ಕುರಾನ್ ವೈಜ್ಞಾನಿಕತೆಯ DEBUNKING!.
ಝಿಂದಾನಿ ಪ್ರಾಜೆಕ್ಟ್ ಮತ್ತು ಇಸ್ಲಾಮಿನ ಭ್ರೂಣ ಶಾಸ್ತ್ರ.

ನಮ್ಮ ಗ್ರಂಥಗಳು ಅದ್ಭುತ ಜ್ಞಾನ ಭಂಡಾರದ ಆಗರ. ಪ್ರತೀ ಧರ್ಮದ ಗ್ರಂಥವು ನೂರಾರು ವೈಜ್ಞಾನಿಕ ಮಾಹಿತಿಯ ಆಗರ ಅನ್ನುವುದು ಪ್ರತಿಯೊಬ್ಬ ಆಸ್ತಿಕನ ನಂಬಿಕೆ. ವಿಜ್ಞಾನವು ಸರ್ವೋಚ್ಚ ಜ್ಞಾನವೆಂದು ಪರೋಕ್ಷವಾಗಿಯಾದರು ಒಪ್ಪಿಕೊಂಡು ನಮ್ಮ ಗ್ರಂಥವು ವಿಜ್ಞಾನವನ್ನೇ ಹೇಳುತ್ತದೆ, ನಮ್ಮ ಪೂರ್ವಜರಿಗೆ ಇದೆಲ್ಲ ಮೊದಲೇ ಗೊತ್ತಿತ್ತು ಎಂದು ಪ್ರೂವ್ ಮಾಡಲು ಹೊರಟ ಒಂದು ಕಥೆಯೂ ಮತ್ತದರ ನೈಜತೆಯನ್ನು ನೋಡೋಣ.
ನಮ್ಮ ಕಥೆ ಆರಂಭವಾಗೋದು 1979ರ ಕಾಲದಲ್ಲಿ. ಒಂದೆಡೆ ಹಳೆಯ ಯುರೋಪ್ ತನ್ನೆಲ್ಲ ಜಾಢ್ಯಗಳನ್ನು ಕೊಡವಿ ಹಾಕಿ 2ನೇ ಮಹಾಯುದ್ಧದ ನಂತರದ ಹೊಸತನವನ್ನು ಆಗಲೇ ಪಡೆದಾಗಿತ್ತು. ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು, ಬೈಬಲ್ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಾ ಬೆಳೆಯುವ ಮೊದಲ ಜನರೇಶನ್ ಯುರೋಪ್ ಮತ್ತು ಅಮೆರಕದಾದ್ಯಂತ ಬೆಳೆಯುತ್ತಿತ್ತು. ನಾಸ್ತಿಕ – ವೈಜ್ಞಾನಿಕ ಚಿಂತನಾ ಶೈಲಿಯನ್ನು ಬೆಳೆಸಿಕೊಳ್ಳುವ ಮೊದಲ ಜನರೇಶನ್. ದೈವದ ಅಸ್ತಿತ್ವವನ್ನು ಸಾರಾಸಗಟಾಗಿ ತಳ್ಳಿ ಹಾಕುವುದೇನು ಸುಲಭದ ಕೆಲಸವಲ್ಲ. ಬಾಲ್ಯದಿಂದ ನಡೆದ ಇಂಡೋಕ್ರಿನೇಷನ್ ಬಿಟ್ಟು ಹೊರಬಂದಾಗ ಆರಂಭದಲ್ಲಿ ಅಲ್ಲೊಂದು ವ್ಯಾಕ್ಯೂಮ್ ಕ್ರಿಯೇಟ್ ಆಗುತ್ತಲ್ಲ ಆ ಭಾವದಿಂದ ಅಲ್ಲಿನ ಜನ ಇನ್ನೂ ಹೊರಬರುವ ಹಾದಿಯಲ್ಲಿದ್ದರು. ರೊಟ್ಟಿ ಹಳಸಿತ್ತು , ನಾಯಿ ಹಸಿದಿತ್ತು ಎನ್ನುವ ಗಾದೆಯಂತೆ ಅಲ್ಲಿ ಉಂಟಾದ ವ್ಯಾಕ್ಯೂಮ್ ತುಂಬಲು ಇಲ್ಲೊಂದು ಮತದ ಪ್ರಚಾರಕರು ಕಾಯುತ್ತಿದ್ದರು.
ಇತ್ತ ಅದೇ ವರ್ಷ ಇಸ್ಲಾಮಿನ ಪರಮ ಪವಿತ್ರ ಮೆಕ್ಕವನ್ನು ವಶಪಡಿಸಿಕೊಳ್ಳಲು ನಡೆದ ಪ್ರಯತ್ನದ ಫಲವಾಗಿ ಸೌದ್ ಕುಟುಂಬ ಅಧಿಕಾರವನ್ನು ಉಳಿಸುವ ನಿಟ್ಟಿನಲ್ಲಿ ವಹಬೀಸಾಮ್’ಗೆ ನೀರು ಎರೆಯಲು ಆರಂಭಿಸಿತ್ತು. ಆದರ ಫಲವಾಗಿ ಮಧ್ಯಪ್ರಾಚ್ಯದಲ್ಲಿ ಇಸ್ಲಾಮಿನ ತೀವ್ರತೆಯೂ ಹೆಚ್ಚಿ ಅದರ ಕಾವು ಜಗತ್ತಿನ ಇತರೆಡೆಗೆ ಹರಡುವ ಸಮಯವದು. ಅಲ್ಲಿಯ ತನಕ ಬುರ್ಖಾ, ಪರ್ದಾ, ಹಿಜಾಬ್ ಬಗ್ಗೆ ತಲೆಕೆಡಿಸದ ಹೆಂಗಸರ ತಲೆಯ ಮೇಲಿಂದ ಪರ್ದಾ ಇಳಿದಿತ್ತು, ಗಂಡಸರ ತಲೆಗೆ ಟೋಪಿ, ಮೈ ಮೇಲೆ ಇಳಿಬಿಟ್ಟ ಪೈಜಾಮ.
ಮೂಲಭೂತವಾದಿಗಳನ್ನು ಪೋಷಿಸಿ, ಅವರ ವೈರ ಕಟ್ಟಿಕೊಳ್ಳದೆ ಕುಟುಂಬವನ್ನೂ, ರಾಜ ಸಿಂಹಾಸನವನ್ನು ಉಳಿಸಲು ಸೌದಿ ರಾಜಸ್ವ ನಿರ್ಧರಿಸಿತ್ತು. ಇದರ ಫಲವೇ ವೈಜ್ಞಾನಿಕ ಕುರಾನ್ ಅಧ್ಯಯನ.

ಈ ಹಿನ್ನೆಲೆಯಲ್ಲಿ ಇವೆಲ್ಲದರ ನಡುವೆ 1980ರಲ್ಲಿ ಅಂದಿನ ಖ್ಯಾತ ಭ್ರೂಣ ಶಾಸ್ತ್ರಜ್ಞ ಕೀತ್ ಮೂರ್’ನನ್ನು (Keith L Moore) ಸೌದಿ ತನ್ನ ನೆಲಕ್ಕೆ ಆಹ್ವಾನಿಸಿತ್ತು. ಭ್ರೂಣಶಾಸ್ತ್ರದ ಕುರಿತಾಗಿ ಅಧ್ಯಯನ(?) ನಡೆಸುವ ವಿಶ್ವವಿದ್ಯಾನಿಲಯದ ಪೀಠವೊಂದರ ಕೆಲ ಮೇಧಾವಿಗಳು ಕುರಾನಿನಲ್ಲಿ ಇರುವ ಭ್ರೂಣದ ಬೆಳವಣಿಗೆಯ ಕುರಿತಾದ ಆಯತ್’ಗಳೊಂದಿಗೆ ಸಂಶಯ ನಿವಾರಣೆಗಾಗಿ ಬಂದಿದ್ದರು. ಅದೂ ಕುರಾನ್ ಆಗಲಿ ಅರೆಬಿಕ್ ಭಾಷೆಯಾಗಲೀ ಯಾವುದರ ಬಗೆಗೂ ಗಂಧಗಾಳಿ ಇಲ್ಲದ ಒಬ್ಬ ಭ್ರೂಣಶಸ್ತ್ರಜ್ಞನ ಬಳಿಗೆ. ಅಲ್ಲಿಗೆ ಸೌದ್ ಕುಟುಂಬದ ಬಲೆಗೆ ಕೀತ್ ಮೂರ್ ಎಂಬ ಶಾಸ್ತ್ರಜ್ಞ ಬಿದ್ದಾಗಿತ್ತು.
ಸಂಪತ್ತು ಯಾರ ಕಣ್ಣನ್ನೂ ಮಂಜಾಗಿಸುತ್ತದೆ. ತೈಲದ ಬೆಲೆ ಆಕಾಶಕ್ಕೆ ನೆಗೆಯುತ್ತಾ ಹೋದಂತೆ ಸೌದಿ ಅರಸೊತ್ತಿಗೆಯ ಸಂಪತ್ತೂ ಗಗನಚುಂಬಿಯಾಗಿ ಬೆಳೆದಿತ್ತು. ಕೀತ್ ಮೂರ್ ಬಿದ್ದಿರುವುದು ಬಲೆಗೆ ಆದರೂ ಅದು ಚಿನ್ನದ ಬಲೆಯಾಗಿತ್ತು. ಹೊನ್ನ ಶೂಲವಾದರೇನು ಅದನ್ನು ತುಂಡರಿಸಿಯಾದರೂ ಮಾರಿ ಬದುಕುವೆ ಎಂದು ಕೀತ್ ಆಗಲೇ ನಿರ್ಧರಿಸಿಯಾಗಿತ್ತು. ಅಲ್ಲಿಗೆ ಅಜೀಜುದ್ದೀನ್ ವಿಶ್ವವಿದ್ಯಾನಿಲಯದ ಭ್ರೂಣಶಾಸ್ತ್ರ ಸಮಿತಿ ಸಿದ್ಧಪಡಿಸಿದ್ದ “ಮನುಷ್ಯನ ಬೆಳವಣಿಗೆ” ಎನ್ನುವ ಪುಸ್ತಕದ ಮೇಲೆ ತನ್ನ ಹೆಸರನ್ನು ಬಳಸಲು ಮೂರ್ ಸಮ್ಮತಿಸಿದ್ದರು. ಭ್ರೂಣ ಶಾಸ್ತ್ರದ ಬಗ್ಗೆ ಆಗಲೇ ಬರೆದಿದ್ದ ತನ್ನ ಪುಸ್ತಕವನ್ನು ಆಧಾರವಾಗಿ ಇಟ್ಟುಕೊಂಡು ” ಇಸ್ಲಾಮಿಕ್ ಒಗ್ಗರಣೆ” ಜೊತೆಗೆ ಪುಸ್ತಕದ ಹೊಸ ಪ್ರತಿಗಳು ವಿದ್ಯಾಲಯಗಳ ಲೈಬ್ರಾರಿಯನ್ನು ಸೇರಿದ್ದವು. ಪ್ರತಿಫಲವಾಗಿ ಸೌದಿ ಕೊಟ್ಟ ಇನಾಮು ಎಷ್ಟೋ ಆ ಕುಟುಂಬಕ್ಕೇ ಗೊತ್ತು. ಕೆಲಸವಿಲ್ಲದೆ ಸಿಗುವ ಇನಾಮು ಯಾರಾದರೂ ಬೇಡವೆಂದಾರೇ?
ಮೂರ್ ಜೊತೆಗೆ ಸಹ ಬರಹಗಾರರಾಗಿ ಕೆಲಸ ಮಾಡಿದ್ದ ವ್ಯಕ್ತಿಯ ಹೆಸರನ್ನು ಇಸ್ಲಾಮಿನ ಕುರಿತು ಅಧ್ಯಯನ ಮಾಡುವ ಪ್ರತಿಯೊಬ್ಬನೂ ಕೇಳಿರುತ್ತಾನೆ. ಅವನೇ “ಅಬ್ದುಲ್ ಮಜೀದ್ ಅಲ್ ಝಿಂದಾನಿ” . ಮಾಸ್ಟರ್ಮೈಂಡ್ ಬಿಹೈಂಡ್ ದ ಸೀನ್. ಭ್ರೂಣ ಶಾಸ್ತ್ರ, ಸಮುದ್ರ ಶಾಸ್ತ್ರ, ಫೆರೋ ರಾಜನ ಕೊಳೆಯದ ದೇಹ ಇವೆಲ್ಲ ಕುರಾನಿನ ವೈಜ್ಞಾನಿಕ ಪ್ರಾಜೆಕ್ಟ್ ಹಿಂದೆ ಇದ್ದದ್ದು ಈತನದ್ದೆ ಕೈವಾಡ. ಈ ಸಾಕ್ಷಿಗಳನ್ನು ತರಲು ಸೌದ್ ಕುಟುಂಬ ಕೈ ಜೋಡಿಸಿ ನಿರ್ಮಿಸಿದ ಕಥೆಗಳೇ “ಜಿಂದಾನಿ ಪ್ರಾಜೆಕ್ಟ್” ಎಂದು ನಂತರ ಹೆಸರು ಪಡೆಯಿತು. ಈ ಜಿನ್ದಾನಿ ಸಾಮಾನ್ಯನಲ್ಲ, 2004ರಲ್ಲಿ ಯುಎಸ್ಎ ಈತನನ್ನು ಉಗ್ರಗಾಮಿಯಾಗಿ ಘೋಷಣೆ ಮಾಡಿತು.
ಯಾಕಾಗಿ ? ಎಸ್, ಅದಕ್ಕೆ ಕಾರಣ ಅವನ ಜೊತೆಗೆ ಜಗತ್ಪ್ರಸಿದ್ಧ ಉಗ್ರರಿಗೆ ಇದ್ದ ಸಂಬಂಧ. ಭ್ರೂಣಶಾಸ್ತ್ರದ ಪುಸ್ತಕದ ಧನ್ಯವಾದ ಸಮರ್ಪಣಾ ಲಿಸ್ಟ್ನಲ್ಲಿ ಇದ್ದ ಹೆಸರೇ ಒಸಾಮಾ ಬಿನ್ ಲಾಡೆನ್ನದ್ದು. ಆ ಪುಸ್ತಕಕ್ಕಾಗಿ ಸಂಪತ್ತನ್ನೂ ಸಮಯವನ್ನೂ ಕೊಟ್ಟವರಲ್ಲಿ ಒಸಾಮನು ಒಬ್ಬನಾಗಿದ್ದ ಅಂದರೆ ಜಿಂದಾನೀ ಪ್ರಜೆಕ್ಟಿನ ಆಳವನ್ನು ಊಹಿಸಬಹುದು.
ತನ್ನ ಭಾಷಣಗಳನ್ನು ನೀಡಲು ಕೀತ್ ಮಧ್ಯಪ್ರಾಚ್ಯ, ಯುರೋಪ್, ಅಮೆರಿಕದ ಉದ್ದಗಲಕ್ಕೆ ಸಂಚರಿಸಿದ್ದ. ಇಸ್ಲಾಮಿನ ಭ್ರೂಣಶಸ್ತ್ರದ ಬಗ್ಗೆ 1400 ವರ್ಷಗಳ ಹಿಂದೆ ಮರುಭೂಮಿಯ ಪ್ರವಾದಿ ಮಹಮ್ಮದರಿಗೆ ಅಲ್ಲಾಹುವಿನ ಮೂಲಕ ಸಿಕ್ಕಿದ ಅದ್ಭುತ ಅರಿವನ್ನು ಪ್ರಚಾರವೂ ಮಾಡಿದ್ದ. ಇದೆಲ್ಲದರ ನಡುವೆ ಕೀತ್ ಅವರ ಅಧಿಕಾರಿಕತೆಯು ಪ್ರಶ್ನೆಗೆ ಒಳಗಾಯಿತು. ಕೀತ್ ಎಂದೂ ಇಸ್ಲಾಂ ಮತವನ್ನು ಸ್ವೀಕರ ಮಾಡಲೇ ಇಲ್ಲ. ಈ ವಿಚಾರ ಅನೇಕ ಪ್ರಶ್ನೆಗಳಿಗೆ , ಸಂಶಯಕ್ಕೆ ಕಾರಣವಾಯಿತು. ಅವಿಹಿತ ಬಂಧಗಳು ಹೆಚ್ಚು ಕಾಲ ಉಳಿಯಲ್ಲ ಅನ್ನುವಂತೆ ಕೀತ್ – ಜಿಂದಾನಿ ಸಂಬಂಧವೂ ಅಲ್ಪ ಕಾಲದಲ್ಲಿ ಹಳಸಿತ್ತು. ಕೀತ್ ಮೂರ್ ಸಾಕಷ್ಟು ಗಳಿಸಿಯಾಗಿತ್ತು. ಕೊನೆಗೆ ಕೀತ್ ತನ್ನ ವ್ಯಕ್ತಿ ಪರಿಚಯದಿಂದ ಇಸ್ಲಾಮಿಕ್ ಭ್ರೂಣಶಸ್ತ್ರದ ಕುರಿತಾದ ಅಧ್ಯಯನವನ್ನು ತೆಗೆದು ಹಾಕಿದ್ದ. 2002ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ಇಸ್ಲಾಂ ಕುರಿತಾದ ಅವರ ಅಧ್ಯಯನದ ಬಗ್ಗೆ ಇಂಟರ್ವ್ಯೂವನ್ನು ನಿರಾಕರಿಸಿ ” ಇದೆಲ್ಲ 10-12 ವರ್ಷದ ಹಳೆ ಕಥೆ, ಬಿಟ್ಹಾಕಿ” ಎಂದು ಕೀತ್ ಹೇಳಿದಾಗ ವೈಜ್ಞಾನಿಕ ಕುರಾನ್ ಅಧ್ಯಯನ ಜಿಂದಾನಿ ಪ್ರಾಜೆಕ್ಟ್ ಕಥೆ ಮುಗಿದಿತ್ತು. ಆದರೆ… ಆದರೆ ಇದನ್ನು ನಂಬಿದ ನ್ಯೂಸ್ ಚಾನೆಲ್ಗಳು ಜಗತ್ತಿನಾದ್ಯಂತ ಅದನ್ನು ಪ್ರಚಾರ ಮಾಡಿದವು, ಮತ ಪ್ರಚಾರಕರು ಈ ಕಥೆ ಹೇಳಿ ಲಕ್ಷಾಂತರ ಜನರನ್ನು ಹಳ್ಳಕ್ಕೆ ತಳ್ಳಿದ್ದರು.
ಮುಂದಿನದ್ದು debunking ಆಫ್ ಎಂಬ್ರಿಯಾಲಜಿ…