿದ್ದವರ ನಡುವೆ ಕುರಾನಿನ ಅಧ್ಯಾಯಗಳಲ್ಲಿ ವ್ಯತ್ಯಾಸಗಳಿದ್ದವು. ಇಬ್ನೆ ಮಸೂದ್ ಪ್ರಕಾರ ಕುರಾನಿನಲ್ಲಿ 111 ಅಧ್ಯಾಯ (ಸುರಾಹ್) ಗಳಿದ್ದರೆ., ಉಬೇಯ್ ನ ಪ್ರಕಾರ 115 ಸುರಾಹ್ ಗಳಿದ್ದವು ! ಅಷ್ಟೇ ಅಲ್ಲ, ಅಬು ಮೂಸಾ ಪ್ರಕಾರ 116 ಅಧ್ಯಾಯಗಳಿದ್ದರೆ ಈಗಿರುವ ಜೈದನ ಕುರಾನಿನಲ್ಲಿ 114 ಅಧ್ಯಾಯ ಅಥವಾ ಸುರಾಹ್ ಗಳು ಇವೆ! ಇದಲ್ಲದೆ ಇನ್ನೂ ಹನ್ನೆರೆಡು ಬಗೆಯ ಕುರಾನುಗಳು ಸೇರಿ 16 ವಿವಿಧ ಬಗೆಯ ಕುರಾನುಗಳು ಪ್ರಚಲಿತದಲ್ಲಿ ಇದ್ದುವೆಂಬುದಾಗಿ ದಾಖಲಾಗಿದೆ ಹದೀಸುಗಳಲ್ಲಿ.
  • ಇಬ್ನೆ ಉಮರ್ ಎಂಬ ಉಮರನ ಮಗನು “ಬಹಳಷ್ಟು ಕುರಾನ್ ಈಗಾಗಲೇ ನಷ್ಟವಾಗಿರುವುದರಿಂದ ಯಾರೇ ಆಗಲಿ ನನಗೆ ಕುರಾನ್ ಸಂಪೂರ್ಣವಾಗಿ ಒಂದೇ ಬರುತ್ತದೆ ಎಂದು ಹೇಳಿಕೊಂಡರೆ ಅದಕ್ಕೆ ಅರ್ಥವೇ ಇಲ್ಲ. ಬದಲಿಗೆ ಎಷ್ಟು ಕುರಾನ್ ಉಳಿದಿದೆಯೋ ಅಷ್ಟನ್ನು ನಾನು ಕಲಿತಿದ್ದೇನೆ ಎ೦ದು ಹೇಳಿಕೊಳ್ಳಬಹುದು ” ಎಂದು ಹೇಳಿರುವ ಹದೀಸು ಪ್ರಕಟವಾಗಿದೆ. ಹೀಗಿರುವಾಗ ಕುರಾನ್ ಕುಂದಿಲ್ಲದ ಪರಿಪೂರ್ಣವಾದ ಅಲ್ಲಹುವಿನ ಪುಸ್ತಕ ಎಂಬುದರಲ್ಲಿ ಯಾವುದೇ ಹುರುಳಿಲ್ಲ.10

ಕುರಾನಿನ ಪುರಾಣ ಇಷ್ಟಕ್ಕೇ ಮುಗಿಯುವುದಿಲ್ಲ. ಅಲ್ಲಾಹುವಾಗಲೀ ,ಮಹಮ್ಮದನೇ ಆಗಲೀ ಕುರಾನಿನ ರಕ್ಷಣೆಗೆ ಯಾವುದೇ ಬದ್ಧತೆಯನ್ನು ತೋರಿಸಿ ಕ್ಷಮತೆಯಿಂದ ಕೆಲಸ ಮಾಡಿದ್ದು ಕಂಡುಬರುವುದಿಲ್ಲ; ಬದಲಾಗಿ ಉಳಿದ ನರಮನುಷ್ಯರು ಏನೇನೋ ಸರ್ಕಸ್ ರೀತಿಯ ಪ್ರಯತ್ನ ಮಾಡುವುದು ಕಂಡುಬರುತ್ತದೆ.

ಅಬೂಬಕ್ಕರನು ಸತ್ತು ಉಮರ್ ಖಲೀಫನಾಗಿ ಸುಮಾರು ಹತ್ತು ವರ್ಷ ಅಧಿಕಾರ ನಡೆಸಿ ಕೊಲೆಯಾದ ನಂತರ ಉಸ್ಮಾನ್ (ಉತ್ಮಾನ್) ಎಂಬ ಮಹಮ್ಮದನ ಅಳಿಯನೇ ಖಲೀಫನಾಗುತ್ತಾನೆ. ಇವನ ಆಡಳಿತಾವಧಿ ಸಹಾ ಹತ್ತು ವರ್ಷಗಳ ಸರಿಸುಮಾರು. ಇವನೂ ಸಹಾ ಜನರಿಂದ ಹತ್ಯೆಯಾಗುವ ಮೊದಲು ಕುರಾನಿನ ವಿಚಾರದಲ್ಲಿ ಮಹತ್ತರವಾಗಿ ಕೈಯ್ಯಾಡಿಸುತ್ತಾನೆ. ಅದೇನು ? ನೋಡೋಣ.

  • ಕುರಾನಿನ ಮೊದಲನೇ ಅವತಾರದಲ್ಲಿ ಅದು ಅಲ್ಲಾಹುವಿನಿಂದ ಜಿಬ್ರೈಲ್ ಎಂಬ ದೇವದೂತನ ಮೂಲಕ ಮಹಮ್ಮದನಿಗೆ ಅವನಿಗೆ ಬೇಕಾದಾಗ ಬೇಕೆಂಬ ರೂಪದಲ್ಲಿ ಅನುಕೂಲ ಸಿಂಧುವಾಗಿ ಇಳಿದು ಬಂದಿತು.
  • ಎರಡನೇ ಅವತಾರದಲ್ಲಿ ಅಲ್ಲಿ ಇಲ್ಲಿ ಹಂಚಿ ಹೋಗಿದ್ದ, ಕೆಲವರ ಬಾಯಿಪಾಠದಲ್ಲಿ ಉಳಿದುಕೊಂಡಿದ್ದ ಕುರಾನ್ ಜೈದ್ ಬಿನ್ ತಾಬೀತ್ ಎಂಬುವವನ ಮೂಲಕ ಪುಸ್ತಕರೂಪದಲ್ಲಿ ಸಂಗ್ರಹಿಸಲ್ಪಟ್ಟಿತು.
    • ಆದರೆ ಈ ಪುಸ್ತಕದಲ್ಲಿ ಸಂಪಾದಿಸಿ ಕ್ರೋಢೀಕರಿಸಿದ ಕುರಾನಿಗೆ ಸರ್ವಮಾನ್ಯತೆ ಎಂದೇನೂ ಸಿಕ್ಕಿರಲಿಲ್ಲ.
    • ಅರೇಬಿಯಾದ ಏಳೆಂಟು ಆಡು ಭಾಷೆಗಳಲ್ಲಿ ಉಚ್ಛಾರ ಸಹಿತವಾಗಿ ಅಕ್ಷರ, ಸ್ವರ ವ್ಯಂಜನ ಸಮೇತವಾಗಿ ಆಯತೆಗಳ ಸ್ವರೂಪ, ಸಂಖ್ಯೆ ಮಾತ್ರವಲ್ಲದೆ ಕುರಾನಿನಲ್ಲಿದ ಅಧ್ಯಾಯ (ಸುರಾಹ್) ಗಳ ಸಂಖ್ಯೆಯಲ್ಲಿಯ ವ್ಯತ್ಯಾಸವಿತ್ತು.
    • ಈ ವ್ಯತ್ಯಾಸಗಳಿದ್ದ ವಿವಿಧ ಕುರಾನುಗಳನ್ನು ಬಳಸುತ್ತಿದ್ದ ಜನಗಳ ಸಮುದಾಯಗಳು ತಮ್ಮ ಕುರಾನಿನ ಸ್ವರೂಪವೇ ಪ್ರವಾದಿಯಿಂದ ಅನುಮೋದಿತವಾದ ಅಧಿಕೃತ ಆವೃತ್ತಿ: ; ಉಳಿದದ್ದು ಮೋಸ ಮತ್ತು ವಂಚನೆ ; ಅಲ್ಲಾಹುವಿನಿಂದ ಶಿಕ್ಷೆಗೆ ಒಳಗಾಗುವುದರ ಕಾರಣ ಎಂದು ಆಡಿಕೊಳ್ಳುತ್ತಿದ್ದರು ಮತ್ತು ಅದೇ ಕಾರಣಗಳಿಗಾಗಿ ಜಗಳಗಳನ್ನು, ಹೊಡೆದಾಟ-ಬಡಿದಾಟಗಳನ್ನು ಮಾಡಿಕೊಂಡಿದ್ದರು. ಇದು ತಾರಕಕ್ಕೆ ಹೋಗುವ ಎಲ್ಲ ಲಕ್ಷಣಗಳೂ ಗೋಚರಿಸತೊಡಗಿದ್ದವು.
  • ಆಗ ಉತ್ಮಾನ ಎಂಬ ಮೂರನೇ ಖಲೀಫನು ಕುರಾನಿನ ಮೂರನೆಯ ಅವತಾರವನ್ನು ಬಿಡುಗಡೆ ಮಾಡಲು ನಿರ್ಧರಿಸುತ್ತಾನೆ.
    • ಈ ಪ್ರಕ್ರಿಯೆಯಲ್ಲಿ ಕುರಾನಿನ ಮಾರಣ ಹೋಮವೂ ಸಹಾ ನಡೆದು ಹೋಗುವ ವಿಪರ್ಯಾಸವಿದೆ.

ಕ್ರಿ.ಶ 632 ರಲ್ಲಿ ಮಹಮ್ಮದ್ ವಿಷಪ್ರಾಶನದಿಂದ ನರಳುತ್ತಾ ಸಾಯುತ್ತಾನೆ. ಆತನ ಹೆಣ ಸಂಸ್ಕಾರ ಆಗುವ ಮೊದಲೇ ಅಧಿಕಾರಕ್ಕಾಗಿ ಮೇಲಾಟಗಳು ನಡೆದು ಅಲಿಯ ಬದಲು ಅಬೂಬಕ್ಕರ್ ಖಲೀಫನಾಗುತ್ತಾನೆ. ಎರಡೇ ವರ್ಷಗಳಲ್ಲಿ ಅಬೂಬಕ್ಕರ್ ಸತ್ತು ಉಮರ್ ಎಂಬುವವನು ಅಧಿಕಾರ ಹಿಡಿಯುತ್ತಾನೆ. ಇವನ ಕಾಲದಲ್ಲಿ ಇಸ್ಲಾಂ ಕ್ರೂರವೂ ಬಲಶಾಲಿಯೂ ಆಗಿ ಬೆಳೆದು ವಿಸ್ತಾರವಾಗಿ ಹರಡುತ್ತದೆ. ಆದರೆ ತನ್ನ ಅಮಾನುಷ ಕ್ರೌರ್ಯದ ಕಾರಣದಿಂದಾಗಿ ತನ್ನದೇ ಗುಲಾಮನೊಬ್ಬನಿಂದ ಮಸೀದಿಯಲ್ಲಿಯೇ ಕೊಲೆಯಾಗಿ ಸಾಯುತ್ತಾನೆ. ಕ್ರಿಶ 634 ರಿಂದ 644 ರವರೆಗೆ ಇವನ ಅಧಿಕಾರ; ನಂತರ 644 ರಿಂದ 654 ರವರೆಗೆ ಈ ಉತ್ಮಾನ್ ಎಂಬ ಖಲೀಫ ಆಡಳಿತ ನಡೆಸುತ್ತಾನೆ. (ಕೆಲವು ವಿಚಾರಗಳು ಪುನರುಕ್ತಿ ಆಗುತ್ತಿರುತ್ತವೆ. ಇಸ್ಲಾಮಿನ ಗೋಜಲು ಇತಿಹಾಸವನ್ನು ತಿಳಿಯಲು ಇದು ಅವಶ್ಯಕವಾಗಿದೆ.)

ಇವನ ಕಾಲದಲ್ಲಿ ಎಂದಿನಂತೆ ಯುದ್ಧಗಳು ನಡೆಯುತ್ತಿದ್ದವು. ಸಿರಿಯಾ ಮತ್ತು ಇರಾಕಿನ ಮುಸ್ಲಿಮರು ಆರ್ಮೆನಿಯಾ ಮತ್ತು ಅಜರ್ ಬೈಜಾನ್ ಗಳನ್ನು ಗೆಲ್ಲಬೇಕೆಂದು ಯುದ್ಧಕ್ಕೆ ತೊಡಗಿರುವಾಗ ಕುರಾನಿನ ಅಧಿಕೃತರೂಪದ ಪಠಣೆಯನ್ನು ಕುರಿತಾಗಿ ತೀವ್ರವಾದ ಭಿನ್ನಾಭಿಪ್ರಾಯಗಳು ಭುಗಿಲೆದ್ದವು. ಆಗ ಹುದೈಫಾ ಬಿನ್ ಅಲ್ ಯಮನ್ ಎಂಬುವವನು ಖಲೀಪನ ಬಳಿ ಬಂದು ” ಓ ವಿಶ್ವಾಸಿಗಳ ಪ್ರಮುಖನೇ… ಕುರಾನಿನ ಕುರಿತಾಗಿ ಜನ ಹೊಡೆದಾಡತೊಡಗಿದ್ದಾರೆ. ಹಿಂದೆ ಯಹೂದಿಗಳು ಮತ್ತು ಕ್ರೈಸ್ತರಂತೆ ಬದಲಾದ ಪುಸ್ತಕಗಳನ್ನು ಅನುಸರಿಸಿ ಮತ್ತೆ ಭ್ರಷ್ಟರಾಗುವ ಎಲ್ಲಾ ಲಕ್ಷಣಗಳೂ ಮುಸ್ಲಿಮರಲ್ಲಿ ಕಂಡುಬರುತ್ತಿವೆ. ಆದ್ದರಿಂದ ಅಕುಂಠಿತವಾದ ಪರಿಪೂರ್ಣ ಕುರಾನಿನ ಪ್ರತಿಯೊಂದನ್ನು ನಮಗೆ ಕಳಿಸು” ಎಂದನು. ಉತ್ಮಾನನು ತಕ್ಷಣವೇ ಹಫ್ಸಾಳ ಬಳಿಯಿರುವ ಕುರಾನನ್ನು ತರಿಸಿ 1) ಜೈದ್ ಬಿನ್ ತಾಬೀತ್ತ್, 2) ಅಬ್ದುಲ್ಲಾ ಬಿನ್ ಅಜ್ ಜುಬೇರ್, 3) ಸೈದ್ ಬಿನ್ ಅಲ್ ಅಸ್ ಮತ್ತು 4) ಅಬ್ದುರ್ ರಹಮಾನ್ ಬಿನ್ ಹರಿತ್ ಬಿನ್ ಹಿಷಾಮ್ ಎಂಬ ನಾಲ್ಕು ಜನರಿಗೆ ಕುರಾನಿನ ಪ್ರತಿಗಳನ್ನು ಮಾಡುವಂತೆ ಆದೇಶಿಸಿದನು. ಉಚ್ಚಾರಣೆಯಲ್ಲಿ ಭಿನ್ನಾಭಿಪ್ರಾಯ ಬಂದರೆ ಕುರೇಶಿ ಉಪಭಾಷೆಯ ಸ್ವರೂಪವನ್ನೇ ಉಳಿಸಿಕೊಳ್ಳಬೇಕೆಂದು ಆದೇಶಿಸಿದನು. ಪ್ರತಿಗಳು ತಯಾರಾದ ನಂತರ ಎಲ್ಲಾ ಪ್ರಾಂತ್ಯಗಳಿಗೆ ಒಂದೊಂದರಂತೆ ಕಳಿಸಿ ಹಪ್ಸಾ ಳ ಮೂಲ ಪ್ರತಿಯನ್ನು ಅವಳಿಗೆ ಹಿಂದಿರುಗಿಸಿದನು. ನಂತರ ಇಸ್ಲಾಮಿನ ಪ್ರಭಾವ ಇರುವ ಎಲ್ಲಾ ಕಡೆಗಳಿಂದ ಈ ಮೊದಲಿನ ಕುರಾನ್ ಅಧ್ಯಾವ ರೂಪದಲ್ಲಿ ಇದ್ದರೂ ಸರಿ ಅವುಗಳನ್ನು ತರಿಸಿ ಸುಡಿಸಿ ಹಾಕಿದನು. ಹಫ್ಸಾಳು ಸತ್ತ ನಂತರ ಅದನ್ನು ಸಹಾ ಸುಟ್ಟುಹಾಕಲಾಯಿತೆಂದು ನಂಬಲಾಗಿದೆ.11

  • ಕುರಾನ್ ಅನ್ನು ಸುಡಿಸಿ ಖಲೀಫಾ ಉತ್ಮಾನ ಬಹುದೊಡ್ಡ ಗುಸ್ತಾಫಿ ಮಾಡಿದ್ದಾನೆ.
  • ಯಾವುದು ಅಧಿಕೃತ ಎಂದು ನಿರ್ಧರಿಸಲು ಉತ್ಮಾನ್ ಏನೂ ಕುರಾನಿನ ಜ್ಞಾನಿ ಆಗಿರಲಿಲ್ಲ. ಖಲೀಫ ಎಂಬುದಷ್ಟೇ ಅಲ್ಲಿ ಅವನಿಗೆ ಅಧಿಕಾರ ಕೊಟ್ಟದ್ದು.
  • ಈ ಹಿಂದೆ ಹೆಸರಿಸಿದ ಅತ್ಯುತ್ತಮ ಕುರಾನ್ ಪರಣಕಾರರನ್ನು ಪುನಃ ಸಂದರ್ಶಿಸುವ ಯಾವ ಪ್ರಯತ್ನವನ್ನು ಸಹಾ ಮಾಡಲಾಗಿಲ್ಲ.
  • ಹಾಗೆ ಕಾಪಿ (ಪ್ರತಿ) ಮಾಡಿದ ಕುರಾನು ಶುದ್ಧವಾಗಿತ್ತೇ ಎಂದು ಯಾರೂ ಪರೀಕ್ಷಾ ವಾಚನ ಸಂಪಾದನೆ ತಿದ್ದುವಿಕೆ ಮಾಡಿರುವುದು ಕಂಡುಬಂದಿಲ್ಲ.
    • “ಪ್ರವಾದಿ ಮಹಮ್ಮದನ ಕಾಲದಲ್ಲಿ ಸೂರಾ ಅಲ್‌ ಅಹ್‌ಝಾಬ್ (ಸೂರಾ 33) ಎಂಬ ಅಧ್ಯಾಯದಲ್ಲಿ ಇನ್ನೂರು ಸೂಕ್ತಗಳಿದ್ದವು, ಆದರೆ ಉಸ್ಮಾನ್ ಕಾಲಕ್ಕೆ ಅವೆಲ್ಲವನ್ನೂ ಸಂಗ್ರಹಿಸಲು ಸಾಧ್ಯವಾಗದೆ ಇಂದು ಆ ಅಧ್ಯಾಯ ದಲ್ಲಿ ಕೇವಲ 73 ಸೂಕ್ತಗಳು ಉಳಿದುಕೊಂಡಿವೆ. ಅಂದರೆ 127 ಆಯತುಗಳು ನಷ್ಟವಾಗಿವೆ. [Ibn Abi Maryam related to us from Ibn Luhai’a from Abu’l-Aswad from ‘Urwa b. az-Zubair from ‘A’isha who said, “Surat al-Ahzab (Surah 33) used to be recited in the time of the prophet with two hundred verses, but when ‘Uthman wrote out the codices he was unable to procure more of it than there is in it today” – Abu Ubaid’s Kitab Fada’il al-Quran.
      • So Uthman burned previous copies and made a new single one in 5 copies with a new dialect. The Quran was not even written down until after the death of Muhammad. The next part is Al-Hajjaj ibn Yusuf (reigned 694-714 AD) who was the guvernor under Abd Al-Malik (685-705 AD) and Al-Walid (70]
  • ಎಲ್ಲರೂ ಈ ಜೈದನಿಂದ ರಚಿಸಲ್ಪಟ್ಟ ಉತ್ಪಾನೀ ಕುರಾನನ್ನು ಮಾತ್ರವೇ ಓದಬೇಕೆಂಬ ಆಜ್ಞೆಗೆ ವಿರೋಧಗಳು ಬಂದವು.
    • ಎಂದಿನಂತೆ ಅಬ್ದಲ್ಲಾ ಬಿನ್ ಮಸೂದನು ಎದ್ದು ನಿಂತು “ಯಾವನು ಅಲ್ಲಾಹುವಿಗೆ ವಂಚನೆ ಮಾಡುತ್ತಾನೆಯೋ ಅವನು ಅದರ ಫಲವನ್ನು ಹೊತ್ತು ಸತ್ತ ನಂತರ ಅಲ್ಲಾಹುವಿನ ಬಳಿಗೆ ಬಂದೇ ಬರಬೇಕು. ಈ ಉತ್ಮಾನನ ಕುರಾನ್ ಓದಿದರೆ ಅದು ವಂಚನೆಯೇ ಆಗುತ್ತದೆ. ನಾನು ಅಲ್ಲಾಹುವಿನ ಪ್ರವಾದಿಯ ಬಾಯಿಯಿಂದ ನೇರವಾಗಿ ಕಲಿತಿದ್ದೇನೆ. ಎಪ್ಪತ್ತಕ್ಕೂ ಹೆಚ್ಚು ಸುರಾಹ್ ಗಳು ನನಗೆ ಪ್ರವಾದಿಯ ತುಟಿಗಳಿಂದಲೇ ಬಂದಿವೆ. ಈ ಜೈದನು ಹುಡುಗನಾಗಿ ಆಟವಾಡಿಕೊಂಡಿರುವಾಗಲೇ ನಾನು ಕೂರಾನ್ ಕಲಿತಿದ್ದೆನು. ಅಂತಹ ನಾನು ಇವನ ಕುರಾನನ್ನು ಕಲಿಯುವುದು ಎಲ್ಲಿಯಾದರೂ ಉಂಟೇ? ನನಗಿಂತ ಜ್ಞಾನಿ ಕುರಾನ್ ಕಲಿತವನು ಎಲ್ಲಿಯೇ ಇರಲಿ, ಒಂಟೆಯ ಮೇಲೆ ಕುಳಿತು ಅಲ್ಲಿಗೆ ಹೋಗಬಹುದಾದರೆ ನಾನು ಮೊದಲು ಹೋಗಿ ಆತನನ್ನು ಭೇಟಿ ಮಾಡುತ್ತೇನೆ” ಎ೦ದನು.13
    • ಇದೇ ಮಸೂದನು “ಓ ಮುಸ್ಮಿಮರೇ ಈ ಸಂಗ್ರಹಿಸಿದ ಕೂರಾನನ್ನು ಓದಬೇಡಿರಿ. ನಿಮ್ಮ ಬಳಿ ಇರುವ ಕುರಾನುಗಳನ್ನು ಅವರ ಕೈಗೆ ಸಿಕ್ಕದ ಹಾಗೆ ಅಡಗಿಸಿ ಇಟ್ಟುಕೊಂಡು ಅದನ್ನೇ ಬಳಸಿರಿ” ಎಂದು ಹೇಳಿದನು.14
    • ಖುಜೈಮಾ ಇಬ್ನೆ ತಾಬಿತ್ ಎಂಬುವವನು ಈ ಹೊಸ ಕುರಾನನ್ನು ನೋಡುತ್ತಾ ನಾನು ಪ್ರವಾದಿಯಿಂದ ನೇರವಾಗಿ ಪಡೆದಂಥ ಸುರಾ 9:128 ಆಯತೆಯನು ಬಿಟ್ಟೇ ಬಿಟ್ಟಿದ್ದೀರಿ ಎ೦ದನು . ಅವು ಯಾವುದು? ಎಂದು ಕೇಳಲು ಖುಜೈಮಾ ನು “ನಿಮ್ಮೊಳಗಿನಿಂದಲೇ ನಮ್ಮ ಸಂದೇಶಕಾರನು ಹುಟ್ಟಿ ಬಂದಿರುತ್ತಾನೆ. ನಿಮಗಾಗಿ (ಅನುಚರರಿಗಾಗಿ) ಅವನು ವ್ಯಾಕುಗೊಂಡಿರುತ್ತಾನೆ. ನೀವು ನಾಶವಾಗುತ್ತೀರೆಂಬ ದುಃಖ ಆತನಿಗಿದೆ. ಅವನು ವಿಶ್ವಾಸಿಗಳನ್ನು ಕುರಿತು ದಯಾಳುವೂ ಕರುಣಾಳುವೂ ಆಗಿದ್ದಾನೆ ” ಎಂಬುದಾಗಿ ಹೇಳಿದನು. ಇದನ್ನು ಉತ್ಮಾನ ಆಣೆಯಿಟು ಪ್ರಮಾಣಿಸಿದಾಗ ಅದನ್ನು ಸುರಾಹ ದಲ್ಲಿ ಸೇರಿಸಲಾಯಿತು. ಇದು ಒಂದು ಅದೃಷ್ಯವಶಾತ್ ನಡೆದ ಘಟನೆ. ಇಲ್ಲವಾಗಿದ್ದರೆ ಕುರಾನಿನಲ್ಲಿ ಈ ದೇವವಾಣಿಯು ಸೇರದೇ ಹೋಗಿರುತ್ತಿತ್ತು.15
    • ಇದೇ ರೀತಿಯಿಂದ ಅಲ್ ಅಹಜಾಬ್ ನ ಒಂದು ಆಯತೆ ಸಹಾ ಈ ಖುಜೈಮಾನಿಂದ ನಷ್ಟವಾಗುವುದು ತಪ್ಪಿತು.16

ಅಂತೂ ಇಂತೂ ಒಂದು ಕುರಾನು ತಯಾರಾಗಿ ಒಂದು ಎಲ್ಲ ವಿವಾದಗಳಿಗೆ ಕೊನೆ ಹಾಡಿತೆಂದು ನೀವು ನಿಟ್ಟುಸಿರು ಬಿಟ್ಟದ್ದೆ ಆದರೆ ಕೆಟ್ಟಿರಿ ಎಂದೇ ತಿಳಿಯಿರಿ. ಕುರಾನಿನ ಪುರಾಣ ಇಲ್ಲಿಗೇ ಮುಗಿಯಲಿಲ್ಲ,..

  • ಕುರಾನಿನ ಮೂಲ ಬರಹದ ಲಿಪಿ ಸಂರಚನೆಗೆ ರಸಮ್ ಎನ್ನುತ್ತಾರೆ. ಕುರಾನನ್ನು ರಾಗವಾಗಿ ಹಾಡುವ ವಿಧಾನಕ್ಕೆ ಕಿರಾತ್ ಎನ್ನುತ್ತಾರೆ.
    • ರಸಮ್ ನಲ್ಲಿ ಕೇವಲ ಅಕ್ಷರಗಳ ಮೂಲರೂಪವನ್ನು ಮಾತ್ರ ಬಳಸಿರುತ್ತಾರೆ.
    • ಹ್ರಸ್ವ – ದೀರ್ಘ , ವ್ಯಂಜನ ಇತ್ಯಾದಿಗಳನ್ನು ನಿರ್ಧರಿಸುವಂಥ ಚುಕ್ಕೆ ಗೆರೆ ಮುಂತಾದ ಉಪಚಿನ್ಹೆಗಳು ಗುರುತಿಸಲ್ಪಟ್ಟಿರುವುದಿಲ್ಲ. [ಫತಹ್(ـَ)= ah(ಅ), ಕಸ್ರಹ್(ـِ) = ii(ಈ) ಧಮ್ಮಹ್ (ـُ) = oo(ಊ)]
    • ಭಾಷೆಯ ವಿಕಾಸವಾದಂತೆ ಎಂಟು , ಒಂಭತ್ತು ‘ ಹತ್ತನೇ ಶತಮಾನಗಳಲ್ಲಿ ಅರೇಬಿಕ್ ಭಾಷೆಯು ಕ್ರಮೇಣ ಬದಲಾಯಿತು.
    • ವಿವಿಧ ಪ್ರಾಂತ್ಯಗಳಲ್ಲಿನ ಉಚ್ಚಾರದ ಮತ್ತು ಪಠನಾ ವಿಧಾನಗಳಲ್ಲಿ ಇದ್ದ ವ್ಯತ್ಯಾಸಗಳಿಂದ ಹಸ್ವ – ದೀರ್ಘಗಳು ಬೇರೆ ಬೇರೆ ಆದವು
    • ಅದಕ್ಕೆ ತಕ್ಕಂತೆ ರಸಮ್ ಬದಲಾಯಿತು.
  • ಹತ್ತನೇ ಶತಮಾನದ ಹೊತ್ತಿಗೆ ಏಳು ಅರೇಬಿಕ್ ಆಡುಭಾಷೆಯ ವೈವಿಧ್ಯ.
  • ಹತ್ತು ಬಗೆ ಬಗೆಯ ಪಠನಾವೈವಿಧ್ಯ : ಅವರೊಳಗೆ ಮತ್ತಷ್ಟು ಉಪ ವೈವಿಧ್ಯಗಳೂ ಸೇರಿ ಒಟ್ಟು 278 ಕುರಾನಿನ ರೂಪಗಳು ಪ್ರಚಲಿತದಲ್ಲಿ ಇದ್ದವು.
  • ಇವುಗಳನ್ನು ಮತ್ತೆ ಕತ್ತರಿಸಿ ಒಟ್ಟು ಏಳು ಉಪಭಾಷೆ ಮತ್ತು ಎರಡು ಕಿರಾತ್ ಸೇರಿಸಿ ಒಟ್ಟು ಹದಿನಾಲ್ಕು ವಿವಿಧ ಸ್ವರೂಪದಲ್ಲಿ ಕುರಾನ್ ಮಾಡಲಾಯಿತು,..
  • ಬರಹದ ಲಿಪಿಯ ಬದಲಾವಣೆ ಸಹಾ ಇರುವ ಕಾರಣ ಅರ್ಥದಲ್ಲೂ ಅಲ್ಪ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ.
  • ಒಟ್ಟಿನಲ್ಲಿ ಅಲ್ಲಾಹುವಿನ ತಾಯಿ ಕುರಾನಿನ ಮಕ್ಕಳುಗಳಾದ ಈ ಭೂಮಿಯ ಕುರಾನುಗಳಲ್ಲಿ ಏಕರೂಪತೆ ಎಂಬುದು ಕನಸಿನ ಗಂಟೇ ಆಗಿದೆ.
  • ಈ ಗೊಂದಲವನ್ನು ಪರಿಹರಿಸಲು 1924ರ ಈಜಿಪ್ಪಿನ ಮಹಮ್ಮದ್ ಇಬ್ನೆ ಅಲ್ ಹುಸ್ಸಾ ನಿ ಅಲ್ ಹದ್ದಾದ್ ಎಂಬ ಮುಲ್ಲಾನಿಗೆ ಜವಾಬ್ದಾರಿ ಹೊರಿಸಲಾಯಿತು.
  • ಆತನು ಈ ಬಗೆ ಬಗೆಯ ಕುರಾನುಗಳಿಂದ ಹಫ್ಸ್ ಎಂಬ ಒಂದನ್ನು ಆರಿಸಿಕೊಂಡು ಮತ್ತೆ ಸಂಪಾದನೆ ಮಾಡಿದನು. 1936 ರಲ್ಲಿ ಅದನ್ನೇ ಇಡೀ ಪ್ರಪಂಚದ ಸರ್ವಮಾನ್ಯ ಮಾದರಿ ಎಂದು ಘೋಷಿಸಲಾಯಿತು. ಆದರೆ ಉತ್ತರ ಆಫ್ರಿಕಾದ ಮೊರಾಕ್ಕೋ, ಅಲ್ಜೀರಿಯಾ ದೇಶಗಳುತಮ್ಮದೇ ಆದ ವರ್ಷ್ ಎಂಬ ಕುರಾನಿನ ಮಾದರಿಯನ್ನು ಬಳಸುತ್ತವೆ.
  • 1924ರಿಂದ 1936ರ ವರೆಗಿನ ಹಫ್ಸ್ ಕುರಾನಿನಲ್ಲಿಯೇ ಏಕರೂಪತೆ ಇಲ್ಲದಿರುವುದು ಕಂಡುಬಂದಿದೆ! ಲಂಡನಿನ್ನಲ್ಲಿಯೇ ಹಫ್ಸ್ ಕುರಾನಿನ ಏಳು ವಿಭಿನ್ನ ಆವೃತ್ತಿಗಳನ್ನು ಗುರುತಿಸಲಾಗಿದೆ.
  • ವರ್ಷ್ ಮಾದರಿಯ ಕುರಾನನ್ನು 14ನೇ ಶತಮಾನದಿಂದಲೂ ಬಳಸಲಾಗುತ್ತಿದೆ.
  • ಇದಲ್ಲದೆ ಕ್ವಾಲುನ್ ಮತ್ತು ಅಲ್ ದೂರಿ ಎಂಬ ಮತ್ತೆರೆಡು ಬಗೆಯ ಕುರಾನುಗಳೂ ಸಹಾ ಮಾರುಕಟ್ಟೆಯಲ್ಲಿ ಸಿಗುತ್ತವೆಯಂತೆ.

ಮುಸ್ಲಿಮರ ಮತ್ತೊಂದು ಪ್ರಮುಖ ಪಂಗಡವಾದ ಷಿಯಾ ಮುಸ್ಲಿಮರ ವರಸೆ ಬೇರೆಯೇ ಇದೆ. ಅದನ್ನೂ ಸಹಾ ನೋಡೋಣ.ಷಿಯಾ ಮುಸ್ಲಿಮರು ಮೇಲಿನೆಲ್ಲಾ ಕುರಾನಿನ ಪುರಾಣವನ್ನು ಒಂದೇ ಏಟಿಗೆ ನಿರಾಕರಿಸುತ್ತಾರೆ. ಅವರ ಪ್ರಕಾರ ಮಹಮ್ಮದನ ಕಾಲದಲ್ಲಿಯೇ ಕುರಾನನ್ನು ಒಂದು ಕಡೆ ಸಂಪಾದಿಸಿ ಪುಸ್ತಕರೂಪದಲ್ಲಿ ಇರಿಸಲಾಗಿತ್ತಂತೆ! ಜತೆಗೆ ಅಲಿ – ಷೇರ್ ಎ ಖುದಾ …ಷಂಷೇರ್ ಎ ಖುದಾ ಎಂಬ ಮಹಮ್ಮದನ ಅಳಿಯನ ಬಳಿ ವಿಶೇಷ ವ್ಯಾಖ್ಯಾನಗಳ ಸಹಿತದ ಕುರಾನ್ ಇತ್ತಂತೆ! ಏನಾಯ್ತು? ಗೊತ್ತಿಲ್ಲ.

ಇಂದು ಷಿಯಾ ಮುಸ್ಲಿಮರು ರಾಜಕೀಯ ಮತ್ತು ಐತಿಹಾಸಿಕ ಕಾರಣಗಳಿಗಾಗಿ ಬಹುತೇಕ ಸುನ್ನಿಗಳ ಕುರಾನನ್ನೇ ಓದಿದರೂ ಸಹಾ ಕೆಲವು ಕಿಯಾರಗಳ ಪ್ರಕಾರ ಉತ್ಮಾನ್ ಪ್ರಕಟಿಸಿದ ಕುರಾನಿನಲ್ಲಿ ಮತ್ತೆರೆಡು ಅಧ್ಯಾಯಗಳು ಬಿಟ್ಟು ಹೋಗಿದೆಯಂತೆ! ಸುರಾ ಅಲ್ ನೂರೇಯನ್ ಮತ್ತು ಸುರಾ ಅಲ್ ವಿಲಾಯಾ… ಎಂಬೆರೆಡು ! ಯಾರು ಈ ಅಕ್ಷಮ್ಯ ಅಪರಾಧ ಮಾಡಿದವರು ? ಯಾರು ಇದಕ್ಕೆ ಹೊಣೆ? ಅಲ್ಲಾನೋ ? ಮಹಮ್ಮದನೋ? ಜೈದ್ ಬಿನ್ ತಾಬೀತನೋ? ಅಲಿಯೋ? ಉತ್ಮಾನನೋ? ಅಥವಾ ಸಾಮಾನ್ಯ ಮುಸ್ಲಿಮನೋ? ಯಾರು ???

ಒಟ್ಟಿನಲ್ಲಿ ಕುರಾನಿನ ಪುರಾಣಕ್ಕೆ ಕೊನೆಯೆಂಬುದಿಲ್ಲದೆ ರಕ್ತ ಬೀಜನಂತೆ ಹೊಸ ಹೊಸ ಬಗೆಗಳು ಹುಟ್ಟುತ್ತಲೇ ಇವೆ. ಹರ್ಕುಲಿಸನ ಹೈಡ್ರಾದ ಹಾಗೆ ಕತ್ತರಿಸಿದಂತೆಲ್ಲಾ ಮತ್ತೊಂದು ತಲೆ ಎತ್ತುತ್ತಲೇ ಇದೆ. ಮಂದಬುದ್ಧಿಯ ಮೊಮೀನುಗಳು ಹೇಳುವಂತೆ, ಕುರಾನ್ ಎಂದಿಗೂ ಬದಲಾಗಿಯೇ ಇಲ್ಲವೆಂಬ ಪ್ರತಿಪಾದನೆ ಪೊಳ್ಳು ವಾದವೆಂದು ಇತಿಹಾಸದ ಅನುಸಂಧಾನ ಮತ್ತು ಸಂಶೋಧನೆಗಳು ಸಾರಿ ಸಾರಿ ಹೇಳುತ್ತಿವೆ.

  1. Bukhari 401,2655 5031,5032 ↩︎
  2. Sahih al-Bukhari 4986, 7191, 4679
    The True Guidance – An Introduction To Qur’anic Studies, published by Light of Life, P.O. BOX 13, A-9503 Villach, Austria, part 4, p. 47– citing Ibn Kathir’s Al-Bidaya wa al-Nihaya, chapter on Battle of Yamama
    Hadith Ibn Abi Dawud + Kitab al-Masahif, p. 23
    Ibn Abi Dawud, Kitab al-Masahif, p. 10 + as-Suyuti’s al-Itqan fi ‘ulum al-Quran, volume 1, p. 204 ↩︎
  3. Sahih Muslim 788 b, Bukhari 2655, 5038, 2655, 401, 5031,5032, Sunan Abi Dawud 397 ↩︎
  4. Sunan Ibn Majah 1944, Bukhari 7323
    Sahih Muslim 1691a, 1452a ↩︎
  5. Sunan Ibn Majah 1944, Bukhari 7323
    Sahih Muslim 1691a, 1452a ↩︎
  6. Muwatta Imam Malik, p.64 ↩︎
  7. Sahih al-Bukhari 4999, 3808, 3758, 3810 ↩︎
  8. Sahih al-Bukhari 4992, 3219, Sahih Muslim 819a, 821a, Sunan Abi Dawud 1478
    ↩︎
  9. Sahih al-Bukhari 4992, 3219, Sahih Muslim 819a, 821a, Sunan Abi Dawud 1478 ↩︎
  10. Al-Itqan, p. 524 ↩︎
  11. Sahih al-Bukhari 4987 ↩︎
  12. Ibn Sa’d’s Kitab al-Tabaqat, Volume 2, p. 444, bukhari 5000 ↩︎
  13. Jami at-Tirmidhi 3104 ↩︎
  14. Ibn Abi Dawud, Kitab al-Masahif, p.11 ↩︎
  15. Sahih al-Bukhari 2807 ↩︎

Similar Posts

Leave a Reply

Your email address will not be published. Required fields are marked *