ಕುರಾನಿನ ತರ್ಕಶೂನ್ಯ ಆಯತುಗಳು.

ಕುರಾನ್ ಆಯತುಗಳು ಒಂದಕ್ಕೊಂದು ಹೊಂದಾಣಿಕೆಯಾಗುವುದಿಲ್ಲ. ಒಂದು ಕಡೆ;

“ಕುರಾನ್ 16.98—ನೀವು ಕುರ್‌ಆನ್‌ಅನ್ನು ಓದುವಾಗ, ಶಪಿತ ಶೈತಾನನ ವಿರುದ್ಧ ಅಲ್ಲಾಹನ ರಕ್ಷಣೆಯನ್ನು ಬೇಡಿರಿ.” ಎಂದು ಹೇಳಿದರೆ ಅದರ ನಂತರದ ಆಯತ್ತಿನಲ್ಲೇ ಹೀಗೆ ಹೇಳುತ್ತದೆ;

ಕುರಾನ್ 16.99—ವಿಶ್ವಾಸಿಗಳ ಮೇಲೆ ಹಾಗೂ ತಮ್ಮ ಒಡೆಯನಲ್ಲಿ ಭರವಸೆ ಇಟ್ಟಿರುವವರ ಮೇಲೆ ಆತನಿಗೆ (ಶೈತಾನನಿಗೆ) ಖಂಡಿತ ಯಾವ ನಿಯಂತ್ರಣವೂ ಇಲ್ಲ.

ಮೊಮಿನಗಳ ಮೇಲೆ ಶೈತಾನನ ಯಾವ ಆಟವೂ ನಡೆಯುವುದಿಲ್ಲ ಎಂದಾದ ಮೇಲೆ ಅವರು ಕುರಾನ್ ಓದುವ ಮೊದಲು ಅವನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡುವ ಅವಶ್ಯಕತೆಯಾದರೂ ಎಲ್ಲಿರುತ್ತದೆ ? ಇದಂತೂ totally illogical ಆಗಿದೆ. ಸರ್ವಜ್ಞನಾದ ದೇವರು ಹೀಗೆ ಗೊಂದಲಮಯ ವಿಚಾರಗಳನ್ನು ಬರೆಯುತ್ತಾನೆಯೇ ? ಕುರಾನ್ ದೈವವಾಣಿಯೇ ಅಲ್ಲ.

ಇಬ್ನೆ ಕಸಿರ್ ಇದರ ಕುರಿತು ಬರೆಯುತ್ತಾ, “ಅಲ್ಲಾಹ ತನ್ನ ನಬಿಯ ಮೂಲಕ ಮೂಮಿನ್ ಅನುಯಾಯಿಗಳಿಗೆ ಆದೇಶಿಸುತ್ತಾನೆ. ಕುರಾನ್ ಓದುವುದಕ್ಕೆ ಪ್ರಾರಂಭಿಸುವ ಮೊದಲು ಅಊದು ಬಿಲ್ಲಾಹಿ……..ಪಠಿಸಬೇಕೆಂದು. ಅಲ್ಲಾಹ ನಿಜಕ್ಕೂ ಜ್ಞಾನವಂತನ್ನಾಗಿದ್ದರೆ ಕುರಾನಿನಲ್ಲಿ ಪರಸ್ಪರ ಎರಡು ವಿರೋಧಿ ಆಯತುಗಳು ಹೇಗೆ ಬರಲು ಸಾಧ್ಯ ?

ಕುರಾನಿನ ಮತ್ತೊಂದು ಕಡೆ ಹೀಗೆ ಹೇಳುತ್ತದೆ;

ಕುರಾನ್ 7.200—–(ದೂತರೇ,) ಶೈತಾನನ ಕಡೆಯಿಂದ ನಿಮಗೆ ಯಾವುದೇ ತರದ ಪ್ರಚೋದನೆಯುಂಟಾದರೆ, ಅಲ್ಲಾಹನ ರಕ್ಷಣೆ ಬಯಸಿರಿ. ಖಂಡಿತವಾಗಿಯೂ ಅವನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ. ಇದು ಮೂರ್ಖತನವಲ್ಲದೆ ಮತ್ತಿನ್ನೇನು ? ಒಂದು ಕಡೆ ಮುಸ್ಲಿಮರ ಮೇಲೆ ಶೈತಾನನ ಯಾವುದೇ ನಿಯಂತ್ರಣ ಇಲ್ಲ ಎನ್ನುವುದು, ಮತ್ತೊಂದು ಕಡೆ ದೂತರೆ ಶೈತಾನನಿಂದ ರಕ್ಷಣೆಗಾಗಿ ನನ್ನನ್ನು ಮೊರೆಹೋಗಿ ಎನ್ನುವುದು.

Similar Posts

Leave a Reply

Your email address will not be published. Required fields are marked *