ಕುರಾನ್.15:39 ರ ಈ ಆಯತ್ , ಸರ್ವಶಕ್ತನಾದ ಅಲ್ಲಾಹನ ಮುಖಾಮುಖಿಯಾಗಿ ನಿಂತ ಕ್ಷುಲ್ಲಕ ಜೀವಿಯಾದ ಇಬ್ಲೀಸ್, ಸೃಷ್ಟಿಕರ್ತನಾದ ದೇವರ ವಿರುದ್ಧವೇ ನೇರ ಆರೋಪ ಮಾಡುತ್ತಿರುವ ಆಯತಾಗಿದೆ! ಮತ್ತು ಕುರಾನಿನ 6236 ಆಯತ್ ಗಳಲ್ಲಿ ಎಲ್ಲಿಯೂ ಕೂಡ ದೇವರು ,ಇಬ್ಲೀಸ್ ಮಾಡಿದ ಈ ಗಂಭೀರ ಆರೋಪವನ್ನು ನಿರಾಕರಿಸಿಲ್ಲ ಎಂಬುದು ಗಮನಾರ್ಹವಾಗಿದೆ!!
ಇಬ್ಲೀಸ್ ಅಲ್ಲಾಹನಿಗೆ ಹೇಳಿರುವುದು “قَالَ رَبِّ بِمَآ اَغْوَيْتَنِيْ—ನೀನು ನನ್ನನ್ನು *ದಾರಿಗೆಡಿಸಿರುವಂತೆಯೇ* (you have put me in error )ಎಂದಾಗಿದೆ. ಅಂದರೆ ಇಬ್ಲೀಸನನ್ನು ದಾರಿಗೆಡಿಸಿರುವುದು ಅಲ್ಲಾಹು ಎಂದು ಆತ ನೇರ ಆರೋಪ ಮಾಡುತ್ತಾನೆ. ಅಲ್ಲಾಹನು ಈ ಅಧ್ಯಾಯದಲ್ಲಿ ಆಗಲಿ, ಉಳಿದ ಅಧ್ಯಾಯಗಳಲ್ಲಾಗಲೀ “ನಿನ್ನನ್ನು ದಾರಿಗೆಡಿಸಿರುವುದು ನಾನಲ್ಲ” ಎಂದು ನಿರಾಕರಿಸಿದ ಒಂದೇ ಒಂದು ಆಯತ್ ಇಲ್ಲ!
ಬದಲಿಗೆ ಅಲ್ಲಾಹ ಬಹುದೊಡ್ಡ ಮೊಸಗಾರ ಎಂದು ಸ್ವತಃ ಕುರಾನ್ 3.54ರಲ್ಲಿ ಹೇಳಲಾಗಿದೆ.
ಹಾಗಾದರೆ ಇಲ್ಲಿ ಇಬ್ಲೀಸ್ ಮಾಡಿರುವ ಆರೋಪವೇನು ? ಅದರ ಹಿನ್ನೆಲೆ ಏನು, ನೋಡೋಣ.
ಅಲ್ಲಾಹನು ಆದಮರನ್ನು ಸೃಷ್ಟಿಸಿರುವುದು, ಆದಮರ ಮುಂದೆ ಸಾಷ್ಟಾಂಗವೆರಗಲು ಮಲಕುಗಳಿಗೆ ಸೂಚಿಸುವುದು ನಮಗೆಲ್ಲ ಗೊತ್ತಿದೆ.(ಯಾಕೆಂದರೆ ಈ ಒಂದು ಕಥೆಯೇ ಕುರಾನಿನಲ್ಲಿ ಸುಮಾರು 6-7 ಅಧ್ಯಾಯಗಳಲ್ಲಿ ಪುನರಾವರ್ತನೆಯಾಗಿದೆ) ಎಲ್ಲಾ ಮಲಕುಗಳೂ ಸಾಷ್ಟಾಂಗವೆರಗುತ್ತಾರೆ, ಇಬ್ಲೀಸ್ ಒಬ್ಬನನ್ನು ಹೊರತುಪಡಿಸಿ. ಯಾಕೆಂದರೆ ಇಬ್ಲೀಸ್ ಮಲಕ್ ಅಲ್ಲ; ಆತ ಜಿನ್ ವರ್ಗಕ್ಕೆ ಸೇರಿದವನಾಗಿದ್ದಾನೆ (ಕುರಾನ್ 18:50).
(ಉದಾಹರಣೆಗೆ,ಆರೋಗ್ಯ ಇಲಾಖೆಗೆ ಸೇರಿದ ಸದಸ್ಯರೆಲ್ಲರೂ ಈ ಗುಂಪಿನಿಂದ ಹೊರಹೋಗಿ ಎಂದು ಗ್ರೂಪ್ ಅಡ್ಮಿನ್ ಆದೇಶಿಸಿದರು ಎಂದು ಇಟ್ಟುಕೊಳ್ಳೋಣ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಇಬ್ಲೀಸ್ ಗುಂಪಿನಿಂದ ಹೊರಹೋಗಲಿಲ್ಲ ಎಂದು ಆತನನ್ನು ಗ್ರೂಪ್ ಅಡ್ಮಿನ್ ರಿಮೂವ್ ಮಾಡಿದರೆ ಅದರಲ್ಲಿ ಏನು ಅರ್ಥ ಇರುತ್ತದೆ, ಹಾಗೆಯೇ ಇಲ್ಲಿಯೂ!!)
ಮಲಕು(ٱلْمَلَٰٓئِكَةُ)ಗಳಿಗೆ ಆದಮರ ಮುಂದೆ ಸಾಷ್ಟಾಂಗ ವೆರಗಲು ಆದೇಶ ನೀಡಿ(ಕುರಾನ್ 15:28-31) ಮಲಕ್ ಅಲ್ಲದ (ಜಿನ್ ಪಂಗಡದ) ಇಬ್ಲೀಸ್ ಸಾಷ್ಟಾಂಗವೆರಗಲಿಲ್ಲವೆಂದು ಅವನನ್ನು ಶಿಕ್ಷಿಸಿದಾಗಲೇ ಇಬ್ಲೀಸ್ ತಿರುಗಿ ನಿಂತು ದೇವರಿಗೆ ಕೊಶ್ಚನ್ ಕೇಳುವ ಆಯತನ್ನಾಗಿದೆ. ಇಬ್ಲೀಸಿನ ಆರೋಪವನ್ನು ನಿರಾಕರಿಸುವ ಬದಲು ದೇವರು, ಮನುಷ್ಯರನ್ನೆಲ್ಲಾ ನೀನು ದಾರಿ ತಪ್ಪಿಸಬಹುದು ಎಂಬ ಆತನ ಡಿಮಾಂಡಿಗೆ ದೇವರು okay ಎನ್ನುತ್ತಾನೆ!.(ನನ್ನ ನಿಷ್ಠಾವಂತ ದಾಸರನ್ನು ಹೊರತುಪಡಿಸಿ ಉಳಿದೆಲ್ಲರನ್ನೂ ನೀನು ದಾರಿ ತಪ್ಪಿಸಬಹುದೆಂದು)
ಹೀಗೆ ದೇವರಿಂದ ‘ವರ’ ಪಡೆದ ಇಬ್ಲೀಸ್, ಅಂದಿನಿಂದ ಇಂದಿನವರೆಗೂ ಎಲ್ಲರನ್ನೂ ದಾರಿಗೆಡಿಸುತ್ತಿದ್ದಾನೆ!
ಈ ವಾಗ್ವಾದಗಳ ನಂತರ ಇಬ್ಲೀಸನನ್ನು ಸ್ವರ್ಗದಿಂದ ಹೊರಹಾಕಲಾಗುತ್ತದೆ. ಅದು ನಮಗೆಲ್ಲರಿಗೂ ಗೊತ್ತಿದೆ.(ಕುರಾನ್ 15:34)
ಹೀಗೆ ಸ್ವರ್ಗದಿಂದ ಹೊರದಬ್ಬಲ್ಪಟ್ಟ ಆತ ,ಮತ್ತೆ ಸ್ವರ್ಗಕ್ಕೆ ಹೋಗಿ ಅಲ್ಲಿದ್ದ ಆದಂ ಮತ್ತು ಅವ್ವರಿಗೆ ಆಪಲ್ ತಿನ್ನಿಸಿ ಅವರನ್ನು ಹೇಗೆ ದಾರಿ ತಪ್ಪಿಸಲು ಸಾಧ್ಯವಾಯಿತು? ದೇವರೇ ಆತನನ್ನು ಸ್ವರ್ಗದಿಂದ ಹೊರ ಹಾಕಿದ ಮೇಲೆ ಆತ ಮತ್ತೊಮ್ಮೆ ಸ್ವರ್ಗಕ್ಕೆ ರೀ ಎಂಟ್ರಿ ಹೇಗೆ ಮಾಡಿದ?
ಆದಮ್ _ಅವ್ವರನ್ನು ಸ್ವರ್ಗದಿಂದ ಹೊರ ಹಾಕಿದ್ದು ಇಬ್ಲೀಸ್ ಹೌದಾ? ಹದೀಸುಗಳನ್ನು ನೋಡಿದರೆ, ಆದಮ್ ರನ್ನು ಸೃಷ್ಟಿಸುವುದಕ್ಕೆ 40 ವರ್ಷಗಳಿಗೆ ಮೊದಲೇ ಆದಮರನ್ನು ಸ್ವರ್ಗದಿಂದ ಹೊರಹಾಕುವ ಪ್ಲಾನ್ ಗಳ ಬಗ್ಗೆ ಅಲ್ಲಾಹನು ನಿರ್ಧರಿಸಿದ್ದ ಎಂದು ಸಹೀ ಮುಸ್ಲಿಂ 2652a ಮೊದಲಾದ ಹಲವು ಅಧಿಕೃತ ಹದೀಸ್ ಗಳಲ್ಲಿ ಕಾಣಬಹುದಾಗಿದೆ! ಹಾಗೆ ನೋಡಿದಾಗ ಇಬ್ಲೀಸ್ ಸಹ ನಿರಪರಾಧಿಯಾಗಿ ಕಾಣುತ್ತಾನೆ! ಯಾಕೆಂದರೆ ಆದಮರನ್ನು ಸೃಷ್ಟಿಸುವುದಕ್ಕೆ 40 ವರ್ಷ ಮೊದಲೇ ಪೂರ್ವ ನಿರ್ಧರಿತವಾಗಿದ್ದ ಒಂದು ಘಟನೆಗೆ ಈತ ಹೇಗೆ ಹೊಣೆಯಾಗುತ್ತಾನೆ ?ಕೇವಲ ನಿಮಿತ್ತ ಮಾತ್ರ.
ಯಾವುದು ಸತ್ಯವೋ ಅದು ಎಲ್ಲಾ ತರ್ಕಗಳಿಂದ ಸರ್ವೈವ್ ಆಗಿ ಉಳಿದುಕೊಳ್ಳುತ್ತದೆ. ಯಾವುದು ಸುಳ್ಳಿನಿಂದ ಕೂಡಿದೆಯೋ ಅದು ಪರಸ್ಪರ ವಿರೋಧಾಭಾಸಗಳಿಂದ ಅತಾರ್ಕಿಕ ಸುಳಿಯಲ್ಲಿ ಸಿಕ್ಕು ಸತ್ತು ಹೋಗುತ್ತದೆ. ಈಗ ಇಸ್ಲಾಮಿನ ಸ್ಥಿತಿ ಆಗಿರುವುದೂ ಇದೆ.
ವಿಚಾರವಂತ ಮುಸಲ್ಮಾನರೆ ಇಸ್ಲಾಮ್ ತೊರೆದು ಹೊರಬನ್ನಿ….
– Exmuslims of karnataka