ಇಸ್ಲಾಮಿನಲ್ಲಿ ಗುಲಾಮಗಿರಿ ಹಾಗೂ ಶೋಷಣೆ

ಸೇವಕರನ್ನು ಇಟ್ಟುಕೊಳ್ಳುವುದು ಸಾಮಾಜಿಕವಾದ ಅವಶ್ಯಕತೆ. ಎಲ್ಲರಿಗೂ ಎಲ್ಲ ಬಗೆಯ ವಿದ್ಯೆ ಕೌಶಲ್ಯಗಳು ಕೈಗೂಡುವುದಿಲ್ಲ. ಅಂತಹ ಜನರಿಗೆ ಸೇವಾವೃತ್ತಿಯೇ ಒಂದು ಉಪಜೀವಿಕೆಯಾಗಿ ಉದರ ಪೋಷಣೆಗೆ ದಾರಿಯಾಗುತ್ತದೆ. ಆದರೆ, ಸೇವಕನೇ ಆಗಲೀ, ಸೇವಕಿಯೇ ಆಗಲೀ ಮೊದಲು ಮನುಷ್ಯರು ಎಂಬ ಪ್ರಜ್ಞೆ ಸಮಾಜದಲ್ಲಿ ಇರತಕ್ಕದ್ದು. ಹಾಗಾಗಿಯೇ ಸರ್ವಜ್ಞನು“ಅನ್ನವನು ಇಕ್ಕುವುದು ನನ್ನಿಯನ್ನು ನುಡಿಯುವುದು ತನ್ನಂತೆ ಪರರ ಬಗೆದೊಡೆ ಕೈಲಾಸವಕ್ಕು ಬಿನ್ನಾಣವಕ್ಕು ಸರ್ವಜ್ಞ” ಎಂದಿದ್ದಾನೆ..

ಆದರೆ ಮುಸ್ಲಿಮರಲ್ಲದ ಮನುಷ್ಯರೆಲ್ಲರೂ ಕೊಳಕು(ನಜಸ್) ಪ್ರಾಣಿಗಳಿಗೆ ಸಮ, ಯುದ್ಧ ದಾಳಿ ಧ್ವಂಸ ಮಾಡಿ ಹಿಡಿದು ತಂದು ಗಂಡಸರನ್ನು ಹಿಜಿಡಾಗಳನ್ನಾಗಿಸಿ, ಹೆಂಗಸರನ್ನು ಲೌoಡಿಯಾ ಎಂದು ಹೆಸರಿಸಿ, ಅವರುಗಳನ್ನು ಲೈoಗಿಕ ಭೋಗ ಲಾಲಸೆಗೆಂದು ದುರುಪಯೋಗಿಸಿ, ಸಾಕೆನಿಸಿದಾಗ ಪಶುಗಳಂತೆ ಮಾರಾಟ ಮಾಡಿದರೆ ಅದು “ ತನ್ನಂತೆ ಪರರ ಬಗೆದ ತಂತಾಯಿತೇ?’” ಇಲ್ಲ! ಆದರೆ ಇಸ್ಲಾಮಿನಲ್ಲಿ ಎಲ್ಲವೂ ಉಲ್ಟಾ ತಾನೇ? ಹೀಗೆ ಹಿಡಿದು ತಂದು ಮುಸ್ಲಿಮರಲ್ಲದವರನ್ನು ಶೋಷಣೆ ಮಾಡಿದರೆ “ಅಲ್ಲಾಹು ಮೊಗ್ಯಾಂಬೋ ರೀತಿಯಲ್ಲಿ ಖುಷ್” ಆಗ್ತಾನೆ ಮಾತ್ರವಲ್ಲ, “ಸವಾಬ್ ಕೂಡಾ ಕೊಡ್ತಾನೆ”… ನಿಮಗೆ ಗೊತ್ತೇ ?

ಅದೇನು.. ಇಸ್ಲಾಂ ಇಷ್ಟೊಂದು ಕ್ರೂರಿಯೇ ? ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿರಾ ? ಬನ್ನಿ ಗುಲಾಮ ಶೋಷಣೆ ಕುರಿತಂತೆ ಅಲ್ಲಾಹುವಿನ ಕುರಾನು, ಸಹಬಾ ಗಳ ಹದೀಸು, ಸಲ್ಲಲ್ಲಾಹುವಿನ ಸೀರತ್, ಮತ್ತು ಮುಲ್ಲಾಹುವಿನ ಷರಿಯಾಗಳು ಹೇಳಿದ್ದೇನು ? ಇತಿಹಾಸದುದ್ದಕ್ಕೂ ಮುಸ್ಲಿಮರು ಮಾಡಿದ್ದೇನು ? ಎಂದು ಇಸ್ಲಾಮಿಕ್ ಗ್ರಂಥಗಳಿಂದ ನೋಡೋಣ.ಗುಲಾಮಗಿರಿ ಅಂದ ತಕ್ಷಣ ಆಫ್ರಿಕಾದ ಕರಿಯರನ್ನು ಹಡಗಿನಲ್ಲಿ ಹೊತ್ತೊಯ್ದ ಬಿಳಿಯರ ಚಿತ್ರಗಳು ಕಣ್ಮುಂದೆ ಬರುತ್ತವೆ. ಆದರೆ ಅದಕ್ಕೂ 700 ವರ್ಷಗಳ ಹಿಂದಿನಿಂದಲೇ ಕೋಟ್ಯಾಂತರ ಜೀವಗಳ ಬದುಕನ್ನು ಮೂರಾಬಟ್ಟೆ ಮಾಡಿದ ಇಸ್ಲಾಮಿಕ್ ಧಾಳಿಕೋರರ ವಿಚಾರವನ್ನು ಮುನ್ನೆಲೆಗೆ ಬಾರದಂತೆ ಎಚ್ಚರದಿಂದ ಕಾಯ್ದುಕೊಳ್ಳಲಾಗಿತ್ತು. ಆದರೆ ಆ ತೆರೆ ಸರಿಯುವ ಸಮಯವಿದು.

ಮುಸ್ಲಿಮರ ದಾಳಿಗೆ ಸಿಕ್ಕ ಸತ್ತವರೆಷ್ಟು ಕೋಟಿಯೋ ಅದಕ್ಕಿಂತಲೂ ಹೆಚ್ಚು ಜನ ಹೆoಗಸರು ಮಕ್ಕಳೂ ಸೇರಿ ಸೆರೆಯಾಗಿ ಗುಲಾಮರಾಗಿ ದೈನೇಸಿ ಜೀವನವನ್ನು ಬದುಕಿ ಮಣ್ಣಾಗಿ ಹೋಗಿದ್ದಾರೆ. ತಮ್ಮವರೆಂಬ ಯಾವ ಪ್ರೀತಿ ವಾತ್ಸಲ್ಯಗಳನ್ನು ಕಾಣದೇ ಅಳಿದು ಹೋಗಿದ್ದಾರೆ. ಇದರಲ್ಲಿ ಹಿಂದೂಗಳು, ಕ್ರೈಸ್ತರು, ಯಹೂದಿಗಳು, ಆಫ್ರಿಕಾದ ಬುಡಕಟ್ಟು ಜನ, ಇರಾನಿನ ಜೊರಾಷ್ರೆಯನ್ನರು, ಮತ್ತಿತರ ಬುಡಕಟ್ಟುಗಳು ಸಹಾ ಸೇರಿವೆ.

ಹಾಗಾದರೆ ಇಸ್ಲಾಂನಲ್ಲಿ ಈ ಗುಲಾಮಗಿರಿ ಪದ್ಧತಿಯ ಸುತ್ತ ಇರುವ ವ್ಯವಸ್ಥೆಗಳೇನು ಎಂದು ನೋಡೋಣ. ಗುಲಾಮಗಿರಿಗೆ ಸಂಬಂಧಿಸಿದಂತೆ ಇಸ್ಲಾಂನ ನಿಲುವು ಏನು ? ಗುಲಾಮ ಪದ್ಧತಿಗೆ ಸಮರ್ಥನೆ ಎಲ್ಲಿಂದ ಮುಸ್ಲಿಮರು ಪಡೆದುಕೊಂಡಿದ್ದಾರೆ ? ಯಾರನ್ನು ಹೇಗೆ ಗುಲಾಮರನ್ನಾಗಿ ಹಿಡಿಯುವುದು ? ಯಾರನ್ನು ಗುಲಾಮರನ್ನಾಗಿಸಿಕೊಳ್ಳಬಾರದು ? ಗಂಡು ಹೆಣ್ಣು ಸೆರೆಯಾಳುಗಳ ಗತಿಯೇನಾಗುತ್ತಿತ್ತು ? ಗಂಡು ಹೆಣ್ಣು ಗುಲಾಮರ ನಡುವಿದ್ದ ವ್ಯತ್ಯಾಸಗಳೇನು ? ಗುಲಾಮರ ಬದುಕು ಹೇಗಿತ್ತು ? ಗುಲಾಮರ ಹಕ್ಕುಗಳ ಚ್ಯುತಿ ಹೇಗಾಗುತ್ತಿತ್ತು ? ಗುಲಾಮರ ಲೈoಗಿಕ ಬದುಕಿನ ಸ್ವರೂಪ ಹೇಗಿತ್ತು ? ಗುಲಾಮರ ಜೀವಕ್ಕೆ ಬೆಲೆ ಇತ್ತೇ ? ಇಸ್ಲಾಮಿನಲ್ಲಿ ನಿಜಕ್ಕೂ ಮನುಷ್ಯತ್ವ ಎಂಬುದಿದೆಯೇ ? ಎಂಬೆಲ್ಲಾ ಪ್ರಶ್ನೆಗಳಿಗೆ ಕುರಾನಿನ ಅಲ್ಲಾಹು, ಇಸ್ಲಾಮಿನ ಸಲ್ಲಲ್ಲಾಹು, ಹದೀಸಿನ ಸಾಹಬಾಗಳು, ಖಿಲಾಫತ್ತಿನ ಖಲೀಫರು ಮತ್ತು ಷರಿಯಾದ ಮುಲ್ಲಾಹುಗಳು ಏನೇನೆಲ್ಲ ಆಜ್ಞೆಗಳನ್ನು ಹೊರಡಿಸಿ ‘“ಸಮಾನತೆಯನ್ನು” ಸಾರಿದ್ದಾರೆ ಎಂದು ಮುಂದಿನ ಲೇಖನಗಳಲ್ಲಿ ಒಂದೊಂದಾಗಿ ನೋಡೋಣ. ಇಸ್ಲಾಮಿನ ಖೂಬಿ ನಿಮಗೂ ತಿಳಿಯಲಿ ಅಥವಾ ಇಸ್ಲಾಂ ಒಂದು ಮಾನವೀಯ ಪಂಥ ಎಂಬ ನಿಮ್ಮ ಭ್ರಮೆ ಇಲ್ಲಿಂದಲೇ ನಾಶವಾಗಲಿ.

ಮುಂದುವರೆಯುತ್ತದೆ…

Similar Posts

  • ಗುಲಾಮಗಿರಿಯ ಸ್ವರೂಪ – 1

    ಇಸ್ಲಾಂನಲ್ಲಿ ಗುಲಾಮಗಿರಿ ಮತ್ತು ಗುಲಾಮರ ಶೋಷಣೆಯನ್ನು ಕುರಿತು ಪರಿಚಯ ಲೇಖನವನ್ನು ಕೆಲವು ದಿನಗಳ ಹಿಂದೆಯೇ ಓದಿದ್ದೀರಿ. ಗುಲಾಮ ಶೋಷಣೆ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಜನಾಂಗೀಯ ಕಾರಣಗಳಿಗಾಗಿ ಅಂದಿನ ಮಧ್ಯಪ್ರಾಚ್ಯ ಮತ್ತು ಮಧ್ಯಏಷ್ಯಾದ ದೇಶಗಳಲ್ಲಿ, ರೋಮನ್ಸಾಮ್ರಾಜ್ಯದಲ್ಲಿ ವ್ಯಾಪಕವಾಗಿಯೇ ಇತ್ತು. ಆ ಎಲ್ಲಾ ಮನುಷ್ಯ ರಚಿತ ಕಾರಣಗಳ ಜತೆಗೆ DivineSanction – ಅಂದರೆ ದೈವಾಜ್ಞೆ ಮತ್ತು ಅನುಮತಿಯನ್ನು ಸೇರಿಸಿ ಶೋಷಣೆಗೆ ಮತೀಯ [ ಧಾರ್ಮಿಕಅಲ್ಲ, ] ಅಥವಾ ಪಂಥೀಯ ಆಯಾಮವನ್ನು ಜೋಡಿಸಿದ “ಹೆಗ್ಗಳಿಕೆ”ಯು ಇಸ್ಲಾಂ ಮತ್ತು ಮಹಮ್ಮದನಿಗೇ ಸಲ್ಲಬೇಕು….

Leave a Reply

Your email address will not be published. Required fields are marked *