ಕುರಾನಿನಿಂದ ಮರೆಯಾದ ಆಯತ್ತುಗಳು!

ಕುರಾನ್ ಇಸ್ಲಾಮಿನ ಅತ್ಯಂತ ಪ್ರಾಮಾಣಿಕ ಆಧಾರ.  ಅದು ಯಾರ ಹಸ್ತಕ್ಷೇಪಕ್ಕೂ ಒಳಗಾಗಿಲ್ಲ. ಅದು ಎಂದೂ ಬದಲಾಗಿಲ್ಲ. ಅದರಲ್ಲಿ ಒಂದು ಅಕ್ಷರವೂ ಬದಲಾಗದೆ ಉಳಿದುಬಂದಿದೆ ಎನ್ನುವ ತಪ್ಪು ಕಲ್ಪನೆ ಮುಸ್ಲಿಮರಲ್ಲಿದೇ. ಇದು ಸುಳ್ಳು.

ವಿವಾಹಿತ ವ್ಯಬಿಚಾರಿಗಳನ್ನು  ಕಲ್ಲೆಸೆದು ಕೊಲ್ಲಬೇಕೆಂಬ ಆಯತ್ ಇಂದಿನ ಕುರಾನಿನಲ್ಲಿ ಇಲ್ಲ. (ಇಂದಿನ ಕುರಾನಿನಲ್ಲಿ ವ್ಯಭಿಚಾರಿಗಳಿಗೆ ಬೇರೆಯೇ ಶಿಕ್ಷೆ ಇದೆ. ಕ್ಷಮೆ ನೀಡಲೂ ಅವಕಾಶವಿದೆ!)
ಹಾಗೆಯೇ, ಅನ್ಯ ಪುರುಷರನ್ನು ಮಹರಂ ಮಾಡಲು ಅವರಿಗೆ ಹತ್ತು ಬಾರಿ ಸ್ತನಪಾನ ಮಾಡಿಸಬೇಕೆಂಬ ಆಯತ್ ಕೂಡ ಇಂದಿನ ಕುರಾನಿನಲ್ಲಿ ಇಲ್ಲ. (ಸ್ತನಪಾನದ ಬಗ್ಗೆ ನನ್ನ ಹಿಂದಿನ ಪೋಸ್ಟ್ ನೋಡಿ)
ಆದರೆ ಅಂದಿನ ಕುರಾನಿನಲ್ಲಿ ವ್ಯಭಿಚಾರಿಗಳನ್ನು ಕಲ್ಲೆಸೆದು ಕೊಲ್ಲಬೇಕೆಂಬ ಆಯತ್ ಇದ್ದಿರಲೇಬೇಕು.(ಇತ್ತೆಂದು ಹೇಳಿರುವುದು ನಾವಲ್ಲ; ಪ್ರವಾದಿ  ಪತ್ನಿಯೂ ಉಮಾತುಲ್ ಮೂಮಿನೀನ್  ಆಯಿಷಾ ರವರಾಗಿದ್ದಾರೆ. ಅದನ್ನು ಉಲ್ಲೇಖಿಸಿರುವುದು ಇಮಾಮ್ ಮುಸ್ಲಿಂ, ಇಮಾಮ ಬುಕಾರಿ, ಇಮಾಮ ಇಬ್ನ್ ಮಾಜಾ ರಂತಹ ಶ್ರೇಷ್ಠ ವಿದ್ವಾಂಸರಾಗಿದ್ದಾರೆ )

ಯಾಕೆಂದರೆ ಪ್ರವಾದಿಯವರು ವ್ಯಭಿಚಾರಿಗಳನ್ನು ಖುದ್ದು ಕಲ್ಲೆಸೆದು ಕೊಲ್ಲಿಸಿದ್ದರು. (ಬುಕಾರಿ 5270 ,2314, 2315 , ಸಹಿ ಮುಸ್ಲಿಂ 1695 b)* *ಮತ್ತು ಕಲ್ಲು  ಎಸೆದು ಕೊಲ್ಲುವಂತೆ (ಕಿತಾಬುಲ್ಲಾ-ಅಲ್ಲಾಹನ ಗ್ರಂಥದ ಆಧಾರದಲ್ಲಿ) ತೀರ್ಪು ಸಹ ನೀಡಿದ್ದರು.( ಸಹಿ ಬುಖಾರಿ 2695,2696 )

ಅಂದು ಅಂತಹ ಆಯತ್ ಇರದೇ, ಪ್ರವಾದಿಯವರು ಹದ್ದು ಮೀರಿ ಇಂತಹ ಕ್ರೂರ ಶಿಕ್ಷೆ ನೀಡಿದರೆಂದು ಯಾರೂ ವಾದಿಸಲು ಸಾಧ್ಯವಿಲ್ಲ.
ತಾನು ವ್ಯಬಿಚಾರ ಮಾಡಿದ್ದೇನೆ ಎಂದು ಖುದ್ದು ನಾಲ್ಕು ಬಾರಿ ಆಣೆ ಹಾಕಿ ಹೇಳಿದ ವ್ಯಕ್ತಿಯನ್ನು ಸಹ ಕಲ್ಲೆಸೆದು ಕೊಲ್ಲುವಂತೆ ಆದೇಶಿಸಿದ್ದರು ರಹ್ಮತುಲ್ ಆಲಮೀನ್ ಆದ ಪ್ರವಾದಿಯವರು! ( ಸಹಿ ಬುಕಾರಿ 6814)

ಇಬ್ನ್ ಮಾಜ -1944 ಹದೀಸ್, ಸಹಿ ಮುಸ್ಲಿಂ 1691a, ಸಹಿ ಮುಸ್ಲಿಂ 1452a ಮೊದಲಾದ  ಅಧಿಕೃತ ಹದೀಸಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ- ಅಂದು ಕಲ್ಲೆಸೆದು ಕೊಲ್ಲಿಸುವ ಮತ್ತು 10 ಬಾರಿ ಸ್ಥನಪಾನದ ಆಯತ್ತು ಇತ್ತೆಂದು .
ಪ್ರವಾದಿಯವರು ಮರಣ ಹೊಂದಿದ ಸಂದರ್ಭದಲ್ಲಿ ಎಲ್ಲರೂ ಅದರಲ್ಲಿ ಕಾರ್ಯನಿರತವಾಗಿರುವಾಗ ಯಾವುದೋ ಬೀದಿ ಕುರಿಯೊಂದು ಬಂದು

ಆಯಿಷಾ ರವರ ತಲೆದಿಂಬಿನ ಕೆಳಗೆ ಇಡಲಾಗಿದ್ದ ಆ ಆಯತನ್ನು ತಿಂದು ಹಾಕಿತೆಂದೂ ಆಯಿಷರವರು ವರದಿ ಮಾಡಿದ್ದಾರೆ ( ಸುನನ್ ಇಬ್ನ್ ಮಾಜ 1944)

ಇವೆಲ್ಲವೂ ಮುತಫಕ್ಕುನ್ ಅಲೆಹಿ (ಅಂದರೆ ಇಸ್ಲಾಮಿನ ‘ಸಿಯಾವು-ಸಿತ್ತ’ ಎಂಬ ಆರು ಅಧಿಕೃತ ಹದೀಸ್ ಪಂಡಿತರಲ್ಲಿ ಬಹುತೇಕ ಪಂಡಿತರೂ ಒಪ್ಪಿರುವಂತಹ   ಹದೀಸ್ ಗಳು) ಹದೀಸ್ ಗಳಾಗಿವೆ. ಇವುಗಳನ್ನು ತಿರಸ್ಕರಿಸಲು ಇತರೆ ಇರುವ ಮಾನದಂಡಗಳೂ ಇಲ್ಲ.

ಕುರಾನ್ ನಲ್ಲಿ ಈ ಆಯತ್ ಗಳು ಇಲ್ಲವೆಂಬುದೂ ಕೂಡ ಈಗ ಮಾನದಂಡವಾಗುವುದಿಲ್ಲ. ಯಾಕೆಂದರೆ
ಕೇವಲ ಕುರಾನ್ ಇಟ್ಟುಕೊಂಡೇ ಧರ್ಮವನ್ನು ಆಚರಿಸುವುದು ಅಸಾಧ್ಯವೆ ಸರಿ, ನಾವು ಇಂದು ನಿರ್ವಹಿಸುತ್ತಿರುವ ಐದು ಬಾರಿಯ ನಮಾಜ್ ಮಾಡಬೇಕೆಂಬುದು ಕೂಡ ಕುರಾನಿನ ಯಾವುದೇ ಸಿಂಗಲ್ ಆಯತಿನಲ್ಲಿ ಇಲ್ಲ. ಗರಿಷ್ಠ ಮೂರು ಬಾರಿ ನಮಾಜ್ ಮಾಡಬೇಕೆಂಬ ಆಯತ್ ಸಿಗಬಹುದಷ್ಟೇ. ಅಥವಾ ನಮಾಜ್ ಮಾಡಬೇಕಾದ ರೀತಿ ನೀತಿಗಳನ್ನು ಕೂಡ ಕುರಾನ್ ಎಲ್ಲಿಯೂ ಹೇಳಿಲ್ಲ.
ಇಸ್ಲಾಮಿನ ಪ್ರದೇಶ ದ್ವಾರವಾದ ಶಹಾಧ ಕಲಿಮ ಕೂಡ ಕುರಾನಿನಲ್ಲಿಲ್ಲ. ಮುಂಜಿ ಮಾಡಬೇಕೆಂದು ಇಲ್ಲ .ಗಡ್ಡ ಬಿಡಬೇಕೆಂದೂ ಮೀಸೆ ಮುಂಡನ ಮಾಡಬೇಕೆಂದೂ ಕುರಾನಿನಲ್ಲಿ ಇಲ್ಲ !ಅಜರುಲ್ ಅಸ್ವಧ್ ಕಪ್ಪು ಕಲ್ಲಿನ ಬಗ್ಗೆ ಕುರಾನಿನಲ್ಲಿ ಇಲ್ಲ .ಝಂ ಝಂ ತೀರ್ಥ ಜಲದ ಬಗ್ಗೆ ಪ್ರಸ್ತಾಪವಿಲ್ಲ. ಕಬರ್ ಶಿಕ್ಷೆ (ಗೋರಿಯೊಳಗಿನ ಪ್ರಶ್ನೋತ್ತರಗಳು) ಕುರಾನಿನಲ್ಲಿ ಇಲ್ಲ. ನಮಾಜ್ ಪೂರ್ವದ ಅಜಾನ್ ಸಹ ಕುರಾನಿನಲ್ಲಿಲ್ಲ!
ಅಲ್ಲೆಲ್ಲಾ ನಾವು ಸಂಪೂರ್ಣವಾಗಿ ಹದೀಸ್ ಗಳನ್ನು ಅವಲಂಬಿಸಿದ್ದೇವೆ.

Exmuslims of Karnataka

Leave a Reply

Your email address will not be published. Required fields are marked *